AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Horoscope: ನಿಮ್ಮವರ ಮೇಲೆ ನೀವು ಇಟ್ಟ ನಂಬಿಕೆಯು ಹುಸಿಯಾಗುವುದು

ಇಲ್ಲಿ ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ,  ನೀವು ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರಾಗಿದ್ದರೆ. ಇಂದಿನ (ಮಾರ್ಚ 03) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.

Horoscope: ನಿಮ್ಮವರ ಮೇಲೆ ನೀವು ಇಟ್ಟ ನಂಬಿಕೆಯು ಹುಸಿಯಾಗುವುದು
ದಿನ ಭವಿಷ್ಯ
TV9 Web
| Edited By: |

Updated on: Mar 03, 2024 | 12:30 AM

Share

ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ, ಇಂದಿನ (ಮಾರ್ಚ್​​​​​ 03) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.

ನಿತ್ಯ ಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಕುಂಭ ಮಾಸ, ಮಹಾನಕ್ಷತ್ರ: ಶತಭಿಷಾ, ಮಾಸ: ಮಾಘ, ಪಕ್ಷ: ಕೃಷ್ಣ, ವಾರ: ಭಾನು, ತಿಥಿ: ಅಷ್ಟಮೀ, ನಿತ್ಯನಕ್ಷತ್ರ: ಜ್ಯೇಷ್ಠಾ, ಯೋಗ: ಹರ್ಷಣ, ಕರಣ: ಭದ್ರ, ಸೂರ್ಯೋದಯ ಬೆಳಗ್ಗೆ 06 ಗಂಟೆ 49 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 40 ನಿಮಿಷಕ್ಕೆ, ರಾಹು ಕಾಲ ಸಾಯಂಕಾಲ 05:11 ರಿಂದ 06:40ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 12:45 ರಿಂದ 02:13ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 03:42 ರಿಂದ 05:11ರ ವರೆಗೆ.

ಸಿಂಹ ರಾಶಿ : ವ್ಯಾವಹಾರಿಕೆ ಚಿಂತೆಗಳನ್ನು ನೀವು ಮನೆಗೆ ಕೊಂಡೊಯ್ಯಬೇಡಿ. ಉದ್ಯಮಿಗಳು ಎಲ್ಲ ಖಾತೆಗಳನ್ನು ಬಲವಾಗಿ ಇಟ್ಟುಕೊಳ್ಳಬೇಕು, ಇದ್ದಕ್ಕಿದ್ದಂತೆ ವೆಚ್ಚಗಳು ಹೆಚ್ಚಾಗುತ್ತವೆ. ಹಿಂದಿನ ದಿನಗಳ ಪ್ರಯತ್ನಗಳು ವ್ಯವಹಾರದಲ್ಲಿ ಲಾಭವನ್ನು ತರುತ್ತವೆ. ಕೌಟುಂಬಿಕ ವಿಚಾರದಲ್ಲಿ ನ್ಯಾಯ ಕೊಡುವಾಗ ಯಾವುದೇ ಪಕ್ಷ ತೆಗೆದುಕೊಳ್ಳದೆ ನ್ಯಾಯಯುತ ತೀರ್ಪು ನೀಡಿ. ಎಲ್ಲದಕ್ಕೂ ನಿಮ್ಮನ್ನೇ ಬೊಟ್ಟುಮಾಡಿ ತೋರಿಸಬಹುದು. ಮೇಲಧಿಕಾರಿಗಳನ್ನು ನಿಮ್ಮತ್ತ ಸೆಳೆಯುವ ತಂತ್ರವು ಫಲಿಸೀತು. ಉನ್ನತ ವಿದ್ಯಾಭ್ಯಾಸಕ್ಕೆ ಮಕ್ಕಳಿಗೆ ಹಣವನ್ನು ಹೊಂದಿಸಬೇಲಾಗವುದು. ನಿಮಗೆ ಕರಗತವಾದ ವಿದ್ಯೆಯನ್ನು ಪ್ರದರ್ಶಿಸುವಿರಿ. ನಿಮ್ಮ ಒರಟು ಸ್ವಭಾವವು ಇಷ್ಟವಾಗದೇ ಹೋಗಬಹುದು. ಸುಮ್ಮನೇ ಒಂಟಿಯಾಗಿ ಇದ್ದು ಹತ್ತಾರು ಯೋಚನೆಗಳು ಬರಬಹುದು. ಬಂಧುಗಳಿಂದ‌ ಉಡುಗೊರೆ ಸಿಗಲಿದೆ. ಲೆಕ್ಕಶೋಧಕರಿಗೆ ಒತ್ತಡವು ಅಧಿಕವಾಗಿರುವುದು.

