Horoscope: ಈ ರಾಶಿಯವರಿಗೆ ಇಂದು ಸಂಕಟ ಪರಿಹರಿಸಿಕೊಳ್ಳುವ ಮಾರ್ಗ ವಿಳಂಬವಾಗಿ ಸಿಗುವುದು

ನೀವು ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರಾಗಿದ್ದು, ಬೆಳಗ್ಗೆ ಎದ್ದು ಕೂಡಲೇ ನಿಮ್ಮ ಭವಿಷ್ಯದ ಬಗ್ಗೆ ತಿಳಿದುಕೊಳ್ಳುವ ಅಭ್ಯಾಸ ಇದೆಯೇ? ಹಾಗಿದ್ದರೆ ಇಂದಿನ (2023 ಸೆಪ್ಟೆಂಬರ್ 19) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿ ತಿಳಿದುಕೊಳ್ಳಿ.

Horoscope: ಈ ರಾಶಿಯವರಿಗೆ ಇಂದು ಸಂಕಟ ಪರಿಹರಿಸಿಕೊಳ್ಳುವ ಮಾರ್ಗ ವಿಳಂಬವಾಗಿ ಸಿಗುವುದು
ದಿನಭವಿಷ್ಯImage Credit source: iStock Photo
Follow us
| Updated By: Rakesh Nayak Manchi

Updated on: Sep 19, 2023 | 12:30 AM

ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚೆನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದರೆ 2023 ಸೆಪ್ಟೆಂಬರ್ 19 ಮಂಗಳವಾರದ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ತುಲಾ ಮಾಸ, ಮಹಾನಕ್ಷತ್ರ: ಚಿತ್ರಾ, ಮಾಸ: ಭಾದ್ರಪದ, ಪಕ್ಷ: ಶುಕ್ಲ, ವಾರ: ಮಂಗಳ, ತಿಥಿ: ಚತುರ್ಥೀ, ನಿತ್ಯನಕ್ಷತ್ರ: ಅನೂರಾಧಾ, ಯೋಗ: ಆಯುಷ್ಮಾನ್, ಕರಣ: ಭದ್ರ, ಸೂರ್ಯೋದಯ ಬೆಳಗ್ಗೆ 06 ಗಂಟೆ 22 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 30 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 3:28 ರಿಂದ 04:59 ರವರೆಗೆ, ಯಮಘಂಡ ಕಾಲ ಬೆಳಿಗ್ಗೆ 09:25 ರಿಂದ 10:56ರವರೆಗೆ, ಗುಳಿಕ ಕಾಲ ಮಧ್ಯಾಹ್ನ 12:27 ರಿಂದ 1:57ರ ವರೆಗೆ.

ಸಿಂಹ ರಾಶಿ: ರಾಜಕೀಯ ವ್ಯಕ್ತಿಗಳ ವಿರುದ್ಧ ಸುಳ್ಳು ಸುದ್ದಿಗಳು ಬರಬಹುದು. ನಿಮ್ಮನ್ನು ಅಸ್ತ್ರವನ್ನಾಗಿ ಮಾಡಿಕೊಂಡು ಕಾರ್ಯವನ್ನು ಸಾಧಿಸಿಕೊಳ್ಳುವರು. ಏಕಾಂಗಿ ಎಂಬ ಭಾವವು ನಿಮ್ಮನ್ನು ಅತಿಯಾಗಿ ಕಾಡಬಹುದು.‌ ರಕ್ಷಣೆಯ ಸ್ಥಾನದಲ್ಲಿ ಇರುವವರಿಗೆ ಭಯವಿರುವುದು. ಮಹಾತ್ಮರ ಸೇವೆಗೆ ಅನಿರೀಕ್ಷಿತ ಅವಕಾಶವು ಸಿಗಲಿದೆ. ಸಂಕಟವನ್ನು ಪರಿಹರಿಸಿಕೊಳ್ಳುವ ಮಾರ್ಗವು ವಿಳಂಬವಾಗಿ ಸಿಗುವುದು. ಪರರ ವಸ್ತುವನ್ನು ಅವರಿಗೆ ಹಿಂತಿರುಗಿಸಲು ನಿಮಗೆ ಆಗದೇ ಹೋಗುವುದು. ನಿದ್ರೆ ಇಲ್ಲದೇ ಎಲ್ಲವೂ ಅಸ್ತವ್ಯಸ್ತದಂತೆ ಕಾಣುವುದು. ದಾಂಪತ್ಯದಲ್ಲಿ ಹೊಂದಾಣಿಕೆಗೆ ಇಬ್ಬರೂ ಪ್ರಯತ್ನಶೀಲರಾಗುವುದು ಉತ್ತಮ. ವಿದೇಶದಲ್ಲಿರುವ ಮಕ್ಕಳ ಆರೋಗ್ಯದಲ್ಲಿ ತೊಂದರೆ ಕಾಣಿಸಿಕೊಳ್ಳಬಹುದು. ನಿಮ್ಮಿಂದ ಆಗದ ಕೆಲಸವನ್ನು ಬೇರೆಯವರು ಮಾಡಿ ಮುಗಿಸುವರು. ಸುಬ್ರಹ್ಮಣ್ಯನ ಆರಾಧನೆಯನ್ನು ಮಾಡಿ.

