Horoscope: ರಾಶಿಭವಿಷ್ಯ, ಈ ರಾಶಿಯವರಿಗೆ ವೈವಾಹಿಕ ಜೀವನದ ಸುಖವು ಸಪ್ಪೆ ಎನಿಸಬಹುದು

| Updated By: ಕಿರಣ್ ಹನುಮಂತ್​ ಮಾದಾರ್

Updated on: Oct 02, 2023 | 12:30 AM

ನೀವು ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರಾಗಿದ್ದು, ಬೆಳಗ್ಗೆ ಎದ್ದು ಕೂಡಲೇ ನಿಮ್ಮ ಭವಿಷ್ಯದ ಬಗ್ಗೆ ತಿಳಿದುಕೊಳ್ಳುವ ಅಭ್ಯಾಸ ಇದೆಯೇ? ಹಾಗಿದ್ದರೆ ಇಂದಿನ (2023 ಅಕ್ಟೋಬರ್ 02)) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿ ತಿಳಿದುಕೊಳ್ಳಿ.

Horoscope: ರಾಶಿಭವಿಷ್ಯ, ಈ ರಾಶಿಯವರಿಗೆ ವೈವಾಹಿಕ ಜೀವನದ ಸುಖವು ಸಪ್ಪೆ ಎನಿಸಬಹುದು
ರಾಶಿ ಭವಿಷ್ಯ
Follow us on

ಇಂದಿನ ರಾಶಿ ಭವಿಷ್ಯ ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಇದರ ಜೊತೆಗೆ ಪಂಚಾಂಗ ಹೇಗಿದೆ? ಎಂಬುದನ್ನು ಒಂದಷ್ಟು ಮಂದಿ ನೋಡುತ್ತಾರೆ. ಹಾಗಾದರೆ ಇಂದಿನ (2023 ಅಕ್ಟೋಬರ್ 02) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಕನ್ಯಾ ಮಾಸ, ಮಹಾನಕ್ಷತ್ರ: ಹಸ್ತಾ, ಮಾಸ: ಭಾದ್ರಪದ, ಪಕ್ಷ: ಕೃಷ್ಣ, ವಾರ: ಸೋಮ, ತಿಥಿ: ತೃತೀಯಾ / ಚತುರ್ಥೀ, ನಿತ್ಯನಕ್ಷತ್ರ: ಭರಣೀ, ಯೋಗ: ಹರ್ಷಣ, ಕರಣ: ಭದ್ರ, ಸೂರ್ಯೋದಯ ಬೆಳಗ್ಗೆ 06-23ಕ್ಕೆ, ಸೂರ್ಯಾಸ್ತ ಸಂಜೆ 06 – 20ಕ್ಕೆ, ರಾಹು ಕಾಲ ಬೆಳಿಗ್ಗೆ 07:53 – 09:23ರ ವರೆಗೆ, ಯಮಘಂಡ ಕಾಲ ಬೆಳಿಗ್ಗೆ 10:52 – 12:22ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 01:52 – 03:21ರ ವರೆಗೆ.