ಕನ್ಯಾ ರಾಶಿ : ಯಾವುದೇ ಸಮಸ್ಯೆಯ ಬಗ್ಗೆ ನಿರಾಶೆಗೊಳ್ಳುವ ಬದಲು ತಮ್ಮ ಪ್ರಯತ್ನವನ್ನು ಬದಲಿಸಿ. ಮಾರ್ಗವು ಕಂಡುಬರುತ್ತದೆ. ಚಿಲ್ಲರೆ ವ್ಯಾಪಾರಿಗಳ ಲಾಭದಲ್ಲಿ ಹೆಚ್ಚಳ ಕಂಡುಬರುತ್ತದೆ. ಇಂದು ಬಹಳ ಶುಭಕರವಾಗಿದೆ ಮತ್ತು ಸಂಶೋಧನಾ ಕಾರ್ಯದಲ್ಲಿ ತೊಡಗಿರುವ ಯುವಕರಿಗೆ ಉತ್ತಮ ಫಲಿತಾಂಶಗಳನ್ನು ನೀಡುತ್ತದೆ. ಹೊಸ ಗೆಳೆತನವು ಖುಷಿಕೊಟ್ಟರೂ ಪೂರ್ಣವಾಗಿ ನಂಬಲು ಆಗದು. ಆಕಸ್ಮಿಕವಾಗಿ ಸಮ್ಮಾನವು ಸಿಗಬಹುದು. ಕುಟುಂಬದಲ್ಲಿ ಧಾರ್ಮಿಕ ಕಾರ್ಯವನ್ನು ಮಾಡುವ ಮನಸ್ಸಿದ್ದರೂ ಉಳಿದವರ ಒಪ್ಪಿಗೆ ಸಿಗದೇ ಇರಬಹುದು. ಉದ್ಯಮಕ್ಕೆ ಬೇಕಾದ ಕಾನೂನಿನ ಭದ್ರತೆಯನ್ನು ಪಡೆದುಕೊಳ್ಳಿ. ಕೆಲವು ಘಟನೆಗಳಿಗೆ ಮನಸ್ಸು ಚಂಚಲವಾಗಬಹುದು.‌ ಸ್ಪರ್ಧೆಯಲ್ಲಿ ಸೋಲಾಗುವ ಸಾಧ್ಯತೆ ಇದೆ. ಆರ್ಥಿಕತೆಯ ಬಗ್ಗೆ ಎಷ್ಟೇ ಜಾಗರೂಕತೆ ಇದ್ದರೂ ಸಾಲದು. ಮಹಿಳೆಯರು ಸ್ವ ಉದ್ಯಮದಿಂದ ಲಾಭವನ್ನು ಮಾಡಿಕೊಳ್ಳುವರು. ಪ್ರೀತಿಯು ಅಪನಂಬಿಕೆಯಿಂದ ನಾಶವಾಗಬಹುದು.

