Horoscope 28 Sep: ದಿನಭವಿಷ್ಯ, ನಿಮ್ಮ ಕೆಲಸವು ನಿಮ್ಮನ್ನು ಯಶಸ್ಸಿನ ಶಿಖರಕ್ಕೆ ಕೊಂಡೊಯ್ಯಲಿದೆ, ಅಪರಿಚಿತ ಕರೆಗಳಿಗೆ ನೀವು ಸ್ಪಂದಿಸಲಾರಿರಿ
ಇಂದಿನ ರಾಶಿ ಭವಿಷ್ಯ ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಹಾಗಾದರೆ ಇಂದಿನ (2023 ಸೆಪ್ಟೆಂಬರ್ 28) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.
ರಾಶಿ ಭವಿಷ್ಯ ಪ್ರತಿಯೊಬ್ಬರ ಜೀವನದಲ್ಲಿ ವಿಭಿನ್ನವಾಗಿರುತ್ತದೆ. ಪ್ರತಿನಿತ್ಯ ಬೆಳಗ್ಗೆ ಎದ್ದ ಕೂಡಲೇ ತಮ್ಮ ರಾಶಿ ಭವಿಷ್ಯ (Daily horoscope) ನೋಡುವುದು ಕೆಲವರಿಗೆ ಅಭ್ಯಾಸ. ಇಂದಿನ ರಾಶಿ ಭವಿಷ್ಯ ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಹೀಗೆ ಎಲ್ಲವನ್ನು ತಿಳಿದುಕೊಳ್ಳುತ್ತಾರೆ. ಜೊತೆಗೆ ಪಂಚಾಂಗವನ್ನು ಸಹ ಓದುತ್ತಾರೆ. ಹಾಗಾದರೆ ಇಂದಿನ (2023 ಸೆಪ್ಟೆಂಬರ್ 28) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಕನ್ಯಾ ಮಾಸ, ಮಹಾನಕ್ಷತ್ರ: ಹಸ್ತಾ, ಮಾಸ: ಭಾದ್ರಪದ, ಪಕ್ಷ: ಶುಕ್ಲ, ವಾರ: ಗುರು, ತಿಥಿ: ಚತುರ್ದಶೀ, ನಿತ್ಯನಕ್ಷತ್ರ: ಪೂರ್ವಾಭಾದ್ರ, ಯೋಗ: ಗಂಡ, ಕರಣ: ಕೌಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 23 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ರಿಂದ 23 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 01:53 ರಿಂದ 03:23ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 06:23 ರಿಂದ 07:53ರ ವರೆಗೆ, ಗುಳಿಕ ಕಾಲ ಬೆಳಗ್ಗೆ 09:23 ರಿಂದ ಮಧ್ಯಾಹ್ನ 10:53ರ ವರೆಗೆ.
ಮೇಷ ರಾಶಿ: ಪ್ರೀತಿಯ ಹೊಸ ಅಧ್ಯಾಯವನ್ನು ಆರಂಭ ಮಾಡುವಿರಿ. ಒಂಟಿಯಾಗಿ ಕುಳಿತು ಕಳೆದ ದಿನಗಳನ್ನು ನೆನೆಯುವಿರಿ. ಮಕ್ಕಳ ಮದುವೆಯ ಚಿಂತೆಯೂ ಒಮ್ಮಿಂದೊಮ್ಮೆಲೆ ಬರಬಹುದು. ನಿಮ್ಮ ಮಾತಿಗೆ ಕುಟುಂಬವು ಸಮ್ಮತಿಸಬಹುದು. ಔದಾರ್ಯವು ಅಧಿಕವಾಗಿ ಬೇಡ. ಆಲಸ್ಯದಿಂದ ಇರುವ ಕಾರಣ ಯಾವ ಕೆಲಸವೂ ಸರಿಯಾದ ಸಮಯಕ್ಕೆ ಮಾಡುವುದಿಲ್ಲ. ಆರ್ಥಿಕವಾಗಿ ಬಲಗೊಳ್ಳಲು ನೀವು ದೈವಕ್ಕೆ ಶರಣಾಗುವಿರಿ. ಇಂದು ಏಕಾಗ್ರತೆಯಿಂದ ಕಾರ್ಯವನ್ನು ಮಾಡಲು ಕಷ್ಟವಾದೀತು. ಆಗಬೇಕಾದ ಕಾರ್‍ಯಕ್ಕೆ ಇಂದಿನ ಸುತ್ತಾಟವು ವ್ಯರ್ಥವಾದೀತು. ಗೃಹನಿರ್ಮಾಣದ ಕಾರ್ಯವು ದೊಡ್ಡ ಸಮಸ್ಯೆಯಾಗಿ ಪರಿಣಮಿಸಬಹುದು. ವಾಹನಕ್ಕಾಗಿ ಖರ್ಚುಮಾಡುವಿರಿ.
