ಜ್ಯೋತಿಷ್ಯವನ್ನು ಆತ್ಮಾವಲೋಕನ ಮತ್ತು ತಿಳುವಳಿಕೆಗೆ ಉಪಯುಕ್ತ ಸಾಧನವೆಂದು ಕೆಲವರು ಪರಿಗಣಿಸಿದರೆ, ಮತ್ತೆ ಕೆಲವರು ಎಲ್ಲರಂತೆ ತಮ್ಮ ರಾಶಿ ಭವಿಷ್ಯವನ್ನು ನೋಡುತ್ತಾರೆ. ಬುಧವಾರದ (ಜುಲೈ 10) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ? ರಾಹು ಕಾಲ, ಯಮಘಂಡ ಕಾಲ, ಗುಳಿಕ ಕಾಲದ ಸಮಯ ಮತ್ತು ಪಂಚಾಂಗವನ್ನು ತಿಳಿದುಕೊಳ್ಳಿ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಮಿಥುನ ಮಾಸ, ಮಹಾನಕ್ಷತ್ರ: ಪುನರ್ವಸು, ಮಾಸ: ಆಷಾಢ, ಪಕ್ಷ: ಶುಕ್ಲ, ವಾರ: ಬುಧ, ತಿಥಿ: ಪಂಚಮೀ, ನಿತ್ಯನಕ್ಷತ್ರ: ಮಘಾ, ಯೋಗ: ವಜ್ರ, ಕರಣ: ಬವ, ಸೂರ್ಯೋದಯ ಬೆಳಗ್ಗೆ 06 ಗಂಟೆ 11 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 07 ಗಂಟೆ 04 ನಿಮಿಷಕ್ಕೆ, ರಾಹು ಕಾಲ 12:38 ರಿಂದ 14:15ರ ವರೆಗೆ, ಯಮಘಂಡ ಕಾಲ 07:48 ರಿಂದ 09:25ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 11:01ರಿಂದ 12:38ರ ವರೆಗೆ.
ಮೇಷ ರಾಶಿ : ಏಕಾಕಾಲಕ್ಕೆ ಒತ್ತಡವಾದಂತೆ ಅನ್ನಿಸುವುದು. ಇಂದು ನಿಮ್ಮಲ್ಲಿ ಹೋರಾಟದ ಸ್ವಭಾವವು ಎದ್ದು ತೋರುವುದು. ಎಲ್ಲದಕ್ಕೂ ವಿರೋಧ ಮಾಡುವಿರಿ. ಖುಷಿಯಲ್ಲಿ ಕೊಟ್ಟ ಮಾತಿನಿಂದ ನಿಮಗೆ ಇಂದು ತೊಂದರೆಯಾದೀತು. ಆರೋಗ್ಯದ ವ್ಯತ್ಯಾಸದಿಂದ ವಿಶ್ರಾಂತಿಯನ್ನು ಪಡೆಯುವಿರಿ. ಎಷ್ಟೋ ಕಾಲದ ಅನಂತರ ನಿಮ್ಮ ನಡುವೆ ಆಪ್ತತೆ ಇರಲಿದೆ. ಖರ್ಚಿನ ವಿಚಾರದಲ್ಲಿ ಹೆಚ್ಚಿನ ಜಾಗರೂಕತೆ ಅವಶ್ಯಕ. ಲಾಭವಿಲ್ಲದೇ ಇಂದು ನೀವು ಯಾವ ಕೆಲಸವನ್ನೂ ಮಾಡಲಾರಿರಿ. ನಿಮಗೆ ಪ್ರಶಂಸೆಯು ಸಿಗಬಹುದು. ಮೇಲಧಿಕಾರಿಗಳು ನಿಮ್ಮ ಮೇಲೆ ಕಣ್ಣಿಡುವರು. ಮನಸ್ಸಿನಲ್ಲಿ ನಾನಾ ಬಗೆಯ ಗೊಂದಲವು ಇರುವುದು. ವಿದೇಶ ಪ್ರಯಾಣಕ್ಕೆ ಮಿತ್ರನ ಸಹಕಾರವು ಸಿಗಬಹುದು. ದೂರ ಪ್ರಯಾಣಕ್ಕೆ ವೈದ್ಯರು ನಿರ್ಬಂಧ ಹಾಕಬಹುದು. ದೌರ್ಬಲ್ಯವನ್ನೇ ಅಸ್ತ್ರವಾಗಿಸಿಕೊಂಡು ಲಾಭ ಪಡಯುವಿರಿ.
