Horoscope Today: ರಾಶಿಭವಿಷ್ಯ, ಈ ರಾಶಿಯವರಿಗೆ ಇಂದು ಎಲ್ಲ ಕೆಲಸಗಳಲ್ಲಿಯೂ ಜಯ ಸಿಗಲಿದೆ

ನೀವು ಧನು, ಮಕರ, ಕುಂಭ, ಮೀನ ರಾಶಿಯವರೇ? ಹಾಗಿದ್ದರೆ ಇಂದಿನ (2023 ಆಗಸ್ಟ್ 05) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.

Horoscope Today: ರಾಶಿಭವಿಷ್ಯ, ಈ ರಾಶಿಯವರಿಗೆ ಇಂದು ಎಲ್ಲ ಕೆಲಸಗಳಲ್ಲಿಯೂ ಜಯ ಸಿಗಲಿದೆ
ಇಂದಿನ ದಿನಭವಿಸ್ಯImage Credit source: iStock Photo
Follow us
TV9 Web
| Updated By: Rakesh Nayak Manchi

Updated on: Aug 05, 2023 | 12:45 AM

ರಾಶಿ ಭವಿಷ್ಯ ಪ್ರತಿಯೊಬ್ಬರ ಜೀವನದಲ್ಲಿ ವಿಭಿನ್ನವಾಗಿರುತ್ತದೆ. ಕೆಲವರು ಬೆಳಗ್ಗೆ ಎದ್ದ ಕೂಡಲೇ ರಾಶಿ ಭವಿಷ್ಯ (Daily horoscope) ತಪ್ಪದೇ ನೋಡುತ್ತಾರೆ. ಯಾವ ಸಮಯಕ್ಕೆ ಏನು ಮಾಡಬೇಕು, ಏನು ಮಾಡಬಾರದು? ಹೀಗೆ ನಿತ್ಯಭವಿಷ್ಯದಿಂದ ತಿಳಿದುಕೊಳ್ಳುತ್ತಾರೆ. ಅದರ ಜೊತೆಗೆ ನಿತ್ಯಪಂಚಾಂಗ ಕೂಡ ಓದುತ್ತಾರೆ. ಹಾಗಾದರೆ ಇಂದಿನ (2023 ಆಗಸ್ಟ್ 05) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ?, ಯಾರಿಗೆ ಲಾಭ?, ಯಾರಿಗೆ ನಷ್ಟ?, ಯಾರಿಗೆ ಶುಭ, ಅಶುಭ? ಇಲ್ಲಿ ನೋಡಿ ನಿಮ್ಮ ಭವಿಷ್ಯ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಕರ್ಕಾಟಕ ಮಾಸ, ಮಹಾನಕ್ಷತ್ರ: ಆಶ್ಲೇಷಾ, ಮಾಸ: ಅಧಿಕ ಶ್ರಾವಣ, ಪಕ್ಷ: ಕೃಷ್ಣ, ವಾರ: ಶನಿ, ತಿಥಿ: ಚತುರ್ಥೀ, ನಿತ್ಯನಕ್ಷತ್ರ: ಉತ್ತರಾಭಾದ್ರ, ಯೋಗ: ಶೋಭನ, ಕರಣ: ಭದ್ರ, ಸೂರ್ಯೋದಯ ಬೆಳಗ್ಗೆ 06 ಗಂಟೆ 17 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 58 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 09:28 ರಿಂದ 11:03 ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 02:13 ರಿಂದ 03:49ರ ವರೆಗೆ, ಗುಳಿಕ ಕಾಲ ಬೆಳಗ್ಗೆ 06:18 ರಿಂದ 07:53ರ ವರೆಗೆ.

ಧನು ರಾಶಿ: ಮಕ್ಕಳ ದುಃಖಕ್ಕೆ ಸ್ಪಂದಿಸಿ ಅವರನ್ನು ಸಮಾಧಾನವಾಗಿ ಇರಿಸಿ. ಹಿರಿಯರ ಮಾತಿಗೆ ಬೆಲೆ ಕೊಡಿ. ಅವರ ಪ್ರೀತಿಯನ್ನು ಸಂಪಾದಿಸಿ. ನಿಮಗೆ ಇಂದು ಎಲ್ಲ ಕೆಲಸಗಳಲ್ಲಿಯೂ ಜಯ ಸಿಗಲಿದೆ. ಪೂರ್ವಜರ ಪುಣ್ಯವು ನಿಮ್ಮನ್ನು ಕಾಪಾಡುವುದು. ಸ್ವಂತ ಉದ್ಯೋಗವು ಸಾಕು ಎಂದು ಅನ್ನಿಸಬಹುದು. ನಿಮ್ಮದೇ ಆದ ಮುಖ್ಯ ಕೆಲಸಗಳು ಇಂದು ಸಾಕಷ್ಟು ಇರಲಿವೆ. ನಿಮ್ಮ ಮಾತುಗಳು ಅನ್ಯ ಅರ್ಥವನ್ನು ಕೊಡಬಹುದು. ಹಳೆಯ ವಿಚಾರವನ್ನು ಕೆದಕಿ ಕಲಹವಾಗಬಹುದು. ನಿಮ್ಮ ವ್ಯವಹಾರವು ಶಿಸ್ತಿನಿಂದ ಇರಲಿ.

