Horoscope 03 Mar: ಬಟ್ಟೆ ವ್ಯಾಪಾರಿಗಳಿಗಿಂದು ನಿರಾಸೆ ಉಂಟಾಗಬಹುದು, ನಿರೀಕ್ಷೆಗೆ ತಕ್ಕಂತೆ ಮಾರಾಟ ಆಗದಿರಬಹುದು

Nitya Bhavishya: 2024 ಮಾರ್ಚ್​ 03ರ ಭಾನುವಾರದಂದು 12 ರಾಶಿಗಳ ರಾಶಿಫಲ ಹೇಗಿದೆ ಎನ್ನುವುದು ತಿಳಿದುಕೊಳ್ಳಿ. ಈ ದಿನ ಯಾರಿಗೆ ಯೋಗ, ಶುಭ ಸಂಯೋಗ, ಗ್ರಹಗಳ ಸ್ಥಾನ ಬದಲಾವಣೆಗಳಿಂದ ಮೇಷದಿಂದ ಮೀನ ರಾಶಿವರೆಗಿನ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಇಂದಿನ ಶುಭಕಾಲ ಹೇಗಿದೆ? ಯಾವ ರಾಶಿಯವರಿಗೆ ಅದೃಷ್ಟ ಕಾದಿದೆ. ಯಾವ ರಾಶಿಯವರು ಇಂದು ಜಾಗೃಕರಾಗಿರಬೇಕು ಎಂದು ನಿತ್ಯ ಭವಿಷ್ಯದಿಂದ ತಿಳಿಯಿರಿ.

Horoscope 03 Mar: ಬಟ್ಟೆ ವ್ಯಾಪಾರಿಗಳಿಗಿಂದು ನಿರಾಸೆ ಉಂಟಾಗಬಹುದು, ನಿರೀಕ್ಷೆಗೆ ತಕ್ಕಂತೆ ಮಾರಾಟ ಆಗದಿರಬಹುದು
ಪ್ರಾತಿನಿಧಿಕ ಚಿತ್ರ
Follow us
ಲೋಹಿತ ಹೆಬ್ಬಾರ್​, ಇಡುವಾಣಿ
| Updated By: ಗಂಗಾಧರ​ ಬ. ಸಾಬೋಜಿ

Updated on: Mar 03, 2024 | 12:02 AM

ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ, ಇಂದಿನ (ಮಾರ್ಚ್​​​​ 03) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.

ನಿತ್ಯ ಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಕುಂಭ ಮಾಸ, ಮಹಾನಕ್ಷತ್ರ: ಶತಭಿಷಾ, ಮಾಸ: ಮಾಘ, ಪಕ್ಷ: ಕೃಷ್ಣ, ವಾರ: ಭಾನು, ತಿಥಿ: ಅಷ್ಟಮೀ, ನಿತ್ಯನಕ್ಷತ್ರ: ಜ್ಯೇಷ್ಠಾ, ಯೋಗ: ಹರ್ಷಣ, ಕರಣ: ಭದ್ರ, ಸೂರ್ಯೋದಯ ಬೆಳಗ್ಗೆ 06 ಗಂಟೆ 49 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 40 ನಿಮಿಷಕ್ಕೆ, ರಾಹು ಕಾಲ ಬೆಳಿಗ್ಗೆ 05:11 ರಿಂದ 06:40ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 12:45 ರಿಂದ 02:13ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 03:42 ರಿಂದ 06:11ರ ವರೆಗೆ.

ಮೇಷ ರಾಶಿ: ನಿಮ್ಮ ವೃತ್ತಿ ಪರಿಸ್ಥಿತಿಗಳು ಉತ್ತಮವಾಗುತ್ತಿರುತ್ತದೆ. ಅಡೆತಡೆಗಳು ಕೆಲವು ಸಮಯದ ಅನಂತರ ಸರಿಯಾಗುವುದು. ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಅಹಂಕಾರವನ್ನು ಮುನ್ನೆಲೆಗೆ ತರಬಾರದು. ವ್ಯಾಪಾರ ಪಾಲುದಾರರೊಂದಿಗೆ ವಿವಾದದ ಸಾಧ್ಯತೆಯಿದೆ. ಹೆಚ್ಚಿನ ವಿವಾದಗಳು ಲೆಕ್ಕಪತ್ರ ನಿರ್ವಹಣೆಗೆ ಸಂಬಂಧಿಸಿವೆ. ಸಮಯದ ಹೊಂದಾಣಿಕೆಯನ್ನು ಮಾಡಿಕೊಳ್ಳಲು ನಿಮಗೆ ಕಷ್ಡವಸದೀತು. ಆರೋಗ್ಯ ಬಗ್ಗೆ ಗಮನವು ಕಡಿಮೆಯಾದಂತೆ ತೋರುವುದು. ಆರ್ಥಿಕಮೂಲವನ್ನು ಸರಿಯಾಗಿಸಿಕೊಳ್ಳುವುದು ಉತ್ತಮ. ಮಕ್ಕಳಿಗೆ ನಿಮ್ಮಿಂದ ಮಾರ್ಗದರ್ಶನದ ಅವಶ್ಯಕತೆ ಇರಬಹುದು. ಸಮಯಕ್ಕೆ ಆಗುವ ಕೆಲಸವು ಸಮಯದ ಮಿತಿಯನ್ನು ಮೀರಬಹುದು. ಅಪರಿತ ಕರೆಗಳಿಂದ ನಿಮಗೆ ಸಂಕಟವಾಗಬಹುದು. ಇಂದಿನ ಆಲಸ್ಯವು ನಿಮಗೆ ಯಾವ ಕೆಲಸಗಳಿಗೂ ಉತ್ಸಾಹವೇ ಇರದು. ನಿಮ್ಮವರ ಆರೋಗ್ಯವು ಹದ ತಪ್ಪಿಹೋಗಬಹುದು. ಶತ್ರುಗಳ ಭಯವು ಕಾರ್ಯವನ್ನು ನಿಧಾನ ಮಾಡಿಸುವುದು.