ವೃಷಭ ರಾಶಿ : ನೀವು ಅದೃಷ್ಟವನ್ನು ನಿರೀಕ್ಷಿತ್ತ ಸಮಯವನ್ನು ಕಳೆಯುವಿರಿ. ಯಾರನ್ನಾದರೂ ಮೆಚ್ಚಿಸಲು ನಿಮ್ಮ ಕೆಲಸವನ್ನು ಪಕ್ಕಕ್ಕಿರಿಸುವಿರಿ. ಮಾಡಿದ ತಪ್ಪನ್ನು ಸರಿ ಮಾಡಿಕೊಳ್ಳಲು ಸತತ ಪ್ರಯತ್ನ ಮಾಡುವಿರಿ. ನಿರುದ್ಯೋಗದಿಂದ ನಿಮಗೆ ಬಹಳ ಬೇಸರವಾದೀತು. ಎಲ್ಲರೂ ನಿಮ್ಮ ಬಗ್ಗೆ ಮಾತನಾಡಿಕೊಳ್ಳುವರು. ಇಷ್ಟವಿಲ್ಲದ ಕಡೆ ಹೋಗಬೇಕಾಗುವುದು. ಹಣದ ಹರಿವೂ ಸದ್ಯಕ್ಕೆ ಅಷ್ಟಕ್ಕೆಷ್ಟೇ ಇರಲಿದೆ. ಸಣ್ಣ ವಾಗ್ವಾದವು ಅನ್ಯರ ಜೊತೆ ನಡೆಯಲಿದೆ. ಮಾತಿನ ಮೇಲೆ ಹಿಡಿತವಿರಲಿ. ಹಣದ ಹರಿವಿನಲ್ಲಿ ವ್ಯತ್ಯಾಸವಾಗಲಿದೆ. ನಿಮ್ಮ ಜವಾಬ್ದಾರಿಯ ಕೆಲಸವನ್ನು ಬೇಗ ಮುಗಿಸಿ ಇನ್ನೊಬ್ಬರಿಗೆ ಸಹಾಯ ಮಾಡಲಿರುವಿರಿ. ಅಕಸ್ಮಾತ್ ಬಂದ ಸುದ್ದಿಯು ನಿಮಗೆ ಆತಂಕವನ್ನು ಉಂಟುಮಾಡೀತು. ಕೃತಜ್ಞತೆಯನ್ನೂ ತೋರದಷ್ಟು ನಿಷ್ಕರುಣೆ ಇರುವುದು. ಬಂಧುಗಳನ್ನು ಮನೆಗೆ ಆಹ್ವಾನಿಸುವಿರಿ. ನಿಮ್ಮ ಮನಸ್ಸಿಗೆ ಹಿಡಿಸದ ವಿಚಾರಗಳ ಚರ್ಚೆಯಿಂದ ನೀವು ದೂರ ಇರುವಿರಿ. ಉಪಕಾರದ ಸ್ಮರಣೆಯಿಂದ ಸಹಕಾರ ನೀಡುವಿರಿ.