ವೃಷಭ ರಾಶಿ: ನಿಮ್ಮದಲ್ಲದ ಕಾರ್ಯಕ್ಕೆ ನೀವು ತಲೆ ಕೊಡಬೇಕಾದೀತು. ನಿಮ್ಮ ಸಂಗಾತಿಯು ಕೋಪಗೊಳ್ಳಬಹುದು. ನಿಮ್ಮ ಮಾತಿನಿಂದ ಸಮಾಧಾನವು ಬರುವುದು. ದೂರದ ಮಕ್ಕಳನ್ನು ನೋಡುವ ಆಸೆ ಆಗಲಿದೆ. ಉದ್ಯಮದ ಕಾರಣ ಪ್ರಯಾಣ ಮಾಡುವ ಸ್ಥಿತಿಯು ಬರಬಹುದು. ಅಪ್ತರ ಮೇಲಿನ ನಂಬಿಕೆಯನ್ನು ಕಳೆದುಕೊಳ್ಳುವಿರಿ. ಮನೆಯಿಂದ ದೂರವಿರುವ ನಿಮಗೆ ಮನೆಗೆ ಹೋಗಬೇಕು ಎಂದು ಅನ್ನಿ್ಸುವುದು. ಖರ್ಚಿನ ದಾರಿಗಳು ಒಂದೊಂದೇ ತೆರೆಯುವುದು. ನಿಮ್ಮ ಮಾತಿಗೆ ಬೆಂಬಲವು ಸಿಗುವುದು. ನಿಮ್ಮ ಸೌಂದರ್ಯವು ಇಷ್ಟವಾಗುವುದು. ಹಲವು ಮಾನಸಿಕ ತೊಡಕುಗಳಿಂದ ನೀವು ಹೊರಬರುವಿರಿ.
ಮಿಥುನ ರಾಶಿ: ನಿಮ್ಮ ಇಂದಿನ ಕೆಲಸವು ಯಶಸ್ಸಿನ ಶಿಖರವನ್ನು ಏರುವುದು. ದಿನವಿಡೀ ನಿಮಗೆ ಲಾಭದ ಅವಕಾಶಗಳು ಸಿಗುವುದು. ಮಾನಸಿಕ ಸ್ಥಿತಿಯೂ ಬಹಳ ಆಹ್ಲಾದದಿಂದ ಇರಲಿದೆಯಾವ ಹೂಡಿಕೆಯು ನಿಮಗೆ ಲಾಭದಾಯಕವಾಗುವುದು. ವಿದ್ಯಾಭ್ಯಾಸದಲ್ಲಿ ನಿರಾಸಕ್ತಿಯನ್ನು ಇಟ್ಟುಕೊಂಡವರು ಗುರುವಿನ ಆಶೀರ್ವಾದವನ್ನು ಪಡೆದುಕೊಳ್ಳಿ. ನಿಮಗಾದ ವಂಚನೆಯನ್ನು ಗೌಪ್ಯವಾಗಿ ಇರ್ಸಿಕೊಳ್ಳಿ. ಸಂಗಾತಿಯ ವಿಚಾರದಲ್ಲಿ ಸಂಪೂರ್ಣ ಖುಷಿ ಇರುವುದು. ವೃತ್ತಿಯಲ್ಲಿ ಒತ್ತಡವಿದ್ದರೂ ಅದನ್ನು ತೋರಿಸುವುದಿಲ್ಲ. ಅನ್ಯರು ನಿಮ್ಮನ್ನು ಅಪಹಾಸ್ಯ ಮಾಡಬಹುದು. ಅಪರಿಚಿತ ಕರೆಗಳಿಗೆ ನೀವು ಸ್ಪಂದಿಸಲಾರಿರಿ. ಆಹಾರದ ಉದ್ಯಮಕ್ಕೆ ಎಂದಿಗಿಂತ ಅಧಿಕ ಲಾಭವು ಆಗಬಹುದು. ಮಾತಗಳನ್ನು ಇಂದು ಕಡಿಮೆ ಆಡಲಿದ್ದೀರಿ.
