Horoscope: ದಿನಭವಿಷ್ಯ, ಈ ರಾಶಿಯವರು ತಾಯಿಯ ಪ್ರೀತಿಯನ್ನು ಕಳೆದುಕೊಳ್ಳಬೇಕಾದೀತು

| Updated By: ಕಿರಣ್ ಹನುಮಂತ್​ ಮಾದಾರ್

Updated on: Sep 02, 2023 | 12:20 AM

ನೀವು ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರೇ? ಹಾಗಿದ್ದರೆ ಇಂದಿನ (2023 ಸೆಪ್ಟೆಂಬರ್ 02) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.

Horoscope: ದಿನಭವಿಷ್ಯ, ಈ ರಾಶಿಯವರು ತಾಯಿಯ ಪ್ರೀತಿಯನ್ನು ಕಳೆದುಕೊಳ್ಳಬೇಕಾದೀತು
ಜ್ಯೋತಿಷ್ಯ
Follow us on

ರಾಶಿ ಭವಿಷ್ಯ ಪ್ರತಿಯೊಬ್ಬರ ಜೀವನದಲ್ಲಿ ವಿಭಿನ್ನವಾಗಿರುತ್ತದೆ. ಪ್ರತಿನಿತ್ಯ ಬೆಳಗ್ಗೆ ಎದ್ದ ಕೂಡಲೇ ತಮ್ಮ ರಾಶಿ ಭವಿಷ್ಯ (Daily horoscope) ನೋಡುವುದು ಕೆಲವರಿಗೆ ಅಭ್ಯಾಸ. ಇಂದಿನ ರಾಶಿ ಭವಿಷ್ಯ ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಹೀಗೆ ಎಲ್ಲವನ್ನು ತಿಳಿದುಕೊಳ್ಳುತ್ತಾರೆ. ಜೊತೆಗೆ ಪಂಚಾಂಗವನ್ನು ಸಹ ಓದುತ್ತಾರೆ. ಹಾಗಾದರೆ ಇಂದಿನ (2023 ಸೆಪ್ಟೆಂಬರ್ 02) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಸಿಂಹ ಮಾಸ, ಮಹಾನಕ್ಷತ್ರ: ಮಘಾ, ಮಾಸ: ನಿಜ ಶ್ರಾವಣ, ಪಕ್ಷ: ಕೃಷ್ಣ, ವಾರ: ಶನಿ, ತಿಥಿ: ದ್ವಿತೀಯಾ, ನಿತ್ಯನಕ್ಷತ್ರ: ಉತ್ತರಾಭಾದ್ರ, ಯೋಗ: ಶೂಲ, ಕರಣ: ತೈತಿಲ, ಸೂರ್ಯೋದಯ ಬೆಳಗ್ಗೆ 06 ಗಂಟೆ 21 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 43 ನಿಮಿಷಕ್ಕೆ, ರಾಹುಕಾಲ ಮಧ್ಯಾಹ್ನ 09:27 ರಿಂದ 10:59ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 02:05 ರಿಂದ 03:38ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 06:22 ರಿಂದ 07:54ರ ವರೆಗೆ.

ಸಿಂಹ ರಾಶಿ : ಉದ್ಯೋಗದಲ್ಲಿ ಒತ್ತಡ ಜೀವನವು ನಿಮಗೆ ಅಭ್ಯಾಸವಾಗಿ ಹೋಗಲಿದೆ. ಬಲವಂತ ವಿಚಾರಕ್ಕೆ ನೀವು ಒಪ್ಪಲಾರಿರಿ. ನಿಮ್ಮ ಕಷ್ಟಗಳಿಗೆ ದೈವದ ಮೊರೆ ಹೋಗುವುದು ಉತ್ತಮ. ಆಸ್ತಿಯನ್ನು ಉಳಿಸಿಕೊಳ್ಳ ಬಹಳ ಶ್ರಮವಹಿಸಬೇಕಾದೀತು. ನಿಮ್ಮ ತಪ್ಪುಗಳಿಗೆ ಸಮಜಾಷಿ ನೀಡುವುದು ಸರಿಯಾಗದು. ವಿದೇಶದ ಕನಸನ್ನು ನನಸುಮಾಡಿಕೊಳ್ಳಲು ಕಷ್ಟವಾಗುವುದು. ನಿಮ್ಮ ಒಂದು ತಪ್ಪಿಗೆ ನಿಮ್ಮ ವೃತ್ತಿಯ ಸಿಬ್ಬಂದಿಗಳು ಕಷ್ಟಪಡಬೇಕಾದೀತು. ಎಲ್ಲವನ್ನೂ ಸರಳವಾಗಿ ಸ್ವೀರಿಸುವ ಮನೋಭಾವದಲ್ಲಿನಿರಲಿದೆ. ನಿಯಮಬದ್ಧ ಜೀವನವನ್ನು ನೀವೇ ರೂಪಿಸಿಕೊಳ್ಳುವಿರ.