ಮಿಥುನ ರಾಶಿ : ಇಂದು ನೀವು ಬಹಳ ಕಷ್ಟಪಟ್ಟು ಕೆಲಸ ಮಾಡಲಿದ್ದೀರಿ. ತಾತ್ಸಾರ ಮಾಡದೇ ಕ್ರಮಬದ್ಧವಾಗಿ ಶತ್ರುಗಳನ್ನು ಗೆಲ್ಲಿರಿ. ಕ್ರೀಡಪಟುಗಳು ತಮ್ಮ ಅವಿರತಶ್ರಮವನ್ನು ನಡೆಸಲಿದ್ದಾರೆ. ತಾಯಿಯಿಂದ ನಿಮಗೆ ಧನವು ಲಾಭವಾಗಬಹುದು. ನಿಮ್ಮ ಕೆಲಸದಲ್ಲಿ ನಿಷ್ಠೆ ಇರಲಿದೆ. ಯಂತ್ರೋಪಕರಣಗಳ ಮೇಲೆ ಅಧಿಕ ಮೋಹವಿರಲಿದೆ. ಎಲ್ಲವನ್ನೂ ನೀವೊಬ್ಬರೇ ಅನಿಭವಿಸಬೇಕು ಎಂಬ ಯೋಚನೆ ಇರಲಿದೆ. ಇಲ್ಲವಾದರೆ ಇತರರ ತೀರ್ಮಾನಕ್ಕೆ ಶರಣಾಗಬೇಕಾದೀತು. ವಾಹನಸಂಚಾರದಲ್ಲಿ ಕಿರಿಕಿರಿ ಇರುವುದು. ಕುಟುಂಬದ ಕೆಲಸದಲ್ಲಿ ಭಾಗವಹಿಸುವಿರಿ. ಕಡಿಮೆ ಅವಧಿಯಲ್ಲಿ ಹೆಚ್ಚು ಕೆಲಸವನ್ನು ಮಾಡಬಹುದು ಎಂದು ತೋರಿಸುವಿರಿ. ಯೋಗ್ಯರ ಸಹವಾಸವನ್ನು ಮಾಡಿ. ಭೂಮಿಯ ವ್ಯವಹಾರದಲ್ಲಿ ನಿಮಗೆ ಹಿನ್ನಡೆಯಾಗಲಿದೆ. ತಾಳ್ಮೆಯ ಅಗತ್ಯತೆಯ ಮನವರಿಕೆ ಅಗತ್ಯ. ಇನ್ನೊಬ್ಬರು ಕೊಡುವ ತೊಂದರೆಯಿಂದ ನೀವು ಬೇಸತ್ತುಹೋಗಬಹುದು. ನಿಮಗೆ ಹೂಡಿಕೆ ಮಾಡಲು ಯಾರಿಂದಲಾದರೂ ಒತ್ತಡವು ಬರಬಹುದು.
ಕಟಕ ರಾಶಿ : ಇಂದು ವಿದ್ಯಾಭ್ಯಾದಲ್ಲಿ ಕಾರ್ಯಕ್ಷಮತೆ ಗಮನಾರ್ಹವಾಗಿ ಸುಧಾರಣೆ ಕಾಣಲಿದೆ. ನಿಮ್ಮ ಅಂದಿನ ಸ್ಥಿತಿಯನ್ನು ನೆನೆಸಿಕೊಂಡು ಹೆಮ್ಮೆಪಡಲಿದ್ದೀರಿ. ಪಿತ್ರಾರ್ಜಿತ ಆಸ್ತಿಯನ್ನು ಪಡೆಯಲು ಹವಣಿಸುವಿರಿ. ಸಂಗಾತಿಯ ನಡವಿನ ಭಿನ್ನಾಭಿಪ್ರಾಯಗಳು ಹೆಚ್ಚಾಗಬಹುದು. ಇದರ ಪ್ರಭಾವವು ಕಛೇರಿಯ ಕೆಲಸದಲ್ಲಿಯೂ ಕಾಣಬಹುದು. ದುರಭ್ಯಾಸವನ್ನು ಬಿಡುವ ಹಂಬಲ ಇರುವುದು. ಮಕ್ಕಳು ನಿಮ್ಮನ್ನು ಹಾಸ್ಯ ಮಾಡಿಯಾರು. ಅನ್ಯರ ಸಂಬಂಧವು ನಿಮಗೆ ಅಪರಕೀರ್ತಿಯನ್ನು ತರಬಹುದು. ನಕಾರಾತ್ಮಕ ಆಲೋಚನೆಯ ನಿಮ್ಮನ್ನು ಹಿಮ್ಮುಖ ಮಾಡಬಹುದು. ಹಿರಿಯರ ವಿಚಾರದಲ್ಲಿ ಅನಾದರ ತೋರಿದಂತೆ ಕಾಣಿಸುವುದು. ಕುಟುಂಬವು ನಿಮ್ಮ ಜೊತೆಗಿದೆ ಎಂಬ ಧೈರ್ಯವಿರಲಿದೆ. ಸಾಮಾಜಿಕ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಮನ್ನಣೆ ಸಿಗುವುದು. ಸಂಗಾತಿಯನ್ನು ನೀವು ಮರೆತು ವ್ಯವಹರಿಸುವಿರಿ. ಧಾರ್ಮಿಕ ಆಸಕ್ತಿಯು ಹೆಚ್ಚಾಗುವುದು.