ಕಟಕ ರಾಶಿ: ದೇಹಾರೋಗ್ಯದ ಚಿಂತೆಯು ಕಾಡಬಹುದು. ನಿಮ್ಮ ವಿಳಂಬ ಕಾರ್ಯಕ್ಕೆ ಹೇಳಿಸಿಕೊಳ್ಳಬೇಕಾದೀತು. ಪದೋನ್ನತಿಯ ಬಗ್ಗೆ ಕೇಳಿದರೂ ಏನೂ ಪ್ರಯೋಜನವಾಗದು. ಹಣಕಾಸಿನ ವ್ಯವಹಾರದ ದಾಖಲೆಗಳನ್ನು ಸರಿಯಾಗಿ ಪರಿಶೀಲಿಸಿಕೊಳ್ಳಿ. ಬಂಗಾರದ ಬಗ್ಗೆ ವ್ಯಾಮೋಹ ಹೆಚ್ಚಾಗಲಿದೆ. ಸಂಗಾತಿಯನ್ನು ಹಣಕ್ಕಾಗಿ ಪೀಡಿಸುವಿರಿ. ಪ್ರೀತಿ ಪಾತ್ರರನ್ನು ನೀವು ದೂರಮಾಡುವಿರಿ. ನಿರಂತರ ಕೆಲಸದಿಂದ ಸ್ವಲ್ಪ ವಿಶ್ರಾಂತಿಯು ಮುಖ್ಯವಾದೀತು. ವಿದ್ಯಾರ್ಥಿಗಳಿಗೆ ಆಯ್ಕೆಯ ವಿಷಯದಲ್ಲಿ ನಿರಾಸಕ್ತಿ ಬರುವುದು. ಸಹೋದರನ ಆರೋಗ್ಯದ ಬಗ್ಗೆ ಅಧಿಕ ಗಮನವಿರುವುದು. ಧಾರ್ಮಿಕ ಸ್ಥಳಕ್ಕೆ ಹೋಗಲಿದ್ದೀರಿ. ಎಲ್ಲ ಸನ್ನಿವೇಶದಲ್ಲಿಯೂ ನಿಮ್ಮ ವರ್ತನೆಯನ್ನು ಸರಿಯಾಗಿ ಇರಲಿ. ಸಂಗಾತಿಯ ಮೇಲೆ ನಿಮಗೆ ಸಿಟ್ಟು ಬರಲಿದೆ.
ಸಿಂಹ ರಾಶಿ: ಶತ್ರುಗಳು ಸಂಧಾನಕ್ಕೆ ಬರುವ ಸಾಧ್ಯತೆ ಇದೆ. ನೀವು ಯಾವ ಮಾತಿಗೂ ಜಗ್ಗದವರಂತೆ ಇರುವಿರಿ. ನಿಮ್ಮ ಮನೋವಿಕಾರಗಳು ಒಂದೊಂದಾಗಿಯೇ ಗೊತ್ತಾಗುವುದು. ಖರೀದಿಸಿದ ಭೂಮಿಯನ್ನು ಮತ್ತೊಬ್ಬರಿಗೆ ಕೊಟ್ಟುಬಿಡುವಿರಿ. ಹಿರಿಯರಿಂದ ನಿಮಗೆ ಮೆಚ್ಚುಗೆ ಸಿಗಬಹುದು. ದಾಂಪತ್ಯದಲ್ಲಿ ಪ್ರೀತಿಗೆ ನೀವು ಮಾರುಹೋಗಬಹುದು. ಅತಿಥಿಗಳ ಆಗಮನವು ನಿಮ್ಮ ಮನೆಗೆ ಆಗಲಿದೆ. ವೃತ್ತಿಯಲ್ಲಿ ನಿಮ್ಮ ಸಹಕಾರಕ್ಕೆ ಪ್ರಶಂಸೆಯು ಸಿಗುವುದು. ಭವಿಷ್ಯದ ಜೀವನದ ಬಗ್ಗೆ ಭಯವು ಇರುವುದು. ನಿಮ್ಮ ಬಗ್ಗೆ ಅಪ್ರಾಮಾಣಿಕತೆಯ ಬಗ್ಗೆ ಮಾತುಗಳು ಕೇಳಿಬರುವುದು. ಪರಿಚಿತರ ಮಾತು ನಿಮ್ಮ ಮನಸ್ಸಿಗೆ ನಾಟುವುದು. ಕಳೆದುಹೋದ ಸಂಬಂಧವನ್ನು ಮತ್ತೆ ಸರಿ ಮಾಡಿಕೊಳ್ಳುವಿರಿ.
