Horoscope: ದಿನಭವಿಷ್ಯ, ಭವಿಷ್ಯವನ್ನು ಕಂಡು ಈ ರಾಶಿಯವರಿಗೆ ಚಿಂತೆಯಾಗುವುದು
ಸಿಂಹ, ಕನ್ಯಾ, ತುಲ, ವೃಶ್ಚಿಕ ರಾಶಿಯವರ ಜುಲೈ 24 ಸೋಮವಾರದ ಭವಿಷ್ಯದ ಮಾಹಿತಿ ಇಲ್ಲಿದೆ. ಸಿಂಹ ರಾಶಿಯವರು ಭವಿಷ್ಯವನ್ನು ಕಂಡು ಚಿಂತೆಯಾಗುವುದು. ಕನ್ಯಾ ರಾಶಿಯವರು ಅಪಮಾನವನ್ನು ಧೈರ್ಯದಿಂದ ಎದುರಿಸಲು ಮುಂದಾಗಬೇಕಿದೆ. ತುಲಾ ರಾಶಿಯವರಿಗೆ ಆರ್ಥಿಕ ಅಭಿವೃದ್ಧಿಯಿಂದ ಸಂತೋಷವಾಗುವುದು.
ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚೆನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದರೆ 2023 ಜುಲೈ 24 ಸೋಮವಾರದ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಕರ್ಕಾಟಕ ಮಾಸ, ಮಹಾನಕ್ಷತ್ರ: ಪುಷ್ಯಾ, ಮಾಸ: ಅಧಿಕ ಶ್ರಾವಣ, ಪಕ್ಷ: ಶುಕ್ಲ, ವಾರ: ಸೋಮ, ತಿಥಿ: ಸಪ್ತಮೀ, ನಿತ್ಯನಕ್ಷತ್ರ: ಚಿತ್ರಾ, ಯೋಗ: ಶಿವ, ಕರಣ: ಗರಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 14 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 07 ಗಂಟೆ 02 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 07:51 ರಿಂದ 09:27 ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 11:03 ರಿಂದ ಮಧ್ಯಾಹ್ನ 12:39ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 02:15 ರಿಂದ 03:51ರ ವರೆಗೆ.
ಸಿಂಹ: ನಿಮಗೆ ಮನೆಯ ಹೊರೆ ಬರುವ ಸಾಧ್ಯತೆ ಇದೆ. ಮನೆಯ ಕೆಲಸವನ್ನು ಶಿಸ್ತಿನಿಂದ ಮಾಡುವಿರಿ. ಕಛೇರಿಯಲ್ಲಿ ನಿಮ್ಮ ಕೆಲಸದ ಬಗ್ಗೆ ಖುಷಿ ಪಡಲಿದ್ದಾರೆ. ವಾಹನದ ವಿಚಾರದಲ್ಲಿ ನಿಮಗೆ ಎಚ್ಚರ ವಹಿಸುವುದು ಉತ್ತಮ. ಕನಸಿನಿಂದ ನೀವು ಬಹಳ ಬಳಲುವಿರಿ. ಎಲ್ಲ ವಿಚಾರವನ್ನೂ ನೀವು ತಿಳಿಯಬೇಕು ಎನ್ನುವ ಆಸಕ್ತಿ ಇರಲಿದೆ. ವಿದ್ಯಾಭ್ಯಾಸಕ್ಕೆ ನಿಮಗೆ ಸಮಯದ ಅಭಾವವು ಕಾಣಲಿದ್ದು ಭವಿಷ್ಯವನ್ನು ಕಂಡು ನಿಮಗೆ ಚಿಂತೆಯಾಗುವುದು. ತಾಯಿಯ ಸೇವೆಯನ್ನು ನೀವು ಮಾಡುವಿರಿ. ಸ್ವಲ್ಪ ಅನಾರೋಗ್ಯವು ನಿಮ್ಮನ್ನು ಬಾಧಿಸೀತು. ದುರಭ್ಯಾಸದತ್ತ ಮನವು ಒಲಿಯಬಹುದು. ಎಚ್ಚರವಿರಲಿ.
