Sign In

By signing in or creating an account, you agree with Associated Broadcasting Company's Terms & Conditions and Privacy Policy.

Horoscope: ದಿನಭವಿಷ್ಯ, ಈ ರಾಶಿಯವರಿಗೆ ಸಾಲದಿಂದ ತಲೆ ಮರೆಸಿಕೊಳ್ಳುವ ಸ್ಥಿತಿಯೂ ಬರಬಹುದು

ನೀವು ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರೇ? ಹಾಗಿದ್ದರೆ ಇಂದಿನ (2023 ಆಗಸ್ಟ್ 23) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.

Horoscope: ದಿನಭವಿಷ್ಯ, ಈ ರಾಶಿಯವರಿಗೆ ಸಾಲದಿಂದ ತಲೆ ಮರೆಸಿಕೊಳ್ಳುವ ಸ್ಥಿತಿಯೂ ಬರಬಹುದು
ಜ್ಯೋತಿಷ್ಯ
Follow us
ಲೋಹಿತ ಹೆಬ್ಬಾರ್​, ಇಡುವಾಣಿ
| Updated By: ವಿವೇಕ ಬಿರಾದಾರ

Updated on: Aug 23, 2023 | 12:15 AM

ರಾಶಿ ಭವಿಷ್ಯ ಪ್ರತಿಯೊಬ್ಬರ ಜೀವನದಲ್ಲಿ ವಿಭಿನ್ನವಾಗಿರುತ್ತದೆ. ಪ್ರತಿನಿತ್ಯ ಬೆಳಗ್ಗೆ ಎದ್ದ ಕೂಡಲೇ ತಮ್ಮ ರಾಶಿ ಭವಿಷ್ಯ (Daily horoscope) ನೋಡುವುದು ಕೆಲವರಿಗೆ ಅಭ್ಯಾಸ. ಇಂದಿನ ರಾಶಿ ಭವಿಷ್ಯ ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಹೀಗೆ ಎಲ್ಲವನ್ನು ತಿಳಿದುಕೊಳ್ಳುತ್ತಾರೆ. ಜೊತೆಗೆ ಪಂಚಾಂಗವನ್ನು ಸಹ ಓದುತ್ತಾರೆ. ಹಾಗಾದರೆ ಇಂದಿನ (2023 ಆಗಸ್ಟ್ 23) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಸಿಂಹ ಮಾಸ, ಮಹಾನಕ್ಷತ್ರ: ಮಘಾ, ಮಾಸ: ನಿಜ ಶ್ರಾವಣ, ಪಕ್ಷ: ಶುಕ್ಲ, ವಾರ: ಬುಧ, ತಿಥಿ: ಸಪ್ತಮೀ, ನಿತ್ಯನಕ್ಷತ್ರ: ವಿಶಾಖಾ, ಯೋಗ: ಬ್ರಹ್ಮ, ಕರಣ: ವಣಿಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 20 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 49 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 12:43 ರಿಂದ 02:16ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 07:54 ರಿಂದ 09:28ರ ವರೆಗೆ, ಗುಳಿಕ ಕಾಲ ಬೆಳಿಗ್ಗೆ 11:01 ರಿಂದ 12:35ರ ವರೆಗೆ.