ಸಿಂಹ ರಾಶಿ : ಇಂದು ನೀವು ಸಹೋದ್ಯೋಗಿಗಳ ಜೊತೆ ನೀವು ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ವಿದೇಶದಲ್ಲಿ ಕೆಲಸಮಾಡಲು ನಿಮಗೆ ಅನೇಕ ಅವಕಾಶಗಳು ಸಿಗಬಹುದು. ಮಧ್ಯವರ್ತಿಗಳ ಮೂಲಕ ನಿಮ್ಮ ಕೆಲಸವನ್ನು ಮಾಡಿಸಿಕೊಳ್ಳುವಿರಿ. ವಿದ್ಯಾರ್ಥಿಗಳು ಮುಂದಿನ ಯೋಜನೆಯನ್ನು ಹಾಕಿಕೊಳ್ಳುವುದು ಉತ್ತಮ. ಬಣ್ಣದ ಮಾತುಗಳಿಗೆ ಬಲಿಯಾಗುವುದು ಬೇಡ. ಯಾರ ಮೇಲಾದರೂ ಅನುಮಾನವಿದ್ದರೆ ಅದನ್ನು ಕೂಡಲೇ ಹೇಳುವುದು ಬೇಡ. ಹೊಸ ಮನೆಯನ್ನು ಕಟ್ಟುವ ಯೋಚನೆಯು ಶುರುವಾಗಲಿದೆ. ಏಕಾಂತವನ್ನು ಹೆಚ್ಚು ಬಯಸಿ ದೂರ ಎಲ್ಲಿಯಾದರೂ ಹೋಗುವಿರಿ. ನಿಮ್ಮ ಯೋಚನೆಗಳು ಆದಷ್ಟು ಸರಿಯಾದ ಮಾರ್ಗದಲ್ಲಿ ಇರಲಿ. ತಾಳ್ಮೆ ಮತ್ತು ಪ್ರತಿಭೆಯಿಂದ ಶತ್ರು ಗೆಲ್ಲುವಲ್ಲಿ ನೀವು ಯಶಸ್ಸನ್ನು ಗಳಿಸುವಿರಿ. ನಿಮ್ಮದಾದ ಚಿಂತನೆ, ಕಾರ್ಯದಿಂದ ಯಶಸ್ಸನ್ನು ಪಡೆಯಲು ನೀವು ಬಹಳ ಸಮಯ ಕಾಯಬೇಕಾಗಬಹುದು.
ಕನ್ಯಾ ರಾಶಿ : ಇಂದು ನಿಮ್ಮ ಸಂಗಾತಿಯ ಜೊತೆಗಿನ ಭಿನ್ನಾಭಿಪ್ರಾಯದಿಂದ ದ್ವೇಷವು ಉಂಟಾಗಬಹುದು. ಇಂದಿನ ನಿಮ್ಮ ಕೆಲಸವು ಶಿಸ್ತಿನಿಂದ ಇದ್ದರೂ ನಿಮ್ಮ ಜೊತೆಗಾರರು ಅದನ್ನು ಮೂದಲಿಸಲಿದ್ದಾರೆ. ನಿಮ್ಮ ಸಲಹೆಗಳನ್ನು ನಿಮ್ಮವರು ತೆಗೆದುಕೊಳ್ಳದೇ ಇರುವುದು ನಿಮಗೆ ಸಿಟ್ಟೂ ಬೇಸರವನ್ನೂ ಉಂಟುಮಾಡಬಹುದು. ಸತ್ಯವನ್ನು ಹೇಳುವ ಮನಸ್ಸಿದ್ದರೂ ನಿಮಗೆ ಕೆಲವು ತೊಂದರೆ ಎದುರಾಗುವುದರಿಂದ ಅದನ್ನು ಗೌಪ್ಯವಾಗಿ ಇಡುವಿರಿ. ಧಾರ್ಮಿಕ ಆಚರಣೆಗಳನ್ನು ಮಾಡಲು ಹೆಚ್ಚು ಆಸಕ್ತಿ ತೋರಿಸುವಿರಿ. ಇತರರ ಸ್ವಭಾವವನ್ನು ನೀವು ಆಡಿಕೊಳ್ಳುವುದು ಬೇಡ. ಬಂಧುಗಳ ಸಹವಾಸದಿಂದ ಬದಲಾಗುವ ಸಾಧ್ಯತೆ ಇದೆ. ನೀವು ಹೊಸ ಹೂಡಿಕೆ ಮಾಡಬೇಕಾದರೆ ಅದು ಶುಭವಾಗುತ್ತದೆ. ಕುಟುಂಬದಲ್ಲಿಯೂ ಶಾಂತಿ ಮತ್ತು ಸಂತೋಷ ಇರುತ್ತದೆ. ನಿಮಗಿಂತ ಭಿನ್ನವಾದ ವ್ಯಕ್ತಿಗಳ ಬಗ್ಗೆ ಯೋಚಿಸದೇ ನಿಮ್ಮ ನಿಲುವೇ ಸರಿ ಎಂಬಂತೆ ವರ್ತಿಸುವಿರಿ. ಬೇಡ ವಿಚಾರಗಳ ಕಡೆ ಹೆಚ್ಚು ಗಮನ ಇರಲಿದೆ.
