Horoscope: ರಾಶಿಭವಿಷ್ಯ, ಈ ರಾಶಿಯವರು ವಂಚನೆಯ ಕರೆಗಳಿಂದ ಆದಷ್ಟು ಎಚ್ಚರವಾಗಿರಿ
ನೀವು ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರಾಗಿದ್ದು, ಬೆಳಗ್ಗೆ ಎದ್ದು ಕೂಡಲೇ ನಿಮ್ಮ ಭವಿಷ್ಯದ ಬಗ್ಗೆ ತಿಳಿದುಕೊಳ್ಳುವ ಅಭ್ಯಾಸ ಇದೆಯೇ? ಹಾಗಿದ್ದರೆ ಇಂದಿನ (2023 ಸೆಪ್ಟೆಂಬರ್ 16) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿ ತಿಳಿದುಕೊಳ್ಳಿ.
ರಾಶಿ ಭವಿಷ್ಯ ಪ್ರತಿಯೊಬ್ಬರ ಜೀವನದಲ್ಲಿ ವಿಭಿನ್ನವಾಗಿರುತ್ತದೆ. ಪ್ರತಿನಿತ್ಯ ಬೆಳಗ್ಗೆ ಎದ್ದ ಕೂಡಲೇ ತಮ್ಮ ರಾಶಿ ಭವಿಷ್ಯ (Daily horoscope) ನೋಡುವುದು ಕೆಲವರಿಗೆ ಅಭ್ಯಾಸ. ಇಂದಿನ ರಾಶಿ ಭವಿಷ್ಯ ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಹೀಗೆ ಎಲ್ಲವನ್ನು ತಿಳಿದುಕೊಳ್ಳುತ್ತಾರೆ. ಜೊತೆಗೆ ಪಂಚಾಂಗವನ್ನು ಸಹ ಓದುತ್ತಾರೆ. ಹಾಗಾದರೆ ಇಂದಿನ (2023 ಸೆಪ್ಟೆಂಬರ್ 16) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಸಿಂಹ ಮಾಸ, ಮಹಾನಕ್ಷತ್ರ: ಹಸ್ತಾ, ಮಾಸ: ಭಾದ್ರಪದ, ಪಕ್ಷ: ಶುಕ್ಲ, ವಾರ: ಶನಿ, ತಿಥಿ: ದ್ವಿತೀಯಾ, ನಿತ್ಯನಕ್ಷತ್ರ: ಚಿತ್ರಾ, ಯೋಗ: ವೈಧೃತಿ, ಕರಣ: ಬಾಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 22 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 32 ನಿಮಿಷಕ್ಕೆ, ರಾಹು ಕಾಲ ಬೆಳಿಗ್ಗೆ 09:25 ರಿಂದ 10:56 ರವರೆಗೆ, ಯಮಘಂಡ ಕಾಲ ಮಧ್ಯಾಹ್ನ 01:23 ರಿಂದ 03:30ರವರೆಗೆ, ಗುಳಿಕ ಕಾಲ ಸಂಜೆ 06:23 ರಿಂದ 07:54ರ ವರೆಗೆ.