ಸಿಂಹ ರಾಶಿ: ಸಾಲದಿಂದ ನೀವು ತಲೆ ಮರೆಸಿಕೊಳ್ಳುವ ಸ್ಥಿತಿಯೂ ಬರಬಹುದು.‌ ಅದಕ್ಕೆ ಬೇಕಾದ ಸಿದ್ಧತೆಯನ್ನು ಇಂದೇ ಮಾಡಿಕೊಳ್ಳುವುದು ಉತ್ತಮ. ದಾಂಪತ್ಯ ಜೀವನವು ಅನೇಕ‌ ತಿರುವಗಳನ್ನು ಪಡೆದುಕೊಂಡು ಮುಂದೆ ಸಾಗುವುದು. ವೃತ್ತಿಯ ಸ್ಥಳವು ನಿಮಗೆ ರೋಚಕ ಅನುಭವವನ್ನು ಕೊಡುವುದು. ಅನ್ನಿಸಿದ್ದನ್ನು ಮಾಡಲೂ ನಿಮಗೆ ಸ್ವಾತಂತ್ರ್ಯವು ಸಿಗದೇ ಹೋಗಬಹುದು. ಹಿರಿಯರನ್ನು ಗೌರವಿಸಿ ಆಶೀರ್ವಾದವನ್ನು ಪಡೆದುಕೊಳ್ಳಿ. ಪ್ರೇಮಪ್ರಕರಣವು ನಿಮಗೆ ಉಗುಳಲೂ ನುಂಗಲೂ ಆಗದ ತುತ್ತಾಗುವುದು. ಅದನ್ನು ನೀವು ಜಾಣ್ಮೆಯಿಂದ ಸರಿ ಮಾಡಿಕೊಳ್ಳಿ.

ಕನ್ಯಾ ರಾಶಿ: ಮನಸ್ಸಿನಲ್ಲಿ ಹತಾಶೆ, ಗೊಂದಲ, ಸಿಟ್ಟು ಎಲ್ಲವೂ ಕೂಡಿಕೊಂಡು ಯಾವುದನ್ನೂ ಮಾಡಲಾಗದ ಸ್ಥಿತಿಯು ನಿಮ್ಮದಾಗಲಿದೆ. ಕೈ ಹಾಕಿದ ಕೆಲಸವು ಕೈ ಸುಡುವುದು. ಯಾರ ಮಾತನ್ನೂ ಕೇಳುವ ವ್ಯವಧಾನವೂ ನಿಮ್ಮಲ್ಲಿ ಇಲ್ಲವಾಗುವುದು. ಎಲ್ಲರ ಮಾತಿಗೂ ನಿಮ್ಮ ಕೋಪವನ್ನು ಪ್ರದರ್ಶಿಸುವಿರಿ. ನಿಮ್ಮ ಎಲ್ಲ ನಿರ್ಧಾರಗಳೂ ನಿಮಗೇ ಕೆಡುಕುಂಟುಮಾಡುವಂತೆ ತೋರುವುದು. ನಿಮ್ಮದಲ್ಲದ ಕೆಲಸಕ್ಕೂ ನೀವೇ ಜವಾಬ್ದಾರರಾಗಬೇಕಾಗಬಹುದು. ನಿಮಗೆ ದೈವದ ಮೊರೆ ಬಿಟ್ಟರೆ ಮತ್ತಾವುದೂ ಕಾಣಸಿಗದು. ಸುಮ್ಮನೇ ಕುಳಿತರೇ ಹತ್ತಾರು ಆಲೋಚನೆಗಳು ಇನ್ನಷ್ಟು ನಿಮ್ಮ ಮನಸ್ಸನ್ನು ದುರ್ಬಲಗೊಳಿಸುವುದು.

ತುಲಾ ರಾಶಿ: ಸಂಗಾತಿಗೆ ನಿಮ್ಮ ಕಾರಣದಿಂದ ಉತ್ತಮ ಕೆಲಸವು ಸಿಗಲಿದೆ. ಕಛೇರಿಯಲ್ಲಿ ನೀವು ಪ್ರಶಂಸೆಗೆ ಪಾತ್ರರಾಗುವಿರಿ. ಕೆಟ್ಟ ಆಲೋಚನೆಗಳು ಬಂದರೂ ಅದನ್ನು ದೂರ ಮಾಡಿಕೊಳ್ಳುವ ತಂತ್ರವನ್ನು ನೀವು ತಿಲಕಿದಿರುವಿರಿ. ಹೂಡಿಕೆಯ ವಿಚಾರದಲ್ಲಿ ನೀವು ಹಿಂದುಳಿಯಬೇಕಾಗಬಹುದು. ದೂರದಲ್ಲಿ ಇರುವ ಮಕ್ಕಳಿಗೆ ಮನೆಯ ನೆನಪಾಗಬಹುದು. ಆಲಂಕಾರಿಕ ಉದ್ಯಮವನ್ನು ಮಾಡಿದರೆ ನಿಮಗೆ ಶ್ರೇಯಸ್ಸು ಆದಾಯ ಎಲ್ಲವೂ ಸಿಗಲಿದೆ. ಮನೆಯ ಕೆಲಸವು ಮುಗಿಯದಷ್ಟು ಇರಲಿದೆ‌. ನಿಮ್ಮನ್ನು ಯಶಸ್ಸನ್ನು ಕಂಡು ಅದನ್ನು ನಿಯಂತ್ರಿಸಲು ಸಹೋದ್ಯೋಗಿಗಳು ಮೇಲಧಿಕಾರಿಗೆ ದೂರನ್ನು ಕೊಡಬಹುದು. ಸ್ನೇಹಿತರ ಜೊತೆ ಹರಟೆಯಲ್ಲಿ ಕಾಲಕಳೆಯುವಿರಿ.

