AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Horoscope: ದಿನಭವಿಷ್ಯ, ಈ ರಾಶಿಯವರಿಗೆ ಇಂದು ಉದ್ಯೋಗದಲ್ಲಿ ಹೆಚ್ಚು ಲಾಭ ಸಿಗುತ್ತದೆ

ನೀವು ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರೇ? ಹಾಗಿದ್ದರೆ ಇಂದಿನ (2023 ಆಗಸ್ಟ್ 06) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.

Horoscope: ದಿನಭವಿಷ್ಯ, ಈ ರಾಶಿಯವರಿಗೆ ಇಂದು ಉದ್ಯೋಗದಲ್ಲಿ ಹೆಚ್ಚು ಲಾಭ ಸಿಗುತ್ತದೆ
ಪ್ರಾತಿನಿಧಿಕ ಚಿತ್ರ
ಲೋಹಿತ ಹೆಬ್ಬಾರ್​, ಇಡುವಾಣಿ
| Edited By: |

Updated on: Aug 06, 2023 | 7:00 AM

Share

ರಾಶಿ ಭವಿಷ್ಯ ಪ್ರತಿಯೊಬ್ಬರ ಜೀವನದಲ್ಲಿ ವಿಭಿನ್ನವಾಗಿರುತ್ತದೆ. ಪ್ರತಿನಿತ್ಯ ಬೆಳಗ್ಗೆ ಎದ್ದ ಕೂಡಲೇ ತಮ್ಮ ರಾಶಿ ಭವಿಷ್ಯ (Daily horoscope) ನೋಡುವುದು ಕೆಲವರಿಗೆ ಅಭ್ಯಾಸ. ಇಂದಿನ ರಾಶಿ ಭವಿಷ್ಯ ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಹೀಗೆ ಎಲ್ಲವನ್ನು ತಿಳಿದುಕೊಳ್ಳುತ್ತಾರೆ. ಜೊತೆಗೆ ಪಂಚಾಂಗವನ್ನು ಸಹ ಓದುತ್ತಾರೆ. ಹಾಗಾದರೆ ಇಂದಿನ (2023 ಆಗಸ್ಟ್ 06) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಕರ್ಕಾಟಕ ಮಾಸ, ಮಹಾನಕ್ಷತ್ರ: ಆಶ್ಲೇಷಾ, ಮಾಸ: ಅಧಿಕ ಶ್ರಾವಣ, ಪಕ್ಷ: ಕೃಷ್ಣ, ವಾರ: ಭಾನು, ತಿಥಿ: ಪಂಚಮೀ, ನಿತ್ಯನಕ್ಷತ್ರ: ರೇವತಿ, ಯೋಗ: ಅತಿಗಂಡ, ಕರಣ: ಬಾಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 17 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 58 ನಿಮಿಷಕ್ಕೆ. ರಾಹು ಕಾಲ ಬೆಳಗ್ಗೆ 05: 23 ರಿಂದ 06:58ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 12:38 ರಿಂದ 02:13ರ ವರೆಗೆ, ಗುಳಿಕ ಕಾಲ ಬೆಳಗ್ಗೆ 03:48 ರಿಂದ 05:23ರ ವರೆಗೆ.

ಸಿಂಹ ರಾಶಿ:  ನಿಮ್ಮ ಮಾತನ್ನು ಉಳಿಸಿಕೊಳ್ಳಲು ಪ್ರಯತ್ನಿಸಿದರೂ ಆಗದು. ದೂರಪ್ರಯಾಣಕ್ಕೆ ಸಂಗಾತಿಯ ಜೊತೆ ತೆರಳುವಿರಿ. ಮನೆಯ ವಿರೋಧಿಸುವ ಕೆಲಸವನ್ನು ನೀವು ಮಾಡುವಿರಿ. ಆಪ್ತರ ಭೇಟಿಯಾಗುವ ನಿಮ್ಮ ಕಾರ್ಯವು ಸಫಲವಾಗದು. ಅಧಿಕಾರಿ ವರ್ಗ ನಿಮ್ಮ‌ ಮೇಲೆ ಬಂದ ದೂರಿನ ವಿಚಾರಣೆಯನ್ನು ಮಾಡಬಹುದು. ಸ್ತ್ರೀಯರ ಸಖ್ಯವನ್ನು ನೀವು ಮಾಡಿಕೊಳ್ಳುವಿರಿ. ಹಿತಶತ್ರುಗಳನ್ನು ಹಿಮ್ಮೆಟ್ಟಿಸಲು ನಿಮಗೆ ಕೆಲವು ತಂತ್ರಗಳು ಗೊತ್ತಿರುವುದು. ಅದನ್ನು ಪ್ರಯೋಗಿಸುವಿರಿ.

