ನಿತ್ಯ ಪಂಚಾಂಗ: ಪ್ಲವನಾಮ ಸಂವತ್ಸರ, ದಕ್ಷಿಣಾಯನ, ಆಷಾಢ ಮಾಸ, ಗ್ರೀಷ್ಮ ಋತು, ಶುಕ್ಲಪಕ್ಷ, ತ್ರಯೋದಶಿ ತಿಥಿ, ಗುರುವಾರ, ಜುಲೈ 22, 2021. ಮೂಲ ನಕ್ಷತ್ರ, ರಾಹುಕಾಲ: ಇಂದು ಮಧ್ಯಾಹ್ನ 1:59ರಿಂದ ಇಂದು ಸಂಜೆ 3:36 ತನಕ. ಬೆಂಗಳೂರು ಸೂರ್ಯೋದಯ: ಬೆಳಿಗ್ಗೆ 5.52. ಸೂರ್ಯಾಸ್ತ: ಸಂಜೆ 6.52.
ತಾ.21-07-2021 ರ ಬುಧವಾರದ ರಾಶಿಭವಿಷ್ಯ.
ಮೇಷ: ದೂರಾಲೋಚನೆಯಿಂದ ಕಾರ್ಯದಲ್ಲಿ ಯಶಸ್ಸು. ಆಸ್ತಿ ಖರೀದಿ ಸಾಧ್ಯ.ವೈವಾಹಿಕ ಚಿಂತೆ ಇರುವದು. ಧಾರ್ಮಿಕ ಸಮಾರಂಭಗಳಲ್ಲಿ ಭಾಗಿಯಾಗುವ ಯೋಗವಿದೆ. ಧಾರ್ಮಿಕ ಕ್ಷೇತ್ರಗಳ ದರ್ಶನ ಯೋಗವಿದೆ. ಶುಭ ಸಂಖ್ಯೆ: 6
ವೃಷಭ: ಆತ್ಮೀಯರೊಂದಿಗೆ ಮನಸ್ತಾಪ ವಾಗುವ ಯೋಗವಿದೆ. ಸ್ವಂತ ಉದ್ಯಮಿಗಳು ಹಾನಿ ತಪ್ಪಿಸುವ ಉಪಾಯ ಮಾಡಿ. ವ್ಯಾಪಾರದ ವಿಷಯದಲ್ಲಿ ಮೋಸವಾಗುವ ಸಾಧ್ಯತೆ ಇದೆ. ಸಾಲಗಾರರು ಸಹಕಾರ ತೋರುವರು. ಶುಭ ಸಂಖ್ಯೆ: 1
ಮಿಥುನ: ನಿರೀಕ್ಷೆಗೆ ತಕ್ಕಂತೆ ಕೆಲಸ ಆಗದೇ ಮಾನಸಿಕ ಅಶಾಂತಿ ಕಂಡುಬರುವದು. ವ್ಯವಹಾರಗಳಲ್ಲಿ ಹಾನಿಯಾಗುವ ಭಯ ಇರುವದು. ಪರಿಣಿತರ ಅಥವಾ ಹಿರಿಯರ ಸಲಹೆಯಂತೆ ಮುಂದುವರೆಯಿರಿ. ವಿದ್ಯಾರ್ಥಿಗಳಿಗೆ ಒಳ್ಳೆಯ ಫಲವಿದೆ. ಶುಭ ಸಂಖ್ಯೆ: 9
ಕರ್ಕ: ಬರುವ ಕಷ್ಟಗಳನ್ನು ಎದುರಿಸಿ ಸಫಲತೆಯನ್ನು ಹೊಂದುವಿರಿ. ಭಾಗ್ಯವೃದ್ಧಿಯಾಗುವ ಯೋಗವಿದೆ.ವ್ಯವಹಾರದಲ್ಲಿಯ ಅಡಚಣೆಗಳು ದೂರಾಗುವವು. ಮನೆಯ ಜವಾಬ್ದಾರಿಗಳು ಹೆಚ್ಚುವ ಸಂಭವವಿದೆ. ಶುಭ ಸಂಖ್ಯೆ: 4
ಸಿಂಹ: ಶತ್ರುಗಳ ಉಪಟಳವು ಆಗಾಗ ಕಂಡುಬಂದರೂ ಧೈರ್ಯದಿಂದ ಕಾರ್ಯ ಸಾಧಿಸುವಿರಿ. ಇಷ್ಟಸಿದ್ಧಿಯ ಕಾಲ ಇರುವದರಿಂದ ಅನೇಕ ರೀತಿಯ ಭೋಗಭಾಗ್ಯಗಳು ಕೂಡಿಬರಲಿವೆ. ಸಾಂಸಾರಿಕ ಸಮಸ್ಸಯೆಗಳು ಪರಿಹಾರವಾಗುವವು. ಶುಭ ಸಂಖ್ಯೆ: 8
