AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Horoscope: ಕಛೇರಿ ಹಾಗೂ ಕುಟುಂಬ ಎರಡೂ ನಿಮಗೆ ಒತ್ತಡ ತರಬಹುದು, ಸಮಾಧಾನ ಚಿತ್ತದಿಂದಿರಿ

ಇಂದಿನ ದಿನಭವಿಷ್ಯ: ನೀವು ಮೇಷ, ವೃಷಭ, ಮಿಥುನ, ಕಟಕ ರಾಶಿಯವರೇ? ಹಾಗಿದ್ದರೆ ಜನವರಿ 02, 2023ರ ನಿಮ್ಮ ರಾಶಿಭವಿಷ್ಯ ಹೇಗಿದೆ? ಇಂದಿನ ಭವಿಷ್ಯದಲ್ಲಿ ನಿವು ಲಾಭದ ನಿರೀಕ್ಷೆ ಮಾಡಬಹುದಾ? ಶುಭ-ಅಶುಭ ಇದೆಯಾ ಎಂಬಿತ್ಯಾದಿ ಮಾಹಿತಿಗಳು ಇಲ್ಲಿವೆ.

Horoscope: ಕಛೇರಿ ಹಾಗೂ ಕುಟುಂಬ ಎರಡೂ ನಿಮಗೆ ಒತ್ತಡ ತರಬಹುದು, ಸಮಾಧಾನ ಚಿತ್ತದಿಂದಿರಿ
ಪ್ರಾತಿನಿಧಿಕ ಚಿತ್ರ
ಗಂಗಾಧರ​ ಬ. ಸಾಬೋಜಿ
|

Updated on: Jan 02, 2024 | 12:10 AM

Share

ಒಂದಷ್ಟು ಮಂದಿ ಬೆಳಗ್ಗೆ ಎದ್ದ ನಂತರ ನಿತ್ಯ ಪಂಚಾಂಗ ಮತ್ತು ರಾಶಿಭವಿಷ್ಯ ನೋಡುತ್ತಾರೆ. ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಲಾಭ ಕಾದಿದೆಯಾ? ನಷ್ಟು ಉಂಟಾಗಬಹುದಾ? ಶುಭ, ಅಶುಭ ಇದೆಯಾ? ಸಂದಿಗ್ಧ ಪರಿಸ್ಥಿತಿ ಎದುರಾಗಲಿದೆ, ಏನು ಮಾಡಿದರೆ ಉತ್ತಮ ಎಂಬುದನ್ನು ತಿಳಿದುಕೊಳ್ಳುತ್ತಾರೆ. ಹಾಗಾದರೆ, ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರ ಇಂದಿನ (ಜನವರಿ 02) ಭವಿಷ್ಯ (Horoscope) ಹೇಗಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಧನು ಮಾಸ, ಮಹಾನಕ್ಷತ್ರ: ಪೂರ್ವಾಷಾಢ, ಮಾಸ: ಮಾರ್ಗಶೀರ್ಷ, ಪಕ್ಷ: ಕೃಷ್ಣ, ವಾರ: ಮಂಗಳ, ತಿಥಿ: ಷಷ್ಠೀ, ನಿತ್ಯನಕ್ಷತ್ರ: ಉತ್ತರಾ, ಯೋಗ: ಸೌಭಾಗ್ಯ, ಕರಣ: ವಣಿಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 59 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 13 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 03:25 ರಿಂದ ಸಂಜೆ 04:50 ರವರೆಗೆ,

