ಇಂದಿನ ರಾಶಿ ಭವಿಷ್ಯ (Horoscope) ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಇದರ ಜೊತೆಗೆ ಪಂಚಾಂಗ ಹೇಗಿದೆ? ಎಂಬುದನ್ನು ಒಂದಷ್ಟು ಮಂದಿ ನೋಡುತ್ತಾರೆ. ಹಾಗಾದರೆ ಇಂದಿನ (2023 ನವೆಂಬರ್ 16) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ಶರತ್ ಋತು, ತುಲಾ ಮಾಸ, ಮಹಾನಕ್ಷತ್ರ: ವಿಶಾಖಾ, ಮಾಸ: ಕಾರ್ತಿಕ, ಪಕ್ಷ: ಶುಕ್ಲ, ವಾರ: ಗುರು, ತಿಥಿ: ತೃತೀಯಾ, ನಿತ್ಯನಕ್ಷತ್ರ: ಮೂಲಾ, ಯೋಗ: ಸುಕರ್ಮಾ, ಕರಣ: ವಣಿಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 34 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 05-59 ಗಂಟೆ, ರಾಹು ಕಾಲ ಮಧ್ಯಾಹ್ನ 01:43 ರಿಂದ 03:08ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 06:35 ರಿಂದ 08:00ರ ವರೆಗೆ, ಗುಳಿಕ ಕಾಲ ಬೆಳಗ್ಗೆ 09:26 ರಿಂದ 10:52ರ ವರೆಗೆ.
ಸಿಂಹ ರಾಶಿ : ಯೋಜನೆಗೆ ಸರಿಯಾದ ರೂಪವಿರಲಿ. ಯಾರನ್ನೋ ತಪ್ಪಿಗೆ ತಂದು ನಿಲ್ಲಿಸುವ ಅವಶ್ಯಕತೆ ಇರದು. ಮಕ್ಕಳ ವಿವಾಹದ ಚಿಂತೆಯು ಕಾಡಬಹುದು. ಅಧಿಕಾರ ಮತ್ತು ವರ್ಚಸ್ಸು ಹೆಚ್ಚಿಸಿಕೊಳ್ಳುವ ಅವಕಾಶ ಬರುವುದು. ಸಕಾರಾತ್ಮಕ ಯೋಚನೆಯಿಂದ ಮುಂದಡಿ ಇಡಬೇಕಾದೀತು. ನಿಮ್ಮ ಬುದ್ಧಿಶಕ್ತಿಗೆ ತಕ್ಕಂತೆ ಕೆಲಸದಲ್ಲಿ ಜಯವನ್ನು ಸಾಧಿಸುವಿರಿ. ಧೈರ್ಯದಿಂದ ಮುನ್ನಡೆಯುವ ಇಚ್ಛಾಶಕ್ತಿಯನ್ನು ರೂಢಿಸಿಕೊಳ್ಳಿ. ಸ್ವಂತ ಉದ್ಯೋಗವನ್ನು ನಡೆಸಲು ಚಿಂತಿಸುವುದು ಉತ್ತಮ. ವಂಚನೆಯ ಕರೆಗಳಿಂದ ಆದಷ್ಟು ಎಚ್ಚರವಾಗಿರಿ. ನಿಮ್ಮ ಸುತ್ತಮುತ್ತಲಿನವರಿಂದ ತೊಂದರೆಯಾಗಬಹುದು. ಇಂದು ನೀವು ಒತ್ತಡದ ಕೆಲಸದಿಂದ ವಿರಾಮ ಪಡೆದುಕೊಳ್ಳಲು ಬಯಸುವಿರಿ. ನಕ್ಷತ್ರಗಳ ಸೌಂದರ್ಯವನ್ನು ಹತ್ತಿರ ಹೋಗಿ ನೋಡಲಾಗದು. ದೂರದಿಂದಲೇ ಸುಂದರ.
ಕನ್ಯಾ ರಾಶಿ : ರುಚಿಯಾದ ಆಹಾರವನ್ನು ಮಾಡಲು ಎಲ್ಲವೂ ಒಂದೇ ಪ್ರಮಾಣದಲ್ಲಿ ಬೇಕಿಲ್ಲ. ರುಚಿಯಾಗುವಂತೆ ಪ್ರಮಾಣವು ಇರಬೇಕು. ನಿಮ್ಮ ಯಶಸ್ಸಿಗೆ ವಿರೋಧಿಗಳು ಅಡ್ಡಗಾಲು ಹಾಕಬಹುದು. ಧೃತಿಗೆಡುವ ಅವಶ್ಯಕತೆ ಇರುವುದಿಲ್ಲ. ಉದ್ವೇಗದಿಂದ ಸಿಟ್ಟುಗೊಂಡು ಅಪ್ರಿಯರಾಗುವಿರಿ. ಉದ್ಯೋಗದ ಬದಲಾವಣೆಯ ವಿಚಾರದಲ್ಲಿ ನೀವು ದ್ವಂದ್ವವಿರಲಿದೆ. ಇಂದಿನ ಕೆಲಸಗಳು ಬೇಗ ಮುಕ್ತಾಯವಾಗಿ ನಿಶ್ಚಿಂತೆಯಿಂದ ಇರುವಿರಿ. ಮರೆವು ನಿಮಗೆ ವರವಾದಂತೆ ಅನ್ನಿಸುವುದು. ವಿದ್ಯಾಭ್ಯಾಸಕ್ಕೆ ಮನೆಯನ್ನು ಬಿಟ್ಟು ದೂರವಿರಲು ನಿರ್ಧಾರ ಮಾಡುವಿರಿ. ನಿಮ್ಮ ಇಂದಿನ ಆರ್ಥಿಕಲಾಭವು ನಿಮಗೆ ಹೆಚ್ಚು ಸುಖವನ್ನು ಕೊಡಬಹುದು. ಸಂಗಾತಿಯು ನಿಮಗೆ ಬೇಸರವಾಗುವಂತೆ ಮಾತನಾಡಬಹುದು. ಇಂದು ನೀವು ಗಂಭೀರವಾದ ಆಲೋಚನೆಯಲ್ಲಿ ಮುಳುಗುವಿರಿ.
