Daily numerology July 10: ಈ ಜನ್ಮಸಂಖ್ಯೆಯ ಜನ ಹೂಡಿಕೆಗೆ ಮೊದಲು ಸಲಹೆ ಪಡೆಯಿರಿ, 1 ರಿಂದ 10ರ ವರೆಗಿನ ಸಂಖ್ಯಾಶಾಸ್ತ್ರ ಭವಿಷ್ಯ ಇಲ್ಲಿದೆ

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಜುಲೈ 10ರ ಬುವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

Daily numerology July 10: ಈ ಜನ್ಮಸಂಖ್ಯೆಯ ಜನ ಹೂಡಿಕೆಗೆ ಮೊದಲು ಸಲಹೆ ಪಡೆಯಿರಿ, 1 ರಿಂದ 10ರ ವರೆಗಿನ ಸಂಖ್ಯಾಶಾಸ್ತ್ರ ಭವಿಷ್ಯ ಇಲ್ಲಿದೆ
ಸಂಖ್ಯಾಶಾಸ್ತ್ರ
Follow us
| Updated By: ಕಿರಣ್ ಹನುಮಂತ್​ ಮಾದಾರ್

Updated on: Jul 09, 2024 | 9:32 PM

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಜುಲೈ 10ರ ಬುವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)

ಷೇರು- ಮ್ಯೂಚುವಲ್ ಫಂಡ್, ಪಿಪಿಎಫ್ ಮೊದಲಾದ ಹೂಡಿಕೆ ಸಾಧನಗಳಿಗೆ ಹಣಕಾಸು ಹಾಕುವ ಬಗ್ಗೆ ಗಂಭೀರವಾದ ಆಲೋಚನೆಯನ್ನು ಮಾಡಲಿದ್ದೀರಿ. ಇನ್ನು ಈ ಹಿಂದೆ ಯಾವಾಗಲೋ ಹೂಡಿಕೆ ಮಾಡಿ, ಬಹುತೇಕ ಮರೆತೇ ಹೋಗಿದ್ದ ಹಣ ಮತ್ತೆ ಬರುವಂಥ ಮಾರ್ಗಗಳು ಗೋಚರ ಆಗಲಿವೆ. ನಿಮ್ಮ ಜೊತೆಗೆ ಇರುವಂಥ ಗೆಳೆಯರ ಸಲಹೆ- ಸೂಚನೆಗಳನ್ನು ಗಂಭೀರವಾಗಿ ಪರಿಗಣಿಸಿ. ಅದರಿಂದ ನಿಮಗೆ ಒಳ್ಳೆಯದೇ ಆಗುತ್ತದೆ ಎಂಬ ಖಾತ್ರಿ ಆಗುತ್ತಿದ್ದಂತೆ ಸಲಹೆ- ಸೂಚನೆಗಳನ್ನು ಅಳವಡಿಸಿಕೊಳ್ಳಿ. ವಿದೇಶಕ್ಕೆ ತೆರಳುವುದಕ್ಕೆ ವೀಸಾಗಾಗಿ ಪ್ರಯತ್ನಿಸುತ್ತಿರುವವರಿಗೆ ಪ್ರಭಾವಿಗಳು ನೆರವಿಗೆ ಬರಲಿದ್ದಾರೆ. ನೀವು ನಿರೀಕ್ಷೆ ಮಾಡಿದ್ದಕ್ಕಿಂತ ಸುಲಭವಾಗಿ ಆ ಕೆಲಸ ಮುಗಿಯಬಹುದು ಎಂದೆನಿಸುವುದಕ್ಕೆ ಶುರು ಆಗುತ್ತದೆ. ಬ್ಯಾಂಕ್ ಗಳಿಗೆ ಶೈಕ್ಷಣಿಕ ಸಾಲ ಪಡೆದಂಥವರು ಅದನ್ನು ಭಾಗಶಃ ಹಿಂತಿರುಗಿಸುವುದಕ್ಕೆ ಅಥವಾ ಪೂರ್ತಿಯಾಗಿ ಚುಕ್ತಾ ಮಾಡುವುದಕ್ಕೆ ಹಣ ಹೊಂದಾಣಿಕೆ ಆಗಲಿದೆ.

ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)

ತುಂಬ ಸಂಭಾವಿತರಂತೆ ನಿಮ್ಮೆದುರು ಸೋಗು ಹಾಕುತ್ತಿದ್ದವರ ಬಣ್ಣ ಕಳಚಲಿದೆ. ಒಂದು ವೇಳೆ ಯಾವುದಾದರೂ ಕೆಲಸ ಪೂರ್ಣವಾಗಬೇಕು ಎಂಬ ಕಾರಣಕ್ಕೆ ನೀಡಿದ್ದ ಹಣ ಇದ್ದಲ್ಲಿ ಅದನ್ನು ವಾಪಸ್ ಪಡೆಯುವುದಕ್ಕೆ ಇಂದು ಸೂಕ್ತವಾದ ದಿನವಾಗಿರುತ್ತದೆ. ಮಕ್ಕಳ ಶೈಕ್ಷಣಿಕ ಪ್ರಗತಿಗಾಗಿ ನೀವು ಹಾಕಿದ್ದ ಪ್ರಯತ್ನ, ಮಾಡಿದ್ದ ತ್ಯಾಗ ಫಲ ನೀಡುತ್ತಿರುವುದು ಈ ದಿನ ಗಮನಕ್ಕೆ ಬರಲಿದೆ. ಖಾಸಗಿ ಕಂಪನಿಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವವರಿಗೆ ಬೇರೆ ಕಡೆಗಳಿಂದ ಉದ್ಯೋಗಾವಕಾಶಗಳು ಹುಡುಕಿಕೊಂಡು ಬರಲಿವೆ. ಕೆಲವು ಕಡೆ ನೀವು ಈಗಾಗಲೇ ಪ್ರಯತ್ನ ಮಾಡಿದ್ದಲ್ಲಿ ಅಲ್ಲಿಂದ ಬರಲಿದೆ ಮತ್ತು ನಿಮ್ಮಲ್ಲಿ ಕೆಲವರಿಗೆ ಸ್ನೇಹಿತರು- ಸಂಬಂಧಿಗಳ ರೆಫರೆನ್ಸ್ ಮೂಲಕ ಕೂಡ ಅವಕಾಶಗಳು ಹುಡುಕಿಕೊಂಡ ಬರಲಿವೆ. ಸ್ವಂತ ವ್ಯಾಪಾರ- ವ್ಯವಹಾರ ಮಾಡುತ್ತಿರುವವರು ಪಾರ್ಟನರ್ ಷಿಪ್ ಗಾಗಿ ಹುಡುಕಾಡುತ್ತಿದ್ದಲ್ಲಿ ಅದಕ್ಕೆ ಸೂಕ್ತವಾದ ವ್ಯಕ್ತಿಯೊಬ್ಬರು ತಾವಾಗಿಯೇ ಆ ಬಗ್ಗೆ ಪ್ರಸ್ತಾವವನ್ನು ಮಾಡಲಿದ್ದಾರೆ.

ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)