ಕನ್ಯಾ ರಾಶಿ: ನಿಮಗೆ ಇಂದು ಧೈರ್ಯದ ಕೊರತೆ ಕಾಣಿಸಿಕೊಳ್ಳಬಹುದು. ಕೆಲವು ಮಾನಸಿಕ ಸ್ಥಿತಿಯನ್ನು ಬಿಡಲು ಪ್ರಯತ್ನಿಸುವಿರಿ. ಆದರೆ ಅದು ನಿಮಗೆ ಗೊತ್ತಿಲ್ಲದೇ ನಿಮ್ಮನ್ನು ಆವರಿಸಬಹುದು. ನಿಮ್ಮ ಶಕ್ತಿ ಮೀರಿದ ಕಾರ್ಯಕ್ಕೆ ಬೆಲೆ ಸಿಗದೇ ಹೋಗುವುದು. ವಾಹನ ಖರೀದಿಸಲು ನಿಮಗೆ ಹಣಕಾಸಿನ ಕೊರತೆಯಾಗಿ ಮುಂದೂಡುವಿರಿ. ದಾಂಪತ್ಯದ ಇಂದಿನ ಕಲಹವನ್ನು ಅಲ್ಲಿಗೇ ನಿಲ್ಲಿಸಿ. ಹೆಚ್ಚು ಪ್ರಯತ್ನದಿಂದ ಅಲ್ಪ ಲಾಭವಾಗುವುದು. ನೇರವಾದ ಮಾತಿನಿಂದ ನಿಮಗೇ ನೋವಾಗುವುದು. ಬಂಧುಗಳ ಭೇಟಿಯು ನಿಮಗೆ ಸಮಾಧಾನವನ್ನು ತರದು. ತಾಯಿಯ ಜೊತೆ ವಾಗ್ವಾದಕ್ಕೆ ನಿಲ್ಲುವುದು ಬೇಡ. ಅಚಾತುರ್ಯವು ನಿಮ್ಮಿಂದ ಆಗಬಹುದು.
ತುಲಾ ರಾಶಿ: ನಿಮ್ಮ ಹಳೆಯ ವಸ್ತುಗಳನ್ನು ಹೊರಹಾಕಿ ಸಮಾಧಾನಪಟ್ಟುಕೊಳ್ಳುವಿರಿ. ಆದಾಯದ ವೃದ್ದಿಗೆ ಬೇಕಾದ ಕ್ರಮಗಳನ್ನು ಕೈಗೊಳ್ಳುವಿರಿ. ತಂದೆಯ ವಿಚಾರದಲ್ಲಿ ಅನಾದರವು ಬರಬಹುದು. ಪಿತ್ರಾರ್ಜಿತ ಆಸ್ತಿಯನ್ನು ಪಡೆಯಲು ನಿಮಗೆ ಅವಸರ ಹೆಚ್ಚಾಗಿರುವುದು. ಧನದ ಸಹಾಯವನ್ನು ನಿಮ್ಮ ಸ್ನೇಹಿತರು ನಿಮ್ಮಿಂದ ಬಯಸುವರು. ಇಂದು ಅಧಿಕ ಒತ್ತಡವಿಲ್ಲದೇ ಕಾರ್ಯವು ಮುಗಿಯುವುದು. ವಿದೇಶಪ್ರಯಾಣದಿಂದ ಖುಷಿಯು ಇರಲಿದೆ. ಸೌಂದರ್ಯಪ್ರಜ್ಞೆಯು ಇಂದು ಅಧಿಕವಾಗಿ ಅಲಂಕಾರಕ್ಕೆ ಹೆಚ್ಚಿನ ಸಮಯವನ್ನು ಕೊಡುವರು. ನಿಮ್ಮ ಭಾವನೆಗೆ ಸ್ಪಂದಿಸುವವರನ್ನು ಹುಡುಕುವಿರಿ. ಮನೆಯಲ್ಲಿ ನಡೆಯುವ ವಿವಾಹದ ಮಾತುಕತೆಗಳಿಂದ ನಿಮಗೆ ಖುಷಿಯಾಗುವುದು. ಪಿತ್ತಕ್ಕೆ ಸಂಬಂಧಿಸಿದಂತೆ ಖಾಯಿಲೆಯು ಪುನಃ ಕಾಣಿಸಿಕೊಳ್ಳಬಹುದು.
