Horoscope 05 August: ತಾಯಿಯ ಆಸ್ತಿಯಲ್ಲಿ ಪಾಲು, ನಿಮ್ಮ ಗಳಿಕೆಯ ಗುಟ್ಟನ್ನು ಬಹಿರಂಗ ಪಡಿಸಬೇಡಿ
ಇಂದಿನ (2023 ಜುಲೈ ಆಗಸ್ಟ್ 05) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.
ರಾಶಿ ಭವಿಷ್ಯ ಪ್ರತಿಯೊಬ್ಬರ ಜೀವನದಲ್ಲಿ ವಿಭಿನ್ನವಾಗಿರುತ್ತದೆ. ಪ್ರತಿನಿತ್ಯ ಬೆಳಗ್ಗೆ ಎದ್ದ ಕೂಡಲೇ ತಮ್ಮ ರಾಶಿ ಭವಿಷ್ಯ (Daily horoscope) ನೋಡುವುದು ಕೆಲವರಿಗೆ ಅಭ್ಯಾಸ. ಇಂದಿನ ರಾಶಿ ಭವಿಷ್ಯ ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಹೀಗೆ ಎಲ್ಲವನ್ನು ತಿಳಿದುಕೊಳ್ಳುತ್ತಾರೆ. ಜೊತೆಗೆ ಪಂಚಾಗವನ್ನು ಸಹ ಓದುತ್ತಾರೆ. ಹಾಗಾದರೆ ಇಂದಿನ (2023 ಜುಲೈ ಆಗಸ್ಟ್ 05) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಕರ್ಕಾಟಕ ಮಾಸ, ಮಹಾನಕ್ಷತ್ರ: ಆಶ್ಲೇಷಾ, ಮಾಸ: ಅಧಿಕ ಶ್ರಾವಣ, ಪಕ್ಷ: ಕೃಷ್ಣ, ವಾರ: ಶನಿ, ತಿಥಿ: ಚತುರ್ಥೀ, ನಿತ್ಯನಕ್ಷತ್ರ: ಉತ್ತರಾಭಾದ್ರ, ಯೋಗ: ಶೋಭನ, ಕರಣ: ಭದ್ರ, ಸೂರ್ಯೋದಯ ಬೆಳಗ್ಗೆ 06 ಗಂಟೆ 17 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 58 ನಿಮಿಷಕ್ಕೆ. ರಾಹು ಕಾಲ ಬೆಳಗ್ಗೆ 09: 28 ರಿಂದ 11:03ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 02:13 ರಿಂದ 03:49ರ ವರೆಗೆ, ಗುಳಿಕ ಕಾಲ ಬೆಳಗ್ಗೆ 06:18 ರಿಂದ 07:53ರ ವರೆಗೆ.
ಮೇಷ ರಾಶಿ: ಆಪ್ತರ ಹಿತವಚನವು ನಿಮ್ಮ ಮನಸ್ಸಿಗೆ ಬಾರದು. ಸರ್ಕಾರದ ಉದ್ಯೋಗಕ್ಕೆ ನಿಮಗೆ ಅವಕಾಶವು ಬರಬಹುದು. ಸಂಗಾತಿಯ ಮಾತಿಗೆ ಎದುರು ಮಾತನಾಡುವುದು ಕಷ್ಟವಾದೀತು. ಅಲ್ಪ ವಸ್ತುವಿನಿಂದ ಸಂತೋಷವಾಗಿ ಇರುವಿರಿ. ದಾನವನ್ನು ಮಾಡುವ ಮನಸ್ಸು ಬರುವುದು. ಬಂಧುಗಳ ವಿಚಾರದಲ್ಲಿ ನಿಮಗೆ ಸಂತೃಪ್ತಿ ಇರದು. ಸ್ತ್ರೀಯರ ಜೊತೆ ಹೆಚ್ಚು ಸಮಯವನ್ನು ಕಳೆಯುವಿರಿ. ಮನೆಯಲ್ಲಿ ವಿಶ್ರಾಂತಿಯನ್ನು ಪಡೆಯಬೇಕಾಗುವುದು. ಕೃಷಿಯಲ್ಲಿ ಆಸಕ್ತಿಯು ಇರಲಿದೆ. ಸಾಕಷ್ಟು ಪ್ರಯತ್ನದ ಫಲವಾಗಿ ನಿಮ್ಮ ದಾರಿ ಸುಗಮವಾಗುವುದು. ಕಾರ್ತಿಕೇಯನ ಪ್ರಾರ್ಥನೆಯಿಂದ ಮನೋರಥಗಳನ್ನು ಈಡೇರುವುದು.