ಕನ್ಯಾ ರಾಶಿ: ಸಹೋದ್ಯೋಗಿಗಳು ಸುಮ್ಮನೇ ಕಿರಿಕಿರಿ ಮಾಡುವರು. ಸ್ವಾಭಿಮಾನವನ್ನು ಬಿಟ್ಟು ಇರುವುದು ಅಸಾಧ್ಯ ಎನಿಸಬಹುದು. ಕೆಲವರಿಂದ ತಪ್ಪಿಸಿಕೊಳ್ಳಲು ನೋಡುವಿರಿ. ಅನಾರೋಗ್ಯವು ನೆಪವಾಗಬಹುದು. ಸ್ತ್ರೀಯರಿಗೆ ಸಹಾಯ ಮಾಡಲು ಹೋಗಿ ಹಾಸ್ಯಕ್ಕೆ ಒಳಗಾಗುವಿರಿ. ಹೂಡಿಕೆಯನ್ನು ಮಾಡುವುದು ನಿಮಗೆ ಅನಿವಾರ್ಯವಾಗಬಹುದು. ನಿಮ್ಮ ದಿವಸದ ವ್ಯವಸ್ಥೆಯನ್ನು ಕ್ರಮಬದ್ಧಗೊಳಿಸಿಕೊಳ್ಳಿ. ಮಾತಿನಿಂದ ಅಳೆದ ನಿಮ್ಮ ಮಾಪನವು ಸರಿಯಾಗದೇ ಇರುವುದು. ನಿಮ್ಮದೇ ಆದ ಸಂಸ್ಥೆಯನ್ನು ಆರಂಭಿಸಲು ಕೆಲವರನ್ನು ಸೇರಿಸಿಕೊಳ್ಳುವಿರಿ. ಮಾನಸಿಕ ಆಯಾಸದಿಂದ ನೀವು ವಿಶ್ರಾಂತಿಯನ್ನು ತೆಗೆದುಕೊಳ್ಳಬೇಕಾಗಬಹುದು. ನಿಮ್ಮವರ ಮೇಲೆ ಸಿಡಿಮಿಡಿಗೊಳ್ಳಲಿದ್ದು, ಸಂಗಾತಿಯು ಸಮಾಧಾನ ಮಾಡಬಹುದು.