ಕನ್ಯಾ ರಾಶಿ: ಒಂಟಿಯಾಗಿ ಇದ್ದಷ್ಟೂ ನಿಮಗೆ ಏನೇನೋ ಯೋಚನೆಗಳು ಬರಬಹುದು. ನಿಮ್ಮ ಗೌರವಕ್ಕೆ ಚ್ಯುತಿ ಬಾರದಂತೆ ನಡೆದುಕೊಳ್ಳಿ. ಜಾಣತನದಿಂದ ನಿಮ್ಮ ಕೆಲಸವನ್ನು ಸಾಧಿಸಿಕೊಳ್ಳಬೇಕಾಗಬಹುದು.‌ ಇಂದು ನಿಮಗೆ ಎಲ್ಲ ಕಾರ್ಯಗಳೂ ವಿಳಂಬವಾಗಲಿದೆ. ನಿಮ್ಮ ಮಾತಿಗೆ ಬೆಲೆ ಇಲ್ಲದೇ ಹೋಗಬಹುದು. ನೀವು ನಡೆಸುವ ಉದ್ಯಮಕ್ಕೆ ನೀವು ವೇಗವನ್ನು ಕೊಡುವಿರಿ. ವಿದೇಶಪ್ರಯಾಣಕ್ಕೆ ನಿಮಗೆ ಅವಕಾಶಗಳು ಬರಬಹುದು. ಅಮೂಲ್ಯ ವಸ್ತುಗಳನ್ನು ಕಳೆದುಕೊಳ್ಳಬಹುದು. ಆತ್ಮೀಯರ ಒಡನಾಟದಿಂದ ನಿಮಗೆ ಖುಷಿಯಾಗಲಿದೆ.

ತುಲಾ ರಾಶಿ: ನಿಮ್ಮ ಬಳಿ ಅಪರಿಚಿತರು ಸಹಾಯವನ್ನು ಕೇಳಿಕೊಂಡು ಬರಬಹುದು. ಇಲ್ಲ ಎನದೇ ಅಲ್ಪವನ್ನಾದರೂ ದಾನಮಾಡಿ. ಮನೆಗೆ ಬೇಕಾದ ವಸ್ತುಗಳನ್ನು ನೀವು ಖರೀದಿಸುವಿರಿ. ಪತ್ನಿಗೆ ಅಚ್ಚರಿಯ ಉಡುಗೊರೆಯನ್ನು ನೀವು ನೀಡುವಿರಿ.‌ ಮನೆಯಲ್ಲಿ ದೊಡ್ಡ ಮಟ್ಟದಲ್ಲಿ ಧಾರ್ಮಿಕ ಕಾರ್ಯವನ್ನು ಮಾಡುವ ಯೋಚನೆ‌ ಇರಲಿದೆ. ಅಧಿಕ ಕಾರ್ಯಗಳು ಇರಲಿದ್ದು ನಿಮಗೆ ಯಾವುದೂ ಸೂಚಿಸದೇ ಹೋಗಬಹುದು. ಬಂಧುಗಳ ಜೊತೆ ನಿಮ್ಮ ವಿಚಾರವನ್ನು ಹಂಚಿಕೊಂಡು ಸಮಾಧಾನ ಪಡುವಿರಿ. ಭವಿಷ್ಯದ ಬಗ್ಗೆ ಚಿಂತೆಯೂ ಕಾಡಬಹುದು.

ವೃಶ್ಚಿಕ ರಾಶಿ: ಸಾಲವೇ ನಿಮಗೆ ಸಾಲವಾಗದು. ಅನಾರೋಗ್ಯದ ಕಾರಣ ಆರ್ಥಿಕ ಮಟ್ಟವು ಕುಸಿಯುವುದು. ಹೆಚ್ಚಿನ ಆರ್ಥಿಕಮೂಲವನ್ನೂ ಪಡೆಯಲು ಕಷ್ಟವಾದೀತು. ಹೊಸ ಉದ್ಯಮದ ಯೋಚನೆಯನ್ನು ಸದ್ಯ ಕೈ ಬಿಡುವುದು ಒಳ್ಳೆಯದು. ಧಾರ್ಮಿಕ ಕ್ಷೇತ್ರವನ್ನು ಸುತ್ತಿ ಬರುವ ಮನಸ್ಸಾದೀತು. ಇನ್ನೊಬ್ಬರ ಮೇಲೆ‌ ನಿಮಗೆ ಪ್ರೀತಿ ಉಂಟಾಗಬಹುದು. ಆಪ್ತರ ಜೊತೆ ನೋವು ಎಲ್ಲವನ್ನೂ ಮರೆಯಲು ಸುತ್ತಾಡಲಿದ್ದೀರಿ. ನಿಮ್ಮ ಬಗ್ಗೆ ಇತರರಿಗೆ ಅನುಕಂಪ ಬರಬಹುದು. ಅಧಿಕಾರಕ್ಕಾಗಿ ನೀವು ತಂತ್ರವನ್ನು ಬಳಸಬಹುದು.

