ಎಂಟು ತಿಂಗಳ ನಂತರ ರಾಹುವಿನ ಸ್ಥಾನ ಬದಲು..! ಯಾರಿಗೆ ರಾಹುವಿನಿಂದ ಶುಭ ಫಲ..?

ವಿಶೇಷವೆಂದರೆ ರಾಹು ಮತ್ತು ಕೇತು ಇಬ್ಬರೂ ಏಕಕಾಲಕ್ಕೆ ತಮ್ಮ ಸ್ಥಾನವನ್ನು ಬದಲಿಸುತ್ತವೆ. ಕೇತು ಬದಲಾದರೂ ರಾಹುವು ಬದಲಾಗುತ್ತಾನೆ, ರಾಹುವು ಪರಿವರ್ತನೆಯಾದರೂ ಕೇತುವೂ ಸ್ಥಾನವನ್ನು ಬದಲಿಸುತ್ತಾನೆ. ಹೀಗೆ ಖಗೋಳದಲ್ಲಿ ನಡೆಯುವ ಸಂಗತಿ.

ಎಂಟು ತಿಂಗಳ ನಂತರ ರಾಹುವಿನ ಸ್ಥಾನ ಬದಲು..! ಯಾರಿಗೆ ರಾಹುವಿನಿಂದ ಶುಭ ಫಲ..?
ಸಾಂದರ್ಭಿಕ ಚಿತ್ರ
Follow us
| Updated By: ಅಕ್ಷಯ್​ ಪಲ್ಲಮಜಲು​​

Updated on:Jul 09, 2024 | 10:40 AM

ಖಗೋಳ ಶಾಸ್ತ್ರದಲ್ಲಿ ನವಗ್ರಹಗಳಲ್ಲಿ ರಾಹು ಮತ್ತು ಕೇತುಗಳು ಪ್ರಮುಖ ಗ್ರಹಗಳು. ಇವು ಪೂರ್ವಜರ ಅಥವಾ ನಮ್ಮ ಪಾಪ ಕಾರ್ಯಗಳನ್ನು ಸೂಚಿಸುತ್ತವೆ. ಇವೆರಡೂ ಗ್ರಹಗಳು ಪರಸ್ಪರ ವಿರುದ್ಧ ದಿಕ್ಕಿನಲ್ಲಿ ಖಗೋಳದಲ್ಲಿ ಕಾಣಿಸುತ್ತವೆ. ಜಾತಕದಲ್ಲಿಯೂ ಅವುಗಳ ಸ್ಥಾನವನ್ನು ವಿರುದ್ಧ ದಿಕ್ಕಿನಲ್ಲಿಯೇ ಕಾಣುತ್ತವೆ. ಈ ರಾಹು ಮತ್ತು ಕೇತುಗಳ ಸಂಚಾರ ಉಳಿದ ಗ್ರಹಗಳಿಗಿಂತ ಭಿನ್ನ. ರವಿ, ಚಂದ್ರ, ಕುಜ, ಬುಧ, ಗುರು, ಶುಕ್ರ, ಶನಿ ಇವರು ಪ್ರದಕ್ಷಿಣದ ಪ್ರಕಾರದಲ್ಲಿ ಸಂಚಾರ ಮಾಡಿದರೆ, ರಾಹು ಮತ್ತು ಕೇತುಗಳು ಅಪ್ರದಕ್ಷಿಣವಾಗಿ ಸಂಚರಿಸುತ್ತವೆ. ಉದಾಹರಣೆಗೆ ಹೇಳುವುದಾದರೆ ಬೇರೆ ಗ್ರಹಗಳು ಅಶ್ವಿನೀ ಭರಣೀ ಕೃತ್ತಿಕಾ ಹೀಗೆ ನಕ್ಷತ್ರಗಳಲ್ಲಿ‌ ಸಂಚರಿಸಿದರೆ, ರಾಹು ಮತ್ತು ಕೇತುಗಳು ಅಶ್ವಿನೀ ರೇವತೀ ಉತ್ತರಾಭಾದ್ರ ಕ್ರಮವಾಗಿ ಚಲಿಸುತ್ತವೆ.

