AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Horoscope: ದಿನಭವಿಷ್ಯ, ಪ್ರಭಾವೀ ವ್ಯಕ್ತಿಗಳ ಸಹವಾಸದಿಂದ ಈ ರಾಶಿಯವರಿಗೆ ಉತ್ತಮ‌ ಮಾರ್ಗವು ಸಿಗಲಿದೆ

ನೀವು ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರೇ? ಹಾಗಿದ್ದರೆ ಇಂದಿನ (2023 ಆಗಸ್ಟ್ 05) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.

Horoscope: ದಿನಭವಿಷ್ಯ, ಪ್ರಭಾವೀ ವ್ಯಕ್ತಿಗಳ ಸಹವಾಸದಿಂದ ಈ ರಾಶಿಯವರಿಗೆ ಉತ್ತಮ‌ ಮಾರ್ಗವು ಸಿಗಲಿದೆ
ಇಂದಿನ ರಾಶಿಭವಿಷ್ಯImage Credit source: iStock Photo
TV9 Web
| Edited By: |

Updated on: Aug 05, 2023 | 12:30 AM

Share

ಇಂದಿನ ನಿಮ್ಮ ರಾಶಿ ಭವಿಷ್ಯ (Daily horoscope) ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಹೀಗೆ ಎಲ್ಲವನ್ನು ತಿಳಿದುಕೊಳ್ಳುತ್ತಾರೆ. ಜೊತೆಗೆ ಪಂಚಾಗವನ್ನು ಸಹ ಓದುತ್ತಾರೆ. ಹಾಗಾದರೆ ಇಂದಿನ (2023 ಆಗಸ್ಟ್ 05) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಕರ್ಕಾಟಕ ಮಾಸ, ಮಹಾನಕ್ಷತ್ರ: ಆಶ್ಲೇಷಾ, ಮಾಸ: ಅಧಿಕ ಶ್ರಾವಣ, ಪಕ್ಷ: ಕೃಷ್ಣ, ವಾರ: ಶನಿ, ತಿಥಿ: ಚತುರ್ಥೀ, ನಿತ್ಯನಕ್ಷತ್ರ: ಉತ್ತರಾಭಾದ್ರ, ಯೋಗ: ಶೋಭನ, ಕರಣ: ಭದ್ರ, ಸೂರ್ಯೋದಯ ಬೆಳಗ್ಗೆ 06 ಗಂಟೆ 17 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 58 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 09:28 ರಿಂದ 11:03 ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 02:13 ರಿಂದ 03:49ರ ವರೆಗೆ, ಗುಳಿಕ ಕಾಲ ಬೆಳಗ್ಗೆ 06:18 ರಿಂದ 07:53ರ ವರೆಗೆ.

ಸಿಂಹ ರಾಶಿ: ಮನೆಯ ನಿರ್ಮಾಣ ಕಾರ್ಯವು ಮತ್ತೆ ಆರಂಭವಾಗಿದ್ದು ವೇಗವನ್ನು ಅದು ಪಡೆದುಕೊಳ್ಳುವುದು. ಉದ್ಯೋಗದಲ್ಲಿ ನಿಮಗೆ ಒತ್ತಡವು ಅಧಿಕವಾಗಿ ಇರಲಿದೆ. ಎಲ್ಲ ಸಂದರ್ಭಗಳನ್ನು ನೀವು ಒಂದೇ ರೀತಿಯಲ್ಲಿ ತೂಗುವುದು ಬೇಡ. ಪೂರ್ವಾಪರ ಯೋಚನೆಯನ್ನು ಮಾಡಿ ಮಾತನಾಡಿ. ಹೊಸ ವಸ್ತುಗಳ ಖರೀದಿಗೆ ಬಹಳ‌ ಉತ್ಸಾಹವು ಇಂದು‌ ಇರಲಿದೆ. ನಿಮಗೆ ಕೆಲವು ಸಂಗತಿಗಳನ್ನು ಹೇಳಿ ಆಪ್ತರು ನಿಮ್ಮ ತಲೆಯನ್ನು ಕೆಡಿಸಬಹುದು. ನಿಮ್ಮನ್ನು ಜನ್ಮಾಂತರ ವಿಚಾರಗಳು ಕಾಡಬಹುದು. ಮಕ್ಕಳ ಮೇಲೆ‌ ಬಯಕೆ ಉಂಟಾಗಬಹುದು. ಅಪರಿಚಿತರು ನಿಮ್ಮ ಬಗ್ಗೆ ಸಲ್ಲದ ಮಾತುಗಳನ್ನು ಆಡಬಹುದು.

