Horoscope: ಈ ರಾಶಿಯವರು ಒಂಟಿಯಾಗಿ ಕುಳಿತು ಕಳೆದ ದಿನಗಳನ್ನು ನೆನೆಯುವಿರಿ, ಆರೋಗ್ಯದ ಬಗ್ಗೆ ಎಚ್ಚರವಿರಲಿ

ಚಂದ್ರ, ಸೂರ್ಯನ ಸಂಚಾರ ಚೆನ್ನಾಗಿರಬೇಕು. ನಿಮ್ಮ ರಾಶಿ ಫಲ ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ. ನೀವು ಮೇಷ, ವೃಷಭ, ಮಿಥುನ, ಕಟಕ ರಾಶಿಯವರೇ? ಹಾಗಿದ್ದರೆ ಇಂದಿನ (ಸೆಪ್ಟೆಂಬರ್ 28) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.

Horoscope: ಈ ರಾಶಿಯವರು ಒಂಟಿಯಾಗಿ ಕುಳಿತು ಕಳೆದ ದಿನಗಳನ್ನು ನೆನೆಯುವಿರಿ, ಆರೋಗ್ಯದ ಬಗ್ಗೆ ಎಚ್ಚರವಿರಲಿ
ರಾಶಿಭವಿಷ್ಯImage Credit source: iStock Photo
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: Sep 28, 2023 | 12:10 AM

ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚೆನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದರೆ 2023 ಸೆಪ್ಟೆಂಬರ್ 28 ಗುರುವಾರದ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಕನ್ಯಾ ಮಾಸ, ಮಹಾನಕ್ಷತ್ರ: ಹಸ್ತಾ, ಮಾಸ: ಭಾದ್ರಪದ, ಪಕ್ಷ: ಶುಕ್ಲ, ವಾರ: ಗುರು, ತಿಥಿ: ಚತುರ್ದಶೀ, ನಿತ್ಯನಕ್ಷತ್ರ: ಪೂರ್ವಾಭಾದ್ರ, ಯೋಗ: ಗಂಡ, ಕರಣ: ಕೌಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 23 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ರಿಂದ 23 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 01:53 ರಿಂದ 03:23ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 06:23 ರಿಂದ 07:53ರ ವರೆಗೆ, ಗುಳಿಕ ಕಾಲ ಬೆಳಗ್ಗೆ 09:23 ರಿಂದ ಮಧ್ಯಾಹ್ನ 10:53ರ ವರೆಗೆ.

ಮೇಷ ರಾಶಿ: ಪ್ರೀತಿಯ ಹೊಸ ಅಧ್ಯಾಯವನ್ನು ಆರಂಭ ಮಾಡುವಿರಿ. ಒಂಟಿಯಾಗಿ ಕುಳಿತು ಕಳೆದ ದಿನಗಳನ್ನು ನೆನೆಯುವಿರಿ. ಮಕ್ಕಳ ಮದುವೆಯ ಚಿಂತೆಯೂ ಒಮ್ಮಿಂದೊಮ್ಮೆಲೆ ಬರಬಹುದು. ನಿಮ್ಮ ಮಾತಿಗೆ ಕುಟುಂಬವು ಸಮ್ಮತಿಸಬಹುದು. ಔದಾರ್ಯವು ಅಧಿಕವಾಗಿ ಬೇಡ. ಆಲಸ್ಯದಿಂದ ಇರುವ ಕಾರಣ ಯಾವ ಕೆಲಸವೂ ಸರಿಯಾದ ಸಮಯಕ್ಕೆ ಮಾಡುವುದಿಲ್ಲ. ಆರ್ಥಿಕವಾಗಿ ಬಲಗೊಳ್ಳಲು ನೀವು ದೈವಕ್ಕೆ ಶರಣಾಗುವಿರಿ. ಇಂದು ಏಕಾಗ್ರತೆಯಿಂದ ಕಾರ್ಯವನ್ನು ಮಾಡಲು ಕಷ್ಟವಾದೀತು. ಆಗಬೇಕಾದ ಕಾರ್‍ಯಕ್ಕೆ ಇಂದಿನ ಸುತ್ತಾಟವು ವ್ಯರ್ಥವಾದೀತು. ಗೃಹನಿರ್ಮಾಣದ ಕಾರ್ಯವು ದೊಡ್ಡ ಸಮಸ್ಯೆಯಾಗಿ ಪರಿಣಮಿಸಬಹುದು. ವಾಹನಕ್ಕಾಗಿ ಖರ್ಚುಮಾಡುವಿರಿ.

ವೃಷಭ ರಾಶಿ: ನಿಮ್ಮದಲ್ಲದ ಕಾರ್ಯಕ್ಕೆ ನೀವು ತಲೆ ಕೊಡಬೇಕಾದೀತು. ನಿಮ್ಮ ಸಂಗಾತಿಯು ಕೋಪಗೊಳ್ಳಬಹುದು. ನಿಮ್ಮ ಮಾತಿನಿಂದ ಸಮಾಧಾನವು ಬರುವುದು. ದೂರದ ಮಕ್ಕಳನ್ನು ನೋಡುವ ಆಸೆ ಆಗಲಿದೆ. ಉದ್ಯಮದ ಕಾರಣ ಪ್ರಯಾಣ ಮಾಡುವ ಸ್ಥಿತಿಯು ಬರಬಹುದು. ಅಪ್ತರ ಮೇಲಿನ ನಂಬಿಕೆಯನ್ನು ಕಳೆದುಕೊಳ್ಳುವಿರಿ. ಮನೆಯಿಂದ ದೂರವಿರುವ ನಿಮಗೆ ಮನೆಗೆ ಹೋಗಬೇಕು ಎಂದು ಅನ್ನಿ್ಸುವುದು. ಖರ್ಚಿನ ದಾರಿಗಳು ಒಂದೊಂದೇ ತೆರೆಯುವುದು. ನಿಮ್ಮ ಮಾತಿಗೆ ಬೆಂಬಲವು ಸಿಗುವುದು. ನಿಮ್ಮ ಸೌಂದರ್ಯವು ಇಷ್ಟವಾಗುವುದು. ಹಲವು ಮಾನಸಿಕ ತೊಡಕುಗಳಿಂದ ನೀವು ಹೊರಬರುವಿರಿ.