ಇನ್ಮೊಂದು ವಿಶೇಷವೆಂದರೆ ರಾಹು ಮತ್ತು ಕೇತು ಇಬ್ಬರೂ ಏಕಕಾಲಕ್ಕೆ ತಮ್ಮ ಸ್ಥಾನವನ್ನು ಬದಲಿಸುತ್ತವೆ. ಕೇತು ಬದಲಾದರೂ ರಾಹುವು ಬದಲಾಗುತ್ತಾನೆ, ರಾಹುವು ಪರಿವರ್ತನೆಯಾದರೂ ಕೇತುವೂ ಸ್ಥಾನವನ್ನು ಬದಲಿಸುತ್ತಾನೆ. ಹೀಗೆ ಖಗೋಳದಲ್ಲಿ ನಡೆಯುವ ಸಂಗತಿ.

ಈ ಎರಡೂ ಗ್ರಹಗಳ ಅಂತರವು ರಾಶಿಯ ಪ್ರಕಾರವಾದರೆ ಏಳು ರಾಶಿಗಳು, ನಕ್ಷತ್ರಗಳ ಪ್ರಕಾರವಾದರೆ ಹದಿನೈದು. ರಾಹುವಿನ ನಕ್ಷತ್ರದಿಂದ ಆರಂಭಿಸಿ ಕೇತುವಿನ ನಕ್ಷತ್ರದ ವರೆಗೆ ಹದಿನೈದು, ಕೇತುವಿನ ನಕ್ಷತ್ರದಿಂದ ರಾಹುವಿನ ನಕ್ಷತ್ರದ ವರೆಗೆ ಹದಿನೈದು.

ನವೆಂಬರ್ ಮೊದಲ ದಿನದಿಂದ ಮೇಷ ರಾಶಿಯನ್ನು ಬಿಟ್ಟು ಮೀನರಾಶಿಗೆ ರಾಹುವು ಬಂದಿದ್ದಾನೆ. ಅಂದರೆ ರೇವತೀ ನಕ್ಷತ್ರವನ್ನು ಪ್ರವೇಶಿಸುವ ಮೂಲಕ ಮೀನ ರಾಶಿಯನ್ನು ಪ್ರವೇಶಿಸಿದ್ದಾನೆ. ಅಲ್ಲಿಂದ ಇಲ್ಲಿಯ ತನಕ ರೇವತೀ ನಕ್ಷತ್ರದಲ್ಲಿಯೇ ಇದ್ದು, ಇಂದಿನಿಂದ ಉತ್ತರಾಭಾದ್ರ ನಕ್ಷತ್ರವನ್ನು ಪ್ರವೇಶಿಸಲಿದ್ದಾನೆ. ಯಾವ ರಾಶಿಯವರಿಗೆ ಶುಭಫಲ ಫಲ ಎನ್ನುವುದನ್ನು ನೋಡೋಣ.

ರಾಹು ಮತ್ತು ಕೇತುಗಳನ್ನು ಶನಿಗೂ ಕುಜನು ಹೋಲಿಸುತ್ತಾರೆ. ಶನಿವದ್ರಾಹುಃ, ಕುಜವತ್ ಕೇತುಃ ಎಂದು. ಅಂದರೆ ಶನಿಯಿಂದ ಏನನ್ನು ತಿಳಿಯಲು ಸಾಧ್ಯ ಅದನ್ನು ರಾಹುವಿನಿಂದಲೂ, ಕುಜನಿಂದ ಏನನ್ನು ತಿಳಿಯಲು ಸಾಧ್ಯವೋ ಅದನ್ನು ಕೇತುವಿನಿಂದಲೂ ತಿಳಿಯಬೇಕು ಎನ್ನುವುದು ನಿಯಮ.

ಪ್ರಸ್ತುತ ಉತ್ತರಾಭಾದ್ರಾ ನಕ್ಷತ್ರವನ್ನು ಪ್ರವೇಶಿಸಲಿದ್ದು ಈ ನಕ್ಷತ್ರದ ಗ್ರಹವು ಶನಿ. ಪ್ರಸ್ತುತ ಶನಿಯು ಧನಿಷ್ಠಾ ನಕ್ಷತ್ರ ಕುಂಭರಾಶಿಯಲ್ಲಿ ಇದ್ದಾನೆ.‌ ಇದು ಕುಜನ ನಕ್ಷತ್ರವಾಗಿದೆ. ಕುಜ ಹಾಗೂ ಶನಿ ಇಬ್ಬರೂ ಸಮರಾದ ಕಾರಣ ಶನಿಯು ಅಶುಭ ಫಲವನ್ನು ನೀಡಲಾರ. ಮತ್ತು ಮೀನ ರಾಶಿಗೆ ಅಶುಭಸ್ಥಾನದಲ್ಲಿಯೇ ಅಶುಭ ಗ್ರಹವು ಉತ್ತಮ.