ತುಲಾ ರಾಶಿ : ಭೂಮಿಯ ವ್ಯವಹಾರವನ್ನು ಸದ್ಯಕ್ಕೆ ನಿಲ್ಲಿಸಿ, ಕೆಲವು ದಿನಗಳ ಅನಂತರ ನಡೆಸುವುದು ಉತ್ತಮ. ಹೊಸತನವನ್ನು ಇಷ್ಟಪಟ್ಟು ನಿಮ್ಮ ಜೀವನಶೈಲಿಯನ್ನು ಬದಲಿಸಿಕೊಳ್ಳುವ ಪ್ರಯತ್ನವನ್ನು ಮಾಡುವಿರಿ. ನಿಮ್ಮದಾದ ಆತ್ಮೀಯ ವೃತ್ತವನ್ನು ನಿರ್ಮಿಸಿಕೊಳ್ಳುವಿರಿ. ಕಳ್ಳತನದ ಅಪವಾದಗಳು ನಿಮಗೆ ಚಿಂತನೆಯನ್ನು ಕೊಡಬಹುದು. ವ್ಯಾಪಾರದಲ್ಲಿ ಮೋಸದಿಂದ ನಷ್ಟವಾಗಬಹುದು. ಹೆಚ್ಚು ಪರಿಶ್ರಮದಿಂದ ಕೆಲಸ ಮಾಡಬೇಕಾದೀತು. ವಿದ್ಯಾರ್ಥಿಗಳಿಗೆ ಓದುವಂತೆ ಒತ್ತಾಯ ಮಾಡಬೇಕಾದೀತು. ಇಂದಿನ ಕೋಪದಿಂದ ಏನನ್ನೂ ಸಾಧಿಸಲು ಸಾಧ್ಯವಾಗದು. ಹೂಡಿಕೆ ಹಣವನ್ನು ತೆಗೆಯು ನಿರ್ಧಾರವನ್ನು ಮಾಡಬೇಕಾದೀತು. ಊಹೆಯು ದಿಕ್ಕು ತಪ್ಪುವ ಸಾಧ್ಯತೆ ಇದೆ. ನಿಮ್ಮ ರಕ್ಷಣೆಯ ಬಗ್ಗೆ ಕಾಳಜಿ ಇರಲಿ. ಕೋಪವು ನಿಮ್ಮ ಇಂದಿನ ಕೆಲಸವನ್ನು ಕೆಡಿಸಬಹುದು. ನಿಮ್ಮ ಪ್ರಾಮಾಣಿಕತೆಯು ಇತರರಿಗೆ ಇಷ್ಟವಾಗುವುದು. ಪಡೆದುದನ್ನು ನಿಯತ್ತಿನಿಂದ ರಕ್ಷಿಸಿಕೊಳ್ಳುವ ಪ್ರಯತ್ನದಲ್ಲಿ ಇರುವಿರಿ.