ವೃಶ್ಚಿಕ ರಾಶಿ: ವ್ಯಾಪರದಲ್ಲಿ ಸಣ್ಣ ಬದಲಾವಣೆಯನ್ನು ತಂದುಕೊಳ್ಳುವಿರಿ. ಅಪ್ರಬುದ್ಧ ಆಲೋಚನೆಗಳು ನಿಮ್ಮಿಂದ ದೂರವಿರಲಿ. ಸಾಹಸದ ಕೆಲಸಕ್ಕೆ ನೀವು ಹೆಚ್ಚು ಉತ್ಸುಕರಾಗಿದ್ದೀರಿ. ನಿಮ್ಮ ವ್ಯಕ್ತಿತ್ವವು ಬೆಳಕಿಗೆ ಬರಲು ಇಂದು ಸಹಾಯಕವಾಗುವುದು. ಮೆಚ್ಚುಗೆಯ ಮಾತಿನಿಂದ ಸಂಕೋಚಗೊಳ್ಳುವಿರಿ. ಆರಿಸಿಕೊಂಡ ಆಯ್ಕೆಯು ನಿಮಗೆ ಇಷ್ಟವಾಗದೇ ಈಗ ಇರುವುದು. ಸಾಮಾಜಿಕ ಗೌರವದಿಂದ ಅಹಂಕಾರವು ಬರುವ ಸಾಧ್ಯತೆ ಇದೆ. ಪರಿಚಿತರ ವಿಚಾರದಲ್ಲಿ ನೀವು ನಕಾರಾತ್ಮಕವಾಗಿ ಮಾತನಾಡುವಿರಿ. ಮಕ್ಕಳಿಗೆ ನಿಮ್ಮ ಪ್ರೀತಿಯ ಅವಶ್ಯಕತೆ ಇರುವುದು. ಸಂಪಾಡನೆಯ ಕಡೆ ಅಧಿಕ ಗಮನ ಇರಲಿದ್ದು ಸಂಬಂಧಗಳ ಬಗ್ಗೆ ಆಲೋಚನೆಯನ್ನು ಬಿಡುವಿರಿ. ಭೂಮಿಯ ಮೇಲೆ ಹೂಡಿಕೆ ಮಾಡುವುದು ನಿಮಗೆ ಸೂಖ್ತ ಎನಿಸಬಹುದು.
ಧನು ರಾಶಿ: ಮಾನಸಿಕ ಆರೋಗ್ಯವು ಕ್ಷೀಣಿಸುವುದು ನಿಮ್ಮ ಗಮನಕ್ಕೆ ಬರಲಿದೆ. ಬಲವೃದ್ಧಿಗೆ ಬೇಕಾದ ತಯಾರಿಯನ್ನು ಮಾಡಿಕೋಳ್ಳುವುದು ಉತ್ತಮ. ಮಹಿಳೆಯರು ಆದಾಯದಲ್ಲಿ ಮುನ್ನಡೆ ಸಾಧಿಸುವರು ಇಂದು. ಇನ್ನೊಬ್ಬರ ಕಡೆಯಿಂದ ಕೆಲಸವನ್ನು ಮಾಡಿಸಿಕೊಳ್ಳುವ ಸಂದರ್ಭವು ಬರಬಹುದು. ಕಾರ್ಯದಲ್ಲಿ ಆಗುವ ವ್ಯತ್ಯಸದಿಂದ ಕೋಪಗೊಳ್ಳುವುದು ಬೇಡ. ಒಂದು ನಾಣ್ಯಕ್ಕೆ ಎರಡು ಮುಖಗಳು. ಎರಡೂ ಒಬ್ಬರ ಮುಖವನ್ನು ಒಬ್ಬರು ನೋಡಿಕೊಳ್ಳುವುದಿಲ್ಲ. ಆದರೇ ಇಬ್ಬರಲ್ಲಿ ಯಾರೊಬ್ಬ್ು ಇಲ್ಲದಿದ್ದರೂ ಇಬ್ಬರೂ ಇರುವುದಿಲ್ಲ. ವಿದ್ಯಾರ್ಥಿಗಳ ಓದುವ ಮನಸ್ಸು ಬಹಳ ಚಂಚಲವಾಗಿ ಇರಲಿದೆ. ಸರಿಯಾದ ತಿಳಿವಳಿಕೆ ಅಗತ್ಯ. ಅತ್ಯಂತ ಬೆಲೆ ಬಾಳುವ ಮರಗಳೂ ಎಂದಿಗೂ ಅಲ್ಪಕಾಲದಲ್ಲಿ ಬೆಳೆಯುವುದಿಲ್ಲ. ಸಂಗಾತಿಗಳು ಒಂದೆಡೆ ಕುಳಿತು ನಿಮ್ಮ ಭಾವನೆಗಳನ್ನು ಪರಸ್ಪರ ಹಂಚಿಕೊಳ್ಳಿ.