ವೃಷಭ ರಾಶಿ: ಚಿಂತೆಗಳನ್ನು ಮರೆತು ದಿನವನ್ನು ಹೊಸದಾಗಿ ಪ್ರಾರಂಭಿಸಬೇಕು. ನೀವು ಮಾಡುವ ಕಾರ್ಯದ ಮೇಲೆ ಹೆಚ್ಚು ಗಮನಹರಿಸಿದರೆ ಅದು ಉತ್ತಮವಾಗಿರುತ್ತದೆ. ವ್ಯಾಪಾರಸ್ಥರ ಆರ್ಥಿಕ ಸ್ಥಿತಿ ಸುಧಾರಿಸಲಿದೆ. ಸೋಮಾರಿತನದಿಂದ ದೂರವಿರಬೇಕು. ಅವರು ಕಷ್ಟಪಟ್ಟು ಕೆಲಸ ಮಾಡಿದರೆ ಉತ್ತಮ ಫಲ ಸಿಗುತ್ತದೆ. ಆರ್ಥಿಕತೆಯು ಸಮೃದ್ಧವಾಗಿದ್ದರೂ ಸರಿಯಾಗಿ ವಿನಿಯೋಗಿಸುವ ಬಗ್ಗೆ ಅನುಭವ, ತಿಳಿವಳಿಕೆ ಸಾಲದು. ಕಳೆದುಕೊಂಡ ಮನೆಯ ಸದಸ್ಯರ ಬಗ್ಗೆ ನೆನಪು ಬರಬಹುದು. ಹೊಸ ಬಗೆಯಲ್ಲಿ ಯೋಚಿಸುವ ಸ್ವಭಾವವನ್ನು ಬೆಳೆಸಿಕೊಳ್ಳುವಿರಿ. ಪುಣ್ಯಸ್ಥಳಗಳ ಭೇಟಿಯಿಂದ ಖುಷಿಯಾಗುವುದು. ಸಾಹಿತ್ಯ ಆಸಕ್ತರಿಗೆ ಉತ್ತಮ ಅವಕಾಶಗಳು ಸಿಗುವುದು. ಸ್ವಂತ ವಾಹನದ ದುರಸ್ತಿಯಿಂದ ಧನ ನಷ್ಟ. ನಿಮ್ಮ ಸಲಹೆಯನ್ನು ಕೇಳದಿರುವುದು ಇಷ್ಟವಾಗದು. ಸುತ್ತಾಡದಿಂದ ಆಯಾಸವಾಗುವುದು. ನೌಕರರು ನಿಮ್ಮ ಮೇಲೆ‌ ಸಿಟ್ಟಾಗಬಹುದು.