ಮೇಷ ರಾಶಿ: ಆತುರದಲ್ಲಿ ಎಲ್ಲವನ್ನೂ ನೀವು ಆಗಬೇಕು ಎನ್ನುವುದು ಮೂರ್ಖತನವಾದೀತು. ನಿಮ್ಮ ಪ್ರಯತ್ನಗಳು ಮಾತ್ರ ಸರಿಯಾಗಿರಲಿ. ಫಲವನ್ನು ಕೊಡುವವನು ಕೊಟ್ಟೇಕೊಡುತ್ತಾನೆ. ತಾಯಿ ಮಾತಿನಿಂದ ನಿಮಗೆ ಹೊಸ ಸ್ಪೂರ್ತಿಯು ಸಿಗಬಹುದು. ಸಹೋದರರ ಜೊತೆ ಆಪ್ತ ಸಮಾಲೋಚನೆ ಮಾಡುವಿರಿ. ಪ್ರಭಾವಿವ್ಯಕ್ತಿಗಳ ಸಹವಾಸವು ನಿಮ್ಮ ಮನಸ್ಸನ್ನು ಹಗುರಾಗಿಸುವುದು. ಕೆಲಸದಲ್ಲಿ ಇರುವಷ್ಟು ಶ್ರದ್ಧೆ ಓದಿನ ಕಡೆಗೆ ಬರದೇ ಇರಬಹುದು. ಕೆಲವನ್ನು ಮರೆತು ಮುಂದೆ ಸಾಗುವುದು ನಿಮಗೆ ಉತ್ತಮ. ದೂರದ ಪೋಷಕರ ಜೊತೆ ಆಪ್ತವಾಗಿ ಮಾತನಾಡುವುದು ಅವರಿಗೆ ನೆಮ್ಮದಿಯನ್ನು ಕೊಡುವುದು ಎನ್ನುವ ಅರಿವು ಇರಲಿ. ನಿಮ್ಮ ಬಳಿಯ ಹಣವನ್ನು ಕೇಳಿಕೊಂಡು ಬರಬಹುದು. ಹೊಸ ಉದ್ಯೋಗಕ್ಕೆ ವಿವರಗಳನ್ನು ಕೇಳಿ ಪಡೆಯುವಿರಿ. ನಿಮ್ಮ ಮಕ್ಕಳಿಗೆ ಬೇಕಾದ ವಸ್ತುಗಳನ್ನು ಕೊಡಿಸಿ ಸಂತೋಷಿಸುವಿರಿ.

ವೃಷಭ ರಾಶಿ: ಧಾರ್ಮಿಕ ಆಚರಣೆಗಳಲ್ಲಿ ಅತಿಯಾದ ಆಸಕ್ತಿಯು ಇರದು. ವೃತ್ತಿಯ ಅನ್ವೇಷಣೆಗೆ ಸರಿಯಾದ ಸಮಯವಲ್ಲ. ನಿಮ್ಮ ಮಾತಿಗೆ ಮೆಚ್ಚುಗೆ ಸಿಕ್ಕರೂ ಕೆಲಸ‌ ಮಾತ್ರ ಆಗದು. ಯಾರನ್ನೋ ಶಪಿಸುತ್ತ ಇರುವುದು ಮನಸ್ಸನ್ನು ಹಾಳುಮಾಡಿಕೊಳ್ಳುವಿರಿ. ಬೇಸರವನ್ನು ಯಾರ ಬಳಿಯಾದರೂ ಹೇಳಿಕೊಳ್ಳಿ. ಸಮಾರಂಭಗಳಿಗೆ ಭೇಟಿಕೊಡುವುದು, ಅಲ್ಲಿ ನಿಮ್ಮ ಸಮಯವನ್ನು ವ್ಯರ್ಥಮಾಡಿಕೊಳ್ಳುವಿರಿ. ಏನನ್ನಾದರೂ ಬಳಸುವ ಮೊದಲು ಪರೀಕ್ಷಿಸಿಕೊಳ್ಳಿ. ಮಕ್ಕಳಲ್ಲಿ ಬದಲಾವಣೆಯನ್ನು ನೀವು ಕಾಣಬಹುದು. ಮೃದುವಾದ ಮಾತನ್ನು ನೀವು ಅಭ್ಯಾಸ ಮಾಡಿಕೊಳ್ಳಬೇಕಾದೀತು. ನಿಮ್ಮ ಕಾರ್ಯದಲ್ಲಿ ಮಗ್ನರಾಗಿ ಎಲ್ಲರನ್ನೂ ಮರೆಯುವಿರಿ. ಬಂಧುಗಳ ಜೊತೆ ದೂರ ಪ್ರಯಾಣವನ್ನು ಮಾಡಲಿದ್ದೀರಿ. ಇಂದು ಹೊರಗಿನ ಆಹಾರವನ್ನು ತಿನ್ನುವ ಸ್ಥಿತಿ ಬರಬಹುದು. ಅಸ್ಥಿರತೆಯು ನಮಗೆ ಗೊಂದಲವನ್ನು ಸೃಷ್ಟಿಸುವುದು.