ಸಿಂಹ ರಾಶಿ : ಅಧಿಕಾರ ಮತ್ತು ವರ್ಚಸ್ಸು ಹೆಚ್ಚಿಸಿಕೊಳ್ಳುವ ಅವಕಾಶಗಳು ಸಿಗಲಿದೆ. ಸಕಾರಾತ್ಮಕ ಯೋಚನೆಯಿಂದ ಮುಂದಡಿ ಇಡಬೇಕಾದೀತು. ನಿಮ್ಮ ಬುದ್ಧಿಶಕ್ತಿಗೆ ತಕ್ಕಂತೆ ಕೆಲಸದಲ್ಲಿ ಜಯವನ್ನು ಸಾಧಿಸುವಿರಿ. ಧೈರ್ಯದಿಂದ ಮುನ್ನಡೆಯುವ ಇಚ್ಛಾಶಕ್ತಿಯನ್ನು ರೂಢಿಸಿಕೊಳ್ಳಿ. ಸ್ವಂತ ಉದ್ಯೋಗವನ್ನು ನಡೆಸಲು ಚಿಂತಿಸುವುದು ಉತ್ತಮ. ವಂಚನೆಯ ಕರೆಗಳಿಂದ ಆದಷ್ಟು ಎಚ್ಚರವಾಗಿರಿ. ನಿಮ್ಮ ವಸ್ತುಗಳು ಕಣ್ಮರೆಯಾದರೂ ನಿಮ್ಮ ತಿಳಿವಿಗೆ ಬಾರದೇ ಹೋದೀತು. ನಿಮ್ಮ ಸುತ್ತಮುತ್ತಲಿನವರಿಂದ ತೊಂದರೆಯಾಗಬಹುದು. ಇಂದು ನೀವು ಒತ್ತಡದ ಕೆಲಸದಿಂದ ವಿರಾಮ ಪಡೆದುಕೊಳ್ಳಲು ಬಯಸುವಿರಿ. ವಿದೇಶದ ನಿಮ್ಮ ಉದ್ಯಮವು ಕಷ್ಟ ಎನಿಸಬಹುದು. ಹೊಸ ಕೆಲಸದಲ್ಲಿ ಉತ್ಸಾಹವು ಇರಲಿದೆ. ನಿಮ್ಮ ಅಂತರಂಗವು ಎಲ್ಲರಿಗೂ ಗೊತ್ತಾದೀತು. ಮಕ್ಕಳ ಜೊತೆ ಸಂತೋಷದಿಂದ ಸಮಯವನ್ನು ಕಳೆಯುವಿರಿ.
ಕನ್ಯಾ ರಾಶಿ : ನಿಮ್ಮ ಯಶಸ್ಸಿಗೆ ವಿರೋಧಿಗಳು ಅಡ್ಡಗಾಲು ಹಾಕಬಹುದು. ಧೃತಿಗೆಡುವ ಅವಶ್ಯಕತೆ ಇರುವುದಿಲ್ಲ. ಉದ್ವೇಗದಿಂದ ಸಿಟ್ಟುಗೊಂಡು ಅಪ್ರಿಯರಾಗುವಿರಿ. ಉದ್ಯೋಗದ ಬದಲಾವಣೆಯ ವಿಚಾರದಲ್ಲಿ ನೀವು ದ್ವಂದ್ವವಿರಲಿದೆ. ಇಂದಿನ ಕೆಲಸಗಳು ಬೇಗ ಮುಕ್ತಾಯವಾಗಿ ನಿಶ್ಚಿಂತೆಯಿಂದ ಇರುವಿರಿ. ವಿದ್ಯಾಭ್ಯಾಸಕ್ಕೆ ಮನೆಯನ್ನು ಬಿಟ್ಟು ದೂರವಿರಲು ನಿಮಗೆ ಮನಸ್ಸಾಗದು. ನಿಮ್ಮ ಇಂದಿನ ಆರ್ಥಿಕಲಾಭವು ನಿಮಗೆ ಹೆಚ್ಚು ಸುಖವನ್ನು ಕೊಡಬಹುದು. ಸಂಗಾತಿಯು ನಿಮಗೆ ಬೇಸರವಾಗುವಂತೆ ಮಾತನಾಡಬಹುದು. ಇಂದು ನೀವು ಗಂಭೀರವಾದ ಆಲೋಚನೆಯಲ್ಲಿ ಮುಳುಗುವಿರಿ. ಬಹಳ ದಿನಗಳ ಅನಂತರ ನಿಮ್ಮ ಗೊಂದಲಗಳಿಗೆ ನೀವೇ ಉತ್ತರವನ್ನು ಕಂಡುಕೊಳ್ಳುವಿರಿ.