ಕನ್ಯಾ: ಕುಟುಂಬದಲ್ಲಿ ಮನಸ್ತಾಪ ಕಂಡುಬರುವದು. ಗೌಪ್ಯ ವ್ಯವಹಾರಗಳನ್ನು ಸರಿದೂಗಿಸಲು ಸಾಧ್ಯವಾಗದೇ ಪರಿತಪಿಸುವಿರಿ. ಆಸಕ್ತಿ ಆಪತ್ತು ತರುವ ಸಂಭವವಿದೆ. ಮಹತ್ವದ ನಿರ್ಧಾರಗಳಿಗೆ ಇದು ಸೂಕ್ತಕಾಲವಲ್ಲ. ಹಣಹೂಡಿಕೆ ಈಗ ಬೇಡ. ಶುಭ ಸಂಖ್ಯೆ: 3
ತುಲಾ: ವ್ಯವಹಾರದಲ್ಲಿ ಅಡೆತಡೆಗಳು ಕಂಡುಬರುವವು. ಜಿಪುಣತನದಿಂದ ತೊಂದರೆಯಾಗುವ ಸಾಧ್ಯತೆ ಇದೆ. ಅಗೌರವ ಆಗುವ ಸಂಭವ ಇರುವದರಿಂದ ಸೂಕ್ಷ್ಮವಾಗಿರುವದು ಉತ್ತಮ. ಹೊಸ ಯೋಜನೆಗಳಿಗೆ ಚಾಲನೆ ದೊರೆಯುವದು. ಶುಭ ಸಂಖ್ಯೆ: 2
ವೃಶ್ಚಿಕ: ವ್ಯವಹಾರದಲ್ಲಿ ಹಾನಿ ಕಂಡುಬರುವದು. ಮಂದಗತಿಯ ಕೆಲಸದಿಂದ ಮನಸ್ಸಿಗೆ ಅಸಮಾಧಾನ ಉಂಟಾಗುವ ಸಂಭವವಿದೆ. ಸಹೋದರರು, ಮಿತ್ರರು ಬೆನ್ನೆಲುಬಾಗಿ ನಿಲ್ಲುವರು. ಧೈರ್ಯದಿಂದ ಮಾಡುವ ಕಾರ್ಯ ಉತ್ತಮ ಫಲಕೊಡುವದು. ಶುಭ ಸಂಖ್ಯೆ: 1
ಧನು: ಮಹತ್ವದ ಕಾರ್ಯ ಸಾಧನೆಯಾಗುವ ಲಕ್ಷಣಗಳಿವೆ. ಮನೆಯಲ್ಲಿ ಕೌಟುಂಬಿಕ ಭಿನ್ನಾಭಿಪ್ರಾಯ ಇದ್ದರೂ ನೆಮ್ಮದಿಗೆ ಕೊರತೆ ಇಲ್ಲ. ವ್ಯವಹಾರ ಚತುರತೆಯಿಂದ ದೊಡ್ಡ ಕೆಲಸವನ್ನೂ ಸಹಜವಾಗಿ ಮಾಡುವಿರಿ. ಶುಭ ಸಂಖ್ಯೆ: 7
ಮಕರ: ಭಾಗ್ಯವೃದ್ಧಿಯಾಗುವ ಯೋಗವಿದೆ. ವ್ಯವಹಾರದಲ್ಲಿಯ ಅಡಚಣೆಗಳು ದೂರಾಗುವವು. ಮನೆಯ ಜವಾಬ್ದಾರಿಗಳು ಹೆಚ್ಚುವ ಸಂಭವವಿದೆ. ಬರುವ ಸಂಕಷ್ಟಗಳನ್ನು ಎದುರಿಸಿ ಕಾರ್ಯ ಸಾಧಿಸುವಿರಿ. ಶುಭ ಸಂಖ್ಯೆ: 6
ಕುಂಭ: ಶುಭ ಕರ್ಮ ಸಂಪ್ರಾಪ್ತಿಯಿದ್ದು, ಗುರುವರ್ಗ ಸಂತೋಷ, ಸಂಸಾರ ಸುಖ. ನೂತನ ಮಿತ್ರಭೇಟಿ, ಅರ್ಥಾರ್ಜನೆಯು ಉತ್ತಮವಿದೆ. ಆದರೂ ಗೃಹಕಲಹ, ಬಂಧು ಜನರಲ್ಲಿ ಅಸಮಾಧಾನ ಕಂಡುಬರುವದು. ಶುಭ ಸಂಖ್ಯೆ: 5
ಮೀನ: ಹೊಸ ಯೋಜನೆಗಳು ಬೇಡ.ಸ್ಥಳಾಂತರ, ವರ್ಗಾವಣೆ, ಮನೆ ಬದಲಿ, ಅಧಿಕಾರಿ ವರ್ಗದವರಿಂದ ಕಿರಿಕಿರಿ ಇರುವದು. ಕೊಟ್ಟ ಸಾಲ ಮರುಪಾವತಿ ಆಗಲಾರದು,ವ್ಯಾಪರಿಗಳಿಗೆ ವ್ಯವಹಾರಿಕ ತೊಂದರೆ ಆಗುವ ಸಧ್ಯತೆ ಇದೆ. ಶುಭ ಸಂಖ್ಯೆ: 3
ಡಾ.ಬಸವರಾಜ ಗುರೂಜಿ ವೈದಿಕ ಜ್ಯೋತಿಷಿ. ಸಂಪರ್ಕ ಸಂಖ್ಯೆ: 9972848937