ಕನ್ಯಾ ರಾಶಿ: ತಾಯಿಯ ಆಸ್ತಿಯಲ್ಲಿ ಪಾಲನ್ನು ನೀವು ಪಡೆಯುವಿರಿ. ನಿಮ್ಮ ಗಳಿಕೆಯ ಮಾಹಿತಿಯನ್ನು ನೀವು ಬಹಿರಂಗ ಪಡಿಸುವುದು ಬೇಡ. ಕಛೇರಿಯಲ್ಲಿ ತಪ್ಪಿನ ಕೆಲಸದಿಂದ ಮೇಲಧಿಕಾರಿಗಳು ಎಚ್ಚರಿಕೆ ನೀಡಬಹುದು. ‌ದಾಂಪತ್ಯದಲ್ಲಿ ಸಣ್ಣ ಕಲಹಗಳು ಆಗಬಹುದು. ಅನುಕೂಲಕರವಾದ ಸ್ಥಿತಿಯನ್ನು ನೀವು ಹಾಳು ಮಾಡಿಕೊಳ್ಳುವಿರಿ. ಹಠದ ಸ್ವಭಾವವು ನಿಮ್ಮ ಮೇಲಿನ ಪ್ರೀತಿಯನ್ನು ಕಡಿಮೆ‌ ಮಾಡಬಹುದು. ಆಲಸ್ಯದಿಂದ ಇಂದು ನಿಮಗೆ ಸಮಯಕ್ಕೆ ಬೆಲೆಯನ್ನು ಕೊಡಲಾಗದು. ಮಹಾವಿಷ್ಣುವಿನ ಸ್ತೋತ್ರವನ್ನು ಮಾಡಿ.

ತುಲಾ ರಾಶಿ: ಇಂದಿನ ನಿಮ್ಮ ಕೆಲಸವು ಹಲವರಿಗೆ ಮೆಚ್ಚುಗೆ ಆಗಲಿದೆ. ಸಾಮಾಜಿಕ ಸೇವೆಯಲ್ಲಿ ತೊಡಗಿಕೊಳ್ಳುವಿರಿ. ಸಾಕಷ್ಟು ನೋವಿದ್ದರೂ ಅದನ್ನು ಲೆಕ್ಕಿಸದೇ ನಿಮ್ಮ ಕರ್ತವ್ಯವನ್ನು ಮಾಡುವಿರಿ. ಪ್ರಭಾವೀ ವ್ಯಕ್ತಿಗಳ ಸಹವಾಸದಿಂದ ನಿಮಗೆ ಉತ್ತಮ‌ ಮಾರ್ಗವು ಸಿಗಲಿದೆ. ಇಂದು ಯಾರನ್ನೂ ನೋಯಿಸಲು ಮನಸ್ಸನ್ನು ಮಾಡಬೇಡಿ. ಭವಿಷ್ಯದ ಬಗ್ಗೆ ನಿಮ್ಮ ಕಲ್ಪನೆಗಳನ್ನು ಹೇಳಿಕೊಳ್ಳುವಿರಿ. ಅಲಂಕಾರಕ್ಕೆ ಸಂಬಂಧಿಸಿದ ಉದ್ಯೋಗಗಿಗಳಗೆ ಹೆಚ್ಚು ಲಾಭವಾಗಬಹುದು. ಇಂದು ಆಕರ್ಷಕವಾಗಿ ಕಾಣಿಸುವಿರಿ. ಮಕ್ಕಳ‌ ಆರೋಗ್ಯದ ಮೇಲೆ ನಿಮ್ಮ ದೃಷ್ಟಿಯು ಇರಲಿ.

ವೃಶ್ಚಿಕ ರಾಶಿ: ಆಸ್ತಿಯನ್ನು ಮಾರಾಟ ಮಾಡಿ ನೆಮ್ಮದಿಯಿಂದ ಇರಬೇಕು ಎನ್ನುವಷ್ಟು ತೊಂದರೆಯು ಇರಲಿದೆ. ಭಂಡ ಧೈರ್ಯವನ್ನು ನೀವು ಮಾಡುವುದು ಬೇಡ. ಪ್ರಯಾಣದ ವಿಚಾರದಲ್ಲಿ ಮನೆಯವ ಮಾತನ್ನು ಕೇಳಿ. ನಿಮ್ಮ ಜೊತೆ ಕೆಲಸ ಮಾಡುವವರು ನಿಮ್ಮ ವರ್ತನೆಯನ್ನು ಸಹಿಸಲಾರರು. ಸಂಗಾತಿಯ ಜೊತೆ ದೂರ ಪ್ರಯಾಣ ಮಾಡಲು ಇಚ್ಛಿಸುವಿರಿ. ಮೊದಲು‌ ಮಾಡಿದ ದೋಷವನ್ನೇ ಮಾಡಲು ಹೋಗುವುದು ಬೇಡ. ನಿಮ್ಮ ವಸ್ತುಗಳು ಕಳ್ಳತನವಾಗಬಹುದು. ಭದ್ರವಾಗಿ ಇರಿಸಿಕೊಳ್ಳುವ ಬಗ್ಗೆ ಯೋಚಿಸಿ. ದೇವದೇನಾಪತಿಯಾದ ಸುಬ್ರಹ್ಮಣ್ಯನ ಪ್ರಾರ್ಥನೆಯನ್ನು ಮಾಡಿ.

ಮತ್ತಷ್ಟು ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