ಕನ್ಯಾ: ಸಾಮಾಜಿಕವಾಗಿ ಕಾರ್ಯಗಳಿಗೆ ನಿಮ್ಮ ಸ್ವಂತ ಹಣವನ್ನು ಖರ್ಚು ಮಾಡುವಿರಿ. ಮನೆಯಲ್ಲಿ ನಿಮ್ಮ ಕೆಲಸಗಳಿಗೆ ವಿರೋಧ ಬರಬಹುದು. ಮನೆಯವರ ಆರೋಗ್ಯವನ್ನೂ ನೋಡುಕೊಳ್ಳುವ ಜವಾಬ್ದಾರಿ ಇರಲಿದೆ. ಅಪಮಾನವನ್ನು ಧೈರ್ಯದಿಂದ ಎದುರಿಸಲು ಮುಂದಾಗಿ. ತಿಳಿವಳಿಕೆಯ ವಿಚಾರದಲ್ಲಿ ನಿಮಗೆ ಮುಜುಗರ ಆಗಬಹುದು. ನಿಮ್ಮ ವೃತ್ತಿಯನ್ನು ಪ್ರೀತಿಸಿ. ಅದು ನಿಮಗೆ ಅನೇಕ ಅನುಕೂಲತೆಗಳನ್ನು ಮಾಡಿಕೊಡುವುದು. ಸಿಕ್ಕ ಅವಕಾಶಗಳನ್ನು ಬಿಟ್ಟುಕೊಡುವ ಮೊದಲು ಯೋಚಿಸಿ. ಸಾಧ್ಯವಾದಷ್ಟು ಇಂದು ನಿಮ್ಮ ಸಮಯವು ವ್ಯರ್ಥವಾಗದಂತೆ ನೋಡಿಕೊಳ್ಳಿ.
ತುಲಾ: ಪ್ರತ್ಯೇಕತೆಯನ್ನು ನೀವು ಬಯಸುವಿರಿ. ಏಕಾಂತವು ನಿಮಗೆ ಇಂದು ಬಹಳ ಪ್ರಿಯವಾಗುವುದು. ಆರ್ಥಿಕ ಅಭಿವೃದ್ಧಿಯಿಂದ ನಿಮಗೆ ಸಂತೋಷವಾಗುವುದು. ದಾಂಪತ್ಯ ಜೀವನವನ್ನು ಆನಂದಿಸುವಿರಿ. ಸ್ನೇಹಿತ ಜೊತೆ ಆಪ್ತವಾಗಿ ಕಾಲವನ್ನು ಕಳೆಯಲಿದಗದೀರಿ. ಗೌರವಕ್ಕೆ ಚ್ಯುತಿ ಬರುವ ಕೆಲಸಗಳತ್ತ ನಿಮ್ಮ ಗಮನ ಕಡಿಮೆ ಇರಲಿ. ಖರ್ಚುಗಳಿಗೆ ನಿರ್ದಿಷ್ಟತೆ ಇರಲಿ. ಚಂಚಲವಾದ ಮನಸ್ಸಿನಿಂದ ಏನನ್ನೂ ಮಾಡಲು ಹೋಗುವುದು ಬೇಡ. ನಿಮ್ಮ ಬಗ್ಗೆ ನೀವೇ ಕೇಳಿಕೊಳ್ಳುವುದು ಅಗತ್ಯವಾಗಬಹುದು. ಇನ್ನೊಬ್ಬರ ಟೀಕೆಯನ್ನು ಸಮಾನಮನಃಸ್ಥಿತಿಯಿಂದ ಪಡೆಯುವಿರಿ.
ವೃಶ್ಚಿಕ: ಉದ್ಯೋಗದಲ್ಲಿ ಬಡ್ತಿಯು ಸಿಗುವ ನಿರೀಕ್ಷೆಯಲ್ಲಿ ಇರುವಿರಿ. ಹೆಚ್ಚಿನ ಸ್ಥಾನವನ್ನು ನೀವು ಬಯಸಲಿದ್ದೀರಿ. ಕೊರತೆಯನ್ನು ಸರಿಮಾಡಿಕೊಳ್ಳುವಿರಿ. ಭಾಷೆಯಲ್ಲಿ ನಿಮಗೆ ತೊಂದರೆ ಕಾಣಿಸುವುದು. ನಿಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿ ಮುಗಿಸುವಿರಿ. ಕಾರ್ಯಸಾಧನೆಗೆ ಹೆಚ್ಚು ಓಡಾಟವನ್ನು ಮಾಡುವಿರಿ. ಆಗದ ಕೆಲಸಕ್ಕೆ ನೀವು ಹೆಚ್ಚು ಪ್ರಯಾಸಪಡುವಿರಿ. ಇನ್ನೊಬ್ಬರನ್ನು ಟೀಕಿಸುವುದು ನಿಮಗೆ ಶೋಭೆ ತರದು. ಹಿರಿಯರ ಕಿವಿಮಾತಿನ ಮೇಲೆ ಲಕ್ಷ್ಯವಿರಲಿ. ನಿಮ್ಮ ವಸ್ತುಗಳ ಮೇಲೆ ಅಧಿಕ ಮೋಹವು ಉಂಟಾಗಬಹುದು. ಸಮಯಕ್ಕೆ ಆಗಬೇಕಾದುದು ಆಗುವುದು.
ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