Horoscope: ದಿನಭವಿಷ್ಯ, ಈ ರಾಶಿಯವರು ವಿವೇಚನೆ ಇಲ್ಲದೇ ಆಡಿದ ಮಾತುಗಳಿಂದ ಕಲಹವಾಗಬಹುದು, ಎಚ್ಚರ..

ನೀವು ಇಂದು ಕೈಗೊಳ್ಳುವ ಯಾವುದೇ ಕೆಲಸಕಾರ್ಯಗಳು ಚೆನ್ನಾಗಿರಬೇಕು ಎಂದರೆ ನಿಮ್ಮ ರಾಶಿಫಲ ಚೆನ್ನಾಗಿರಬೇಕು. ಒಂದಷ್ಟು ಮಂದಿ ರಾಶಿಭವಿಷ್ಯ ತಿಳಿದುಕೊಂಡೇ ಮುಂದಿನ ಹೆಜ್ಜೆ ಇಡುತ್ತಾರೆ. ನೀವು ಧನು, ಮಕರ, ಕುಂಭ, ಮೀನ ರಾಶಿಯವರಾಗಿದ್ದರೆ ಜನವರಿ 02 ರ ನಿಮ್ಮ ಭವಿಷ್ಯ ಹೀಗಿದೆ ನೋಡಿ.

Horoscope: ದಿನಭವಿಷ್ಯ, ಈ ರಾಶಿಯವರು ವಿವೇಚನೆ ಇಲ್ಲದೇ ಆಡಿದ ಮಾತುಗಳಿಂದ ಕಲಹವಾಗಬಹುದು, ಎಚ್ಚರ..
ಇಂದಿನ ದಿನಭವಿಷ್ಯImage Credit source: iStock Photo
Follow us
TV9 Web
| Updated By: Rakesh Nayak Manchi

Updated on: Jan 02, 2024 | 12:45 AM

ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಲಾಭ ಕಾದಿದೆಯಾ? ನಷ್ಟು ಉಂಟಾಗಬಹುದಾ? ಶುಭ, ಅಶುಭ ಇದೆಯಾ? ಸಂದಿಗ್ಧ ಪರಿಸ್ಥಿತಿ ಎದುರಾಗಲಿದೆ, ಏನು ಮಾಡಿದರೆ ಉತ್ತಮ ಎಂಬುದನ್ನು ತಿಳಿದುಕೊಳ್ಳುತ್ತಾರೆ. ಹಾಗಾದರೆ, ಧನು, ಮಕರ, ಕುಂಭ, ಮೀನ ರಾಶಿಯವರ ಇಂದಿನ (ಜನವರಿ 02) ಭವಿಷ್ಯ (Horoscope) ಹೇಗಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಧನು ಮಾಸ, ಮಹಾನಕ್ಷತ್ರ: ಪೂರ್ವಾಷಾಢ, ಮಾಸ: ಮಾರ್ಗಶೀರ್ಷ, ಪಕ್ಷ: ಕೃಷ್ಣ, ವಾರ: ಮಂಗಳ, ತಿಥಿ: ಷಷ್ಠೀ, ನಿತ್ಯನಕ್ಷತ್ರ: ಉತ್ತರಾ, ಯೋಗ: ಸೌಭಾಗ್ಯ, ಕರಣ: ವಣಿಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 59 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 13 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 03:25 ರಿಂದ ಸಂಜೆ 04:50 ರವರೆಗೆ, ಯಮಘಂಡ ಕಾಲ ಬೆಳಗ್ಗೆ 09:48 ರಿಂದ 11:12ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 12:37 ರಿಂದ 02:01ರ ವರೆಗೆ.