ನೀವು ಪಡೆದ ಸಾಲವನ್ನು ಹಿಂತಿರುಗಿಸುವಂತೆ ಕೆಲವರು ಒತ್ತಡ ಹಾಕಬಹುದು. ಅಥವಾ ಬ್ಯಾಂಕ್ ಅಥವಾ ಬ್ಯಾಂಕೇತರ ಸಂಸ್ಥೆಗಳಲ್ಲಿ ತಾವು ಪಡೆಯುವ ಸಾಲಕ್ಕೆ ಜಾಮೀನಾಗಿ ನಿಲ್ಲುವಂತೆ ಕೇಳಿಕೊಳ್ಳಬಹುದು. ಯಾವುದೇ ವಿಚಾರವಾಗಲೀ ಸರಿಯಾದ ತೀರ್ಮಾನವನ್ನು ತೆಗೆದುಕೊಳ್ಳಿ. ಸೋದರ- ಸೋದರಿಯರು ಇದ್ದಲ್ಲಿ ಅವರ ಕೌಟುಂಬಿಕ ವಿಚಾರದಲ್ಲಿ ನೀವು ಸಹಾಯ ಮಾಡಲೇಬೇಕಾದ ಸನ್ನಿವೇಶ ಸೃಷ್ಟಿಯಾಗಲಿದೆ. ನಿಧಾನವಾಗಿ ಆಲೋಚಿಸಬಹುದು ಅಂದುಕೊಂಡಿದ್ದ ಕೆಲವು ಹಣಕಾಸಿನ ನಿರ್ಧಾರವನ್ನು ಈಗಿಂದ ಈಗಲೇ ತೆಗೆದುಕೊಳ್ಳಬೇಕು ಎಂಬಂಥ ಸನ್ನಿವೇಶ ನಿರ್ಮಾಣ ಆಗಲಿದೆ. ಪೊಲೀಸ್ ಠಾಣೆಗಾಗಿ ಇತರರ ಸಲುವಾಗಿಯಾದರೂ ಹೋಗಿಬರಬೇಕು ಎಂಬಂಥ ಸನ್ನಿವೇಶ ನಿಮ್ಮಲ್ಲಿ ಕೆಲವರಿಗೆ ಬರಲಿದೆ. ಒಂದೇ ವಿಚಾರಕ್ಕೆ ತುಂಬ ಪ್ರಾಶಸ್ತ್ಯ ನೀಡಿದ್ದರಿಂದ ಕೆಲವು ಡೆಡ್ ಲೈನ್ ಗಳನ್ನು ತಪ್ಪಿಸಿದಂತಾಗಲಿದ್ದು, ಅದಕ್ಕಾಗಿ ದಂಡವನ್ನು ಪಾವತಿಸಬೇಕಾದ ಸ್ಥಿತಿ ನಿರ್ಮಾನ ಆಗಲಿದೆ.

ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4)

ಕೆಲವು ಕೆಲಸ, ವಿಷಯ, ವಿಚಾರಗಳನ್ನು ನೀವು ಪ್ರತಿಷ್ಠೆ ಎಂಬಂತೆ ತೆಗೆದುಕೊಳ್ಳಲಿದ್ದೀರಿ. ನಿಮ್ಮ ಸಾಮರ್ಥ್ಯಕ್ಕೆ ಮೀರಿದ ಕೆಲಸಗಳನ್ನು ಶತಾಯಗತಾಯ ಮುಗಿಸುವುದಕ್ಕೆ ಬೇಕಾದ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಿದ್ದೀರಿ. ಯಾಕಾದರೂ ಹಣ ಹಾಕಿದೆನೋ ಅಂದುಕೊಂಡಂಥ ಹೂಡಿಕೆಯೊಂದು ಲಾಭದಾಯಕವಾಗಿ ಬದಲಾಗುವ ಎಲ್ಲ ಸಾಧ್ಯತೆಗಳಿವೆ. ಮನಸ್ಸಿಗೆ ಒಪ್ಪುವಂಥ ಕೆಲವು ಸ್ಥಳಗಳಿಗೆ ತೆರಳಿ, ಅಲ್ಲಿಯೇ ಕೆಲವು ಸಮಯವನ್ನು ಕಳೆಯುವುದಕ್ಕೆ ನಿರ್ಧಾರವನ್ನು ಮಾಡಲಿದ್ದೀರಿ. ನಿವೃತ್ತಿಯ ಸಮೀಪದಲ್ಲಿ ಇರುವಂಥ ಉದ್ಯೋಗಸ್ಥರ ಪೈಕಿ ಕೆಲವರು ತಮಗೆ ಬರುವಂಥ ನಿವೃತ್ತಿ ನಂತರದ ಹಣದ ಮೊತ್ತವನ್ನು ಮುಂಚಿತವಾಗಿಯೇ ತೆಗೆದುಕೊಳ್ಳಬೇಕಾದಂಥ ಸನ್ನಿವೇಶ ಸೃಷ್ಟಿ ಅಗಲಿದೆ. ಸೈಟು- ಜಮೀನು ಖರೀದಿ ಮಾಡಬೇಕು ಎಂದಿರುವವರಿಗೆ ಇಷ್ಟಪಟ್ಟಂಥ ಸ್ಥಳ ದೊರೆಯುವ ಅವಕಾಶಗಳು ಹೆಚ್ಚಿವೆ, ಕೆಲವರು ಅಡ್ವಾನ್ಸ್ ಕೂಡ ಪಾವತಿಸಬಹುದು.

ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5)

ಎದ್ದು ಹೋಗುವ ಮಾತು ಬಿದ್ದು ಹೋಗಲಿ ಎಂಬಂತೆ ವ್ಯವಹಾರಗಳು ನಿಂತು ಹೋಗಿದ್ದು, ಅದನ್ನು ಮತ್ತೆ ಶುರು ಮಾಡುವ ನಿಟ್ಟಿನಲ್ಲಿ ನೀಡುವಂಥ ಆಫರ್ ವೊಂದು ನಿಮ್ಮ ಎದುರಿನಲ್ಲಿ ಇರುವವರಿಗೆ ಒಪ್ಪಿಗೆ ಆಗುವ ಸಾಧ್ಯತೆ ಇದೆ. ಇನ್ನು ಯಾರು ನೌಕಾ ದಳದಲ್ಲಿ ಕಾರ್ಯ ನಿರ್ವಹಿಸುತ್ತಾ ಇರುತ್ತೀರಿ ಅಂಥವರಿಗೆ ಪದೋನ್ನತಿ ದೊರೆಯುವ ಸುಳಿವು ದೊರೆಯಲಿದೆ. ಅಥವಾ ನಿಯೋಜನೆ ಮೇರೆಗೆ ಹೆಚ್ಚುವರಿಯಾದಂಥ ಜವಾಬ್ದಾರಿ ದೊರೆಯಲಿದ್ದು, ಇದರಿಂದ ಭವಿಷ್ಯದಲ್ಲಿ ಅನುಕೂಲ ಆಗಲಿದೆ. ಬ್ಯಾಂಕ್ ಅಥವಾ ಬ್ಯಾಂಕೇತರ ಸಂಸ್ಥೆಗಳಲ್ಲಿ ಸಾಲಕ್ಕಾಗಿ ಪ್ರಯತ್ನವನ್ನು ಮಾಡುತ್ತಿರುವವರಿಗೆ ಯಶಸ್ಸು ದೊರೆಯಲಿದೆ. ವಾಹನದ ಮಾಡಿಫಿಕೇಷನ್ ಮಾಡಿಸುವುದಕ್ಕಾಗಿ ನಿಮ್ಮಲ್ಲಿ ಕೆಲವರು ಖರ್ಚು ಮಾಡಲಿದ್ದೀರಿ. ಮತ್ತೆ ಕೆಲವರು ವಾಹನ ಖರೀದಿಗಾಗಿ ಅಡ್ವಾನ್ಸ್ ನೀಡುವ ಯೋಗ ಸಹ ಇದೆ. ದೀರ್ಘಾವಧಿಗೆ ಚಿಕಿತ್ಸೆಗಳನ್ನು ಪಡೆಯುತ್ತಿರುವವರಿಗೆ ಆರೋಗ್ಯದಲ್ಲಿ ಚೇತರಿಕೆ ಕಾಣಿಸಲಿದೆ.

ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6)