ಕನ್ಯಾ ರಾಶಿ : ತಾಯಿ ಆರೋಗ್ಯದಲ್ಲಿ ವ್ಯತ್ಯಾಸವು ಕಾಣಿಸಿಕೊಳ್ಳುವುದು. ನಿಮಗೆ ಇಷ್ಟವಾಗದ ಕೆಲಸವನ್ನೇ ಮಾಡಬೇಕಾದ ಸ್ಥಿತಿಯು ಬರಬಹುದು. ಉದ್ಯೋಗವನ್ನು ನಿರೀಕ್ಷಿತ ಹಂತಕ್ಕೆ ಕೊಂಡೊಯ್ಯಲು ಶ್ರಮಿಸುವಿರಿ. ವಾತದ ಪ್ರಕೋಪದಿಂದ‌ ಕಷ್ಟವಾಗುವುದು. ನಿಮ್ಮ ಬಳಿ ಆಗದ ಕಾರ್ಯವನ್ನು ಇನ್ನೊಬ್ಬರು ಮಾಡಿ ಮುಗಿಸುವರು. ಮಕ್ಕಳಿಂದ‌ ನಿಮಗೆ ಉಡುಗೊರೆಯು ಸಿಗಲಿದೆ. ಪ್ರಾಪಂಚಿಕ ಸುಖವು ನಿಮಗೆ ಸಾಕೆನಿಸಬಹುದು. ಇನ್ನೊಬ್ಬರ ಸಂಕಷ್ಟಕ್ಕೆ ನೀವು ಬಲಿಯಾಗಬಹುದು. ಸಹನೆಯನ್ನು ನೀವು‌ ರೂಢಿಸಿಕೊಳ್ಳುವಿರಿ. ಏಕಾಂಗಿಯಾಗಿ ಪುಣ್ಯಸ್ಥಳಗಳಿಗೆ ಹೋಗುವಿರಿ.

ತುಲಾ ರಾಶಿ : ಕೈಗೊಂಡ ಕಾರ್ಯಗಳಲ್ಲಿ ನಿಮಗೆ ಜಯವು ಸಿಗಲಿದೆ. ಪ್ರಾಮಾಣಿಕತೆಗೆ ನಿಮಗೆ ಪ್ರಶಂಸೆಯು ಸಿಗಲಿದೆ. ಯಾರನ್ನೋ ಮೆಚ್ಚಿಸಲು ನೀವು ದೇಹವನ್ನು ದಂಡಿಸಿ ಕೆಲಸ ಮಾಡುವಿರಿ. ಆರ್ಥಿಕತೆಯನ್ನು ಬಲ ಮಾಡಿಕೊಳ್ಳಲು ಉದ್ಯೋಗವನ್ನು ಬದಲಿಸಬೇಕಾದೀತು. ನಿಮ್ಮ ಮಾತುಗಳು ಹಾಸ್ಯದಿಂದ ಕೂಡಿದ್ದು ಎಲ್ಲರೂ ನಗುವರು. ಹಠದ ಸ್ವಭಾವದಿಂದ ನೀವು ಪಡೆದುಕೊಳ್ಳಬಹುದಾದ ಉಪಯೋಗದಿಂದ‌ ವಂಚಿತರಾಗುವಿರಿ. ಕಾರ್ಯದಲ್ಲಿ ನಿರಾಸಕ್ತಿಯು ಇರಲಿದೆ‌. ಕಾರ್ಯದ ನಡುವೆ ವಿಶ್ರಾಂತಿ ಇರಲಿ. ನಿಮ್ಮವರ ಜೊತೆ ಕಾಲ ಕಳೆಯಲು ಇಷ್ಟವಾಗದು.

ವೃಶ್ಚಿಕ ರಾಶಿ : ತಾಯಿಯ ಪ್ರೀತಿಯನ್ನು ಕಳೆದುಕೊಳ್ಳಬೇಕಾದೀತು. ನಿಮ್ಮ ಆಸೆಯನ್ನು ಪೂರೈಸಲು ಇಂದಿನಿಂದ‌ ಆರಂಭಸುವಿರಿ. ಆರೋಗ್ಯದ ವಿಷಯದಲ್ಲಿ ಮುಂಜಾಗ್ರತೆ ಇರಬೇಕಾಗುವುದು. ಹೊಸ ಉದ್ಯಮಕ್ಕೆ ಆಪ್ತರ ಹಾಗೂ ಅನುಭವಿಗಳ ಸಲಹೆಯನ್ನು ಪಡೆಯಿರಿ. ದಾಂಪತ್ಯದ ಒಡಕು ಎಲ್ಲರಿಗೂ ಗೊತ್ತಾಗುವ ಮೊದಲೇ ಸರಿ ಮಾಡಿಕೊಳ್ಳಿ. ಆಕಸ್ಮಿಕ ವಾರ್ತೆಯು ನಿಮಗೆ ಆಘಾತವನ್ನು ಉಂಟುಮಾಡಬಹುದು. ಅದಾಯವು ಹೆಚ್ಚಾಗಲಿದೆ‌. ಖುಷಿಯನ್ನು ಮನೆಯವರ ಜೊತೆ ಹಂಚಿಕೊಳ್ಳುವಿರಿ. ಕಲಹಕ್ಕೆ ಯಾರಾದರೂ ಬಂದರೆ ಮೌನ ವಹಿಸಿ.

ಲೋಹಿತಶರ್ಮಾ 8762924271 (what’s app only)