ಧನು ರಾಶಿ : ನಿಮ್ಮ ಮನಸ್ಸನ್ನು ಒಂದೆಡೆ ಏಕಾಗ್ರವಾಗಿಸಲು ಪ್ರಯತ್ನಿಸಿ. ನಾನಾ ಸಮಸ್ಯೆಗಳು ನಿಮ್ಮೆದುರು ಬಂದರೂ ಮರೆಯುವುದೊಂದೇ ನಿಮಗೆ ಸದ್ಯಕ್ಕಿರುವ ದಾರಿಯಾಗಿದೆ. ಯುವಕರು ವೃತ್ತಿ ಜೀವನದಲ್ಲಿ ಉತ್ತಮ ಯಶಸ್ಸನ್ನು ಪಡೆಯು ಅವಕಾಶಗಳಿದ್ದರೂ ಅದನ್ನು ಬಳಸಿಕೊಳ್ಳಲು ಮಾರ್ಗದರ್ಶನದ ಅವಶ್ಯಕತೆ ಇದೆ. ರಾಜಕೀಯ ವಿಷಯಗಳನ್ನು ಅತಿಯಾಗಿ ಹಚ್ಚಿಕೊಳ್ಳುವುದು ಬೇಡ. ಕಛೇರಿಯಲ್ಲಿ ಯಾರದೋ ತಪ್ಪಿಗೆ ನೀವು ತಲೆ ತಗ್ಗಿಸಬೇಕಾಗಬಹುದು. ಪ್ರಾಣಿಗಳ ಮೇಲೆ ಪ್ರೀತಿ ತೋರಿಸುವಿರಿ. ನಿಮ್ಮ ಕಾರ್ಯದಲ್ಲಿ ನಿಮಗೆ ತಪ್ಪು ಕಾಣಿಸುವುದು. ಹೊಗಳಿಕೆಯಿಂದ ನಿಮಗೆ ಸಂಕೋಚ ಉಂಟಾಗಬಹುದು. ಮಿತಿಮೀರಿದ ಓಡಾವು ನಿಮ್ಮ ದೇಹಬಲವನ್ನು ಕುಗ್ಗಿಸುವುದು. ನಿಮ್ಮ ಬಯಕೆಗಳಿಗೆ ಇನ್ಮೊಬ್ಬರು ಪ್ರೇರಣೆ ಆಗಬಹುದು. ಪ್ರೀತಿಯ ಕಾರಣಕ್ಕೆ ಮನಸ್ಸಿನ ಚಾಂಚಲ್ಯವನ್ನು ನಿಯಂತ್ರಿಸುವುದು ಕಷ್ಟವಾದೀತು. ನಿಮ್ಮ ಮಾತು ಇನ್ನೊಬ್ಬರಿಗೆ ನೋವನ್ನು ಕೊಡುಬಹುದು ಎಂಬ ತಿಳಿವಳಿಕೆ ಇರಲಿ.

ಮಕರ ರಾಶಿ : ನಿಮ್ಮ ಜಾಣ್ಮೆಯ ಕೆಲಸಕ್ಕೆ ಅಧಿಕಾರಿಗಳಿಂದ ಮೆಚ್ಚುಗೆ ಸಿಗಲಿದೆ. ಸಣ್ಣ ಹೂಡಿಕೆಗಳು ಭವಿಷ್ಯಕ್ಕೆ ಪ್ರಯೋಜನಕಾರಿಯಾಗಬಲ್ಲವು. ಮಹಿಳೆಯರು ಸ್ವ ಉದ್ಯೋಗದ ಕಡೆ ಗಮನಹರಿಸುವರು. ನೂತನ ವಸ್ತುಗಳ ಮೇಲೆ ನಿಮಗೆ ಪ್ರೀತಿ ಹೆಚ್ಚಿರುವುದು. ವಿದೇಶದಲ್ಲಿ ಓದುವ ಆಸೆಯು ನಿಮ್ಮೊಳಗೆ ಆರಂಭವಾಗುವುದು. ನಿಮ್ಮನ್ನು ಕೈಬಿಟ್ಟ ಸಂಸ್ಥೆಯು ಪುನಃ ಆಮಂತ್ರಣ ನೀಡುವ ಸಾಧ್ಯತೆ ಇದೆ. ಉತ್ತಮ ವಿಶ್ವಾಸಿಗಳನ್ನು ಕಳೆದುಕೊಳ್ಳುವಿರಿ. ಭೂಮಿಯ ವ್ಯವಹಾರದಲ್ಲಿ ಪಾಲುದಾರರಾಗಿ ಸೇರಿಕೊಳ್ಳುವ ಮನಸ್ಸು ಮಾಡುವಿರಿ. ಸಂಗಾತಿಯ ಜೊತೆ ಬಹಳ ಸಂಯೋಷದ ಕ್ಷಣವನ್ನು ಕಳೆಯುವಿರಿ. ಉದ್ಯೋಗದ ಸ್ಥಳದಲ್ಲಿ ಉಂಟಾದ ಪಕ್ಷಪಾತದಿಂದ ದ್ವೇಷಭಾವವು ಉಂಟಾಗಬಹುದು. ಕಲಾವಿದರು ಅವಕಾಶವನ್ನು ಹುಡುಕಿಕೊಂಡು ಹೋಗಬೇಕಾಗಬಹುದು. ಸಾಲದ ವಿಚಾರವಾಗಿ ಕುಟುಂಬದ ಜೊತೆ ಬಿಸಿ ಚರ್ಚೆಯಾಗಬಹುದು. ಆಸ್ತಿಯ ಹಂಚಿಕೆಯಲ್ಲಿ ನಿಮಗೆ ಸಮಾಧಾನ ಇರದು. ಹಲವು ದಿನಗಳಿಂದ ಉಳಿಸಿಕೊಂಡ ವೈಯಕ್ತಿಕ ಕೆಲಸವೇ ಉಳಿಯಲಿದೆ.