ಮನೆಯಲ್ಲಿನ ಲಿಫ್ಟ್, ಸೋಲಾರ್ ವಾಟರ್ ಹೀಟರ್ ಅಥವಾ ಲೈಟಿಂಗ್ ಹೀಗೆ ಒಂದಲ್ಲ ಒಂದರ ರಿಪೇರಿಗಾಗಿ ಹೆಚ್ಚಿನ ಖರ್ಚು ಆಗಲಿದೆ. ನಿಮ್ಮ ಬಳಿ ಇರುವಂಥ ಹಣಕ್ಕೆ ಮೀರಿದಂಥ ಬಜೆಟ್ ಹಾಕಿಕೊಳ್ಳುವುದರಿಂದ ಸಾಲ ಮಾಡಬೇಕಾದ ಸನ್ನಿವೇಶ ಸೃಷ್ಟಿ ಆಗಲಿದೆ. ಸ್ನೇಹಿತರು ಅಥವಾ ಸಂಬಂಧಿಕರ ಬಳಿ ಹಣಕಾಸಿನ ಸಾಲ ಕೇಳಿದಲ್ಲಿ ಬುದ್ಧಿ ಮಾತನ್ನು ಕೇಳಿಸಿಕೊಳ್ಳುವಂತಾಗುತ್ತದೆ. ಆದ್ದರಿಂದ ಹಾಸಿಗೆ ಇದ್ದಷ್ಟು ಕಾಲು ಚಾಚಬೇಕು ಎಂಬ ಮಾತಿನಂತೆ ಕೈ ಮೀರಿದ ಸಾಲಗಳನ್ನು ಮಾಡಿಕೊಳ್ಳುವುದಕ್ಕೆ ಹೋಗಬೇಡಿ. ನಿಮ್ಮಲ್ಲಿ ಕೆಲವರಿಗೆ ದೃಷ್ಟಿಗೆ ಸಂಬಂಧಿಸಿದ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಅಥವಾ ಕೆಲವರಿಗೆ ಕಣ್ಣಿನ ಪೊರೆಯ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲೇಬೇಕು ಎಂಬಂಥ ಸ್ಥಿತಿ ನಿರ್ಮಾಣ ಆಗಲಿದೆ. ಉದ್ಯೋಗ ಸ್ಥಳದಲ್ಲಿ ನಿಮಗೆ ಹೆಚ್ಚುವರಿಯಾಗಿ ಕೆಲಸಗಳು ಬಂದಲ್ಲಿ ಶ್ರದ್ಧೆಯಿಂದ ಪೂರ್ತಿಗೊಳಿಸುವುದಕ್ಕೆ ಪ್ರಯತ್ನಿಸಿ. ಇತರರಿಗೆ ಅದನ್ನು ವಹಿಸಿದಲ್ಲಿ ನಿಮ್ಮ ಹೆಸರು ಹಾಳಾಗಬಹುದು.

ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)

ಸಾರ್ವಜನಿಕ ಜೀವನದಲ್ಲಿ ಇರುವಂಥವರಿಗೆ ಇಂದು ಪ್ರಮುಖವಾದ ದಿನವಾಗಿರುತ್ತದೆ. ಇನ್ನು ಎನ್ ಜಿಒಗಳನ್ನು ನಡೆಸುತ್ತಿರುವವರು ಅಥವಾ ಅಂಥ ಕಡೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವವರಿಗೆ ದೊಡ್ಡ ಮೊತ್ತದ ಅನುದಾನ ದೊರೆಯುವ ಸೂಚನೆ ಅಥವಾ ಭರವಸೆ ದೊರೆಯಲಿದೆ. ಇನ್ನು ಒಪ್ಪಂದ ಮುಗಿದುಹೋಯಿತು ಎಂದು ಭಾವಿಸಿದ್ದಲ್ಲಿ ಅಂಥವು ಮತ್ತೆ ಆರಂಭ ಆಗುವ ಅಥವಾ ನವೀಕರಣವಾಗುವ ಸಾಧ್ಯತೆಗಳು ಹೆಚ್ಚಿವೆ. ನೀವಾಗಿಯೇ ಕೇಳಿ, ಗಡುವು ಪಡೆದುಕೊಂಡಿದ್ದ ವಿಷಯ- ವಿಚಾರ- ಕೆಲಸಗಳ ಕಡೆಗೆ ಹೆಚ್ಚಿನ ಗಮನವನ್ನು ನೀಡಿ. ನಿಗದಿತ ಅವಧಿಯೊಳಗೆ ಮುಗಿಯದು ಎಂದೆನಿಸಿದಲ್ಲಿ ಸಂಬಂಧಪಟ್ಟವರಿಗೆ ಅದನ್ನು ತಿಳಿಸುವುದು ಉತ್ತಮ. ಅದನ್ನು ಬಿಟ್ಟು, ಹಾಗೇ ಮಾಡಿಕೊಟ್ಟರಾಯಿತು ಎಂದೇನಾದರೂ ಅಂದುಕೊಂಡಲ್ಲಿ ನಿಮ್ಮ ಹೆಸರು ಕೆಡುತ್ತದೆ, ಜಾಗ್ರತೆ. ಚಿನ್ನಾಭರಣ ವ್ಯಾಪಾರಿಗಳಿಗೆ ಒತ್ತಡದ ದಿನವಾಗಿರುತ್ತದೆ. ಕೆಲವು ಮುಖ್ಯವಸ್ತುಗಳು ಇಟ್ಟಲ್ಲಿ ಇರದೆ ಆತಂಕಕ್ಕೆ ಕಾರಣವಾಗಲಿದೆ.

ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)

ತಾಯಿಯ ಜೊತೆಗೆ ಅಥವಾ ಮಾತೃ ಸಮಾನರಾದವರ ಜೊತೆಗೆ ಉತ್ತಮವಾದ ಸಮಯವನ್ನು ಕಳೆಯುವಂಥ ಯೋಗ ಇದೆ. ಸಂಗಾತಿಯ ಆರೋಗ್ಯ ಸಮಸ್ಯೆಗಳು ಇದ್ದಲ್ಲಿ ಅದು ನಿವಾರಣೆ ಆಗುವ ಅಥವಾ ಚೇತರಿಕೆ ಕಾಣುವುದರಿಂದ ಮನಸ್ಸಿಗೆ ಸಮಾಧಾನ ಆಗಲಿದೆ. ಈ ಹಿಂದೆ ನೀವು ಭೇಟಿ ನೀಡಿ, ಪ್ರಚಾರ ಮಾಡಿ ಬಂದಿದ್ದ ಸೇವೆ- ವಸ್ತುಗಳಿಗೆ ಈಗ ಬೇಡಿಕೆಯು ಹೆಚ್ಚಾಗಲಿದೆ. ನಿಮ್ಮಲ್ಲಿ ಕೆಲವರು ಮನೆಗೆ ಎಲೆಕ್ಟ್ರಾನಿಕ್ ವಸ್ತುಗಳನ್ನು ಖರೀದಿಸಿ ತರಲಿದ್ದೀರಿ. ಇನ್ನೂ ಕೆಲವರು ಒಡವೆ- ವಸ್ತುಗಳನ್ನು ಹಾಗೂ ಮುಖ್ಯ ದಾಖಲೆ ಪತ್ರಗಳನ್ನು ಇಡುವುದಕ್ಕೆ ಅಂತ ಬ್ಯಾಂಕ್ ನಲ್ಲಿ ಲಾಕರ್ ಬಾಡಿಗೆಗೆ ಪಡೆಯುವುದಕ್ಕೆ ಆಲೋಚನೆ ಮಾಡಲಿದ್ದೀರಿ. ಅದೇ ರೀತಿ ಮನೆಗೇ ತಿಜೋರಿ ಮೊದಲಾದ ಭದ್ರತಾ ಕಪಾಟುಗಳನ್ನು ಖರೀದಿಸಿ ತರಬಹುದು. ಇನ್ನು ಯಾರು ತಾತ್ಕಾಲಿಕ ಕೆಲಸಗಳಲ್ಲಿ ತೊಡಗಿಕೊಂಡಿದ್ದೀರಿ ಅಂಥವರಿಗೆ ಸೇವೆ ಕಾಯಂ ಆಗುವ ಬಗ್ಗೆ ಸೂಚನೆ ದೊರೆಯಲಿದೆ. ಸೋದರ- ಸೋದರಿಯರ ಹಣಕಾಸಿನ ಅಗತ್ಯಕ್ಕೆ ಸ್ಪಂದಿಸಬೇಕಾಗುತ್ತದೆ.

ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)

ಸ್ತ್ರೀಯರ ವಿಚಾರಕ್ಕೆ ಅಂತಲೇ ಭಾರೀ ಜಗಳ -ಕಲಹಗಳು ಆಗಬಹುದು. ಪುರುಷರು- ಸ್ತ್ರೀಯರು ಇಬ್ಬರಿಗೂ ಇದು ಅನ್ವಯ ಆಗಲಿದೆ. ಸಹೋದ್ಯೋಗಿಗಳಿರಲಿ ಅಥವಾ ನಿಮ್ಮ ನೆರೆಹೊರೆಯವರು ಇರಲಿ, ಸ್ತ್ರೀಯರ ವಿಚಾರದಲ್ಲಿ ಹಗುರವಾದ ಮಾತುಗಳನ್ನಾಡಬೇಡಿ. ಅದೇ ರೀತಿ ಸೋಷಿಯಲ್ ಮೀಡಿಯಾ, ವಾಟ್ಸಾಪ್ ಅಥವಾ ಇತರ ಯಾವುದೇ ಮಾಧ್ಯಮಗಳಲ್ಲಿ ಇತರರ ವೈಯಕ್ತಿಕ ವಿಚಾರಗಳ ಪೋಸ್ಟ್ ಶೇರ್ ಮಾಡದಿರುವುದು ಕ್ಷೇಮ. ನಿಮ್ಮ ಅತ್ಯುತ್ಸಾಹದ ಕಾರಣಕ್ಕೆ ಇತರರಿಗೆ ಹೆಚ್ಚಿನ ಖರ್ಚು ಆಗಬಹುದು. ಆದ್ದರಿಂದ ನಿಮಗೆ ಅನಿಸಿದ್ದನ್ನು ಮಾಡಲೇಬೇಕು ಎಂದು ಇತರರ ಮೇಲೆ ಒತ್ತಡ ಹಾಕುವುದಕ್ಕೆ ಹೋಗಬೇಡಿ. ನಿಮ್ಮ ಬಳಿ ಯಾವುದಾದರೂ ದೂರು- ಆಕ್ಷೇಪಗಳನ್ನು ತಂದಲ್ಲಿ ನಯವಾಗಿಯೇ ಅದರಿಂದ ದೂರ ಇದ್ದು ಬಿಡುವುದು ಉತ್ತಮ. ಬ್ಯೂಟಿ ಪಾರ್ಲರ್ ನಡೆಸುತ್ತಿರುವವರಿಗೆ ಆದಾಯದಲ್ಲಿನ ಇಳಿಕೆ ಭಾರೀ ಚಿಂತೆಗೆ ಕಾರಣ ಆಗಬಹುದು. ಆದರೆ ಈ ಕಾರಣದಿಂದಾಗಿ ವಿಪರೀತದ ನಿರ್ಧಾರಗಳನ್ನು ಮಾಡಬೇಡಿ.