ಮಕರ ರಾಶಿ: ವಿದ್ಯಾರ್ಥಿಗಳಿಗೆ ಯಶಸ್ಸನ್ನು ಪಡೆಯುವ ಹಂಬಲವು ಹೆಚ್ಚಾಗುವುದು. ಇದೇ ಓದಿಗೆ ಅವರನ್ನು ಹಚ್ಚುವುದು. ನಿಮ್ಮ ಕುಶಲ ಕಾರ್ಯದಿಂದ ಪ್ರಸಿದ್ಧಿ ದೊರೆಯುವುದು. ಉದ್ಯೋಗದಲ್ಲಿ ಹಳೆಯ ಸಮಸ್ಯೆಯು ಪುನಃ ಬಾರದಂತೆ ನೋಡಿಕೊಳ್ಳಿ. ವಾದವನ್ನು ಮಾಡುವ ಮುಂದಿರುವ ಜನರನ್ನು ನೋಡಿಕೊಳ್ಳಿ. ನಾಲಿಗೆಯನ್ನು ಹೇಗಾದರೂ ಹರಿ ಬಿಡುವುದು ಬೇಡ. ಖನಿಜದ ವ್ಯವಹಾರ ತಕ್ಕಮಟ್ಟಿಗೆ ಆದಾಯವನ್ನು ಹೆಚ್ಚಿಸುವುದು. ಶತ್ರುಗಳ ಕಾಟವನ್ನು ಕಡಿಮೆ ಮಾಡಿಕೊಳ್ಳಲು ಯೋಜನೆಯನ್ನು ರೂಪಿಸಿಕೊಳ್ಳುವಿರಿ. ಉದ್ಯಮವನ್ನು ಮಾಡುವವರಿಗೆ ಕೆಲವು ತೊಂದರೆಗಳು ಬರಬಹುದು. ಸರ್ಕಾರಿ ಉದ್ಯೋಗದಲ್ಲಿ ಇದ್ದವರಿಗೆ ಕಾರ್ಯದಲ್ಲಿ ಒತ್ತಡವು ಮೇಲಧಿಕಾರಿಗಳಿಂದ ಬರುವುದು. ದೂರ ಪ್ರಯಾಣವನ್ನು ಮಾಡಲು ಬೇಕಾದ ತಯಾರಿ ಇರಲಿ. ಆಗಬೇಕಾದ ವಿವಾಹವನ್ನು ತಪ್ಪಿಸುವ ಸಾಧ್ಯತೆ ಇದೆ. ಕೊಟ್ಟಿರುವ ಹಣದ ನಿರೀಕ್ಷೆಯಲ್ಲಿ ಇರುವಿರಿ. ದೈವಾನುಗ್ರಹದ ಕೊರತೆ ಕಾಣಿಸುವುದು.