ಕುಂಭ ರಾಶಿ : ಇಂದು ನಿಮ್ಮ ಬಗ್ಗೆ ಆಡುವ ಮಾತಿನಿಂದ ಉತ್ಸಾಹವು ಅಧಿಕವಾಗಿ ಇರುವುದು. ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಶ್ರಮದ ಫಲವೇ ಕಾಣುವರು. ನಿಮ್ಮ ಆಪ್ತ ಸ್ನೇಹಿತರ ಅನಿರೀಕ್ಷಿತ ಭೇಟಿಯಾಗುವುದು. ವಾಹನ ಖರೀದಿಗೆ ಬಂಧುಗಳಿಂದ ಒತ್ತಡವು ಬರಬಹುದು. ಬಹಳ ಶ್ರಮದಿಂದ ಭೂಮಿಯ ಮಾರಟವನ್ನು ಮಾಡುವಿರಿ. ವೃತ್ತಿಯಿಂದ ನೀವು ವಿದೇಶಪ್ರಯಾಣವನ್ನು ಮಾಡಬೇಕಾಗಬಹುದು. ಮನೆಗೆ ಅತಿಥಿಗಳ ಆಗಮನವಾಗಲಿದೆ. ನಿಮ್ಮ ಪೂರ್ವಯೋಜಿತ ಕಾರ್ಯಗಳನ್ನು ನೀವು ಬದಲಾಯಿಸುವಿರಿ. ಸ್ನೇಹಿತರ ಜೊತೆ ಪ್ರವಾಸಕ್ಕೆ ಹೋಗಲು ಮನೆಯಿಂದ ಒಪ್ಪಿಗೆಯನ್ನು ನಿರಾಕರಿಸಬಹುದು. ಇಂದು ನೀವು ಕೋಪವನ್ನು ಮಾಡಿಕೊಳ್ಳಲು ಕಾರಣವೇ ಬೇಕಾಗದು. ಕುಟುಂಬ ಜೊತೆ ದೇವರ ದರ್ಶನವನ್ನು ಮಾಡುವಿರಿ. ನೌಕರರಿಂದ ನಿಮಗೆ ಸರಿಯಾದ ಪ್ರತಿಕ್ರಿಯೆ ಸಿಗದು. ವಿವೇಚನೆ ಇಲ್ಲದೇ ಆಡಿದ ಮಾತುಗಳಿಂದ ಕಲಹವಾಗಬಹುದು.

