Horoscope: ದಿನಭವಿಷ್ಯ; ಹಣಕಾಸಿನ ವ್ಯವಹಾರದಲ್ಲಿ ಮಿತ್ರರ ಜೊತೆ ಕಲಹ, ನೀವಾಡುವ ಸುಳ್ಳು ಎಲ್ಲರಿಗೂ ಗೊತ್ತಾಗಬಹುದು
ಒಂದಷ್ಟು ಮಂದಿ ಪ್ರತಿನಿತ್ಯ ತಮ್ಮ ಭವಿಷ್ಯ ನೋಡುತ್ತಾರೆ. ಹಾಗಿದ್ದರೆ, ನೀವು ಮೇಷ, ವೃಷಭ, ಮಿಥುನ, ಕಟಕ ರಾಶಿಯವರಾಗಿದ್ದರೇ, 03 ಮಾರ್ಚ್ 2024ರ ನಿಮ್ಮ ರಾಶಿಭವಿಷ್ಯ ಹೇಗಿದೆ? ನಿಮಗೆ ಶುಭ ಅಥವಾ ಅಶುಭ ದಿನವಾ? ಇಂದಿನ ಭವಿಷ್ಯದಲ್ಲಿ ನಿವು ಲಾಭದ ನಿರೀಕ್ಷೆ ಮಾಡಬಹುದಾ? ಎಂಬಿತ್ಯಾದಿ ಮಾಹಿತಿಗಳನ್ನು ಇಂದಿನ ರಾಶಿಭವಿಷ್ಯದಿಂದ ತಿಳಿದುಕೊಳ್ಳಿ.
ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ, ಇಂದಿನ (ಮಾರ್ಚ್ 03) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.
ನಿತ್ಯ ಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಕುಂಭ ಮಾಸ, ಮಹಾನಕ್ಷತ್ರ: ಶತಭಿಷಾ, ಮಾಸ: ಮಾಘ, ಪಕ್ಷ: ಕೃಷ್ಣ, ವಾರ: ಭಾನು, ತಿಥಿ: ಅಷ್ಟಮೀ, ನಿತ್ಯನಕ್ಷತ್ರ: ಜ್ಯೇಷ್ಠಾ, ಯೋಗ: ಹರ್ಷಣ, ಕರಣ: ಭದ್ರ, ಸೂರ್ಯೋದಯ ಬೆಳಗ್ಗೆ 06 ಗಂಟೆ 49 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 40 ನಿಮಿಷಕ್ಕೆ, ರಾಹು ಕಾಲ ಬೆಳಿಗ್ಗೆ 05:11 ರಿಂದ 06:40ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 12:45 ರಿಂದ 02:13ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 03:42 ರಿಂದ 06:11ರ ವರೆಗೆ.
ಮೇಷ ರಾಶಿ: ನಿಮ್ಮ ವೃತ್ತಿ ಪರಿಸ್ಥಿತಿಗಳು ಉತ್ತಮವಾಗುತ್ತಿರುತ್ತದೆ. ಅಡೆತಡೆಗಳು ಕೆಲವು ಸಮಯದ ಅನಂತರ ಸರಿಯಾಗುವುದು. ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಅಹಂಕಾರವನ್ನು ಮುನ್ನೆಲೆಗೆ ತರಬಾರದು. ವ್ಯಾಪಾರ ಪಾಲುದಾರರೊಂದಿಗೆ ವಿವಾದದ ಸಾಧ್ಯತೆಯಿದೆ. ಹೆಚ್ಚಿನ ವಿವಾದಗಳು ಲೆಕ್ಕಪತ್ರ ನಿರ್ವಹಣೆಗೆ ಸಂಬಂಧಿಸಿವೆ. ಸಮಯದ ಹೊಂದಾಣಿಕೆಯನ್ನು ಮಾಡಿಕೊಳ್ಳಲು ನಿಮಗೆ ಕಷ್ಡವಸದೀತು. ಆರೋಗ್ಯ ಬಗ್ಗೆ ಗಮನವು ಕಡಿಮೆಯಾದಂತೆ ತೋರುವುದು. ಆರ್ಥಿಕಮೂಲವನ್ನು ಸರಿಯಾಗಿಸಿಕೊಳ್ಳುವುದು ಉತ್ತಮ. ಮಕ್ಕಳಿಗೆ ನಿಮ್ಮಿಂದ ಮಾರ್ಗದರ್ಶನದ ಅವಶ್ಯಕತೆ ಇರಬಹುದು. ಸಮಯಕ್ಕೆ ಆಗುವ ಕೆಲಸವು ಸಮಯದ ಮಿತಿಯನ್ನು ಮೀರಬಹುದು. ಅಪರಿತ ಕರೆಗಳಿಂದ ನಿಮಗೆ ಸಂಕಟವಾಗಬಹುದು. ಇಂದಿನ ಆಲಸ್ಯವು ನಿಮಗೆ ಯಾವ ಕೆಲಸಗಳಿಗೂ ಉತ್ಸಾಹವೇ ಇರದು. ನಿಮ್ಮವರ ಆರೋಗ್ಯವು ಹದ ತಪ್ಪಿಹೋಗಬಹುದು. ಶತ್ರುಗಳ ಭಯವು ಕಾರ್ಯವನ್ನು ನಿಧಾನ ಮಾಡಿಸುವುದು.
