AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Horoscope: ದಿನಭವಿಷ್ಯ, ಈ ರಾಶಿಯವರು ಹದವರಿತು ಮುನ್ನುಗ್ಗುವುದು ಉಚಿತ

ಭವಿಷ್ಯದ ಬಗ್ಗೆ ಚಿಂತೆ ಎಲ್ಲರಲ್ಲೂ ಇದ್ದೇ ಇರುತ್ತದೆ. ಹೀಗಾಗಿ ಒಂದಷ್ಟು ಮಂದಿ ದಿನಭವಿಷ್ಯ ನೋಡುತ್ತಾರೆ. ಇದರ ಜೊತೆಗೆ ನಿತ್ಯ ಪಂಚಾಂಗವನ್ನೂ ವೀಕ್ಷಿಸುತ್ತಾರೆ. ಹಾಗಿದ್ದರೆ, ನೀವು ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರಾಗಿದ್ದರೆ ಇಂದಿನ (ಜನವರಿ 02) ಭವಿಷ್ಯಹೇಗಿದೆ ಎಂಬುದು ಇಲ್ಲಿದೆ.

Horoscope: ದಿನಭವಿಷ್ಯ, ಈ ರಾಶಿಯವರು ಹದವರಿತು ಮುನ್ನುಗ್ಗುವುದು ಉಚಿತ
ಇಂದಿನ ರಾಶಿಭವಿಷ್ಯImage Credit source: iStock Photo
TV9 Web
| Edited By: |

Updated on: Jan 02, 2024 | 12:30 AM

Share

ಒಂದಷ್ಟು ಮಂದಿ ಬೆಳಗ್ಗೆ ಎದ್ದ ನಂತರ ನಿತ್ಯ ಪಂಚಾಂಗ ಮತ್ತು ರಾಶಿಭವಿಷ್ಯ ನೋಡುತ್ತಾರೆ. ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಲಾಭ ಕಾದಿದೆಯಾ? ನಷ್ಟು ಉಂಟಾಗಬಹುದಾ? ಶುಭ, ಅಶುಭ ಇದೆಯಾ? ಸಂದಿಗ್ಧ ಪರಿಸ್ಥಿತಿ ಎದುರಾಗಲಿದೆ, ಏನು ಮಾಡಿದರೆ ಉತ್ತಮ ಎಂಬುದನ್ನು ತಿಳಿದುಕೊಳ್ಳುತ್ತಾರೆ. ಹಾಗಾದರೆ, ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರ ಇಂದಿನ (ಜನವರಿ 02) ಭವಿಷ್ಯ (Horoscope) ಹೇಗಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಧನು ಮಾಸ, ಮಹಾನಕ್ಷತ್ರ: ಪೂರ್ವಾಷಾಢ, ಮಾಸ: ಮಾರ್ಗಶೀರ್ಷ, ಪಕ್ಷ: ಕೃಷ್ಣ, ವಾರ: ಮಂಗಳ, ತಿಥಿ: ಷಷ್ಠೀ, ನಿತ್ಯನಕ್ಷತ್ರ: ಉತ್ತರಾ, ಯೋಗ: ಸೌಭಾಗ್ಯ, ಕರಣ: ವಣಿಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 59 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 13 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 03:25 ರಿಂದ ಸಂಜೆ 04:50 ರವರೆಗೆ, ಯಮಘಂಡ ಕಾಲ ಬೆಳಗ್ಗೆ 09:48 ರಿಂದ 11:12ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 12:37 ರಿಂದ 02:01ರ ವರೆಗೆ.

ಸಿಂಹ ರಾಶಿ : ಅಕಾರಣವಾಗಿ ಮನಸ್ಸು ಸಂತೋಷದಿಂದ ಇರಲಿದೆ. ಕುಟುಂಬವು ನಿಮ್ಮ ಬಗ್ಗೆ ಹಲವು ಕನಸುಗಳನ್ನು ಇಟ್ಟುಕೊಂಡಿದೆ. ದೊಡ್ಡ ವ್ಯಾಪಾರದಲ್ಲಿ ಉತ್ತಮ ಲಾಭವನ್ನು ಇಂದು ನಿರೀಕ್ಷಿಸುಬುದು ಬೇಡ. ಅಪರಿಚಿತರ ಜೊತೆ ಸಲುಗೆ ಬೆಳೆಯಬಹುದು. ಯಾರ ಬಗ್ಗೆಯೂ ಹಗುರಾದ ಮಾತುಗಳನ್ನು ಆಡುವುದು ಬೇಡ. ಹಣಕಾಸಿನ ಉಳಿತಾಯದ ಬಗ್ಗೆ ತಜ್ಞರ ಜೊತೆ ಮಾತನಾಡುವಿರಿ, ನಿರ್ಧಾರಕ್ಕೆ ಬರುವಿರಿ. ನಿಮ್ಮದಲ್ಲದ ವಸ್ತುವನ್ನು ಬಳಸಿಕೊಂಡು ಹಾಳು ಮಾಡುವಿರಿ. ಹಳೆಯ ಪ್ರೇಮವು ಬೆಳಕಿಗೆ ಬಂದು ಮುಜುಗರ ಉಂಟಾದೀತು. ಉದ್ಯೋಗದಲ್ಲಿ ಒತ್ತಡ ಸ್ವೀಕರಿಸುವುದು ಅಭ್ಯಾಸವಾಗಿ ಹೋಗುವುದು. ದುರಭ್ಯಾಸವು ಸಹವಾಸದಿಂದ ಬಿಟ್ಟುಹೋಗಲಿದೆ. ಯಾವುದೇ ಪ್ರಭಾವಕ್ಕೆ ಸಿಕ್ಕಿ ನಿಮ್ಮನ್ನು ಬದಲಿಸಿಕೊಳ್ಳಬೇಕಾಗಬಹುದು.