ತುಲಾ ರಾಶಿ: ದೇವರ ಮೇಲೆ ನಂಬಿಕೆ ಇಟ್ಟ ಕಾರಣ ನಿಮ್ಮ ಮನೋರಥವು ಪೂರ್ತಿಯಾಗಿದ್ದು ನಿಮಗೆ ಅತಿಶಯ ಸಂತೋಷವಾಗಲಿದೆ. ಭೂಮಿಯನ್ನು ಖರೀದಿಸುವ ಸಂದರ್ಭ ಬಂದರೂ ಪೂರ್ತಿ ಹಣವನ್ನು ಸೇರಿಸಲು ಆಗದು. ನಿಮ್ಮ ಸಮಯಪಾಲನೆಗೆ ಅಧಿಕಾರಿಗಳಿಂದ ಪ್ರಶಂಸೆಯು ಸಿಗುವುದು. ನೀವು ಕಾರ್ಯಕ್ಕೆ ಸಂಬಂಧಪಟ್ಟಂತೆ ನಿಮ್ಮದೇ ಆದ ಚೌಕಟ್ಟನ್ನು ರಚಿಸಿಕೊಳ್ಳುವುದು ಕ್ಷೇಮ.‌ ಇಲ್ಲವಾದರೆ ಎಲ್ಲವೂ ನಿಮ್ಮ ಬುಡಕ್ಕೇ ಬರುವುದು. ಸ್ನೇಹಿತರ ಜೊತೆ ಸುತ್ತಾಟವನ್ನು ಅನಿವಾರ್ಯವಾಗಿ ಮಾಡುವಿರಿ. ಪ್ರೀತಿಯನ್ನು ತಿಳಿಸುವುದು ವಿಳಂಬವಾಗುವುದು. ನಿಮ್ಮ ಸ್ಥಾನವನ್ನು ಬೇರೆಯವರು ಆಕ್ರಮಿಸಿಕೊಳ್ಳುವರು. ನಿಮ್ಮ‌ ಇಂದಿನ ಮಾತು ನಕಾರಾತ್ಮಕ ಅಂಶವನ್ನೇ ಹೆಚ್ಚು ಪಡೆದುಕೊಳ್ಳಲಿದೆ.

ವೃಶ್ಚಿಕ ರಾಶಿ: ಉದ್ಯೋಗದಲ್ಲಿ ಚಿಂತಿತ ಲಾಭ ಕಾಣದೇ ಮನಸ್ಸು ಕುಗ್ಗಬಹುದು. ಉತ್ಸಾಹದಿಂದ ಇರಲು ನಿಮಗೆ ಮಾರ್ಗಗಳೂ ಕಡಿಮೆ‌ ಇರಬಹುದು. ಇಷ್ಟವಿಲ್ಲದಿದ್ದರೂ ಉದ್ಯೋಗಕ್ಕೆ ತೆರಳಬೇಕಾದೀತು. ಮೇಲಧಿಕಾರಿಗಳ ಮಾತು ಕಿರಿಕಿರಿ ಎನಿಸಬಹುದು. ಉದ್ಯೋಗವನ್ನು ಬದಲಿಸುವ ಮೊದಲು ಸ್ನೇಹಿತರ ಸಲಹೆಯನ್ನು ಪಡೆಯುವಿರಿ. ಸ್ವಾರ್ಥದಿಂದ ನಿಮಗೇ ತೊಂದರೆಯಾಗುವುದು ಎಂದು ಮನವರಿಕೆ ಆಗುವುದು. ದೂರದಲ್ಲಿ ಇರುವ ನಿಮಗೆ ಕುಟುಂಬದ ವಾರ್ತೆಯು ಖಷಿಯನ್ನು ಕೊಡುವುದು. ಪ್ರೀತಿಯನ್ನು ನೀವು ಲಘುವಾಗಿ ಕಂಡು ಪ್ರಿಯಕರನಿಂದ ದೂರಾಗುವಿರಿ. ಬೇಗ ಮುಗಿಯುವ ಕೆಲಸವನ್ನು ಮೊದಲು ಮಾಡಿ. ಸಹೋದರನ ಆರೋಗ್ಯವು ಕೆಡಬಹುದು. ಗೋಸೇವೆಯ ಕಡೆ ಮನಸ್ಸು ತಿರುಗುವುದು.

