Horoscope Today: ದಿನಭವಿಷ್ಯ, ಈ ರಾಶಿಯವರ ವ್ಯಾಪರದಲ್ಲಿ ನಷ್ಟವಾಗಲಿದೆ, ತಾಳ್ಮೆಯಿಂದ ಇದ್ದು ಇದನ್ನು ಮುಂದುವರಿಸಿ
ಸಿಂಹ, ಕನ್ಯಾ, ತುಲ, ವೃಶ್ಚಿಕ ರಾಶಿಯವರ ಜುಲೈ 26 ಬುಧವಾರದ ಭವಿಷ್ಯದ ಮಾಹಿತಿ ಇಲ್ಲಿದೆ. ಅಪರಿಚಿತರ ಮಧುರವಾದ ಮಾತಿಗೆ ಮನಸೋತು ಮೋಸ ಹೋಗುವ ಸಾಧ್ಯತೆ ಇರುವುದರಿಂದ ಸಿಂಹ ರಾಶಿಯವರು ಎಚ್ಚರವಾಗಿರಬೇಕು.
ಇಂದಿನ ನಿಮ್ಮ ರಾಶಿ ಭವಿಷ್ಯ (Daily horoscope) ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಹೀಗೆ ಎಲ್ಲವನ್ನು ತಿಳಿದುಕೊಳ್ಳುತ್ತಾರೆ. ಜೊತೆಗೆ ಪಂಚಾಗವನ್ನು ಸಹ ಓದುತ್ತಾರೆ. ಹಾಗಾದರೆ ಇಂದಿನ (2023 ಜುಲೈ 26) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.
ನಿತ್ಯಭವಿಷ್ಯ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಕರ್ಕಾಟಕ ಮಾಸ, ಮಹಾನಕ್ಷತ್ರ: ಪುಷ್ಯಾ, ಮಾಸ: ಅಧಿಕ ಶ್ರಾವಣ, ಪಕ್ಷ: ಶುಕ್ಲ, ವಾರ: ಬುಧ, ತಿಥಿ: ನವಮೀ, ನಿತ್ಯನಕ್ಷತ್ರ: ವಿಶಾಖಾ, ಯೋಗ: ಸಾಧ್ಯ, ಕರಣ: ಬವ, ಸೂರ್ಯೋದಯ ಬೆಳಗ್ಗೆ 06 ಗಂಟೆ 15 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 07 ಗಂಟೆ 02 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 12:39 ರಿಂದ 02:15ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 07:51 ರಿಂದ 09:27ರ ವರೆಗೆ, ಗುಳಿಕ ಕಾಲ ಬೆಳಗ್ಗೆ 11:03 ರಿಂದ ಮಧ್ಯಾಹ್ನ 12:39ರ ವರೆಗೆ.
ಸಿಂಹ: ವ್ಯಾಪರವು ನಷ್ಟವಾಗಲಿದೆ. ತಾಳ್ಮೆಯಿಂದ ಇದ್ದು ಇದನ್ನು ಮುಂದುವರಿಸಿ. ಒತ್ತಡಕ್ಕೆ ಮಣಿದು ನಿಮ್ಮ ಕೆಲಸ ಹಾಗೂ ನಿರ್ಧಾರವನ್ನು ಬಯಸುವಿರಿ. ವಿದೇಶವನ್ನು ಸುತ್ತುವ ಮನಸ್ಸಾಗುವುದು. ದೇಹವನ್ನು ದಂಡಿಸಬೇಕಾಗುವುದು. ಆಯಾಸದಂತೆ ನಿಮಗೆ ಅನ್ನಿಸೀತು. ಅಪರಿಚಿತರ ಮಧುರವಾದ ಮಾತಿಗೆ ಮನಸೋತು ಮೋಸ ಹೋಗಬಹುದು. ಕಷ್ಟವೆಂದು ಸಿಕ್ಕ ಕೆಲಸವನ್ನು ಬಿಡುವ ಸಾಧ್ಯತೆ ಇದೆ. ನಿಮ್ಮಲ್ಲಿ ಕ್ಷಮೆಯನ್ನು ಕೇಳಬಹುದು. ನೆಮ್ಮದಿಗಾಗಿ ದೇವಾಲಯಕ್ಕೆ ಹೋಗಬಹುದು. ನಿಮ್ಮ ನಿರೀಕ್ಷೆಯಲ್ಲಿ ಕೆಲವು ಫಲಿಸಬಹುದು. ಅನಾಯಾಸವಾಗಿ ಫಲವನ್ನು ಪಡೆಯಲು ಬಯಸುವುದು ಸರಿಯಲ್ಲ.