ತುಲಾ ರಾಶಿ : ಕೆಲಸದಲ್ಲಿ ನಿರ್ಲಕ್ಷ್ಯ ಮಾಡಬಾರದು ಎಂಬುದನ್ನು ನೆನಪಿನಲ್ಲಿಡಿ. ವ್ಯಾಪಾರದಲ್ಲಿ ಹಣದ ಕೊರತೆಯಿಂದ ವ್ಯಾಪಾರವು ಬಂಡವಾಳ ಹೂಡಿಕೆಯನ್ನು ಕೇಳುವುದರಿಂದ ಮನಸ್ಸು ಗೊಂದಲಕ್ಕೊಳಗಾಗುತ್ತದೆ, ಉದ್ಯಮಿಗಳಿಗೆ ಆರ್ಥಿಕ ನಷ್ಟದ ಸಾಧ್ಯತೆಯಿದೆ. ಸಮಸ್ಯೆಗೆ ಹೆದರಬೇಡಿ, ಆದರೆ ಧೈರ್ಯದಿಂದ ಎದುರಿಸಿ. ಹೀಗೆ ಮಾಡಿದರೆ ಮಾತ್ರ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಅಶುಭಕರ ವಾರ್ತೆಯನ್ನು ಕೇಳಬೇಕಾಗುವುದು. ವಿಶ್ವಾಸವನ್ನು ಗಳಿಸಲು ವಿವಿಧ ಪ್ರಯೋಗಗಳನ್ನು ಮಾಡುವಿರಿ. ಉದ್ಯೋಗದ ವಿಚಾರವನ್ನು ಬಹಳ ಗೌಪ್ಯವಾಗಿ ಇಡುವಿರಿ. ಸಲ್ಲದ ಮಾತನ್ನು ಹಿರಿಯರಿಗೆ ಹೇಳುವಿರಿ. ಅಹಂಕಾರವು ನಿಮ್ಮನ್ನು ಕೆಳಗೆ ದೂಡಬಹುದು. ಸರಳತೆಯನ್ನು ರೂಢಿಸಿಕೊಳ್ಳುವ ಬಗ್ಗೆ ಆಲೋಚನೆ ಇರಲಿ. ಅನಗತ್ಯಗಳ ಅಪೇಕ್ಷೆಯಿಂದ ಸಂಗಾತಿಯ ಸಂಪತ್ತನ್ನು ಖಾಲಿ‌ಮಾಡುವಿರಿ. ನಿಮ್ಮ ಮನಸ್ಸು ಕಾರ್ಯದಲ್ಲಿ ಮಗ್ನವಾಗಿ ಇರದು. ಆರಂಭಿಸಿದ ಉದ್ಯೋಗದಲ್ಲಿ ಯಾವ ವಿಘ್ನವೂ ಬಾರದಂತೆ ಪ್ರಾರ್ಥಿಸಿ. ನೌಕರರ ಬಗೆಗೆ ನಂಬಿಕೆ ಕಡಿಮೆಯಾಗುವುದು.

ವೃಶ್ಚಿಕ ರಾಶಿ : ನಿಮಗೆ ಗೊತ್ತಿಲ್ಲದೇ ಅಧಿಕಾರಿಯೊಂದಿಗೆ ವಾಗ್ವಾದ ಮಾಡುವಿರಿ. ಮಾಧ್ಯಮಗಳಿಗೆ ಸಂಬಂಧಿಸಿದವರು ಸಕ್ರಿಯರಾಗಿರಬೇಕು. ಹೊಸ ವ್ಯಾಪಾರಕ್ಕೆ ಸೇರುವುದನ್ನು ತಪ್ಪಿಸಿ ಮತ್ತು ಮಾಡುತ್ತಿರುವ ಕೆಲಸವನ್ನು ಸರಿಯಾಗಿ ಮಾಡಿ. ಮರದ ವ್ಯಾಪಾರಿಗಳು ನಿರೀಕ್ಷಿತ ಲಾಭ ಗಳಿಸಲು ಸಾಧ್ಯವಾಗುವುದಿಲ್ಲ. ನಿಮ್ಮ ಮೆಲುದನಿಯಿಂದ ಯಾವ ಕೆಲಸವೂ ಆಗದು. ಹಳೆಯ ನೋವಿನಿಂದ ಬಳಲುತ್ತಿದ್ದರೂ ಏನೂ ಆಗದವರಂತೆ ಕೆಲಸದಲ್ಲಿ ತೊಡಗಿಕೊಳ್ಳುವಿರಿ. ಪ್ರೀತಿಯಲ್ಲಿ ನಂಬಿಕೆ ಕಡಿಮೆ ಆಗಬಹುದು. ನಿರುಪಯುಕ್ತ ವಸ್ತುಗಳನ್ನು ದಾನರೂಪವಾಗಿ ಕೊಡುವಿರಿ. ನಿಮ್ಮ ಎಲ್ಲ ಕಾರ್ಯಗಳೂ ವಿಳಂಬವಾಗಿ ಅಧಿಕಾರಿಗಳಿಂದ ಹೇಳಿಸಿಕೊಳ್ಳುವಿರಿ. ಇಂದು ಸ್ತ್ರೀಯರು ಅಲಂಕಾರಲ್ಲಿ ಹೆಚ್ಚು ತೊಡಗಿಕೊಳ್ಳುವರು. ಮಾಡಿದ ತಪ್ಪಿನಿಂದ ಪಶ್ಚಾತ್ತಾಪ ಪಡುವಿರಿ. ಎಷ್ಟೇ ಪ್ರಯತ್ನಿಸಿದರೂ ಕೊಟ್ಟ ಹಣವು ನಿಮಗೆ ಸಿಗದು. ಅದರ ಆಸೆಯನ್ನು ಬಿಡುವಿರಿ. ನಿಮ್ಮವರ ಮೇಲೆ ನೀವು ಇಟ್ಟ ನಂಬಿಕೆಯು ಹುಸಿಯಾಗುವುದು.

ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