ತುಲಾ ರಾಶಿ : ಮನೆ ಹಾಗೂ ಕಛೇರಿಯ ಜವಾಬ್ದಾರಿಯು ಹೆಚ್ಚಾಗುವುದು. ಹಣಕಾಸಿನ ವಿಚಾರದಲ್ಲಿ ತಜ್ಞರ ಸಲಹೆ ಪಡೆಯಬೇಕಾಗುವುದು. ಆಪತ್ತು ಎದುರಾದಾಗ ಯುಕ್ತಿಯಿಂದ ಕೆಲಸವನ್ನು ಮಾಡಿ. ಮಾಡಲು ಹೊರಟ ಕೆಲಸದಲ್ಲಿ ಸಂಪೂರ್ಣ ಯಶಸ್ಸು ನಿಮ್ಮದಾಗುವುದು. ನಿಮ್ಮ ತಾಳ್ಮೆಯೇ ಗುರಿಯನ್ನು ತಲುಪಲು ಸಹಕಾರಿಯಾಗಿರುವುದು. ಒತ್ತಡ ಕಡಿಮೆಯಾಗಿ ಮನೆಯಲ್ಲಿ ನೆಮ್ಮದಿಯಿಂದ ಇರುವಿರಿ. ಮಕ್ಕಳ ವೃತ್ತಿಯಲ್ಲಿ ಹೆಚ್ಚಿನ ಏಳ್ಗೆಯನ್ನು ಕಂಡು ಸುಖಿಸುವಿರಿ. ಬರಲಿರುವ ಹಣವನ್ನು ಸರಿಯಾಗಿ ವಿನಿಯೋಗಿಸಿ. ಸ್ಥಿರಾಸ್ತಿಯಲ್ಲಿ ಲಾಭವನ್ನು ಪಡೆಯಲು ತಂತ್ರವನ್ನು ಬಳಸುವಿರಿ. ಮಕ್ಕಳ ವಿಚಾರದಲ್ಲಿ ನೀವು ಬಹಳ ಮೃದು ಸ್ವಭಾವವಿರುವುದು. ಮುಖ್ಯವಾದದನ್ನು ಬಿಟ್ಟು ಮತ್ತೆಲ್ಲೋ ಗಮನವಿರುವುದು. ನಿಮ್ಮ ಮನಃಸ್ಥಿತಿಯನ್ನು ಯಾರಾದರೂ ದುರುಪಯೋಗ ಮಾಡಿಕೊಳ್ಳಬಹುದು.
ವೃಶ್ಚಿಕ ರಾಶಿ : ಮಕ್ಕಳ ಬಗೆಗೆ ಎಷ್ಟೇ ಚಿಂತಿಸಿದರೂ ಪರಿಹಾರ ಮಾರ್ಗ ಸಿಗದೇ ಬೇಸರವಾಗುವುದು. ಆದರೆ ಉನ್ನತ ಅಧಿಕಾರಿಗಳು ಸಾಮಾನ್ಯರಿಗೆ ಸ್ಪಂದಿಸುವ ಕರ್ತವ್ಯವನ್ನು ಮರೆಯಬಾರದು. ಇಂದು ಮಡದಿ, ಮಕ್ಕಳಿಂದಲೇ ಟೀಕೆಯನ್ನು ಕೇಳಬೇಕಾದೀತು. ನಿಮ್ಮ ವ್ಯಾಪಾರ ವ್ಯವಹಾರದಲ್ಲಿ ಪಾರದರ್ಶಕತೆ ಮಾತ್ರ ಇರಲಿ. ಮಕ್ಕಳ ವಿವಾಹದ ಬಗ್ಗೆ ಚಿಂತಿಸಿ ಭಾವುಕರಾಗುವಿರಿ. ಕುಟುಂಬಕ್ಕಾಗಿ ಮಾಡಿದ ಸಾಲವನ್ನು ನೆನೆಸಿಕೊಂಡು ಸಂಕಟಪಡುವಿರಿ. ಸ್ತ್ರೀಯರಿಗೆ ಉದ್ಯೋಗದಲ್ಲಿ ಹೆಚ್ಚಿನ ಆದ್ಯತೆ ಸಿಗಬಹುದು. ಇನ್ನೊಬ್ಬರ ನೋವಿಗಿ ಸ್ಪಂದಿಸುವ್ವಿರಿ. ದಾಂಪತ್ಯದಲ್ಲಿ ಸಾಮರಸ್ಯದ ಅಗತ್ಯವು ಬಹಳ ಇರಲಿದೆ. ನೀವು ಉದ್ಯೋಗವನ್ನು ಪಡೆಯಲು ಮಾಡಿದ ಪ್ರಯತ್ನಗಳು ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತವೆ. ದುರಭ್ಯಾಸವನ್ನು ಮಿತಿಯಲ್ಲಿ ಇರಿಸಿಕೊಳ್ಳಿ.