ಮತ್ತಷ್ಟು ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಗರ್ಭಿಣಿ ಸೊಸೆಯನ್ನು ಮಾವ ಹತ್ಯೆ ಮಾಡಿದ್ಯಾಕೆ? ಸ್ಫೋಟಕ ಕಾರಣ ಬಿಚ್ಚಿಟ್ಟ SP
ಗರ್ಭಿಣಿ ಸೊಸೆಯನ್ನು ಮಾವ ಹತ್ಯೆ ಮಾಡಿದ್ಯಾಕೆ? ಸ್ಫೋಟಕ ಕಾರಣ ಬಿಚ್ಚಿಟ್ಟ SP
17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಉದ್ಘಾಟನೆ: ಲೈವ್ ವಿಡಿಯೋ
17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಉದ್ಘಾಟನೆ: ಲೈವ್ ವಿಡಿಯೋ
ರಾಜ್ ಬಿ ಶೆಟ್ಟಿಯ ಸಕ್ಸಸ್ ಗುಟ್ಟು ರಟ್ಟು ಮಾಡಿದ ಸುದೀಪ್: ವಿಡಿಯೋ
ರಾಜ್ ಬಿ ಶೆಟ್ಟಿಯ ಸಕ್ಸಸ್ ಗುಟ್ಟು ರಟ್ಟು ಮಾಡಿದ ಸುದೀಪ್: ವಿಡಿಯೋ
ಧಮ್ಕಿ ಕೇಸ್ ಆರೋಪಿ ರಾಜೀವ್ ಗೌಡ ಪತ್ನಿ ವಿಧಾನಸೌಧದಲ್ಲಿ ಪ್ರತ್ಯಕ್ಷ
ಧಮ್ಕಿ ಕೇಸ್ ಆರೋಪಿ ರಾಜೀವ್ ಗೌಡ ಪತ್ನಿ ವಿಧಾನಸೌಧದಲ್ಲಿ ಪ್ರತ್ಯಕ್ಷ
ಸದನದಲ್ಲಿ ಪೆನ್​ಡ್ರೈವ್ ತೋರಿಸಿದ ಆರ್​ ಅಶೋಕ್: ಯಾವ ಮ್ಯಾಟರ್ ಗೊತ್ತಾ?
ಸದನದಲ್ಲಿ ಪೆನ್​ಡ್ರೈವ್ ತೋರಿಸಿದ ಆರ್​ ಅಶೋಕ್: ಯಾವ ಮ್ಯಾಟರ್ ಗೊತ್ತಾ?
ನಿವೃತ್ತಿ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಕೆಎಲ್ ರಾಹುಲ್
ನಿವೃತ್ತಿ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಕೆಎಲ್ ರಾಹುಲ್
‘ದರ್ಶನ್ ‘ಲ್ಯಾಂಡ್​ಲಾರ್ಡ್’ ನೋಡಿದ್ದರೆ ಏನೆನ್ನುತ್ತಿದ್ದರು?’
‘ದರ್ಶನ್ ‘ಲ್ಯಾಂಡ್​ಲಾರ್ಡ್’ ನೋಡಿದ್ದರೆ ಏನೆನ್ನುತ್ತಿದ್ದರು?’
ಅಜಿತ್ ಪವಾರ್ ಅಂತ್ಯಕ್ರಿಯೆಗೆ ಸೇರಿದ್ದ ಜನಸಾಗರ ನೋಡಿ!
ಅಜಿತ್ ಪವಾರ್ ಅಂತ್ಯಕ್ರಿಯೆಗೆ ಸೇರಿದ್ದ ಜನಸಾಗರ ನೋಡಿ!
ಈ ವರ್ಷ ನಟಿ ರಚಿತಾ ರಾಮ್ ಮದುವೆ: ವಿಷಯ ಖಚಿತಪಡಿಸಿದ ಡಿಂಪಲ್ ಕ್ವೀನ್
ಈ ವರ್ಷ ನಟಿ ರಚಿತಾ ರಾಮ್ ಮದುವೆ: ವಿಷಯ ಖಚಿತಪಡಿಸಿದ ಡಿಂಪಲ್ ಕ್ವೀನ್
ಸಚಿವ ಸ್ಥಾನಕ್ಕೆ ರಾಜೀನಾಮೆ ಸುದ್ದಿ: ಈ ಬಗ್ಗೆ ಕೆಜೆ ಜಾರ್ಜ್ ಹೇಳಿದ್ದೇನು?
ಸಚಿವ ಸ್ಥಾನಕ್ಕೆ ರಾಜೀನಾಮೆ ಸುದ್ದಿ: ಈ ಬಗ್ಗೆ ಕೆಜೆ ಜಾರ್ಜ್ ಹೇಳಿದ್ದೇನು?