ಕನ್ಯಾ ರಾಶಿ : ಉತ್ತರನ‌ ಪೌರುಷದಂತೆ ಯಾರೂ ಇಲ್ಲದಿದ್ದರೇ ನಿಮ್ಮದೇ ಮೇಲುಗೈ ಆಗಲಿದೆ.‌ ನಿಮ್ಮ ಬಯಕೆಗಳನ್ನು ಬೇರೆಯವರ ಮೂಲಕ‌ ಪೂರ್ಣ ಮಾಡಿಕೊಳ್ಳುವಿರಿ. ಆಡಳಿತಕ್ಕೆ ಸಂಬಂಧಿಸಿದ ಕಾರ್ಯವು ಸುಗಮವಾಗಿರುವುದು. ವ್ಯಾಪಾರ ಚಟುವಟಿಕೆಗಳು ನಿಮ್ಮ‌ ಮನೋವೇಗಕ್ಕೆ ಸಿಗದು. ಒಳ್ಳೆಯ ಜನರ ಸಹವಾಸವನ್ನು ಬಯಸುವಿರಿ. ಸ್ವಪ್ರತಿಷ್ಠೆ ಹೆಚ್ಚಾಗುತ್ತದೆ. ಪೂರ್ವಾಪರ ಯೋಚನೆ ಇಲ್ಲದೇ ಒಂದು ಕೆಟ್ಟ ನಿರ್ಧಾರವನ್ನು ತೆಗೆಸುಕೊಳ್ಳುವಿರಿ. ಸಹೋದರರು ನಿಮ್ಮ ಬಗ್ಗೆ ಹಗುರಾಗಿ ಮಾತನಾಡಿದ್ದು ನಿಮ್ಮ ಕಿವಿಗೆ ಮೂರನೇ ವ್ಯಕ್ತಿಗಳಿಂದ ಗೊತ್ತಾಗಲಿದೆ. ಮಕ್ಕಳ ವಿಷಯದಲ್ಲಿ ನಿರ್ಲಕ್ಷ್ಯ ಬೇಡ. ತಾಯಿ ಆರೋಗ್ಯದಲ್ಲಿ ವ್ಯತ್ಯಾಸವು ಕಾಣಿಸಿಕೊಳ್ಳಬಹುದು. ಸ್ಥಿರಾಸ್ತಿಯ ಬಗ್ಗೆ ಸರಿಯಾದ ಕಣ್ಣಿಡುವ ಅಗತ್ಯವಿದೆ. ಉದ್ಯೋಗವನ್ನು ನಿರೀಕ್ಷಿತ ಹಂತಕ್ಕೆ ಕೊಂಡೊಯ್ಯಲು ಅಧಿಕ ಶ್ರಮಿಸುವಿರಿ. ನಿಮಗೆ ಕೊಟ್ಟ ಜವಾಬ್ದಾರಿಯು ಹಸ್ತಾಂತರ ಆಗಬಹುದು. ಇದಕ್ಕೆ ಬೇಸರವು ಸಹಜವಾಗಿರುವುದು.