ಸಿಂಹ ರಾಶಿ : ಮನೆಯಲ್ಲಿ ಬಂಧುಗಳ ಸಮಾಗಮವು ಇರುವುದು. ಮದಿನ ಮಾನಸಿಕ ಒತ್ತಡದಿಂದ ನೀವು ಹೊರಬರಲು ಕಷ್ಟವಾದೀತು. ಮನೋರಂಜನೆಯಲ್ಲಿ ನೀವು ಪಾಲ್ಗೊಳ್ಳುವಿರಿ. ಖರ್ಚಿನ ಮೇಲೆ‌‌ ನಿಯಂತ್ರಣ ಸಾಧಿಸಬೇಕೆಂದಿದ್ದರೂ ಮತ್ತೆಲ್ಲೋ ಹರಿದು ಹೋಗುವುದು. ವೈವಾಹಿಕ ಜೀವನದ ಸುಖವು ಸಪ್ಪೆ ಎನಿಸಬಹುದು. ಭೂಮಿಯ ವ್ಯವಹಾರಕ್ಕೆ ಯಾರ ಜೊತೆಗಾದರೂ ಸೇರಿಕೊಳ್ಳುವಿರಿ. ಮಕ್ಕಳನ್ನು ಪಡೆಯುವ ಬಯಕೆ ಇರುವುದು. ಆರೋಗ್ಯದಲ್ಲಿ ವ್ಯತ್ಯಾಸವಾಗಿ ವೈದ್ಯರ ಸಲಹೆಯನ್ನು ಪಡೆದುಕೊಳ್ಳುವಿರಿ. ನೂತನ ವಸ್ತುಗಳ ಖರೀದಿಯನ್ನು ನೀವು ಮಾಡುವಿರಿ. ಗ್ರಾಹಕರನ್ನು ಹಿಡಿದಿಟ್ಟುಕೊಳ್ಳುವ ಕಲೆ ಗೊತ್ತಿದೆ. ನಿಮ್ಮನ್ನು ಗುರುತಿಸಬೇಕು ಎನ್ನುವ ಆಸೆ ಇರುವುದು. ನಿಮ್ಮ ಗುಣವು ದುರುಪಯೋಗವಾಗುವುದು.

ಕನ್ಯಾ ರಾಶಿ : ಇಷ್ಟದ ವಸ್ತುವನ್ನು ಖರೀದಿಸಿ ಅದನ್ನು ಸರಿಯಾಗಿ ಉಳಿಸಿಕೊಳ್ಳಾಲಾಗದು. ಜಾಣ್ಮೆಯು ಇಂದು ನಿಮ್ಮ ಉಪಯೋಗಕ್ಕೆ ಬರುವುದು. ಸ್ತ್ರೀಯರು ಅವರಿಗೆ ಬೇಕಾದ ಕಾರ್ಯವನ್ನು ಬಹಳ ನಾಜೂಕಿನಿಂದ ಮಾಡಿಸಿಕೊಳ್ಳುವರು. ಸಾರ್ವಜನಿಕ ಕ್ಷೇತ್ರದಲ್ಲಿ ಇಂದು ಹೆಚ್ಚು ಕಾಣಿಸಿಕೊಳ್ಳುವಿರಿ. ಅತಿಯಾದ ಪ್ರೀತಿಯಿಂದ ನಿಮಗೇ ತೊಂದರೆಯಾಗುವುದು. ಹಣದ ಸಂಪಾದನೆಗೆ ವಿವಿಧ ಮಾರ್ಗಗಳು ಇದ್ದರೂ ಅದಾವುದೂ ನಿಮಗೆ ಸರಿ ಕಾಣಿಸದು. ಇಡೀ ದಿನದ ನಿಮ್ಮ ಶ್ರಮವು ವ್ಯರ್ಥವಾಗಬಹುದು. ಸ್ನೇಹ ಬಳಗವನ್ನು ದೊಡ್ಡದಾಗಿಸಿಕೊಳ್ಳುವಿರಿ. ನಿರ್ಮಾಣದ ಕಾರ್ಯವು ಬಹಳ ನಿಧಾನವಾಗುವುದು. ಯಾರೋ ಮಾಡಿದ ತಪ್ಪಿಗೆ ನಿಮ್ಮ ಕುತ್ತಿಗೆಗೆ ಬರುವುದು. ಅನಿರೀಕ್ಷಿತ ಗೆಲುವು ನಿಮಗೆ ಖುಷಿಕೊಡುವುದು. ಅಧಿಕಾರಿಗಳಿಗೆ ನಿಮ್ಮ ಬಗ್ಗೆ ತಪ್ಪು ಗ್ರಹಿಕೆ ಇರುವುದು.