ವೃಶ್ಚಿಕ ರಾಶಿ: ವಾಸಸ್ಥಳದ ಬದಲಾವಣೆಯಿಂದ ಆರೋಗ್ಯದ ಮೇಲೆ ದುಷ್ಪರಿಣಾಮವನ್ನು ಬೀರಬಹುದು. ಎಲ್ಲ ಸಂದರ್ಭದಲ್ಲಿಯೂ ನಿಮ್ಮ ಮಾತೇ ನಡೆಯುತ್ತದೆ ಎಂದು ಇಟ್ಟುಕೊಳ್ಳಬಾರದು. ಆರೋಗ್ಯವನ್ನು ಕಾಪಾಡಿಕೊಳ್ಳಲು ಮುಂಜಾಗ್ರತಾ ಕ್ರಮಗಳನ್ನು ಮಾಡಿಕೊಳ್ಳಿ. ವೃತ್ತಿಯ ಕೆಲಸಗಳ ನಡುವೆ ಮನೆಗೆಲಸವು ನಿಮಗೆ ಕಷ್ಟವಾದೀತು‌. ಪರಿಶ್ರಮವಿಲ್ಲದೇ ಆದಾಯವನ್ನು ಪಡೆದುಕೊಳ್ಳಲು ಬಯಸುವಿರಿ. ಮೇಲಧಿಕಾರಿಗಳ ಹೊಸ ಯೋಜನೆಯನ್ನು ನಿರ್ವಹಿಸುವುದು ನಿಮ್ಮ ತಲೆಗೆ ಬರಬಹುದು. ಸ್ತ್ರೀಯರ ಒಡನಾಟ ಅತಿಯಾಗಿ ಬೇಡ. ನೇರ ನುಡಿಗಳನ್ನು ನೀವು ಸಹಿಸುವುದು ಕಷ್ಟವಾದೀತು.

ಲೋಹಿತಶರ್ಮಾ – 8762924271 (what’s app only)