ಮಿಥುನ ರಾಶಿ: ಸಮಯಕ್ಕೆ ಸರಿಯಾಗಿ ಕೆಲಸವನ್ನು ಪೂರ್ಣಗೊಳಿಸುವ ಮೂಲಕ ನಂಬಿಕೆ ಗಳಿಸುವಿರಿ. ಉದ್ಯಮಿಗಳ ಮುಂದೆ ವ್ಯಾಪಾರದ ಕೆಲಸದ ಹೊರೆ ಹೆಚ್ಚಾಗಬಹುದು, ಅವರು ಸಾಮರಸ್ಯದಿಂದ ಕೆಲಸ ಮಾಡಬೇಕು. ವಿದ್ಯಾರ್ಥಿ ವರ್ಗವು ಅಧ್ಯಯನ ಮತ್ತು ವಿರಾಮ ಎರಡನ್ನೂ ಸಮತೋಲನಗೊಳಿಸುವುದರ ಮೂಲಕ ಮುಂದುವರಿಯುವುದು ಉತ್ತಮ. ಕೆಲವರ ಬಗ್ಗೆ ಹರಟುವ ಮನಸ್ಸಾದೀತು. ಜವಾಬ್ದಾರಿಯ ಕೆಲಸವನ್ನು ಜಾಗರೂಕತೆಯಿಂದ ಮಾಡಿ. ದಾಂಪತ್ಯದ ಕಲಹವು ಮುಕ್ತಾಯವಾಗುವುದು. ವಿದ್ಯಾರ್ಥಿಗಳು ಉನ್ನತ ವಿದ್ಯಾಭ್ಯಾಸದಲ್ಲಿ ಉತ್ತಮ‌ಫಲಿತಾಂಶವನ್ನು ಪಡೆಯುವರು. ಆಕಸ್ಮಿಕ ಧನಲಾಭದಿಂದ ನಿಮಗೆ ಖುಷಿಯಾಗುವುದು. ಹಿರಿಯರ ಬಗ್ಗೆ ನಿಮಗೆ ಪೂಜ್ಯ ಭಾವವು ಬರಬಹುದು. ನಿಮ್ಮವರ ಧನ ಸಹಾಯವನ್ನು ಕೇಳಲು ಮುಜುಗರವಾದೀತು. ಅನ್ಯ ಚಿಂತೆಯಿಂದ ನಿದ್ರೆಗೆ ಭಂಗ. ಅನವಶ್ಯಕ ಮಾತುಗಳಿಂದ ವಿವಾದವಾಗುವುದು.

ಕಟಕ ರಾಶಿ: ಇಂದು ಕೆಲಸದ ಹೊರೆಯಿಂದಾಗಿ ಹೆಚ್ಚಿನ ಸಮಯವನ್ನು ಕಳೆದುದು ಗೊತ್ತಾಗದೇ ಹೋಗಬಹುದು ಬರವಣಿಗೆಗೆ ಸಂಬಂಧಿಸಿದ ಜನರಿಗೆ ದಿನವು ತುಂಬಾ ಒಳ್ಳೆಯದು ಎಂದು ಸಾಬೀತುಪಡಿಸುತ್ತದೆ. ವ್ಯಾಪಾರಿಗಳು ಇಂದು ವ್ಯವಹಾರದಲ್ಲಿ ಸವಾಲನ್ನು ಎದುರಿಸಬೇಕಾಗುತ್ತದೆ. ವ್ಯವಹಾರದಲ್ಲಿ ಸವಾಲುಗಳು ಬರುತ್ತಲೇ ಇರುತ್ತವೆ. ಅವುಗಳಿಗೆ ಏಕೆ ಭಯಪಡಬೇಕು. ಯುವಕರು ಕಷ್ಟವನ್ನು ಕಂಡು ಕೈಬಿಡದೆ ಪೂರ್ಣ ಉತ್ಸಾಹ ಮತ್ತು ಶಕ್ತಿಯಿಂದ ಕೆಲಸ ಮಾಡಬೇಕು. ಮನಶ್ಚಾಂಚಲ್ಯವನ್ನು ದೂರಮಾಡಿಕೊಳ್ಳುವುದು ಅನಿವಾರ್ಯವಾಗುವುದು. ನೀವಾಡುವ ಸುಳ್ಳು ಎಲ್ಲರಿಗೂ ಗೊತ್ತಾದೀತು. ನಿದ್ರೆಯಿಂದ ಆಲಸ್ಯವು ಹೆಚ್ಚಾಗುವುದು. ಹಣಕಾಸಿನ ವ್ಯವಹಾರದಲ್ಲಿ ಮಿತ್ರರ ಜೊತೆ ಕಲಹವಾಗಬಹುದು. ಸಂಗಾತಿಯಿಂದ ಬಲವಂತವಾಗಿ ಉಡುಗೊರೆ ಪಡೆಯುವಿರಿ. ಸ್ತ್ರೀಯರಿಗೆ ಇಂದು ಸಂತೋಷದ ದಿನ. ಎಲ್ಲರೆದುರೂ ಸಿಟ್ಟಿನಿಂದ ಕೂಗಾಡುವುದು ಬೇಡ.‌