ವೃಷಭ ರಾಶಿ: ಸಾವಧಾನತೆಯಿಂದ ನಿಮಗೆ ಲಾಭವಿದೆ. ಮನಸ್ಸನ್ನು ಪ್ರಶಾಂತವಾಗಿ ಇರಿಸಿಕೊಂಡು ಸುಖಿಸುವಿರಿ. ನಾಟಕೀಯ ಮನೋಭಾವವು ನಿಮಗೆ ಹಿಡಿಸದು. ಮಗಳಿಗೆ ತಂದೆಯಿಂದ ಸಹಾಯವು ಸಿಗಲಿದೆ. ಹಣಕಾಸಿನ ಗಳಿಕೆಗೆ ಹೆಚ್ಚು ಸಮಯವನ್ನು ಕೊಡುವಿರಿ. ಅನಾರೋಗ್ಯದಿಂದ ನೀವು ಗುಣಮುಖರಾದರೂ ಅಂಶವು ನಿಮ್ಮನ್ನು ಹೊರ ಬರಲು ಬಿಡದು. ಧಾರ್ಮಿಕ ವಿಚಾರದಲ್ಲಿ ನಿಮಗೆ ಅಧಿಕವಾದ ಆಸಕ್ತಿಯು ಬರಲಿದೆ. ಪ್ರಯಾಣವನ್ನು ಅನಿವಾರ್ಯವಿದ್ದರಷ್ಟೇ ಮಾಡಿ. ಅನಾರೋಗ್ಯವನ್ನು ಔಷಧೀಯ ಮೂಲಕ ಕಡಿಮೆ ಮಾಡಿಕೊಳ್ಳಿ. ಗುರುಚರಿತ್ರೆಯನ್ನು ಪಠಿಸಿ.
ಮಿಥುನ ರಾಶಿ: ನಿಮ್ಮ ಸರಳತೆಯನ್ನೂ ಟೀಕಿಸಬಹುದು. ಯಾರನ್ನೂ ದೂಷಿಸುವ ಮನೋಭಾವ ಬೇಡ. ತಪ್ಪನ್ನು ತಿದ್ದಿಕೊಳ್ಳುವ ಮನಸ್ಸು ಒಳ್ಳೆಯದೇ. ದೇಹವನ್ನು ದಂಡಿಸುವಿರಿ. ಪಾಲುದಾರಿಕೆಯಲ್ಲಿ ನಿಮ್ಮ ಮಾತೇ ಅಂತಿಮವಾಗಿ ನಡೆಯುವುದು. ಇನ್ನೊಬ್ಬರಿಗೆ ಹಣವನ್ನು ಕೊಡುವಾಗ ವ್ಯಕ್ತಿಯನ್ನು ನೋಡಿಕೊಳ್ಳಿ. ಸುಖಕ್ಕೆ ಬೇಕಾದ ಮನಃಸ್ಥಿತಿಯು ಇರಲಿದೆ. ಎಲ್ಲವೂ ನಿಮ್ಮ ಮೂಗಿನ ನೇರಕ್ಕೆ ನಡೆಯದು. ಪ್ರೇಮ ಸಂಬಂಧದಿಂದ ನಿಮಗೆ ಸ್ವಲ್ಪ ಹಾಯೆನಿಸಬಹುದು. ಕೆಲಸವನ್ನು ಸರಳ ಮಾಡಿಕೊಳ್ಳುವುದು ಉಪಯೋಗವಾದೀತು. ನಿಮಗೆ ಆಗುವಂಥದ್ದನ್ನೇ ಮಾಡಿ.