ಮಕರ ರಾಶಿ: ನಿಮ್ಮ ಮನಸ್ಸನ್ನು ಬಹಳ ವಿಚಕಿತವಾಗಿದ್ದು ಯಾವುದನ್ನು ಮಾಡಲೂ ನಿನಗೆ ದೃಢತೆ ಸಾಲದಾಗಿದೆ. ನಿಮಗೆ ತಿಳಿವಳಿಕೆಯ ಕೊರತೆ ಇದೆ ಎಂಬುದು ಎಲ್ಲರಿಗೂ ತಿಳಿಯಬಹುದು. ನಿಮ್ಮ ಆಸ್ತಿಯನ್ನು ಇನ್ನೊಬ್ಬರು ಪಡೆಯಲು ಕಾನೂನಾತ್ಮಕ ರೀತಿಯಲ್ಲಿ ಕೆಲಸವನ್ನು ಪ್ರಾರಂಭಿಸುವರು. ಯಾರಾದರೂ ಸಜ್ಜನರನ್ನು ಕರೆದು ಅತಿಥಿ ಸತ್ಕಾರವನ್ನು ಮಾಡಿ. ಮಕ್ಕಳಿಗೆ ಪ್ರೀತಿಯನ್ನು ಪ್ರೀತಿಯನ್ನು ಪಡೆಯಿರಿ. ಸಹೋದರನ ಬೆಂಬಲವಿದ್ದರೂ ನಿಮಗೆ ನಿಮ್ಮ ಸ್ವಾವಲಂಬನೆಯು ಮುಖ್ಯವಾಗಬಹುದು. ಧಾರ್ಮಿಕ ಆಚರಣೆಗಳನ್ನು ಕಡಿಮೆ ಮಾಡುವಿರಿ. ಕಾಲಭೈರವೇಶ್ಚರನ ದರ್ಶನವನ್ನು ಮಾಡಿ ಬನ್ನಿ.

ಕುಂಭ ರಾಶಿ: ಮಾತಾನಾಡುವ ವೇಗದಲ್ಲಿ ನೀವು ಹೇಳಬಾರದ ಮಾತುಗಳನ್ನು ಹೇಳುವಿರಿ. ಕೇವಲ ಬಾಯಿ ಮಾತಿನ ವ್ಯವಹಾರವನ್ನು ಮಾಡುವುದು ಬೇಡ. ನಿಮ್ಮ ಗೌಪ್ಯ ವಿಚಾರವನ್ನು ಯಾರಾದರೂ ತಿಳಿಯುವ ಮನಸ್ಸು ಮಾಡುವರು. ಅವರಸದಲ್ಲಿ ಏನನ್ನೂ ಖರೀದಿಸುವುದು ಬೇಡ. ನಿಮ್ಮ ಸಲಹೆಯನ್ನು ಸ್ವೀಕರಿಸದೇ ಇರಬಹುದು. ನಿಮಗೆ ಯಾರ ಜೊತೆಯೂ ಮಾತನಾಡಬೇಕು ಎಂದು ಅನ್ನಿಸದು. ಸ್ಮರಣಶಕ್ತಿಯ ಕೊರತೆಯು ಅಧಿಕವಾಗಿ ಇರಲಿದೆ. ಹಣಕಾಸಿನ ವಿಚಾರದಲ್ಲಿ ನಿಮಗೆ ಮರೆವು ಸರಿಯಲ್ಲ. ಗೌರವವನ್ನು ಕಾಪಾಡಿಕೊಳ್ಳಲು ಪ್ರಯತ್ನಶೀಲರಾಗುವಿರಿ. ಶನೈಶ್ಚರನಿಗೆ ಎಳ್ಳೆಣ್ಣೆಯ ದೀಪ ಬೆಳಗಿ ನಮಸ್ಕರಿಸಿ.

ಮೀನ ರಾಶಿ: ಇಂದಿನ ಖರ್ಚು ಜೇಬಿಗೆ ಭಾರವಾಗಬಹುದು. ಶತ್ರುಗಳ ಉಪಟಳದಿಂದ ಕಾರ್ಯವು ನಿಧಾನವಾಗುದು. ಕಾರ್ಮಿಕರ ವರ್ತನೆಯ ಮೇಲೆ ನಿಮ್ಮದೊಂದು ಕಣ್ಣಿರಲಿ. ಬಂಧುಗಳ ಜೊತೆ ಕಲಹವಾಗಬಹುದು. ಸಂಗಾತಿಯ ನೆರವು ನಿಮ್ಮ ಕಾರ್ಯಗಳಿಗೆ ಸಿಗಬಹುದು‌. ಹಣದ ಉಳಿತಾಯಕ್ಕೆ ಮಾರ್ಗಗಳು ನಿಮಗೆ ಸಿಗಬಹುದು. ಆದ್ಯತೆಯ ಮೇರೆಗೆ ನಿಮ್ಮ ಕಾರ್ಯಗಲಕು ಇರಲಿ. ಅಧಿಕಾರಿಗಳ ಮನವನ್ನು ಒಲಿಸಿ ನಿಮ್ಮ ಕಾರ್ಯವನ್ನು ಮಾಡಿಕೊಳ್ಳುವಿರಿ. ಮಕ್ಕಳ ಕಡೆಯಿಂದ ಬರುವ ಶುಭ ಸಮಾಚಾರವು ನಿಮಗೆ ಸಂತೋಷವನ್ನು ಕೊಡಲಿದೆ. ಆಯ್ಕೆಯ ವಿಚಾರವನ್ನು ನೀವು ಬಹಳ ವಿಳಂಬವಾಗಿ ಮಾಡುವಿರಿ.

ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