ಸಿಂಹ ರಾಶಿ: ವ್ಯಾವಹಾರಿಕೆ ಚಿಂತೆಗಳನ್ನು ನೀವು ಮನೆಗೆ ಕೊಂಡೊಯ್ಯಬೇಡಿ. ಉದ್ಯಮಿಗಳು ಎಲ್ಲ ಖಾತೆಗಳನ್ನು ಬಲವಾಗಿ ಇಟ್ಟುಕೊಳ್ಳಬೇಕು, ಇದ್ದಕ್ಕಿದ್ದಂತೆ ವೆಚ್ಚಗಳು ಹೆಚ್ಚಾಗುತ್ತವೆ. ಹಿಂದಿನ ದಿನಗಳ ಪ್ರಯತ್ನಗಳು ವ್ಯವಹಾರದಲ್ಲಿ ಲಾಭವನ್ನು ತರುತ್ತವೆ. ಕೌಟುಂಬಿಕ ವಿಚಾರದಲ್ಲಿ ನ್ಯಾಯ ಕೊಡುವಾಗ ಯಾವುದೇ ಪಕ್ಷ ತೆಗೆದುಕೊಳ್ಳದೆ ನ್ಯಾಯಯುತ ತೀರ್ಪು ನೀಡಿ. ಎಲ್ಲದಕ್ಕೂ ನಿಮ್ಮನ್ನೇ ಬೊಟ್ಟುಮಾಡಿ ತೋರಿಸಬಹುದು. ಮೇಲಧಿಕಾರಿಗಳನ್ನು ನಿಮ್ಮತ್ತ ಸೆಳೆಯುವ ತಂತ್ರವು ಫಲಿಸೀತು. ಉನ್ನತ ವಿದ್ಯಾಭ್ಯಾಸಕ್ಕೆ ಮಕ್ಕಳಿಗೆ ಹಣವನ್ನು ಹೊಂದಿಸಬೇಲಾಗವುದು. ನಿಮಗೆ ಕರಗತವಾದ ವಿದ್ಯೆಯನ್ನು ಪ್ರದರ್ಶಿಸುವಿರಿ. ನಿಮ್ಮ ಒರಟು ಸ್ವಭಾವವು ಇಷ್ಟವಾಗದೇ ಹೋಗಬಹುದು. ಸುಮ್ಮನೇ ಒಂಟಿಯಾಗಿ ಇದ್ದು ಹತ್ತಾರು ಯೋಚನೆಗಳು ಬರಬಹುದು. ಬಂಧುಗಳಿಂದ‌ ಉಡುಗೊರೆ ಸಿಗಲಿದೆ. ಲೆಕ್ಕಶೋಧಕರಿಗೆ ಒತ್ತಡವು ಅಧಿಕವಾಗಿರುವುದು.

ಕನ್ಯಾ ರಾಶಿ: ಯಾವುದೇ ಸಮಸ್ಯೆಯ ಬಗ್ಗೆ ನಿರಾಶೆಗೊಳ್ಳುವ ಬದಲು ತಮ್ಮ ಪ್ರಯತ್ನವನ್ನು ಬದಲಿಸಿ. ಮಾರ್ಗವು ಕಂಡುಬರುತ್ತದೆ. ಚಿಲ್ಲರೆ ವ್ಯಾಪಾರಿಗಳ ಲಾಭದಲ್ಲಿ ಹೆಚ್ಚಳ ಕಂಡುಬರುತ್ತದೆ. ಇಂದು ಬಹಳ ಶುಭಕರವಾಗಿದೆ ಮತ್ತು ಸಂಶೋಧನಾ ಕಾರ್ಯದಲ್ಲಿ ತೊಡಗಿರುವ ಯುವಕರಿಗೆ ಉತ್ತಮ ಫಲಿತಾಂಶಗಳನ್ನು ನೀಡುತ್ತದೆ. ಹೊಸ ಗೆಳೆತನವು ಖುಷಿಕೊಟ್ಟರೂ ಪೂರ್ಣವಾಗಿ ನಂಬಲು ಆಗದು. ಆಕಸ್ಮಿಕವಾಗಿ ಸಮ್ಮಾನವು ಸಿಗಬಹುದು. ಕುಟುಂಬದಲ್ಲಿ ಧಾರ್ಮಿಕ ಕಾರ್ಯವನ್ನು ಮಾಡುವ ಮನಸ್ಸಿದ್ದರೂ ಉಳಿದವರ ಒಪ್ಪಿಗೆ ಸಿಗದೇ ಇರಬಹುದು. ಉದ್ಯಮಕ್ಕೆ ಬೇಕಾದ ಕಾನೂನಿನ ಭದ್ರತೆಯನ್ನು ಪಡೆದುಕೊಳ್ಳಿ. ಕೆಲವು ಘಟನೆಗಳಿಗೆ ಮನಸ್ಸು ಚಂಚಲವಾಗಬಹುದು.‌ ಸ್ಪರ್ಧೆಯಲ್ಲಿ ಸೋಲಾಗುವ ಸಾಧ್ಯತೆ ಇದೆ. ಆರ್ಥಿಕತೆಯ ಬಗ್ಗೆ ಎಷ್ಟೇ ಜಾಗರೂಕತೆ ಇದ್ದರೂ ಸಾಲದು. ಮಹಿಳೆಯರು ಸ್ವ ಉದ್ಯಮದಿಂದ ಲಾಭವನ್ನು ಮಾಡಿಕೊಳ್ಳುವರು. ಪ್ರೀತಿಯು ಅಪನಂಬಿಕೆಯಿಂದ ನಾಶವಾಗಬಹುದು.