ಕನ್ಯಾ: ಶತ್ರಗಳು ನಿಮ್ಮ ವ್ಯಕ್ತತ್ವಕ್ಕೆ ಕಳಂಕದ ಮಸಿ ಬಳಿಯಬಹುದು. ಬೆನ್ನು ನೋವು ನಿಮ್ಮ ಯಾವ ಕೆಲಸವನ್ನೂ ಮಾಡಲು ಕೊಡದು. ಉದ್ಯೋಗಕ್ಕೆ ವಿರಾಮ ಹೇಳಿ ಹೊರಗೆ ಸುತ್ತಾಟವನ್ನು ಮಾಡಲಿದ್ದೀರಿ. ಎಲ್ಲ ಕಾರ್ಯವನ್ನೂ ನೀವೇ ಮಾಡಬೇಕು ಎಂಬ ಅತಿಯಾದ ಆಸೆ ಬೇಡ. ಮೋಜಿಗಾಗಿ ಹಣವನ್ನು ಖರ್ಚು ಮಾಡುವಿರಿ. ಕೂಡಿಟ್ಟ ಹಣವನ್ನು ನೀವು ಇಂದು ಬಿಡಿಸಿಕೊಳ್ಳುವಿರಿ. ಸಂಗಾತಿಯ ಜೊತೆ ಹಳೆ ವಿಚಾರಗಳನ್ನು ಮಾತನಾಡುವಿರಿ. ಇದರಿಂದ ಜಗಳವೇ ಆದೀತು. ವಿಶ್ರಾಂತಿಯನ್ನು ಹೆಚ್ಚು ಬಯಸುವಿರಿ.
ತುಲಾ: ಒಂದೇ ಕೆಲಸದಲ್ಲಿ ಮಗ್ನರಾಗಿ ಮಾಡಬೇಕಾದ ಕೆಲಸವನ್ನು ಮರೆಯಬಹುದು. ಸ್ನೇಹಿತರ ಜೊತೆ ಪ್ರವಾಸಕ್ಕೆ ಹೋಗುವ ಮನಸ್ಸಾಗುವುದು. ಹೊಸ ವಸ್ತುಗಳು ನಿಮಗೆ ಖುಷಿಯನ್ನು ಕೊಟ್ಟೀತು. ಮಕ್ಕಳಿಗೆ ನಿಮ್ಮಿಂದ ಪ್ರೋತ್ಸಾಹ ಸಿಗಬಹುದು. ವೃತ್ತಿಯಲ್ಲಿ ನಿಮ್ಮನ್ನು ಗುರುತಿಸುವರು. ಯಶಸ್ಸನ್ನು ಗಳಿಸುವಿರಿ. ದಾಂಪತ್ಯದಲ್ಲಿ ಅಸಹಜ ಮಾತುಕತೆಗಳು ಕಿರಿಕಿರಿಯನ್ನು ತಂದೀತು. ಶುಭ ಸಮಾಚಾರದ ನಿರೀಕ್ಷೆಯಲ್ಲಿ ನೀವು ಇರುವಿರಿ. ಕರ್ತವ್ಯದಲ್ಲಿ ನೀವು ಇಂದು ನಿರತರಾಗಿರುವಿರಿ.
ವೃಶ್ಚಿಕ: ಹೂಡಿಕೆಯನ್ನು ಮಾಡಿ ಹೊಸ ಚಿಂತೆಯನ್ನು ತಂದುಕೊಳ್ಳುವಿರಿ. ಇಷ್ಟ ಮಿತ್ರರ ಜೊತೆ ಸಮಯವನ್ನು ಕಳೆಯುವಿರಿ. ವಿವಾಹಕ್ಕೆ ಸಂಬಂಧಿಸಿದಂತೆ ಮಾತುಕತೆಗಳು ನಡೆಯಲಿವೆ. ಅಶುಭವಾದ ಕೆಲಸಕ್ಕೆ ಹಣವನ್ನು ನೀಡುವಿರಿ. ಬಂಧುಗಳ ಮಾತು ನಿಮ್ಮ ಸಿಟ್ಟಿಗೆ ಕಾರಣವಾಗಬಹುದು. ನಿರಂತರ ಒಂದಲ್ಲ ಒಂದು ಕೆಲಸದಲ್ಲಿ ನೀವು ಮಗ್ನರಾಗಿರುವಿರಿ. ಕೃಷಿ ಚಟುವಟಿಕೆಯಲ್ಲಿ ಉತ್ಸಾಹದಿಂದ ಭಾಗಬಹಿಸುವಿರಿ. ನಿಮಗೆ ಬರಬೇಕಾದ ಹಣವನ್ನು ಕೇಳಿ ಪಡೆಯುವಿರಿ. ಸಂತಾನಕ್ಕೆ ಸಂಬಂಧಿಸಿದಂತೆ ವೈದ್ಯರನ್ನು ಭೇಟಿ ಮಾಡಿ. ನಿಮ್ಮ ಸ್ಥಾನವನ್ನು ನೀವು ಬಿಟ್ಟಕೊಡುವಿರಿ.
-ಲೋಹಿತಶರ್ಮಾ (ವಾಟ್ಸ್ಆ್ಯಪ್ 8762924271)