ವೃಷಭ ರಾಶಿ: ಚಿಂತೆಗಳನ್ನು ಮರೆತು ದಿನವನ್ನು ಹೊಸದಾಗಿ ಪ್ರಾರಂಭಿಸಬೇಕು. ನೀವು ಮಾಡುವ ಕಾರ್ಯದ ಮೇಲೆ ಹೆಚ್ಚು ಗಮನಹರಿಸಿದರೆ ಅದು ಉತ್ತಮವಾಗಿರುತ್ತದೆ. ವ್ಯಾಪಾರಸ್ಥರ ಆರ್ಥಿಕ ಸ್ಥಿತಿ ಸುಧಾರಿಸಲಿದೆ. ಸೋಮಾರಿತನದಿಂದ ದೂರವಿರಬೇಕು. ಅವರು ಕಷ್ಟಪಟ್ಟು ಕೆಲಸ ಮಾಡಿದರೆ ಉತ್ತಮ ಫಲ ಸಿಗುತ್ತದೆ. ಆರ್ಥಿಕತೆಯು ಸಮೃದ್ಧವಾಗಿದ್ದರೂ ಸರಿಯಾಗಿ ವಿನಿಯೋಗಿಸುವ ಬಗ್ಗೆ ಅನುಭವ, ತಿಳಿವಳಿಕೆ ಸಾಲದು. ಕಳೆದುಕೊಂಡ ಮನೆಯ ಸದಸ್ಯರ ಬಗ್ಗೆ ನೆನಪು ಬರಬಹುದು. ಹೊಸ ಬಗೆಯಲ್ಲಿ ಯೋಚಿಸುವ ಸ್ವಭಾವವನ್ನು ಬೆಳೆಸಿಕೊಳ್ಳುವಿರಿ. ಪುಣ್ಯಸ್ಥಳಗಳ ಭೇಟಿಯಿಂದ ಖುಷಿಯಾಗುವುದು. ಸಾಹಿತ್ಯ ಆಸಕ್ತರಿಗೆ ಉತ್ತಮ ಅವಕಾಶಗಳು ಸಿಗುವುದು. ಸ್ವಂತ ವಾಹನದ ದುರಸ್ತಿಯಿಂದ ಧನ ನಷ್ಟ. ನಿಮ್ಮ ಸಲಹೆಯನ್ನು ಕೇಳದಿರುವುದು ಇಷ್ಟವಾಗದು. ಸುತ್ತಾಡದಿಂದ ಆಯಾಸವಾಗುವುದು. ನೌಕರರು ನಿಮ್ಮ ಮೇಲೆ ಸಿಟ್ಟಾಗಬಹುದು.