ತುಲಾ ರಾಶಿ: ಕೆಲಸದಲ್ಲಿ ನಿರ್ಲಕ್ಷ್ಯ ಮಾಡಬಾರದು ಎಂಬುದನ್ನು ನೆನಪಿನಲ್ಲಿಡಿ. ವ್ಯಾಪಾರದಲ್ಲಿ ಹಣದ ಕೊರತೆಯಿಂದ ವ್ಯಾಪಾರವು ಬಂಡವಾಳ ಹೂಡಿಕೆಯನ್ನು ಕೇಳುವುದರಿಂದ ಮನಸ್ಸು ಗೊಂದಲಕ್ಕೊಳಗಾಗುತ್ತದೆ, ಉದ್ಯಮಿಗಳಿಗೆ ಆರ್ಥಿಕ ನಷ್ಟದ ಸಾಧ್ಯತೆಯಿದೆ. ಸಮಸ್ಯೆಗೆ ಹೆದರಬೇಡಿ, ಆದರೆ ಧೈರ್ಯದಿಂದ ಎದುರಿಸಿ. ಹೀಗೆ ಮಾಡಿದರೆ ಮಾತ್ರ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಅಶುಭಕರ ವಾರ್ತೆಯನ್ನು ಕೇಳಬೇಕಾಗುವುದು. ವಿಶ್ವಾಸವನ್ನು ಗಳಿಸಲು ವಿವಿಧ ಪ್ರಯೋಗಗಳನ್ನು ಮಾಡುವಿರಿ. ಉದ್ಯೋಗದ ವಿಚಾರವನ್ನು ಬಹಳ ಗೌಪ್ಯವಾಗಿ ಇಡುವಿರಿ. ಸಲ್ಲದ ಮಾತನ್ನು ಹಿರಿಯರಿಗೆ ಹೇಳುವಿರಿ. ಅಹಂಕಾರವು ನಿಮ್ಮನ್ನು ಕೆಳಗೆ ದೂಡಬಹುದು. ಸರಳತೆಯನ್ನು ರೂಢಿಸಿಕೊಳ್ಳುವ ಬಗ್ಗೆ ಆಲೋಚನೆ ಇರಲಿ. ಅನಗತ್ಯಗಳ ಅಪೇಕ್ಷೆಯಿಂದ ಸಂಗಾತಿಯ ಸಂಪತ್ತನ್ನು ಖಾಲಿ‌ಮಾಡುವಿರಿ. ನಿಮ್ಮ ಮನಸ್ಸು ಕಾರ್ಯದಲ್ಲಿ ಮಗ್ನವಾಗಿ ಇರದು. ಆರಂಭಿಸಿದ ಉದ್ಯೋಗದಲ್ಲಿ ಯಾವ ವಿಘ್ನವೂ ಬಾರದಂತೆ ಪ್ರಾರ್ಥಿಸಿ. ನೌಕರರ ಬಗೆಗೆ ನಂಬಿಕೆ ಕಡಿಮೆಯಾಗುವುದು.