ಮಿಥುನ ರಾಶಿ :

ಈ ರಾಶಿಯವರಿಗೆ ಶುಭ. ಅದರಲ್ಲಿಯೂ ಆರ್ದ್ರಾ ನಕ್ಷತ್ರದವರು ಆರೋಗ್ಯದ ಸಮಸ್ಯೆಯಿಂದ ಮುಕ್ತರಾಗುವರು. ಮಕ್ಕಳ‌ ಜೊತೆಗಿನ ಬಾಂಧವ್ಯ ಸುಧಾರಿಸುವುದು. ಕೋಪದ ಸ್ವಭಾವ ಕಡಿಮೆಯಾಗುವುದು. ವಿದೇಶಕ್ಕೆ ಉದ್ಯೋಗಕ್ಕೆ ತೆರಳುವ ಸಂದರ್ಭ ಬರಲಿದೆ.

ಕನ್ಯಾ ರಾಶಿ :

ಇವರಿಗೂ ರಾಹುವಿನ ಬದಲಾವಣೆಯಿಂದ ಶುಭ.‌ ಅದರಲ್ಲೂ ಸ್ವಾತಿ ನಕ್ಷತ್ರದವರಿಗೆ ಮಾನಸಿಕ ಅಸ್ಥಿರತೆಯು ದೂರವಾಗಲಿದೆ. ನಿರ್ಧಾರವನ್ನು ಶೀಘ್ರವಾಗಿ ತೆಗೆದುಕೊಳ್ಳಲು ಸಾಧ್ಯ. ವಿದೇಶ ಪ್ರವಾಸ ಕನಸು ಇದ್ದರೆ ಅದು ಸಾಕಾರವಾಗುವುದು.

ಇದನ್ನೂ ಓದಿ: ಶುಕ್ರನ ಸಂಚಾರದಿಂದ ಯಾವ ರಾಶಿಯ ಜನರಿಗೆ ತೊಂದರೆ, ಪರಿಹಾರವೇನು?

ಕುಂಭ ರಾಶಿ :

ಈ ರಾಶಿಯವರಿಗೆ ರಾಹುನಿಂದ ಶುಭಫಲವನ್ನೇ ನಿರೀಕ್ಷಿಸಬಹುದು. ಶತಭಿಷಾ ನಕ್ಷತ್ರದವರಿಗೆ ಉತ್ತಮ ಫಲಿತಾಂಶವಿದೆ. ಆರ್ಥಿಕ ನಷ್ಟವನ್ನು ತಗ್ಗಿಸುವನು. ಉಳಿತಾಯಕ್ಕೆ ಬೇಕಾದ ಮಾರ್ಗವನ್ನೂ ಆತನೇ ತೋರಿಸಿಕೊಡುವನು ಅನ್ಯರ ಮೂಲಕ. ಅದನ್ನು ಗಮನಿಸಿಕೊಂಡು ಮುಂದುವರಿಯುವುದು ಉತ್ತಮ. ಅನಾರೋಗ್ಯಕ್ಕೆ ಬೇಕಾದ ಚಿಕಿತ್ಸೆ ದೊರೆಯುವುದು.

ಹೀಗೆ ರಾಹುವಿನ ಪರಿವರ್ತನೆ ಈ ಮೂರು ರಾಶಿಯವರಿಗೆ ಶುಭದಾಯಕ.

-ಲೋಹಿತ ಹೆಬ್ಬಾರ್8762924271 

ಮತ್ತಷ್ಟು ಆಧ್ಯಾತ್ಮ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 10:40 am, Tue, 9 July 24