ಮಿಥುನ ರಾಶಿ: ಒಂದರ ಹಿಂದೆ ಅನಾರೋಗ್ಯವು ಬಂದು ನಿಮ್ಮ ಚಿಂತೆಗೀಡುಮಾಡುವುದು. ಮನೆಯ ಕೆಲಸಕ್ಕೆ ಯಾರೂ ಬರದಿರುವುದು ನಿಮಗೆ ಅಸಮಾಧನಾವಾಗುವುದು. ಕಛೇರಿಯಲ್ಲಿ ನಿಮಗೆ ತಪ್ಪಿತಸ್ಥ ಭಾವವು ಬರಬಹುದು. ಸರ್ಕಾರಿ ಕೆಲಸಕ್ಕಾಗಿ ಹಣವನ್ನು ಕೊಡುವಿರಿ. ಯಾರಿಗೂ ಎತ್ತರದ ದನಿಯನ್ನು ಮಾಡುವುದು ಬೇಡ. ನಿಮ್ಮ ಬಗ್ಗೆ ತಪ್ಪು ಕಲ್ಪನೆಯು ಬರಬಹುದು. ಮಕ್ಕಳ ವಿಚಾರದಲ್ಲಿ ತಾರತಮ್ಯವನ್ನು ಮಾಡುವಿರಿ. ಅನಾರೋಗ್ಯವನ್ನು ಬಹಳವಾಗಿ ನಿರ್ಲಕ್ಷಿಸುವಿರಿ. ಕೊಟ್ಟ ಮಾತನ್ನು ಉಳಿಸಿಕೊಳ್ಳಲು ಕಷ್ಟವಾದೀತು. ಆದರೂ ಮಾತಿಗೆ ತಪ್ಪಲಾರಿರಿ. ಅಸಾಧ್ಯವಾದ ಕಾರ್ಯದ ಬಗ್ಗೆ ಅತಿಯಾದ ಒಲವು ಬೇಡ. ನಿಮ್ಮಷ್ಟಕ್ಕೆ ನೀವಿರುವುದು ಸುಖ. ಹಣದಲ್ಲಿ ಮೋಸವಾಗಬಹುದು. ಉನ್ನತ ಹುದ್ದೆಗೆ ಹೋಗಲು ಅವಕಾಶವಿದ್ದರೂ ನಿಮಗೆ ನಾನಾ ಕಾರಣಗಳಿಂದ ಬೇಡವೆನಿಸುವುದು. ಇಂದು ಯಾರ ಬಗ್ಗೆಯೂ ಸರಿ ಹಾಗೂ ತಪ್ಪುಗಳ ತುಲನೆಯು ಕಷ್ಟವಾಗುವುದು.