ವೃಶ್ಚಿಕ ರಾಶಿ: ನಿಮಗೆ ಗೊತ್ತಿಲ್ಲದೇ ಅಧಿಕಾರಿಯೊಂದಿಗೆ ವಾಗ್ವಾದ ಮಾಡುವಿರಿ. ಮಾಧ್ಯಮಗಳಿಗೆ ಸಂಬಂಧಿಸಿದವರು ಸಕ್ರಿಯರಾಗಿರಬೇಕು. ಹೊಸ ವ್ಯಾಪಾರಕ್ಕೆ ಸೇರುವುದನ್ನು ತಪ್ಪಿಸಿ ಮತ್ತು ಮಾಡುತ್ತಿರುವ ಕೆಲಸವನ್ನು ಸರಿಯಾಗಿ ಮಾಡಿ. ಮರದ ವ್ಯಾಪಾರಿಗಳು ನಿರೀಕ್ಷಿತ ಲಾಭ ಗಳಿಸಲು ಸಾಧ್ಯವಾಗುವುದಿಲ್ಲ. ನಿಮ್ಮ ಮೆಲುದನಿಯಿಂದ ಯಾವ ಕೆಲಸವೂ ಆಗದು. ಹಳೆಯ ನೋವಿನಿಂದ ಬಳಲುತ್ತಿದ್ದರೂ ಏನೂ ಆಗದವರಂತೆ ಕೆಲಸದಲ್ಲಿ ತೊಡಗಿಕೊಳ್ಳುವಿರಿ. ಪ್ರೀತಿಯಲ್ಲಿ ನಂಬಿಕೆ ಕಡಿಮೆ ಆಗಬಹುದು. ನಿರುಪಯುಕ್ತ ವಸ್ತುಗಳನ್ನು ದಾನರೂಪವಾಗಿ ಕೊಡುವಿರಿ. ನಿಮ್ಮ ಎಲ್ಲ ಕಾರ್ಯಗಳೂ ವಿಳಂಬವಾಗಿ ಅಧಿಕಾರಿಗಳಿಂದ ಹೇಳಿಸಿಕೊಳ್ಳುವಿರಿ. ಇಂದು ಸ್ತ್ರೀಯರು ಅಲಂಕಾರಲ್ಲಿ ಹೆಚ್ಚು ತೊಡಗಿಕೊಳ್ಳುವರು. ಮಾಡಿದ ತಪ್ಪಿನಿಂದ ಪಶ್ಚಾತ್ತಾಪ ಪಡುವಿರಿ. ಎಷ್ಟೇ ಪ್ರಯತ್ನಿಸಿದರೂ ಕೊಟ್ಟ ಹಣವು ನಿಮಗೆ ಸಿಗದು. ಅದರ ಆಸೆಯನ್ನು ಬಿಡುವಿರಿ. ನಿಮ್ಮವರ ಮೇಲೆ ನೀವು ಇಟ್ಟ ನಂಬಿಕೆಯು ಹುಸಿಯಾಗುವುದು.

ಧನು ರಾಶಿ: ನಿಮ್ಮ ಆಸೆಯನ್ನು ಪೂರೈಸಿಕೊಳ್ಳಲು ಪ್ರಯತ್ನಿಸುವಿರಿ. ಉದ್ಯಮಿಗಳು ತಮ್ಮ ಕೆಲಸವನ್ನು ಪೂರ್ಣಗೊಳಿಸಿದ ಅನಂತರ ಧನಾತ್ಮಕ ಶಕ್ತಿಯು ಹೆಚ್ವಾಗುವುದು. ಇದನ್ನು ಕಾಪಾಡಿಕೊಳ್ಳಿ. ಕಾಪಾಡಿಕೊಳ್ಳುತ್ತಾರೆ. ಯುವಕರ ಉದ್ದೇಶಗಳು ಯಶಸ್ವಿಯಾಗುತ್ತವೆ ಆದರೆ ಅವರು ಅಡೆತಡೆಗಳನ್ನು ಎದುರಿಸಬೇಕಾಗುತ್ತದೆ. ಹಸ್ತಕ್ಷೇಪ ಮಾಡುವವರ ಬಗ್ಗೆ ನಿಮಗೆ ಅಸಮಾಧಾನ ಇರಲಿದೆ. ಶೀಘ್ರಕೋಪಿಗಳಂತೆ ತೋರುವಿರಿ. ಪರಿಸ್ಥಿತಿಯನ್ನು ಎದುರಿಸುವ ಚಾಣಾಕ್ಷತನವನ್ನು ನೀವು ಸಂಪಾದಿಸಿರುವಿರಿ. ಮಕ್ಕಳನ್ನು ಚತುರೋಪಾಯದಿಂದ ಹಿಡಿತಕ್ಕೆ ತರಬೇಕಾಗುವುದು. ದಾಂಪತ್ಯದ ಮೇಲೆ‌ ದುಷ್ಟರ ದೃಷ್ಟಿಯು ಬೀಳಬಹುದು. ನಿಮ್ಮ ನಡೆ-ನುಡಿಗಳು ಆದಷ್ಟು ಸರಳವಾಗಿ ಇರಲಿ. ಮಿತಿಮೀರಿದ ಆಹಾರಸೇವನೆಯಿಂದ ನಿಮಗೆ ಕಷ್ಟವಾದೀತು. ಮಕ್ಕಳ ಬಗೆಗೆ ನಂಬಿಕೆ ಕಡಿಮೆಯಾಗಬಹುದು. ಇಷ್ಟಮಿತ್ರರನ್ನು ಮನೆಗೆ ಆಹ್ವಾನಿಸುವಿರಿ. ಯಾರದೋ ಮಾತಿನಿಂದ ನಿಮಗೆ ಸಂಕಟವಾಗುವುದು. ಆಪ್ತರನ್ನು ಸತ್ಕಾರಕ್ಕಾಗಿ ಮನೆಗೆ ಆಹ್ವಾನಿಸುವಿರಿ.