ವೃಶ್ಚಿಕ ರಾಶಿ : ಇಂದು ಯಾರ ಬಳಿಯಾದರೂ ಮಾತನಾಡಲು ಸಂಕೋಚ ಇರುವುದು. ಚಿಂತೆಯು ನಿಮ್ಮ ಮಾನಸಿಕ ಸ್ಥಿತಿಯನ್ನು ದುರ್ಬಲ ಮಾಡುವುದು. ಜೋಪಾನವಾಗಿ ಇರಿಸಿಕೊಂಡಿರುವ ನಿಮ್ಮ ಅಮೂಲ್ಯವಾದ ವಸ್ತುಗಳು ಕಣ್ಮರೆಯಾಗಿದ್ದು ಇಂದು ತಿಳಿಯಲಿದೆ. ಆಸ್ತಿಯ ವಿಚಾರಕ್ಕೆ ಸಹೋದರರ ನಡುವೆ ವೈಮನಸ್ಯ ಉಂಟಾಗಬಹುದು. ದೂರ ಪ್ರಯಾಣದಿಂದ ಆರೋಗ್ಯವು ಹಾಳಾಗುವುದು. ಅಲ್ಪ ಜ್ಞಾನಿಗಳ ಸಹವಾಸದಿಂದ ನಿಮ್ಮ ಮಾರ್ಯಾದೆಯೂ ಹೋಗಬಹುದು. ಸಮ್ಮಾನಗಳು ಸಂತೋಷವನ್ನು ತರುವುದು. ವಿದೇಶದಲ್ಲಿ ಇದ್ದವರಿಗೆ ಸ್ವದೇಶಕ್ಕೆ ಹೋಗಲು ಅವಕಾಶ ಸಿಗಲಿದೆ. ತಪ್ಪು ನಿರ್ಧಾರಗಳನ್ನು ಮಾಡಿ ಕಷ್ಟಪಡಬೇಕಾದೀತು. ಅಧಿಕಾರದ ಅಸೆಯಿಂದ ನಿಮ್ಮ ವ್ಯಕ್ತಿತ್ವ ಬದಲಾಗಬಹುದು. ವ್ಯವಧಾನದ ಕೊರತೆಯನ್ನು ಎದುರಿಸುವಿರಿ. ನಿಮ್ಮ ಕೆಲಸವಾಗಲು ಯಾರನ್ನಾದರೂ ದೂರ ಮಾಡುವಿರಿ. ನಿಮ್ಮ ಆಲಸ್ಯವನ್ನು ಹಿತಶತ್ರುಗಳು ಅವಕಾಶವಾಗಿ ತೆಗೆದುಕೊಳ್ಳುವರು. ಭೂಮಿಯಿಂದ ಇಂದು ಸಂಪತ್ತು ಪಡೆಯುವಿರಿ.
ಧನು ರಾಶಿ : ಇಂದು ಸಜ್ಜನರ ಸಹವಾಸದಿಂದ ಸಜ್ಜನರೆನಿಸಿಕೊಳ್ಳುವಿರಿ. ನಿಮ್ಮ ಅಗತ್ಯತೆಗಳ ಯಾದಿಯು ತುಂಬಾ ದೊಡ್ಡದಿದ್ದು ಅದನ್ನು ಪೂರೈಸಲು ಸತತ ಪ್ರಯತ್ನವನ್ನು ಮಾಡುವಿರಿ. ಸ್ವಾಭಿಮಾನಕ್ಕೆ ಧಕ್ಕೆ ಬಂದು ಮನಸ್ಸಿನಲ್ಲಿ ಬಹಳ ಹಿಂಸೆಯನ್ನು ಅನುಭವಿಸಬಹುದು. ಸ್ವಂತಿಕೆಯನ್ನು ಉಳಿಸಿಕೊಳ್ಳುವುದು ಕಷ್ಟವಾದೀತು. ದಾಂಪತ್ಯದಲ್ಲಿ ಸುಖವಿದ್ದರೂ ಸಣ್ಣ ಕಿರಿಕಿರಿಗಳು ಬಂದು ಹೋಗಬಹುದು. ದಿನಚರ್ಯೆಯಲ್ಲಿ ವ್ಯತ್ಯಾಸವನ್ನು ಇಂದು ಕಾಣಬಹುದಾಗಿದೆ. ಹಠ ಸ್ವಭಾವವನ್ನು ಸ್ವಲ್ಪ ಕಡಿಮೆ ಮಾಡಿಕೊಳ್ಳುವುದು ಉತ್ತಮ. ಕ್ಷಣದ ಕೋಪವು ನಿಮ್ಮ ಉತ್ಸಾಹವನ್ನು ಕುಂದಿಸೀತು. ನಿಮ್ಮ ಕೆಲಸವೆಲ್ಲವೆಲ್ಲವೂ ಪರರ ಉಪಕಾರಕ್ಕೇ ಆಗುವುದು. ಮಾತಿನಲ್ಲಿ ಕಠೋರತಯು ಕಡಿಮೆಯಾದರೆ ಒಳ್ಳೆಯದು. ಇಂದು ಪೋಷಕರ ಬಗ್ಗೆ ವಿಶೇಷ ಕಾಳಜಿ ವಹಿಸಿ. ಅಪರಿಚಿತರ ಮಾತನ್ನು ನೀವು ನಂಬುವಿರಿ. ಪರೀಕ್ಷೆಯ ಭಯವನ್ನು ನೀವು ಕಳೆದುಕೊಳ್ಳಬೇಕು.