ಕುಂಭ ರಾಶಿ: ನಿಮ್ಮ ಜ್ಞಾನವನ್ನು ಬೆಳೆಸಿಕೊಳ್ಳಲು ವಿವಿಧ ಮಾರ್ಗೋಪಾಯಗಳನ್ನು ಕಂಡುಕೊಳ್ಳುವಿರಿ. ಸಂಗಾತಿಯಿಂದ ನಿಮ್ಮ ಯೋಚನೆಗೆ ಪುಷ್ಟಿ ಸಿಗುವುದು. ಅನವಶ್ಯಕ ಆಲೋಚನೆಗಳಿಂದ ಮನಸ್ಸು ಕ್ಷೋಭೆಗೊಳ್ಳುವುದು. ಆರೋಗ್ಯದ ವೃದ್ಧಿಗಾಗಿ ಧಾರ್ಮಿಕ ಕಾರ್ಯಗಳನ್ನು ಮಾಡುವಿರಿ. ಯಾರೊಂದಿಗೂ ಸ್ಪರ್ಧಿಸುವ ಅವಶ್ಯಕತೆ ಇಲ್ಲ. ನಿಮ್ಮ ಜವಾಬ್ದಾರಿಯ ಕಾರ್ಯಗಳು ಮುನ್ನೆಲೆಗೆ ಬರಬಹುದು. ಅಪರೂಪದ ದ್ರವ್ಯಗಳ ಸಂಗ್ರಹವನ್ನು ಮಾಡುವಿರಿ. ಗಣ್ಯರ ವ್ಯಕ್ತಿತ್ವವು ನಿಮ್ಮ ಮೇಲೆ ಪ್ರಭಾವವನ್ನು ಬೀರಬಹುದು. ಖರ್ಚನ್ನು ಕಡಿಮೆ ಮಾಡಿಕೊಂಡ ಕಾರಣ ನಿಮ್ಮ ಆರ್ಥಿಕ ವ್ಯವಸ್ಥೆಯು ಸುಧಾರಿಸುವುದು. ಸುಮ್ಮನೇ ಆಡಿದ ಮಾತುಗಳೂ ನಿಮಗೆ ಕಷ್ಟವಾದೀತು. ನಿಮ್ಮ ವಿರುದ್ಧ ನಡೆಯುವ ತಂತ್ರವನ್ನು ನೀವು ಅರಿತುಕೊಳ್ಳುವಿರಿ. ಹಿರಿಯರಿಗೆ ಅಗೌರವವನ್ನು ತೋರುವುದು ಬೇಡ. ದೇವಾಲಯಕ್ಕೆ ಹೋಗಿ ನಿಮ್ಮ ಕೆಲವು ಸಮಯವನ್ನು ಕಳೆದುಬರುವಿರಿ.
ಮೀನ ರಾಶಿ: ನಿಮಗೆ ಇಂದು ಆಸ್ತಿಯ ವಿಚಾರದಲ್ಲಿ ಅನುಕೂಲವಾದ ಬೆಳವಣಿಗೆ ಇರಲಿದೆ. ನೀವು ನಿರೀಕ್ಷಿಸಿದ್ದ ಸಮಸ್ಯೆಯು ಬಾರದೇ ಹೋದೀತು. ಖಾಸಗಿಯ ಕೆಲಸವು ನಿಮಗೆ ಸಾಕೆನಿಸಬಹುದು. ಬಂಧುಗಳಿಂದ ಮಾನಸಿಕ ಹಿಂಸೆಯಾಗುವುದು. ಕೆಲಸದಲ್ಲಿ ಬದಲಾವಣೆಯು ನಿಮಗೆ ಬೇಕಾದೀತು. ಅಧಿಕಾರಿಗಳ ಪ್ರಶಂಸೆಯು ನಿಮ್ಮ ಕಾರ್ಯಕ್ಕೆ ಬಲವು ಬರಬಹುದು. ಸ್ನೇಹಿತರ ಸಮಸ್ಯೆಗೆ ನೀವು ಸ್ಪಂದಿಸುವಿರಿ. ನಿಮ್ಮ ಕಾರ್ಯವನ್ನು ಇಂದೇ ಮುಗಿಸುವ ಚಿಂತೆಯಲ್ಲಿ ಇರುವಿರಿ. ಇಂದಿನ ಹಣಕಾಸಿನ ಹರಿವು ನಿಮಗೆ ಸಂತೋಷವನ್ನು ಕೊಡಬಹುದು. ಧನ ಸಂಪಾದನೆಗೆ ಅವಕಾಶಗಳು ನಿಮಗೆ ಸಿಗಬಹುದು. ಇಂದು ಕಾರ್ಯದಲ್ಲಿ ಸ್ವಲ್ಪ ಒತ್ತಡವು ಇರಲಿದೆ. ದೈವಬಲಕ್ಕೆ ಪುರುಷಪ್ರಯತ್ನವೂ ಬೇಕಾಗುವುದು.
-ಲೋಹಿತಶರ್ಮಾ – 8762924271 (what’s app only)