ಮಿಥುನ ರಾಶಿ: ಸಮಯಕ್ಕೆ ಸರಿಯಾಗಿ ಕೆಲಸವನ್ನು ಪೂರ್ಣಗೊಳಿಸುವ ಮೂಲಕ ನಂಬಿಕೆ ಗಳಿಸುವಿರಿ. ಉದ್ಯಮಿಗಳ ಮುಂದೆ ವ್ಯಾಪಾರದ ಕೆಲಸದ ಹೊರೆ ಹೆಚ್ಚಾಗಬಹುದು, ಅವರು ಸಾಮರಸ್ಯದಿಂದ ಕೆಲಸ ಮಾಡಬೇಕು. ವಿದ್ಯಾರ್ಥಿ ವರ್ಗವು ಅಧ್ಯಯನ ಮತ್ತು ವಿರಾಮ ಎರಡನ್ನೂ ಸಮತೋಲನಗೊಳಿಸುವುದರ ಮೂಲಕ ಮುಂದುವರಿಯುವುದು ಉತ್ತಮ. ಕೆಲವರ ಬಗ್ಗೆ ಹರಟುವ ಮನಸ್ಸಾದೀತು. ಜವಾಬ್ದಾರಿಯ ಕೆಲಸವನ್ನು ಜಾಗರೂಕತೆಯಿಂದ ಮಾಡಿ. ದಾಂಪತ್ಯದ ಕಲಹವು ಮುಕ್ತಾಯವಾಗುವುದು. ವಿದ್ಯಾರ್ಥಿಗಳು ಉನ್ನತ ವಿದ್ಯಾಭ್ಯಾಸದಲ್ಲಿ ಉತ್ತಮಫಲಿತಾಂಶವನ್ನು ಪಡೆಯುವರು. ಆಕಸ್ಮಿಕ ಧನಲಾಭದಿಂದ ನಿಮಗೆ ಖುಷಿಯಾಗುವುದು. ಹಿರಿಯರ ಬಗ್ಗೆ ನಿಮಗೆ ಪೂಜ್ಯ ಭಾವವು ಬರಬಹುದು. ನಿಮ್ಮವರ ಧನ ಸಹಾಯವನ್ನು ಕೇಳಲು ಮುಜುಗರವಾದೀತು. ಅನ್ಯ ಚಿಂತೆಯಿಂದ ನಿದ್ರೆಗೆ ಭಂಗ. ಅನವಶ್ಯಕ ಮಾತುಗಳಿಂದ ವಿವಾದವಾಗುವುದು.
ಕಟಕ ರಾಶಿ: ಇಂದು ಕೆಲಸದ ಹೊರೆಯಿಂದಾಗಿ ಹೆಚ್ಚಿನ ಸಮಯವನ್ನು ಕಳೆದುದು ಗೊತ್ತಾಗದೇ ಹೋಗಬಹುದು ಬರವಣಿಗೆಗೆ ಸಂಬಂಧಿಸಿದ ಜನರಿಗೆ ದಿನವು ತುಂಬಾ ಒಳ್ಳೆಯದು ಎಂದು ಸಾಬೀತುಪಡಿಸುತ್ತದೆ. ವ್ಯಾಪಾರಿಗಳು ಇಂದು ವ್ಯವಹಾರದಲ್ಲಿ ಸವಾಲನ್ನು ಎದುರಿಸಬೇಕಾಗುತ್ತದೆ. ವ್ಯವಹಾರದಲ್ಲಿ ಸವಾಲುಗಳು ಬರುತ್ತಲೇ ಇರುತ್ತವೆ. ಅವುಗಳಿಗೆ ಏಕೆ ಭಯಪಡಬೇಕು. ಯುವಕರು ಕಷ್ಟವನ್ನು ಕಂಡು ಕೈಬಿಡದೆ ಪೂರ್ಣ ಉತ್ಸಾಹ ಮತ್ತು ಶಕ್ತಿಯಿಂದ ಕೆಲಸ ಮಾಡಬೇಕು. ಮನಶ್ಚಾಂಚಲ್ಯವನ್ನು ದೂರಮಾಡಿಕೊಳ್ಳುವುದು ಅನಿವಾರ್ಯವಾಗುವುದು. ನೀವಾಡುವ ಸುಳ್ಳು ಎಲ್ಲರಿಗೂ ಗೊತ್ತಾದೀತು. ನಿದ್ರೆಯಿಂದ ಆಲಸ್ಯವು ಹೆಚ್ಚಾಗುವುದು. ಹಣಕಾಸಿನ ವ್ಯವಹಾರದಲ್ಲಿ ಮಿತ್ರರ ಜೊತೆ ಕಲಹವಾಗಬಹುದು. ಸಂಗಾತಿಯಿಂದ ಬಲವಂತವಾಗಿ ಉಡುಗೊರೆ ಪಡೆಯುವಿರಿ. ಸ್ತ್ರೀಯರಿಗೆ ಇಂದು ಸಂತೋಷದ ದಿನ. ಎಲ್ಲರೆದುರೂ ಸಿಟ್ಟಿನಿಂದ ಕೂಗಾಡುವುದು ಬೇಡ.