ಮಕರ ರಾಶಿ : ಇಂದು ಅಪರಿಚಿತರೂ ಆಪ್ತರಂತೆ ವರ್ತಿಸಬಹುದು. ನಿಮ್ಮ ಎಲ್ಲ ಗೌಪ್ಯತೆಯನ್ನು ಹೇಳುವಿರಿ. ಹಗುರವಾದ ಮಾತುಗಳು ನಿಮಗೆ ಅಪಮಾನವನ್ನು ಮಾಡುವುದು. ಯಾರನ್ನೂ ಹಗುರವಾಗಿ ಕಾಣುವುದು ಬೇಡ. ನಿಮ್ಮ ಸಾಮರ್ಥ್ಯವನ್ನು ಪ್ರದರ್ಶಿಸುವ ಅವಶ್ಯಕತೆ ಇಲ್ಲ. ಅದು ತಾನಾಗಿಯೇ ಗೊತ್ತಾಗಲಿದೆ. ಗೌರವಯುತವಾಗಿ ಎಲ್ಲರ ಜೊತೆ ನಡೆದುಕೊಳ್ಳುವಿರಿ. ಸಮಯಕ್ಕೆ ಹೆಚ್ಚು ಮಹತ್ವವನ್ನು ನೀವು ಕೊಡಲಿದ್ದೀರಿ. ಕಛೇರಿಯ ಕೆಲಸವೇ ಇಂದು ಅಧಿಕವಾದೀತು. ಅನ್ಯಾಯವನ್ನು ಖಂಡಿಸುವ ಮಾನಸಿಕತೆ ಇರಲಿದೆ. ಇನ್ನೊಬ್ಬರ ಸ್ಥಿತಿಯನ್ನು ಕಂಡು ನೀವು ನೆಮ್ಮದಿಯಿಂದ ಇರುವಿರಿ. ಸಂಗಾತಿಯಿಂದ ಅನಿರೀಕ್ಷಿತ ಸಮಾಚಾರ ಬರಬಹುದು. ಏನನ್ನೂ ಹೇಳದೇ ನಿಮ್ಮಷ್ಟಕ್ಕೆ ಗಮನಿಸಿ. ಇಂದು ಅನಗತ್ಯ ವಸ್ತುಗಳಿಗಾಗಿ ವ್ಯರ್ಥವಾಗಿ ಖರ್ಚಾಗಬಹುದು. ಅದನ್ನು ತಪ್ಪಿಸಿಕೊಳ್ಳುವುದು ಉತ್ತಮ. ನೀವು ದೈಹಿಕಪೀಡೆಯಿಂದ ಬಳಲುತ್ತಿದ್ದರೆ ದುಃಖವು ಹೆಚ್ಚಾಗಬಹುದು.