ಹಳೆಯ ಸಂಪ್ರದಾಯ ಮುಂದುವರೆಸಿದ ಸಂಜು
ಹಳೆಯ ಸಂಪ್ರದಾಯ ಮುಂದುವರೆಸಿದ ಸಂಜು
ಯತ್ನಾಳ್ ಉಚ್ಛಾಟನೆ: ವಿಜಯಪುರದಲ್ಲಿ ಬಿಜೆಪಿ ಕಾರ್ಯಕರ್ತರಿಂದ ಕಾಳಿ ಪೂಜೆ
ಯತ್ನಾಳ್ ಉಚ್ಛಾಟನೆ: ವಿಜಯಪುರದಲ್ಲಿ ಬಿಜೆಪಿ ಕಾರ್ಯಕರ್ತರಿಂದ ಕಾಳಿ ಪೂಜೆ
ಕನ್ನಡಿಗ ವೈಶಾಕ್​ನನ್ನು ಕಣಕ್ಕಿಳಿಸಿ ಪಂದ್ಯ ಗೆದ್ದ ಪಂಜಾಬ್
ಕನ್ನಡಿಗ ವೈಶಾಕ್​ನನ್ನು ಕಣಕ್ಕಿಳಿಸಿ ಪಂದ್ಯ ಗೆದ್ದ ಪಂಜಾಬ್
ದೆಹಲಿಯಲ್ಲಿ ಹೆಚ್​ಡಿಕೆ ಮತ್ತು ದೇವೇಗೌಡರನ್ನು ಭೇಟಿಯಾಗಿರುವ ಜಾರಕಿಹೊಳಿ
ದೆಹಲಿಯಲ್ಲಿ ಹೆಚ್​ಡಿಕೆ ಮತ್ತು ದೇವೇಗೌಡರನ್ನು ಭೇಟಿಯಾಗಿರುವ ಜಾರಕಿಹೊಳಿ
‘ಅವಕಾಶ ಕೊಡಿ, ನಾನು ಕೆಟ್ಟ ನಟ ಅಲ್ಲ’ ಹೀಗೆಂದರ್ಯಾಕೆ ಮೋಹನ್​ಲಾಲ್
‘ಅವಕಾಶ ಕೊಡಿ, ನಾನು ಕೆಟ್ಟ ನಟ ಅಲ್ಲ’ ಹೀಗೆಂದರ್ಯಾಕೆ ಮೋಹನ್​ಲಾಲ್
ಸದ್ಯಕ್ಕೆ ವಾಪಸ್ಸು ಹೋಗುತ್ತಿದ್ದೇನೆ ಎಂದಷ್ಟೇ ಹೇಳಿದ ಬಸನಗೌಡ ಯತ್ನಾಳ್
ಸದ್ಯಕ್ಕೆ ವಾಪಸ್ಸು ಹೋಗುತ್ತಿದ್ದೇನೆ ಎಂದಷ್ಟೇ ಹೇಳಿದ ಬಸನಗೌಡ ಯತ್ನಾಳ್
ಯುವ ಕ್ರಿಕೆಟಿಗನ ಕ್ವಾಟ್ಲೆ ನೋಡಿ ಶಾಕ್ ಆದ ಇಡೀ ಆರ್​ಸಿಬಿ ತಂಡ
ಯುವ ಕ್ರಿಕೆಟಿಗನ ಕ್ವಾಟ್ಲೆ ನೋಡಿ ಶಾಕ್ ಆದ ಇಡೀ ಆರ್​ಸಿಬಿ ತಂಡ
ನಮ್ಮ ಸಿಎಂ ಕಚೇರಿಯೂ ಇಷ್ಟು ಭವ್ಯವಾಗಿಲ್ಲವೆಂದು ಉದ್ಗರಿಸಿದ ಪರಮೇಶ್ವರ್!
ನಮ್ಮ ಸಿಎಂ ಕಚೇರಿಯೂ ಇಷ್ಟು ಭವ್ಯವಾಗಿಲ್ಲವೆಂದು ಉದ್ಗರಿಸಿದ ಪರಮೇಶ್ವರ್!
ಬಿಜೆಪಿ ಶಾಸಕರು ಪೀಠಕ್ಕೆ ಅಗೌರವ ತೋರಿಲ್ಲ,ಸದನ ದೇಗುಲವಿದ್ದಂತೆ: ಸುರೇಶ್ ಗೌಡ
ಬಿಜೆಪಿ ಶಾಸಕರು ಪೀಠಕ್ಕೆ ಅಗೌರವ ತೋರಿಲ್ಲ,ಸದನ ದೇಗುಲವಿದ್ದಂತೆ: ಸುರೇಶ್ ಗೌಡ
ಸಿಎಂ ಸಿದ್ದರಾಮಯ್ಯಕ್ಕಿಂತ ಮೊದಲು ಡಿಸಿಎಂ ಶಿವಕುಮಾರ್ ದೆಹಲಿ ಪಯಣ
ಸಿಎಂ ಸಿದ್ದರಾಮಯ್ಯಕ್ಕಿಂತ ಮೊದಲು ಡಿಸಿಎಂ ಶಿವಕುಮಾರ್ ದೆಹಲಿ ಪಯಣ