ತುಲಾ ರಾಶಿ : ಅಂಗೈನಲ್ಲಿ ಆಕಾಶವಿದೆ ಎಂದು ಆಕಾಶಕ್ಕೆ ಹಾರುವುದು ಸರಿಯಾಗದು. ಹದವರಿತು ಮುನ್ನುಗ್ಗುವುದು ಉಚಿತ. ಸಂಬಂಧಗಳ ಸತ್ತ್ವವನ್ನು ನೀವು ಅರಿಯುವಿರಿ. ನಿಮ್ಮ ನೈಪುಣ್ಯತೆಯನ್ನು ಯಾರೂ ಊಹಿಸಲಾರರು. ನಿಮ್ಮನ್ನು ಎದುರಗೆ ಹೊಗಳಿ, ನಿಮ್ಮಿಂದ ಆಗಬೇಕಾದುದನ್ನು ಮಾಡಿಸಿಕೊಂಡಾರು. ಅಜಾಗರೂಕತೆಯಿಂದ ಬಿದ್ದು ಗಾಯ ಮಾಡಿಕೊಳ್ಳಬಹುದು. ಕೈಗೊಂಡ ಕಾರ್ಯಗಳಲ್ಲಿ ಪೂರ್ಣ ಜಯವು ಪ್ರಾಪ್ತವಾಗುವುದು. ನಟನೆಯನ್ನು ಇಷ್ಟಪಡುವವರಿಗೆ ಅವಕಾಶಗಳು ಸಿಗುವುದು. ಪ್ರಾಮಾಣಿಕತೆಗೆ ಸಿಕ್ಕ ಪ್ರಶಂಸೆಯಿಂದ ಇನ್ನಷ್ಟು ಉತ್ಸಾಹ ಇರುವುದು. ಯಾರದೋ ಕಾರ್ಯಕ್ಕೆ ನೀವು ದಂಡಿಸಿ ಕೆಲಸ ಮಾಡಬೇಕಾದೀತು. ನಿಮ್ಮ ಮಾತುಗಳು ಹಾಸ್ಯದಿಂದ ಕೂಡಿರಲಿದೆ. ಅನಾರೋಗ್ಯದಿಂದ ವಿಶ್ರಮಿಸಿಕೊಳ್ಳುವಿರಿ. ಹಠದ ಸ್ವಭಾವದಿಂದ ಸುಲಭವಾಗಿ ಸಿಗುವುದನ್ನು ಕಳೆದುಕೊಳ್ಳಬೇಕಾದೀತು.

ವೃಶ್ಚಿಕ ರಾಶಿ : ಆರಂಭದಿಂದಲೇ ನಿಮ್ಮೊಳಗೆ ಆತ್ಮವಿಶ್ವಾಸ ಇರಲಿದ್ದು ಅರ್ಯುತ್ಸಾಹದಿಂದ ದಿನವಿಡೀ ಕೆಲಸವನ್ನು ಮಾಡುವಿರಿ. ಆಸ್ತಿ ವ್ಯವಹಾರದ ನಿರ್ಧಾರಗಳು ನಿಮ್ಮ ಪರವಾಗಿರಬಹುದು. ಆದಾಯದ ವಿಚಾರದಲ್ಲಿ ಮನೆಯಿಂದ ಮೆಚ್ಚುಗೆ ಸಿಗಲಿದೆ. ಅನಿವಾರ್ಯವಿದ್ದರೂ ಧನವ್ಯಯದ ಕಾರಣ ಖರೀದಿಯನ್ನು ಮುಂದೂಡುವಿರಿ. ಸಾಮಾಜಿಕ ಗೌರವವನ್ನು ಪಡೆಯಲು ಆಸೆ ಇರುವುದು. ಎಲ್ಲರ ಮಾತುಗಳಿಗೂ ಉತ್ತರಿಸಬೇಕೆಂದಿಲ್ಲ.‌ ನಕ್ಕು ನಿಮ್ಮ ಕೆಲಸದಲ್ಲಿ ನೀವಿರಿ. ಇಂದು ನೀವು ತಾಯಿಯ ಪ್ರೀತಿಯಿಂದ ವಂಚಿತರಾಗಬಹುದು. ಉದ್ಯೋಗದ ಕಾರಣಕ್ಕೆ ದೂರದ ಊರಿಗೆ ಹೋಗಬೇಕಾಗುವುದು. ಪ್ರಯಾಣದ ಮುಂಜಾಗ್ರತೆಯ ಕ್ರಮವಿರಲಿ. ಗೊತ್ತಿಲ್ಲದ ಪ್ರದೇಶಕ್ಕೆ ಒಂಟಿಯಾಗಿ ಹೋಗಬೇಕಾಗಬಹುದು. ಹೊಸ ಉದ್ಯಮವನ್ನು ಮಾಡಲು ಆಪ್ತರ ಅಥವಾ ಅನುಭವಿಗಳ ಸಲಹೆ ಬೇಕಾದೀತು. ದಾಂಪತ್ಯದಲ್ಲಿನ ಒಡಕು ಎಲ್ಲರಿಗೂ ಗೊತ್ತಾಗುವ ಮೊದಲೇ ಸರಿ ಮಾಡಿಕೊಳ್ಳಿ. ಆಕಸ್ಮಿಕ ವಾರ್ತೆಯು ನಿಮ್ಮನ್ನು ಸ್ತಬ್ಧಗೊಳಿಸಬಹುದು.