ಮಿಥುನ ರಾಶಿ: ನಿಮ್ಮ ಇಂದಿನ ಕೆಲಸವು ಯಶಸ್ಸಿನ ಶಿಖರವನ್ನು ಏರುವುದು. ದಿನವಿಡೀ ನಿಮಗೆ ಲಾಭದ ಅವಕಾಶಗಳು ಸಿಗುವುದು. ಮಾನಸಿಕ ಸ್ಥಿತಿಯೂ ಬಹಳ ಆಹ್ಲಾದದಿಂದ ಇರಲಿದೆಯಾವ ಹೂಡಿಕೆಯು ನಿಮಗೆ ಲಾಭದಾಯಕವಾಗುವುದು. ವಿದ್ಯಾಭ್ಯಾಸದಲ್ಲಿ ನಿರಾಸಕ್ತಿಯನ್ನು ಇಟ್ಟುಕೊಂಡವರು ಗುರುವಿನ ಆಶೀರ್ವಾದವನ್ನು ಪಡೆದುಕೊಳ್ಳಿ. ನಿಮಗಾದ ವಂಚನೆಯನ್ನು ಗೌಪ್ಯವಾಗಿ ಇರ್ಸಿಕೊಳ್ಳಿ. ಸಂಗಾತಿಯ ವಿಚಾರದಲ್ಲಿ ಸಂಪೂರ್ಣ ಖುಷಿ ಇರುವುದು. ವೃತ್ತಿಯಲ್ಲಿ ಒತ್ತಡವಿದ್ದರೂ ಅದನ್ನು ತೋರಿಸುವುದಿಲ್ಲ. ಅನ್ಯರು ನಿಮ್ಮನ್ನು ಅಪಹಾಸ್ಯ ಮಾಡಬಹುದು. ಅಪರಿಚಿತ ಕರೆಗಳಿಗೆ ನೀವು ಸ್ಪಂದಿಸಲಾರಿರಿ. ಆಹಾರದ ಉದ್ಯಮಕ್ಕೆ ಎಂದಿಗಿಂತ ಅಧಿಕ ಲಾಭವು ಆಗಬಹುದು. ಮಾತಗಳನ್ನು‌ ಇಂದು ಕಡಿಮೆ ಆಡಲಿದ್ದೀರಿ.

ಕಟಕ ರಾಶಿ: ದೇಹಾರೋಗ್ಯದ ಚಿಂತೆಯು ಕಾಡಬಹುದು. ನಿಮ್ಮ ವಿಳಂಬ ಕಾರ್ಯಕ್ಕೆ ಹೇಳಿಸಿಕೊಳ್ಳಬೇಕಾದೀತು. ಪದೋನ್ನತಿಯ ಬಗ್ಗೆ ಕೇಳಿದರೂ ಏನೂ ಪ್ರಯೋಜನವಾಗದು. ಹಣಕಾಸಿನ ವ್ಯವಹಾರದ ದಾಖಲೆಗಳನ್ನು ಸರಿಯಾಗಿ ಪರಿಶೀಲಿಸಿಕೊಳ್ಳಿ. ಬಂಗಾರದ ಬಗ್ಗೆ ವ್ಯಾಮೋಹ ಹೆಚ್ಚಾಗಲಿದೆ. ಸಂಗಾತಿಯನ್ನು ಹಣಕ್ಕಾಗಿ ಪೀಡಿಸುವಿರಿ. ಪ್ರೀತಿ ಪಾತ್ರರನ್ನು ನೀವು ದೂರಮಾಡುವಿರಿ. ನಿರಂತರ ಕೆಲಸದಿಂದ ಸ್ವಲ್ಪ ವಿಶ್ರಾಂತಿಯು ಮುಖ್ಯವಾದೀತು. ವಿದ್ಯಾರ್ಥಿಗಳಿಗೆ ಆಯ್ಕೆಯ ವಿಷಯದಲ್ಲಿ ನಿರಾಸಕ್ತಿ ಬರುವುದು. ಸಹೋದರನ ಆರೋಗ್ಯದ ಬಗ್ಗೆ ಅಧಿಕ ಗಮನವಿರುವುದು. ಧಾರ್ಮಿಕ ಸ್ಥಳಕ್ಕೆ ಹೋಗಲಿದ್ದೀರಿ. ಎಲ್ಲ ಸನ್ನಿವೇಶದಲ್ಲಿಯೂ ನಿಮ್ಮ ವರ್ತನೆಯನ್ನು ಸರಿಯಾಗಿ ಇರಲಿ. ಸಂಗಾತಿಯ ಮೇಲೆ ನಿಮಗೆ ಸಿಟ್ಟು ಬರಲಿದೆ.