ಲೇಖನ- ಎನ್‌.ಕೆ.ಸ್ವಾತಿ

ತಾಜಾ ಸುದ್ದಿ
ಹಿಮದಿಂದ ಮುಚ್ಚಿಕೊಂಡ ಜಗತ್ತಿನ ಅತಿ ಎತ್ತರದ ಶಿವನ ದೇವಸ್ಥಾನ
ಹಿಮದಿಂದ ಮುಚ್ಚಿಕೊಂಡ ಜಗತ್ತಿನ ಅತಿ ಎತ್ತರದ ಶಿವನ ದೇವಸ್ಥಾನ
ಶಿರೂರು ದುರಂತ ನಡೆದು ವಾರ ಕಳೆದರೂ ಪತ್ತೆಯಾಗದ ಇನ್ನೂ ಮೂರು ದೇಹಗಳು
ಶಿರೂರು ದುರಂತ ನಡೆದು ವಾರ ಕಳೆದರೂ ಪತ್ತೆಯಾಗದ ಇನ್ನೂ ಮೂರು ದೇಹಗಳು
ಪ್ರೀಮಿಯಂ ಸ್ಮಾರ್ಟ್​ವಾಚ್ ಲಾಂಚ್ ಮಾಡಿದ ಸ್ಯಾಮ್​ಸಂಗ್
ಪ್ರೀಮಿಯಂ ಸ್ಮಾರ್ಟ್​ವಾಚ್ ಲಾಂಚ್ ಮಾಡಿದ ಸ್ಯಾಮ್​ಸಂಗ್
ಸಿಎಂ ಸಿದ್ದರಾಮಯ್ಯ ರಾಜೀನಾಮೆ ಅಗ್ರಹಿಸಿ ವಿರೋಧ ಪಕ್ಷದ ಸದಸ್ಯರಿಂದ ಸಭಾತ್ಯಾಗ
ಸಿಎಂ ಸಿದ್ದರಾಮಯ್ಯ ರಾಜೀನಾಮೆ ಅಗ್ರಹಿಸಿ ವಿರೋಧ ಪಕ್ಷದ ಸದಸ್ಯರಿಂದ ಸಭಾತ್ಯಾಗ
ಪ್ರೀತಿ ಪ್ರಾರಂಭದಲ್ಲೇ ಸೋನಲ್-ತರುಣ್ ಪ್ರೀ-ವೆಡ್ಡಿಂಗ್ ವಿಡಿಯೋ
ಪ್ರೀತಿ ಪ್ರಾರಂಭದಲ್ಲೇ ಸೋನಲ್-ತರುಣ್ ಪ್ರೀ-ವೆಡ್ಡಿಂಗ್ ವಿಡಿಯೋ
ವಿಧಾನಮಂಡಲ ಅಧಿವೇಶನ ಪುನರಾರಂಭ; ಇಲ್ಲಿ ಲೈವ್ ವೀಕ್ಷಿಸಿ
ವಿಧಾನಮಂಡಲ ಅಧಿವೇಶನ ಪುನರಾರಂಭ; ಇಲ್ಲಿ ಲೈವ್ ವೀಕ್ಷಿಸಿ
ಬೆಂಗಳೂರು: ಡಬಲ್ ಡೆಕ್ಕರ್ ಫ್ಲೈಓವರ್ ಮೇಲೆ ಬಿ ದಯಾನಂದ್​ ಬುಲೆಟ್ ರೈಡ್​​
ಬೆಂಗಳೂರು: ಡಬಲ್ ಡೆಕ್ಕರ್ ಫ್ಲೈಓವರ್ ಮೇಲೆ ಬಿ ದಯಾನಂದ್​ ಬುಲೆಟ್ ರೈಡ್​​
ಬಾಸ್ ಎಂದು ಹೋಗಿದ್ದೇ ತಪ್ಪಾಯ್ತು; ಪ್ರದೋಶ್ ಸಿಕ್ಕಿಬಿದ್ದಿದ್ದು ಹೀಗೆ
ಬಾಸ್ ಎಂದು ಹೋಗಿದ್ದೇ ತಪ್ಪಾಯ್ತು; ಪ್ರದೋಶ್ ಸಿಕ್ಕಿಬಿದ್ದಿದ್ದು ಹೀಗೆ
Daily Devotional: ಶತ್ರು ಕಾಟದಿಂದ ಪಾರಾಗಲು ಗೃಹಿಣಿಯರು ಈ ಕಾರ್ಯ ಮಾಡಿ
Daily Devotional: ಶತ್ರು ಕಾಟದಿಂದ ಪಾರಾಗಲು ಗೃಹಿಣಿಯರು ಈ ಕಾರ್ಯ ಮಾಡಿ
ಚಾಮರಾಜನಗರ: ಸೆಲ್ಫಿ ಶೋಕಿಗೆ ಡೆಡ್ಲಿ ಸ್ಪಾಟ್ ತಲುಪಿ ಪ್ರವಾಸಿಗರ ಹುಚ್ಚಾಟ!
ಚಾಮರಾಜನಗರ: ಸೆಲ್ಫಿ ಶೋಕಿಗೆ ಡೆಡ್ಲಿ ಸ್ಪಾಟ್ ತಲುಪಿ ಪ್ರವಾಸಿಗರ ಹುಚ್ಚಾಟ!