ಮೀನ ರಾಶಿ : ಇಂದು ನಿಮ್ಮ ಅದೃಷ್ಟದ ದಿನವಾಗಿದ್ದು ಆಗಬೇಕಾದ‌ ಕೆಲಸಗಳು ಸರಾಗವಾಗಿ ಆಗುವುದು. ಇಂದು ನಿಮ್ಮ ಕಾರ್ಯಕ್ಷಮತೂ ಉತ್ತಮವಾಗಿರುವುದು. ನಿಮಗೆ ಮಾತನಾಡುವ ಕಲೆಯು ಕರಗತವಾಗಲಿದೆ. ನಿಮ್ಮನ್ನು ಇಂದು ಮಾತಿನಿಂದ ಸೋಲಿಸುವುದು ಕಷ್ಟವಾದೀತು. ಮಕ್ಕಳ ವಿವಾಹದ ಬಗ್ಗೆ ಒಂದೊಂದೇ ಚಿಂತೆ ಆರಂಭವಾಗುವುದು. ಅನಿವಾರ್ಯ ಕಾರಣದಿಂದ ನೀವು ಅಧಿಕಾರವನ್ನು ವಹಿಸಿಕೊಳ್ಳಬೇಕಾಗಬಹುದು. ಉದ್ಯೋಗದಲ್ಲಿನ ಒತ್ತಡವು ನಿಮ್ಮ ಆರೋಗ್ಯದ ಮೇಲೆ ಪರಿಣಾಮವನ್ನು ಉಂಟುಮಾಡಬಹುದು. ಮೊದಲೇ ಸಮಯವನ್ನು ಸರಿಯಾಗಿ ನಿರ್ಧರಿಸಿಕೊಂಡು ಕಾರ್ಯವನ್ನು ಆರಂಭಿಸಿದರೆ ಸಕಾಲಕ್ಕೆ ಮುಗಿಯುವುದು. ನಿಮ್ಮ ವ್ಯಾಪ್ತಿಯನ್ನು ಮೀರಿದ ಕೆಲಸವನ್ನು ನೀವು ಮಾಡಬೇಕಾದೀತು. ಆಸಕ್ತಿಯು ಇಲ್ಲದಿದ್ದರೂ ಒತ್ತಾಯಕ್ಕೆ ಧಾರ್ಮಿಕ ಕಾರ್ಯಗಳಲ್ಲಿ ತೊಡಗುವಿರಿ. ಆಪತ್ತಿನಲ್ಲಿ ಇರುವ ನಿಮಗೆ ಸ್ನೇಹಿತರ ಸಣ್ಣ ಸಹಾಯವೂ ನಿಮಗೆ ಧೈರ್ಯ ತಂದುಕೊಡುವುದು.

‘ವಟವಟ ಅಂತಾನೆ’; ಐಶ್ವರ್ಯಾಗೆ ಶಿಶಿರ್ ಮೇಲಿದ್ದ ಅಭಿಪ್ರಾಯ ಬದಲಾಯ್ತಾ?
‘ವಟವಟ ಅಂತಾನೆ’; ಐಶ್ವರ್ಯಾಗೆ ಶಿಶಿರ್ ಮೇಲಿದ್ದ ಅಭಿಪ್ರಾಯ ಬದಲಾಯ್ತಾ?
ಮನೆಯಲ್ಲಿ ತೆಂಗಿನಕಾಯಿ ಕಟ್ಟುವುದರ ಹಿಂದಿನ ಅರ್ಥವೇನು ಗೊತ್ತಾ? ವಿಡಿಯೋ ನೋಡಿ
ಮನೆಯಲ್ಲಿ ತೆಂಗಿನಕಾಯಿ ಕಟ್ಟುವುದರ ಹಿಂದಿನ ಅರ್ಥವೇನು ಗೊತ್ತಾ? ವಿಡಿಯೋ ನೋಡಿ
ಇಂದಿನ ರಾಶಿ ಫಲ, ಪಂಚಾಂಗ ಮತ್ತು ಜ್ಯೋತಿಷ್ಯ ಭವಿಷ್ಯ ತಿಳಿಯಿರಿ
ಇಂದಿನ ರಾಶಿ ಫಲ, ಪಂಚಾಂಗ ಮತ್ತು ಜ್ಯೋತಿಷ್ಯ ಭವಿಷ್ಯ ತಿಳಿಯಿರಿ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