ಮತ್ತಷ್ಟು ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಕುಮಾರಸ್ವಾಮಿ ವಿರುದ್ಧ ಯೋಗೇಶ್ವರ್ ಮಾಡಿದ ಆರೋಪ ಸರಿಯಲ್ಲ: ನಿಖಿಲ್
ಕುಮಾರಸ್ವಾಮಿ ವಿರುದ್ಧ ಯೋಗೇಶ್ವರ್ ಮಾಡಿದ ಆರೋಪ ಸರಿಯಲ್ಲ: ನಿಖಿಲ್
ವಿಡಿಯೋ: ರಾಮ-ಆಂಜನೇಯನ ಮೂರ್ತಿ ಉದ್ಘಾಟಿಸಿದ ಶಿವರಾಜ್ ಕುಮಾರ್
ವಿಡಿಯೋ: ರಾಮ-ಆಂಜನೇಯನ ಮೂರ್ತಿ ಉದ್ಘಾಟಿಸಿದ ಶಿವರಾಜ್ ಕುಮಾರ್
ಕೃಷ್ಣ ಭಜನೆ, ಭಾರತೀಯ ನೃತ್ಯದ ಮೂಲಕ ರಷ್ಯಾದಲ್ಲಿ ಪ್ರಧಾನಿ ಮೋದಿಗೆ ಸ್ವಾಗತ
ಕೃಷ್ಣ ಭಜನೆ, ಭಾರತೀಯ ನೃತ್ಯದ ಮೂಲಕ ರಷ್ಯಾದಲ್ಲಿ ಪ್ರಧಾನಿ ಮೋದಿಗೆ ಸ್ವಾಗತ
ಕಾಂಗ್ರೆಸ್​ನಿಂದ ಸ್ಪರ್ಧಿಸಿ ಗೆದ್ದರೆ ಮಂತ್ರಿಯಾಗಬಹುದೇ ಯೋಗೇಶ್ವರ್?
ಕಾಂಗ್ರೆಸ್​ನಿಂದ ಸ್ಪರ್ಧಿಸಿ ಗೆದ್ದರೆ ಮಂತ್ರಿಯಾಗಬಹುದೇ ಯೋಗೇಶ್ವರ್?
ಊಹಾಪೋಹಗಳಿಗೆ ತೆರೆಹಾಡಿದ ಯೋಗೇಶ್ವರ್ ತಮ್ಮ ಚಿಹ್ನೆ ಇನ್ನೂ ನಿರ್ಧರಿಸಿಲ್ಲ
ಊಹಾಪೋಹಗಳಿಗೆ ತೆರೆಹಾಡಿದ ಯೋಗೇಶ್ವರ್ ತಮ್ಮ ಚಿಹ್ನೆ ಇನ್ನೂ ನಿರ್ಧರಿಸಿಲ್ಲ
ಸುರೇಶ್ ಚುನಾವಣೆ ಸ್ಪರ್ಧೆಯಿಂದ ದೂರವುಳಿಯಲು ನಿರ್ಧರಿಸಿದ್ದಾರೆ: ಬಾಲಕೃಷ್ಣ
ಸುರೇಶ್ ಚುನಾವಣೆ ಸ್ಪರ್ಧೆಯಿಂದ ದೂರವುಳಿಯಲು ನಿರ್ಧರಿಸಿದ್ದಾರೆ: ಬಾಲಕೃಷ್ಣ
ಗಸ್ತು ತಿರುಗುವ ಕುರಿತು ಭಾರತ-ಚೀನಾ ಒಪ್ಪಂದದ ಬಗ್ಗೆ ಸೇನಾ ಮುಖ್ಯಸ್ಥರ ಮಾತು
ಗಸ್ತು ತಿರುಗುವ ಕುರಿತು ಭಾರತ-ಚೀನಾ ಒಪ್ಪಂದದ ಬಗ್ಗೆ ಸೇನಾ ಮುಖ್ಯಸ್ಥರ ಮಾತು
ಯಾವ ಪಕ್ಷದಿಂದ ಸ್ಪರ್ಧಿಸಬೇಕೆನ್ನುವ ಗೊಂದಲದಲ್ಲಿ ಬಿಜೆಪಿ ನಾಯಕ ಯೋಗೇಶ್ವರ್
ಯಾವ ಪಕ್ಷದಿಂದ ಸ್ಪರ್ಧಿಸಬೇಕೆನ್ನುವ ಗೊಂದಲದಲ್ಲಿ ಬಿಜೆಪಿ ನಾಯಕ ಯೋಗೇಶ್ವರ್
ಕೇಕ್​ನಲ್ಲಿ ಮೂಡಿದ ಮರಳು ದಂಧೆಯ ಚಿತ್ರಣ
ಕೇಕ್​ನಲ್ಲಿ ಮೂಡಿದ ಮರಳು ದಂಧೆಯ ಚಿತ್ರಣ
ಬದೋನಿ ಬ್ಯೂಟಿ... ಅತ್ಯುತ್ತಮ ಡೈವಿಂಗ್ ಕ್ಯಾಚ್ ಹಿಡಿದ ಆಯುಷ್
ಬದೋನಿ ಬ್ಯೂಟಿ... ಅತ್ಯುತ್ತಮ ಡೈವಿಂಗ್ ಕ್ಯಾಚ್ ಹಿಡಿದ ಆಯುಷ್