ಕಟಕ ರಾಶಿ: ನ್ಯಾಯಾಲಯದ ವಿಚಾರದಲ್ಲಿ ನಿಮಗೆ ಪರಾಜಯವು ಆಗಬಹುದು. ಕೋಪವನ್ನು ಕಡಿಮೆ ಮಾಡಿಕೊಳ್ಳಲು ಉಪಾಯವನ್ನು ಮಾಡಿಕೊಳ್ಳುವುದು ಉತ್ತಮ. ನಿಮ್ಮ ಬಗ್ಗೆ ನಿಮ್ಮೆದುರೇ ಆಡಿಕೊಳ್ಳಬಹುದು. ಶ್ರಮಕ್ಕೆ ತಕ್ಕುದಾದ ಫಲವನ್ನೇ ನಿರೀಕ್ಷಿಸಿ. ಇನ್ನೊಬ್ಬರ ಯೋಚನೆಯನ್ನು ಕದಿಯುವ ಮನಸ್ಸು ಆಗಬಹುದು. ಸಹೋದರನಿಂದ ಅರ್ಥಿಕ ಸಹಾಯವು ಸಿಗಬಹುದು. ತಂದೆಯ ಆರೋಗ್ಯದ ಬಗ್ಗೆ ಗಮನವಿರಲಿ. ಸತ್ಯವನ್ನು ಹೇಳಲು ಅಪಾಯ ಬರಬಹುದು ಎಂದು ಹಿಂದೇಟು ಹಾಕುವಿರಿ. ಮನೆಯ ಕೆಲಸದಲ್ಲಿ ಹೆಚ್ಚು ಮಗ್ನರಾಗುವಿರಿ.
ಸಿಂಹ ರಾಶಿ: ಮನೆಯ ನಿರ್ಮಾಣ ಕಾರ್ಯವು ಮತ್ತೆ ಆರಂಭವಾಗಿದ್ದು ವೇಗವನ್ನು ಅದು ಪಡೆದುಕೊಳ್ಳುವುದು. ಉದ್ಯೋಗದಲ್ಲಿ ನಿಮಗೆ ಒತ್ತಡವು ಅಧಿಕವಾಗಿ ಇರಲಿದೆ. ಎಲ್ಲ ಸಂದರ್ಭಗಳನ್ನು ನೀವು ಒಂದೇ ರೀತಿಯಲ್ಲಿ ತೂಗುವುದು ಬೇಡ. ಪೂರ್ವಾಪರ ಯೋಚನೆಯನ್ನು ಮಾಡಿ ಮಾತನಾಡಿ. ಹೊಸ ವಸ್ತುಗಳ ಖರೀದಿಗೆ ಬಹಳ ಉತ್ಸಾಹವು ಇಂದು ಇರಲಿದೆ. ನಿಮಗೆ ಕೆಲವು ಸಂಗತಿಗಳನ್ನು ಹೇಳಿ ಆಪ್ತರು ನಿಮ್ಮ ತಲೆಯನ್ನು ಕೆಡಿಸಬಹುದು. ನಿಮ್ಮನ್ನು ಜನ್ಮಾಂತರ ವಿಚಾರಗಳು ಕಾಡಬಹುದು. ಮಕ್ಕಳ ಮೇಲೆ ಬಯಕೆ ಉಂಟಾಗಬಹುದು. ಅಪರಿಚಿತರು ನಿಮ್ಮ ಬಗ್ಗೆ ಸಲ್ಲದ ಮಾತುಗಳನ್ನು ಆಡಬಹುದು.