ಕುಂಭ ರಾಶಿ : ಇಂದು ನಿಮ್ಮ ಮಾತುಗಳು ಸಂಬಂಧದಲ್ಲಿ ಒಡಕು ತರುವಂತಹವು ಆಗಿರುತ್ತವೆ. ಒತ್ತಡದಿಂದ ನಿಮಗೆ ವಿಶ್ರಾಂತಿಯ ಅವಶ್ಯಕತೆ ಇರುತ್ತದೆ. ಇಲ್ಲವಾದರೆ ಮಾಡುವ ಕೆಲಸವು ಅಶಿಸ್ತಿನಿಂದ ಇರಬಹುದು. ನಿರೀಕ್ಷೆ ಮೀರಿದ ಅನುಕೂಲತೆಗಳು ಇದ್ದರೂ ಸಂತೃಪ್ತಿಯು ಇರಲಾರದು. ಪ್ರಣಯದಲ್ಲಿ ಅತಿಯಾದ ಆಸಕ್ತಿಯೂ ಇರಲಾರದು. ಉತ್ಪಾದನಾ ಕ್ಷೇತ್ರದಲ್ಲಿ ಸಾಧಿಸುವ ಯೋಜನೆ ಇರಲಿದೆ. ಹಳೆಯ ಘಟನೆಯು ಇಂದು ಕಾರಣಾಂತರದಿಂದ ನೆನಪಾಗಿ ಕಾಡಲಿದೆ. ದೇಶವನ್ನು ಸುತ್ತುವ ಮನಸ್ಸಾದೀತು. ವೈದ್ಯಕೀಯ ವಿಚಾರದಲ್ಲಿ ನಿಮಗೆ ಕೆಲವು ಕುತೂಹಲವು ಉಂಟಾಗಬಹುದು. ಆಪ್ತರ ಜೊತೆ ಸಮಾಲೋಚನೆ ನಡೆಸುವಿರಿ. ಹಳೆಯ ವಸ್ತುಗಳ ಬಗ್ಗೆ ತಾತ್ಸಾರ ಭಾವ ಬರಬಹುದು. ಇಂದು ನಿಮ್ಮ ಕೆಲಸವನ್ನು ಬದಲು ಮಾಡಿಕೊಳ್ಳಲಿದ್ದೀರಿ. ಶುಭ ಸಮಾರಂಭದಲ್ಲಿ ಭಾಗವಹಿಸಲು ನಿಮಗೆ ಅವಕಾಶ ಸಿಗುತ್ತದೆ. ಅಧಿಕಾರಕ್ಕೆ ಸಂಬಂಧಿಸಿದಂತೆ ಮಿತ್ರನಿಂದ ನಿಮಗೆ ವಂಚನೆಯಾಗಿರುವುದು ಗೊತ್ತಾಗುವುದು.
ಮೀನ ರಾಶಿ : ನಿಮಗೆ ಆಗದವರ ಬಗ್ಗೆ ಕಿವಿಚುಚ್ಚುವುದು ಬೇಡ. ಹಣದ ಕೊರತೆಯಿಂದ ಸಾಲವನ್ನು ಮಾಡುವ ಸಾಧ್ಯತೆಯಿದೆ. ವಾಹನ ಖರೀದಿಯ ವಿಚಾರದಲ್ಲಿ ಗೊಂದಲಗಳು ಬರಬಹುದು. ಸಂತೋಷವನ್ನು ಅನುಭವಿಸುವ ತಾಳ್ಮೆ ಇರದು. ಹಣಕಾಸಿನ ವ್ಯವಹಾರದಲ್ಲಿ ನಿಮಗೆ ಹೆಚ್ಚು ಸಂದೇಹಗಳು ಬರಬಹುದು. ಅತ್ಯಾಪ್ತರನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ಮನೋರಂಜನೆಯನ್ನು ಇಂದು ಹೆಚ್ಚು ಇಷ್ಟಪಡುವಿರಿ. ಕೇಳಿ ಬಂದವರಿಗೆ ಯಥಾಯೋಗ್ಯ ಸಹಾಯವನ್ನು ಮಾಡುವಿರಿ. ಕೋಪವನ್ನು ಕಡಿಮೆ ಮಾಡಿಕೊಂಡಿದ್ದರ ಪರಿಣಾಮ ನಿಮ್ಮ ಆಪ್ತರ ಸಂಖ್ಯೆ ಹೆಚ್ಚಾಗಿದೆ. ಧಾರ್ಮಿಕ ಆಚರಣೆಯಿಂದ ಸಂಕಷ್ಟಗಳು ದೂರಾಗುವ ನಂಬಿಕೆ ಇರಲಿದೆ. ತಂದೆಯಿಂದ ದೂರವಿರುವ ಯೋಚನೆ ಮಾಡುವಿರಿ. ರಾಜಕಾರಣಿಗಳು ಸಮಾರಂಭಗಳಿಗೆ ಭಾಗವಹಿಸುವರು. ಸರ್ಕಾರದ ಕಡೆಯಿಂದ ಆಗುವ ನಿಮ್ಮ ಕೆಲಸವನ್ನು ಪ್ರಭಾವಿ ವ್ಯಕ್ತಿಗಳ ಮೂಲಕ ಮುನ್ನಡೆಸುವಿರಿ.
-ಲೋಹಿತ ಹೆಬ್ಬಾರ್ – 8762924271 (what’s app only)