ಕುಮಾರಸ್ವಾಮಿ ವಿರುದ್ಧ ಯೋಗೇಶ್ವರ್ ಮಾಡಿದ ಆರೋಪ ಸರಿಯಲ್ಲ: ನಿಖಿಲ್
ಕುಮಾರಸ್ವಾಮಿ ವಿರುದ್ಧ ಯೋಗೇಶ್ವರ್ ಮಾಡಿದ ಆರೋಪ ಸರಿಯಲ್ಲ: ನಿಖಿಲ್
ವಿಡಿಯೋ: ರಾಮ-ಆಂಜನೇಯನ ಮೂರ್ತಿ ಉದ್ಘಾಟಿಸಿದ ಶಿವರಾಜ್ ಕುಮಾರ್
ವಿಡಿಯೋ: ರಾಮ-ಆಂಜನೇಯನ ಮೂರ್ತಿ ಉದ್ಘಾಟಿಸಿದ ಶಿವರಾಜ್ ಕುಮಾರ್
ಕೃಷ್ಣ ಭಜನೆ, ಭಾರತೀಯ ನೃತ್ಯದ ಮೂಲಕ ರಷ್ಯಾದಲ್ಲಿ ಪ್ರಧಾನಿ ಮೋದಿಗೆ ಸ್ವಾಗತ
ಕೃಷ್ಣ ಭಜನೆ, ಭಾರತೀಯ ನೃತ್ಯದ ಮೂಲಕ ರಷ್ಯಾದಲ್ಲಿ ಪ್ರಧಾನಿ ಮೋದಿಗೆ ಸ್ವಾಗತ
ಕಾಂಗ್ರೆಸ್​ನಿಂದ ಸ್ಪರ್ಧಿಸಿ ಗೆದ್ದರೆ ಮಂತ್ರಿಯಾಗಬಹುದೇ ಯೋಗೇಶ್ವರ್?
ಕಾಂಗ್ರೆಸ್​ನಿಂದ ಸ್ಪರ್ಧಿಸಿ ಗೆದ್ದರೆ ಮಂತ್ರಿಯಾಗಬಹುದೇ ಯೋಗೇಶ್ವರ್?
ಊಹಾಪೋಹಗಳಿಗೆ ತೆರೆಹಾಡಿದ ಯೋಗೇಶ್ವರ್ ತಮ್ಮ ಚಿಹ್ನೆ ಇನ್ನೂ ನಿರ್ಧರಿಸಿಲ್ಲ
ಊಹಾಪೋಹಗಳಿಗೆ ತೆರೆಹಾಡಿದ ಯೋಗೇಶ್ವರ್ ತಮ್ಮ ಚಿಹ್ನೆ ಇನ್ನೂ ನಿರ್ಧರಿಸಿಲ್ಲ
ಸುರೇಶ್ ಚುನಾವಣೆ ಸ್ಪರ್ಧೆಯಿಂದ ದೂರವುಳಿಯಲು ನಿರ್ಧರಿಸಿದ್ದಾರೆ: ಬಾಲಕೃಷ್ಣ
ಸುರೇಶ್ ಚುನಾವಣೆ ಸ್ಪರ್ಧೆಯಿಂದ ದೂರವುಳಿಯಲು ನಿರ್ಧರಿಸಿದ್ದಾರೆ: ಬಾಲಕೃಷ್ಣ
ಗಸ್ತು ತಿರುಗುವ ಕುರಿತು ಭಾರತ-ಚೀನಾ ಒಪ್ಪಂದದ ಬಗ್ಗೆ ಸೇನಾ ಮುಖ್ಯಸ್ಥರ ಮಾತು
ಗಸ್ತು ತಿರುಗುವ ಕುರಿತು ಭಾರತ-ಚೀನಾ ಒಪ್ಪಂದದ ಬಗ್ಗೆ ಸೇನಾ ಮುಖ್ಯಸ್ಥರ ಮಾತು
ಯಾವ ಪಕ್ಷದಿಂದ ಸ್ಪರ್ಧಿಸಬೇಕೆನ್ನುವ ಗೊಂದಲದಲ್ಲಿ ಬಿಜೆಪಿ ನಾಯಕ ಯೋಗೇಶ್ವರ್
ಯಾವ ಪಕ್ಷದಿಂದ ಸ್ಪರ್ಧಿಸಬೇಕೆನ್ನುವ ಗೊಂದಲದಲ್ಲಿ ಬಿಜೆಪಿ ನಾಯಕ ಯೋಗೇಶ್ವರ್
ಕೇಕ್​ನಲ್ಲಿ ಮೂಡಿದ ಮರಳು ದಂಧೆಯ ಚಿತ್ರಣ
ಕೇಕ್​ನಲ್ಲಿ ಮೂಡಿದ ಮರಳು ದಂಧೆಯ ಚಿತ್ರಣ
ಬದೋನಿ ಬ್ಯೂಟಿ... ಅತ್ಯುತ್ತಮ ಡೈವಿಂಗ್ ಕ್ಯಾಚ್ ಹಿಡಿದ ಆಯುಷ್
ಬದೋನಿ ಬ್ಯೂಟಿ... ಅತ್ಯುತ್ತಮ ಡೈವಿಂಗ್ ಕ್ಯಾಚ್ ಹಿಡಿದ ಆಯುಷ್