ಕನ್ಯಾ ರಾಶಿ: ತಾಯಿಯ ಆಸ್ತಿಯಲ್ಲಿ ಪಾಲನ್ನು ನೀವು ಪಡೆಯುವಿರಿ. ನಿಮ್ಮ ಗಳಿಕೆಯ ಮಾಹಿತಿಯನ್ನು ನೀವು ಬಹಿರಂಗ ಪಡಿಸುವುದು ಬೇಡ. ಕಛೇರಿಯಲ್ಲಿ ತಪ್ಪಿನ ಕೆಲಸದಿಂದ ಮೇಲಧಿಕಾರಿಗಳು ಎಚ್ಚರಿಕೆ ನೀಡಬಹುದು. ದಾಂಪತ್ಯದಲ್ಲಿ ಸಣ್ಣ ಕಲಹಗಳು ಆಗಬಹುದು. ಅನುಕೂಲಕರವಾದ ಸ್ಥಿತಿಯನ್ನು ನೀವು ಹಾಳು ಮಾಡಿಕೊಳ್ಳುವಿರಿ. ಹಠದ ಸ್ವಭಾವವು ನಿಮ್ಮ ಮೇಲಿನ ಪ್ರೀತಿಯನ್ನು ಕಡಿಮೆ ಮಾಡಬಹುದು. ಆಲಸ್ಯದಿಂದ ಇಂದು ನಿಮಗೆ ಸಮಯಕ್ಕೆ ಬೆಲೆಯನ್ನು ಕೊಡಲಾಗದು. ಮಹಾವಿಷ್ಣುವಿನ ಸ್ತೋತ್ರವನ್ನು ಮಾಡಿ.
ತುಲಾ ರಾಶಿ: ಇಂದಿನ ನಿಮ್ಮ ಕೆಲಸವು ಹಲವರಿಗೆ ಮೆಚ್ಚುಗೆ ಆಗಲಿದೆ. ಸಾಮಾಜಿಕ ಸೇವೆಯಲ್ಲಿ ತೊಡಗಿಕೊಳ್ಳುವಿರಿ. ಸಾಕಷ್ಟು ನೋವಿದ್ದರೂ ಅದನ್ನು ಲೆಕ್ಕಿಸದೇ ನಿಮ್ಮ ಕರ್ತವ್ಯವನ್ನು ಮಾಡುವಿರಿ. ಪ್ರಭಾವೀ ವ್ಯಕ್ತಿಗಳ ಸಹವಾಸದಿಂದ ನಿಮಗೆ ಉತ್ತಮ ಮಾರ್ಗವು ಸಿಗಲಿದೆ. ಇಂದು ಯಾರನ್ನೂ ನೋಯಿಸಲು ಮನಸ್ಸನ್ನು ಮಾಡಬೇಡಿ. ಭವಿಷ್ಯದ ಬಗ್ಗೆ ನಿಮ್ಮ ಕಲ್ಪನೆಗಳನ್ನು ಹೇಳಿಕೊಳ್ಳುವಿರಿ. ಅಲಂಕಾರಕ್ಕೆ ಸಂಬಂಧಿಸಿದ ಉದ್ಯೋಗಗಿಗಳಗೆ ಹೆಚ್ಚು ಲಾಭವಾಗಬಹುದು. ಇಂದು ಆಕರ್ಷಕವಾಗಿ ಕಾಣಿಸುವಿರಿ. ಮಕ್ಕಳ ಆರೋಗ್ಯದ ಮೇಲೆ ನಿಮ್ಮ ದೃಷ್ಟಿಯು ಇರಲಿ.
ವೃಶ್ಚಿಕ ರಾಶಿ: ಆಸ್ತಿಯನ್ನು ಮಾರಾಟ ಮಾಡಿ ನೆಮ್ಮದಿಯಿಂದ ಇರಬೇಕು ಎನ್ನುವಷ್ಟು ತೊಂದರೆಯು ಇರಲಿದೆ. ಭಂಡ ಧೈರ್ಯವನ್ನು ನೀವು ಮಾಡುವುದು ಬೇಡ. ಪ್ರಯಾಣದ ವಿಚಾರದಲ್ಲಿ ಮನೆಯವ ಮಾತನ್ನು ಕೇಳಿ. ನಿಮ್ಮ ಜೊತೆ ಕೆಲಸ ಮಾಡುವವರು ನಿಮ್ಮ ವರ್ತನೆಯನ್ನು ಸಹಿಸಲಾರರು. ಸಂಗಾತಿಯ ಜೊತೆ ದೂರ ಪ್ರಯಾಣ ಮಾಡಲು ಇಚ್ಛಿಸುವಿರಿ. ಮೊದಲು ಮಾಡಿದ ದೋಷವನ್ನೇ ಮಾಡಲು ಹೋಗುವುದು ಬೇಡ. ನಿಮ್ಮ ವಸ್ತುಗಳು ಕಳ್ಳತನವಾಗಬಹುದು. ಭದ್ರವಾಗಿ ಇರಿಸಿಕೊಳ್ಳುವ ಬಗ್ಗೆ ಯೋಚಿಸಿ. ದೇವದೇನಾಪತಿಯಾದ ಸುಬ್ರಹ್ಮಣ್ಯನ ಪ್ರಾರ್ಥನೆಯನ್ನು ಮಾಡಿ.