ಕಟಕ ರಾಶಿ: ಕುಟುಂಬವು ನಿಮ್ಮನ್ನೇ ಆಶ್ರಯಿಸಿದ್ದರೆ ನಿಮಗೆ ನಿರ್ವಹಣೆ ಕಷ್ಟವಾದೀತು. ಕಛೇರಿ ಹಾಗೂ ಕುಟುಂಬ ಎರಡೂ ನಿಮಗೆ ಒತ್ತಡವನ್ನು ತಂದೀತು. ನೂತನ ವಸ್ತುಗಳನ್ನು ಕಡಿಮೆ ಬೆಲೆಗೆ ಪಡೆದುಕೊಳ್ಳುವಿರಿ. ನಿಮ್ಮ ಕಲೆಗೆ ಸರಿಯಾದ ಪ್ರೋತ್ಸಾಹವು ಸಿಗಲಿದೆ. ವೃತ್ತಿಯಲ್ಲಿ ನೀವು ತುಂಬಾ ನಿಧಾನದಿಂದ ಕೆಲಸ ಮಾಡುವಿರಿ. ದೂರ ಬಂಧುಗಳ ಭೇಟಿಯಿಂದ ವಿವಾಹ ನಿಶ್ಚಯವಾಗಬಹುದುದು. ಪ್ರೇಮವು ಹೊಸ ತಿರುವನ್ನು ಪಡೆಯಬಹುದು. ಮನಸ್ಸು ಕೆಡಿಸಿಕೊಂಡು ಏನೂ ಮಾಡಲಾಗದು. ಶಾಂತವಾಗಿ, ಸಮಾಧಾನ ಚಿತ್ತದಿಂದ ಮುಂದುವರಿಯಿರಿ. ವಸ್ತುಗಳನ್ನು ಕಳೆದುಹೋಗಿದ್ದು ವಿಳಂಬವಾಗಿ ಬೆಳಕಿಗೆ ಬಂದೀತು. ಹಿರಿಯ ಮಾತನ್ನು ಅಸಡ್ಡೆ ಮಾಡುವಿರಿ. ಸಂಗಾತಿಯ ನಿಲುವನ್ನು ನೀವು ಒಪ್ಪದೇ ಕಲಹವಾಗಬಹುದು. ನಿಮ್ಮ ನಿರ್ಧಾರವು ಸರಿಯಾಗಿದೆಯೇ ಎಂದು ಅವಲೋಕನ ಮಾಡಿಕೊಳ್ಳಿ. ಅಪರಿಚಿತರ ಜೊತೆ ಅವಶ್ಯಕತೆಯಷ್ಟೇ ವ್ಯವಹರಿಸಿ. ಭವಿಷ್ಯದ ಅನೇಕ ದ್ವಂದ್ವಗಳು ಇರಬಹುದು.