ಮಕರ ರಾಶಿ: ಇಂದು ಬಟ್ಟೆ ವ್ಯಾಪಾರಿಗಳಿಗೆ ನಿರಾಸೆ ಉಂಟಾಗಬಹುದು. ನಿಮ್ಮ ನಿರೀಕ್ಷೆಗೆ ತಕ್ಕಂತೆ ಮಾರಾಟ ಆಗದಿರಬಹುದು. ವಿದ್ಯಾರ್ಥಿಗಳು ತಮ್ಮ ಅಮೂಲ್ಯ ಸಮಯವನ್ನು ಅನಗತ್ಯ ವಿಷಯಗಳಲ್ಲಿ ಕಳೆಯಬಾರದು ಮತ್ತು ತಮ್ಮ ಗುರಿಗಳನ್ನು ಸಾಧಿಸಲು ವಿನಿಯೋಗಿಸಬೇಕು. ನಿಮ್ಮ ಸಂವಹನ ಕೌಶಲದಿಂದ ಜನರನ್ನು ಆಕರ್ಷಿಸುವಿರಿ. ಹೊಸ ಉದ್ಯೋಗಕ್ಕೆ ಸೇರಿಕೊಳ್ಳುವುದು ನಿಮಗೆ ಕಷ್ಟವಾಗದು. ನಿಜವನ್ನು ನೀವು ಮರೆಮಾಚಲು ಹೋದರೂ ಅದು ಆದು ಹೇಗೋ ಗೊತ್ತಾಗುವುದು. ಸರಳವಾದ ಕಾರ್ಯವನ್ನು ಸಂಕೀರ್ಣ ಮಾಡಿಕೊಂಡು ಒದ್ದಾಡುವಿರಿ. ಒಟ್ಟಿಗೇ ಬರುವ ಕೆಲಸದಿಂದ ನೀವು ಉದ್ವೇಗಕ್ಕೆ ಬೀಳುವಿರಿ. ಸಾಲದಿಂದ ಬಿಡುಗಡೆ ಸಿಕ್ಕಿ ಮನಸ್ಸು ನಿರಾಳವಾಗಲಿದೆ. ಹಿರಿಯರ ಶುಶ್ರೂಷೆಗೆ ಅವಕಾಶ ಸಿಗುವುದು. ಸಂಪೂರ್ಣ ಮಾಹಿತಿಯನ್ನು ಪಡೆದು ಮುಂದಡಿ ಇಡುವುದು ಸೂಕ್ತ. ಹೊಸ ಉದ್ಯೋಗವನ್ನು ಆರಂಭಿಸುವತ್ತ ನಿಮ್ಮ ಆಲೋಚನೆಯು ಗಾಢವಾಗಿ ಇರುವುದು.

ಕುಂಭ ರಾಶಿ: ಇಂದು ಉದ್ಯಮಿಗಳು ಪ್ರಮುಖ ಕಾರ್ಯಗಳ ಬಗ್ಗೆ ಆತುರಪಡಬಾರದು. ಆದರೆ ವ್ಯಾಪಾರಸ್ಥರು ವ್ಯವಹಾರದ ಬಗ್ಗೆ ಚಿಂತಿಸುತ್ತಲೇ ಇರುತ್ತಾರೆ. ಸ್ವಾಭಿಮಾನದ ವಿಚಾರದಲ್ಲಿ ರಾಜಿ ಮಾಡಿಕೊಳ್ಳಬೇಡಿ. ಸ್ವಾಭಿಮಾನ ದೊಡ್ಡ ವಿಷಯ ಅದರೊಂದಿಗೆ ರಾಜಿ ಮಾಡಿಕೊಳ್ಳುವುದು ಒಳ್ಳೆಯದಲ್ಲ. ಏನನ್ನಾದರೂ ಮಾತನಾಡಿ ಕುಟುಂಬದಲ್ಲಿ ಗೌರವವನ್ನು ಕಳೆದುಕೊಳ್ಳುವಿರಿ. ಕೆಲವು ಸಂದರ್ಭಗಳಲ್ಲಿ ಸರಿ ಕಾಣದಿದ್ದರೂ ಅದನ್ನು ಒಪ್ಪಿಕೊಂಡಂತೆ ನಡೆಯುವುದು ಸೂಕ್ತ. ಹಿರಿಯರ ಮಾತನ್ನು ಅಗೌರವದಿಂದ ಕಾಣುವುದು ಬೇಡ. ವಿದ್ಯಾರ್ಥಿಗಳು ಸತತ ಶ್ರಮದಿಂದ ಇಂದು ಹಂತವನ್ನು ತಲುಪುವರು. ಸಂಸಾರದ ಏರಿಳಿತಗಳನ್ನು ಸಮಾಜದ ಮುಂದೆ ತೆರದಿಡುವುದು ಸರಿ ಕಾಣದು. ನಿಮ್ಮ ನೋವನ್ನು ಯಾರ ಬಳಿಯಾದರೂ ಹೇಳಿಕೊಳ್ಳಿ. ಶತ್ರುಗಳ ಚಲನವಲನಗಳ‌ ಮೇಲೆ‌ ಕಣ್ಣಿಡುವಿರಿ. ಅಕಾಸ್ಮಾತ್ತಾಗಿ ಸಿಕ್ಕ ಅವಕಾಶಗಳನ್ನು ಸದುಪಯೋಗ ಮಾಡಿಕೊಳ್ಳುವ ಕಡೆಗೆ ಗಮನವಿರಲಿ.‌