ಧನು ರಾಶಿ: ಮಕ್ಕಳ ದುಃಖಕ್ಕೆ ಸ್ಪಂದಿಸಿ ಅವರನ್ನು ಸಮಾಧಾನವಾಗಿ ಇರಿಸಿ. ಹಿರಿಯರ ಮಾತಿಗೆ ಬೆಲೆ ಕೊಡಿ. ಅವರ ಪ್ರೀತಿಯನ್ನು ಸಂಪಾದಿಸಿ. ನಿಮಗೆ ಇಂದು ಎಲ್ಲ ಕೆಲಸಗಳಲ್ಲಿಯೂ ಜಯ ಸಿಗಲಿದೆ. ಪೂರ್ವಜರ ಪುಣ್ಯವು ನಿಮ್ಮನ್ನು ಕಾಪಾಡುವುದು. ಸ್ವಂತ ಉದ್ಯೋಗವು ಸಾಕು ಎಂದು ಅನ್ನಿಸಬಹುದು. ನಿಮ್ಮದೇ ಆದ ಮುಖ್ಯ ಕೆಲಸಗಳು ಇಂದು ಸಾಕಷ್ಟು ಇರಲಿವೆ. ನಿಮ್ಮ ಮಾತುಗಳು ಅನ್ಯ ಅರ್ಥವನ್ನು ಕೊಡಬಹುದು. ಹಳೆಯ ವಿಚಾರವನ್ನು ಕೆದಕಿ ಕಲಹವಾಗಬಹುದು. ನಿಮ್ಮ ವ್ಯವಹಾರವು ಶಿಸ್ತಿನಿಂದ ಇರಲಿ.
ಮಕರ ರಾಶಿ: ನಿಮ್ಮ ಮನಸ್ಸನ್ನು ಬಹಳ ವಿಚಕಿತವಾಗಿದ್ದು ಯಾವುದನ್ನು ಮಾಡಲೂ ನಿನಗೆ ದೃಢತೆ ಸಾಲದಾಗಿದೆ. ನಿಮಗೆ ತಿಳಿವಳಿಕೆಯ ಕೊರತೆ ಇದೆ ಎಂಬುದು ಎಲ್ಲರಿಗೂ ತಿಳಿಯಬಹುದು. ನಿಮ್ಮ ಆಸ್ತಿಯನ್ನು ಇನ್ನೊಬ್ಬರು ಪಡೆಯಲು ಕಾನೂನಾತ್ಮಕ ರೀತಿಯಲ್ಲಿ ಕೆಲಸವನ್ನು ಪ್ರಾರಂಭಿಸುವರು. ಯಾರಾದರೂ ಸಜ್ಜನರನ್ನು ಕರೆದು ಅತಿಥಿ ಸತ್ಕಾರವನ್ನು ಮಾಡಿ. ಮಕ್ಕಳಿಗೆ ಪ್ರೀತಿಯನ್ನು ಪ್ರೀತಿಯನ್ನು ಪಡೆಯಿರಿ. ಸಹೋದರನ ಬೆಂಬಲವಿದ್ದರೂ ನಿಮಗೆ ನಿಮ್ಮ ಸ್ವಾವಲಂಬನೆಯು ಮುಖ್ಯವಾಗಬಹುದು. ಧಾರ್ಮಿಕ ಆಚರಣೆಗಳನ್ನು ಕಡಿಮೆ ಮಾಡುವಿರಿ. ಕಾಲಭೈರವೇಶ್ಚರನ ದರ್ಶನವನ್ನು ಮಾಡಿ ಬನ್ನಿ.