ಗೃಹಲಕ್ಷ್ಮೀ ತಪ್ಪು ಮಾಹಿತಿ: ಮುಖಭಂಗ ತಪ್ಪಿಸಲು ‘ಕೈ’ ಸಂಧಾನ ಯತ್ನ
ಗೃಹಲಕ್ಷ್ಮೀ ತಪ್ಪು ಮಾಹಿತಿ: ಮುಖಭಂಗ ತಪ್ಪಿಸಲು ‘ಕೈ’ ಸಂಧಾನ ಯತ್ನ
ದೆಹಲಿ-ಮುಂಬೈ ಎಕ್ಸ್​ಪ್ರೆಸ್​ವೇನಲ್ಲಿ ಬಹು ವಾಹನಗಳ ನಡುವೆ ಡಿಕ್ಕಿ
ದೆಹಲಿ-ಮುಂಬೈ ಎಕ್ಸ್​ಪ್ರೆಸ್​ವೇನಲ್ಲಿ ಬಹು ವಾಹನಗಳ ನಡುವೆ ಡಿಕ್ಕಿ
25.2 ಕೋಟಿ ರೂ. ಹರಾಜಿನ ಬೆನ್ನಲ್ಲೇ ಸೊನ್ನೆ ಸುತ್ತಿದ ಕ್ಯಾಮರೋನ್ ಗ್ರೀನ್
25.2 ಕೋಟಿ ರೂ. ಹರಾಜಿನ ಬೆನ್ನಲ್ಲೇ ಸೊನ್ನೆ ಸುತ್ತಿದ ಕ್ಯಾಮರೋನ್ ಗ್ರೀನ್
ಕಾವ್ಯಾ ರೌದ್ರಾವತಾರಕ್ಕೆ ಎಲ್ಲರೂ ಶಾಕ್; ಅಶ್ವಿನಿಗೆ ಏಕವಚನದಲ್ಲೇ ಕ್ಲಾಸ್
ಕಾವ್ಯಾ ರೌದ್ರಾವತಾರಕ್ಕೆ ಎಲ್ಲರೂ ಶಾಕ್; ಅಶ್ವಿನಿಗೆ ಏಕವಚನದಲ್ಲೇ ಕ್ಲಾಸ್
ರಸ್ತೆ ಬದಿ ನಿಂತಿದ್ದ ಯುವತಿಯನ್ನು ಕೆಟ್ಟದಾಗಿ ಸ್ಪರ್ಶಿಸಿ ಪರಾರಿಯಾದ ಯುವಕ
ರಸ್ತೆ ಬದಿ ನಿಂತಿದ್ದ ಯುವತಿಯನ್ನು ಕೆಟ್ಟದಾಗಿ ಸ್ಪರ್ಶಿಸಿ ಪರಾರಿಯಾದ ಯುವಕ
ಇಸ್ಲಾಮಿಯಾದಿಂದ ಇಂಡಿಯಾವರೆಗೆ; ಸಖತ್ ಮಜವಾಗಿದೆ ಈ ಎಡಿಟೆಡ್ ವಿಡಿಯೋ
ಇಸ್ಲಾಮಿಯಾದಿಂದ ಇಂಡಿಯಾವರೆಗೆ; ಸಖತ್ ಮಜವಾಗಿದೆ ಈ ಎಡಿಟೆಡ್ ವಿಡಿಯೋ
ತಮ್ಮ ಸಾವಿಗೂ ಮುನ್ನ ದಾಳಿಕೋರನನ್ನು ತಡೆಯಲು ಯತ್ನಿಸಿದ್ದ ದಂಪತಿ
ತಮ್ಮ ಸಾವಿಗೂ ಮುನ್ನ ದಾಳಿಕೋರನನ್ನು ತಡೆಯಲು ಯತ್ನಿಸಿದ್ದ ದಂಪತಿ
ಶಬರಿಮಲೆಯ 18 ಮೆಟ್ಟಿಲುಗಳ ಮಹತ್ವವೇನು ಗೊತ್ತಾ?
ಶಬರಿಮಲೆಯ 18 ಮೆಟ್ಟಿಲುಗಳ ಮಹತ್ವವೇನು ಗೊತ್ತಾ?
ಮೊಬೈಲ್ ಕಳೆದುಕೊಂಡವರ ಮುಖದಲ್ಲಿ ಸಂತಸ ತಂದ ಉಡುಪಿ ಪೊಲೀಸರು
ಮೊಬೈಲ್ ಕಳೆದುಕೊಂಡವರ ಮುಖದಲ್ಲಿ ಸಂತಸ ತಂದ ಉಡುಪಿ ಪೊಲೀಸರು
‘45’ ಸಿನಿಮಾದಲ್ಲಿ ಶಿವರಾಜ್​ಕುಮಾರ್ ಲೇಡಿ ಗೆಟಪ್: ಗೀತಕ್ಕ ರಿಯಾಕ್ಷನ್ ನೋಡಿ
‘45’ ಸಿನಿಮಾದಲ್ಲಿ ಶಿವರಾಜ್​ಕುಮಾರ್ ಲೇಡಿ ಗೆಟಪ್: ಗೀತಕ್ಕ ರಿಯಾಕ್ಷನ್ ನೋಡಿ