ತುಲಾ ರಾಶಿ : ಮಾಡಲು ಹೊರಟ ಕೆಲಸದಲ್ಲಿ ಸಂಪೂರ್ಣ ಯಶಸ್ಸು ನಿಮ್ಮದಾಗುವುದು. ನಿಮ್ಮ ವಿರೋಧಿಗಳನ್ನು ಸ್ತಬ್ಧಗೊಳಿಸೀತು. ನಿಮ್ಮ ತಾಳ್ಮೆಯೇ ಗುರಿಯನ್ನು ತಲುಪಲು ಸಹಕಾರಿಯಾಗಿರುವುದು. ಒತ್ತಡ ಕಡಿಮೆಯಾಗಿ ಮನೆಯಲ್ಲಿ ನೆಮ್ಮದಿಯಿಂದ ಇರುವಿರಿ. ಮಕ್ಕಳ ವೃತ್ತಿಯಲ್ಲಿ ಹೆಚ್ಚಿನ ಏಳ್ಗೆಯನ್ನು ಕಂಡು ಸುಖಿಸುವಿರಿ. ಬರಲಿರುವ ಹಣವನ್ನು ಸರಿಯಾಗಿ ವಿನಿಯೋಗಿಸಿ. ಸ್ಥಿರಾಸ್ತಿಯಲ್ಲಿ ಲಾಭವನ್ನು ಪಡೆಯಲು ತಂತ್ರವನ್ನು ಬಳಸುವಿರಿ. ಮಕ್ಕಳ ವಿಚಾರದಲ್ಲಿ ನೀವು ಬಹಳ ಮೃದು ಸ್ವಭಾವವಿರುವುದು. ನಿಮ್ಮ ಮನಃಸ್ಥಿತಿಯನ್ನು ಯಾರಾದರೂ ದುರುಪಯೋಗ ಮಾಡಿಕೊಳ್ಳಬಹುದು. ಸಹವಾಸದ ಕಾರಣ ನಿಮ್ಮ ಮೇಲೆ ಸಲ್ಲದ ಆರೋಪಗಳು ಕೇಳಿಬರಬಹುದು. ಹಣಕಾಸಿನ ವಿಚಾರದಲ್ಲಿ ಗಮನಾರ್ಹ ಬೆಳವಣಿಗೆ ಉಂಟಾಗಲಿದೆ. ನಿಮ್ಮ ವೃತ್ತಿಜೀವನವನ್ನು ಉತ್ತಮ ರೀತಿಯಲ್ಲಿ ಆರಂಭಿಸಲು ನಿರ್ಧರಿಸುವಿರಿ.
ವೃಶ್ಚಿಕ ರಾಶಿ : ಇಂದು ಮಡದಿ, ಮಕ್ಕಳಿಂದಲೇ ಟೀಕೆಯನ್ನು ಕೇಳಬೇಕಾದೀತು. ನಿಮ್ಮ ವ್ಯಾಪಾರ ವ್ಯವಹಾರದಲ್ಲಿ ಪಾರದರ್ಶಕತೆ ಮಾತ್ರ ಇರಲಿ. ಮಕ್ಕಳ ವಿವಾಹದ ಬಗ್ಗೆ ಚಿಂತಿಸಿ ಭಾವುಕರಾಗುವಿರಿ. ಕುಟುಂಬಕ್ಕಾಗಿ ಮಾಡಿದ ಸಾಲವನ್ನು ನೆನೆಸಿಕೊಂಡು ಸಂಕಟಪಡುವಿರಿ. ಸ್ತ್ರೀಯರಿಗೆ ಉದ್ಯೋಗದಲ್ಲಿ ಹೆಚ್ಚಿನ ಆದ್ಯತೆ ಸಿಗಬಹುದು. ಇನ್ನೊಬ್ಬರ ನೋವಿಗಿ ಸ್ಪಂದಿಸುವ್ವಿರಿ. ದಾಂಪತ್ಯದಲ್ಲಿ ಸಾಮರಸ್ಯದ ಅಗತ್ಯವು ಬಹಳ ಇರಲಿದೆ. ನೀವು ಉದ್ಯೋಗವನ್ನು ಪಡೆಯಲು ಮಾಡಿದ ಪ್ರಯತ್ನಗಳು ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತವೆ. ನೀವು ಮತ್ತು ಸಂಗಾತಿ ನಡುವೆ ಹಣದ ಬಗ್ಗೆ ವಾಗ್ವಾದವು ನಡೆದು ಅತಿರೇಕವಾದೀತು. ಒತ್ತಡವಿಲ್ಲದೆ ಇಂದು ನಿಮ್ಮ ದಿನವನ್ನು ಆನಂದಿಸಲು ಪ್ರಯತ್ನಿಸಿ.