ತುಲಾ ರಾಶಿ : ಇಂದು ಕಿರಿಯರು ನಿಮ್ಮ ಸೇವೆಯನ್ನು ಮಾಡುವರು. ನಿಮಗೆ ಸಂಬಂಧವಿಲ್ಲದ ವಿಚಾರದಲ್ಲಿ‌ ನೀವು ಹಣವನ್ನು ಕಳೆದುಕೊಳ್ಳುವಿರಿ. ದುರಭ್ಯಾಸವು ಅತಿಯಾಗಿ ಮನೆಯಲ್ಲಿ, ಬಂಧುಗಳಿಂದ ನಿಮಗೆ ನಿಂದನೆಯಾಗಲಿದೆ. ಯಾರದೋ ಮಾತನ್ನು ಕೇಳಿ ಇಂದು ಕುಟುಂಬದವರ ಜೊತೆ ಕಲಹವಾಡುವಿರಿ. ನಿಮ್ಮ ತಿಳಿವಳಿಕೆಯನ್ನೇ ಪೂರ್ಣ ಸತ್ಯ ಎಂದು ತಿಳಿಯುವುದು ಬೇಡ. ಇಂದು ನಿಮಗೆ ಕಛೇರಿಯ ಕಾರ್ಯಗಳು ಅತಿಯಾಗುವುದು. ಸಂಗಾತಿಗೆ ನಿಮ್ಮ ನಡವಳಿಕೆಯಲ್ಲಿ ವ್ಯತ್ಯಾಸವು ಕಾಣಿಸುವುದು. ನಿಮ್ಮ ಸಮಯವನ್ನು ಸದುಪಯೋಗ ಮಾಡಿಕೊಳ್ಳುವ ದಾರಿ ಹುಡುಕಿ. ನಿಮ್ಮ ಪ್ರತಿಭೆಯಿಂದ ಉನ್ನತ ಹುದ್ದೆಗೆ ಏರುವಿರಿ.‌ ಚಂಚಲವಾದ ಮನಸ್ಸಿನಿಂದ ನಿಮಗೆ ಅನೇಕ ಒಳ್ಳೆಯ ಆಯ್ಕೆಗಳು ತಪ್ಪಿಹೋಗುವುದು.

ವೃಶ್ಚಿಕ ರಾಶಿ : ಪ್ರಾಣಿಗಳಿಂದ‌ ನಿಮಗೆ ಇಂದು ಭೀತಿ ಎದುರಾಗಬಹುದು. ವಾಹನದ ಕಾರಣಕ್ಕೆ ಮನೆಯಲ್ಲಿ ಕಲಹವಾಗಬಹುದು. ಹೂಡಿಕೆಯಿಂದ ನಿಮಗೆ ಲಾಭಾಂಶವು ಸಿಗುವುದು. ವಿದ್ಯಾರ್ಥಿಗಳು ಓದಿನ ಬಗ್ಗೆ ಹೆಚ್ಚು ಆಸಕ್ತಿ ಇದ್ದರೂ ಓದಿ ಜೀರ್ಣಿಸಿಕೊಳ್ಳಲು ಆಗದು. ಯಾರನ್ನೋ ಸಂಶಯಿಸುತ್ತ ಕುಳಿತುಕೊಳ್ಳುವಿರಿ. ನಿಮ್ಮ ಮನಸ್ಸಿಗೆ ತೋಚಿದ್ದನ್ನು ಹೇಳಬೇಕಾದಲ್ಲಿ ಮಾತ್ರ ಹೇಳಿ.‌ ಇಂದಿನ ನಿಮ್ಮ ವ್ಯವಹಾರವು ಅಧಿಕವಾದ ಯಾವ ಲಾಭವನ್ನೂ ತಂದುಕೊಡದು. ಶಿಸ್ತನ್ನು ರೂಢಿಸಿಕೊಳ್ಳುವ ಅನಿವಾರ್ಯತೆ ಎದುರಾದೀತು. ಧಾರ್ಮಿಕ ವಿಚಾರದಲ್ಲಿ ನೀವು ನಂಬಿಕೆಯನ್ನು ಕಳೆದುಕೊಳ್ಳುವಿರಿ. ನೀವು ಹೋಗುವ ಪ್ರಯಾಣವು ಸ್ಥಗಿತಗೊಂಡಿದ್ದು ನಿಮಗೆ ಒಳ್ಳೆಯದೇ.‌ ಆಡಳಿತಾತ್ಮಕ ವಿಚಾರದಲ್ಲಿ ನಿಮಗೆ ಹಿನ್ನಡೆ ಇರುವುದು.