ಕುಂಭ ರಾಶಿ: ಮಾತಾನಾಡುವ ವೇಗದಲ್ಲಿ ನೀವು ಹೇಳಬಾರದ ಮಾತುಗಳನ್ನು ಹೇಳುವಿರಿ. ಕೇವಲ ಬಾಯಿ ಮಾತಿನ ವ್ಯವಹಾರವನ್ನು ಮಾಡುವುದು ಬೇಡ. ನಿಮ್ಮ ಗೌಪ್ಯ ವಿಚಾರವನ್ನು ಯಾರಾದರೂ ತಿಳಿಯುವ ಮನಸ್ಸು ಮಾಡುವರು. ಅವರಸದಲ್ಲಿ ಏನನ್ನೂ ಖರೀದಿಸುವುದು ಬೇಡ. ನಿಮ್ಮ ಸಲಹೆಯನ್ನು ಸ್ವೀಕರಿಸದೇ ಇರಬಹುದು. ನಿಮಗೆ ಯಾರ ಜೊತೆಯೂ ಮಾತನಾಡಬೇಕು ಎಂದು ಅನ್ನಿಸದು. ಸ್ಮರಣಶಕ್ತಿಯ ಕೊರತೆಯು ಅಧಿಕವಾಗಿ ಇರಲಿದೆ. ಹಣಕಾಸಿನ ವಿಚಾರದಲ್ಲಿ ನಿಮಗೆ ಮರೆವು ಸರಿಯಲ್ಲ. ಗೌರವವನ್ನು ಕಾಪಾಡಿಕೊಳ್ಳಲು ಪ್ರಯತ್ನಶೀಲರಾಗುವಿರಿ. ಶನೈಶ್ಚರನಿಗೆ ಎಳ್ಳೆಣ್ಣೆಯ ದೀಪ ಬೆಳಗಿ ನಮಸ್ಕರಿಸಿ.
ಮೀನ ರಾಶಿ: ಇಂದಿನ ಖರ್ಚು ಜೇಬಿಗೆ ಭಾರವಾಗಬಹುದು. ಶತ್ರುಗಳ ಉಪಟಳದಿಂದ ಕಾರ್ಯವು ನಿಧಾನವಾಗುದು. ಕಾರ್ಮಿಕರ ವರ್ತನೆಯ ಮೇಲೆ ನಿಮ್ಮದೊಂದು ಕಣ್ಣಿರಲಿ. ಬಂಧುಗಳ ಜೊತೆ ಕಲಹವಾಗಬಹುದು. ಸಂಗಾತಿಯ ನೆರವು ನಿಮ್ಮ ಕಾರ್ಯಗಳಿಗೆ ಸಿಗಬಹುದು. ಹಣದ ಉಳಿತಾಯಕ್ಕೆ ಮಾರ್ಗಗಳು ನಿಮಗೆ ಸಿಗಬಹುದು. ಆದ್ಯತೆಯ ಮೇರೆಗೆ ನಿಮ್ಮ ಕಾರ್ಯಗಲಕು ಇರಲಿ. ಅಧಿಕಾರಿಗಳ ಮನವನ್ನು ಒಲಿಸಿ ನಿಮ್ಮ ಕಾರ್ಯವನ್ನು ಮಾಡಿಕೊಳ್ಳುವಿರಿ. ಮಕ್ಕಳ ಕಡೆಯಿಂದ ಬರುವ ಶುಭ ಸಮಾಚಾರವು ನಿಮಗೆ ಸಂತೋಷವನ್ನು ಕೊಡಲಿದೆ. ಆಯ್ಕೆಯ ವಿಚಾರವನ್ನು ನೀವು ಬಹಳ ವಿಳಂಬವಾಗಿ ಮಾಡುವಿರಿ.
ಲೋಹಿತಶರ್ಮಾ – 8762924271 (what’s app only)