ಮೀನ ರಾಶಿ: ನಿಮ್ಮ ನಾಯಕತ್ವದ ಬಗ್ಗೆ ನಿಮಗೆ ಅಪಾರ ಗೌರವ ಇರಲಿದೆ. ಅನವಶ್ಯಕವಾಗಿ ಚಿಂತೆ ಮಾಡುವುದನ್ನು ತಪ್ಪಿಸಬೇಕು. ಈ ಸಮಯದಲ್ಲಿ ಲಾಭದ ಬದಲು ನಷ್ಟವಾಗುವ ಸಂಭವವಿರುವುದರಿಂದ ವ್ಯಾಪಾರ ವ್ಯವಹಾರದಲ್ಲಿ ಹೆಚ್ಚಿನ ಹೂಡಿಕೆ ಮಾಡುವುದನ್ನು ತಪ್ಪಿಸಿ. ಯಾವುದೇ ವೆಚ್ಚದಲ್ಲಿ ಸಮಯವನ್ನು ವ್ಯರ್ಥ ಮಾಡಲು ಬಿಡಬೇಡಿ. ನಿಮ್ಮ ದಕ್ಷತೆಯು ಇತರರನ್ನೂ ಮೆಚ್ಚಿಸುತ್ತದೆ. ನಿತ್ಯದ ಕೆಲಸದ ಹೊರತಾಗಿ ಏನನ್ನಾದರೂ ಮಾಡಲು ನೀವು ಪ್ರಯತ್ನಿಸಿ, ಜಯಗಳಿಸುವುದು ಸುಲಭವಾಗಲಿಕ್ಕಿಲ್ಲ. ವ್ಯಾಪಾರಸ್ಥರಿಗೆ ನಿರಾಸೆಯ ದಿನವಿದು. ಕುಟುಂಬ ವ್ಯವಸ್ಥೆಯನ್ನು ಸರಿದೂಗಿಸುವುದು ಹೊರೆಯಾಗಬಹುದು. ಇಂದು ನಿಮ್ಮ ಸಮಯವನ್ನು ಸ್ನೇಹಿತರ ಕಾರ್ಯಕ್ಕೆ ಕೊಡಬೇಕಾಗಿಬರಬಹುದು. ಅದ್ದರಿಂದ ನಿಮ್ಮ ಕೆಲಸವು ವಿಳಂಬವಾಗಬಹುದು. ಆಸೆಗಳನ್ನು ನೀವು ನಿಯಂತ್ರಣಕ್ಕೆ ತರಲು ಪ್ರಯತ್ನಿಸುವಿರಿ. ಸಂಗಾತಿಯ ನಡವಳಿಕೆಯನ್ನು ಊಹಿಸಲಾಗದು. ಯಾರಿಂದಲೂ ಗೌರವ ಸಿಗಲಿಲ್ಲ ಎಂಬ ನೋವು ಕಾಣಿಸಿಕೊಳ್ಳುವುದು.

ಲೋಹಿತ ಹೆಬ್ಬಾರ್ – 8762924271 (what’s app only)

ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ
ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ
ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ
ಸೂಪರ್‌ಮ್ಯಾನ್‌ನಂತೆ ಗಾಳಿಯಲ್ಲಿ ಹಾರಿ ಅದ್ಭುತ ಕ್ಯಾಚ್ ಹಿಡಿದ ಕಿವೀಸ್ ವೇಗಿ
ಸೂಪರ್‌ಮ್ಯಾನ್‌ನಂತೆ ಗಾಳಿಯಲ್ಲಿ ಹಾರಿ ಅದ್ಭುತ ಕ್ಯಾಚ್ ಹಿಡಿದ ಕಿವೀಸ್ ವೇಗಿ
‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ
‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ
ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ
ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ
ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ
ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ
Video: ಕೇರಳ ಉತ್ಸವದಲ್ಲಿ ಕೆರಳಿದ ಆನೆ, 20ಕ್ಕೂ ಅಧಿಕ ಮಂದಿಗೆ ಗಾಯ
Video: ಕೇರಳ ಉತ್ಸವದಲ್ಲಿ ಕೆರಳಿದ ಆನೆ, 20ಕ್ಕೂ ಅಧಿಕ ಮಂದಿಗೆ ಗಾಯ