Venus Transit: ಶುಕ್ರನ ಸಂಚಾರದಿಂದ ಯಾವ ರಾಶಿಯ ಜನರಿಗೆ ತೊಂದರೆ, ಪರಿಹಾರವೇನು?

ಶುಕ್ರನು ಸದ್ಯ ಇರುವುದು ಪುನರ್ವಸು ನಕ್ಷತ್ರದಲ್ಲಿ. ಮುಂದೆ ಸಂಚಾರ ಮಾಡಲಿರುವ ನಕ್ಷತ್ರ ಪುಷ್ಯಾ. ಪುನರ್ವಸು ನಕ್ಷತ್ರದ ಗ್ರಹ ಗುರು. ಪುಷ್ಯಾ ನಕ್ಷತ್ರದ ಗ್ರಹ ಶನಿ.‌ ಗುರುವಿಗೆ ಶುಕ್ರ ಶತ್ರು, ಶುಕ್ರನಿಗೆ ಗುರುವು ಸಮಾನ. ಇನ್ನು ಶುಕ್ರನಿಗೆ ಶನಿಯು ಮಿತ್ರ, ಶನಿಗೆ ಶುಕ್ರನು ಮಿತ್ರ. ಈ ಶತ್ರುತ್ವ ಮಿತ್ರತ್ವಗಳು ಮನುಷ್ಯನ ಮೇಲೆ ಪರಿಣಾಮ ಉಟುಮಾಡುತ್ತವೆ.

Venus Transit: ಶುಕ್ರನ ಸಂಚಾರದಿಂದ ಯಾವ ರಾಶಿಯ ಜನರಿಗೆ ತೊಂದರೆ, ಪರಿಹಾರವೇನು?
ಸಾಂದರ್ಭಿಕ ಚಿತ್ರ
Follow us
ಲೋಹಿತ ಹೆಬ್ಬಾರ್​, ಇಡುವಾಣಿ
| Updated By: ಅಕ್ಷಯ್​ ಪಲ್ಲಮಜಲು​​

Updated on:Jul 09, 2024 | 10:41 AM

ಜ್ಯೋತಿಷ್ಯದಲ್ಲಿ ಶುಕ್ರನು ಮಹತ್ತ್ವವುಳ್ಳ ಗ್ರಹ. ಶುಭಫಲವನ್ನು ನೀಡುವಲ್ಲಿ ಶುಕ್ರ ಗ್ರಹದ ಸ್ಥಾನ ದೊಡ್ಡದು. ಮುಖ್ಯ ಶುಕ್ರನು ಸುಖವನ್ನು, ಸಂತೋಷವನ್ನು ನೀಡುತ್ತಾನೆ. ಸೌಂದರ್ಯ ಆಕರ್ಷಣೆ ಇವುಗಳಿಗೆ ಶುಕ್ರನೇ ಮೂಲ. ಪ್ರೇಮ, ಕಾಮ ಇವುಗಳು ಶುಕ್ರನ ಅನುಕೂಲದಿಂದ ಆಗುತ್ತವೆ. ಆತ ಉತ್ತಮ ರಾಶಿಯಲ್ಲಿ ಇದ್ದರೆ ಶುಭವಾದ ಫಲವನ್ನೇ ನೀಡುವನು. ನೀಚನಾದರೆ ಸುಖದ ಸ್ಥಾನದಲ್ಲಿ ದುಃಖ, ಅಸಮಾಧಾನವನ್ನು ಕೊಡಿಸುವನು.

ಇಂತಹ ಶುಕ್ರನು ಸದ್ಯ ಇರುವುದು ಪುನರ್ವಸು ನಕ್ಷತ್ರದಲ್ಲಿ. ಮುಂದೆ ಸಂಚಾರ ಮಾಡಲಿರುವ ನಕ್ಷತ್ರ ಪುಷ್ಯಾ. ಪುನರ್ವಸು ನಕ್ಷತ್ರದ ಗ್ರಹ ಗುರು. ಪುಷ್ಯಾ ನಕ್ಷತ್ರದ ಗ್ರಹ ಶನಿ.‌

ಗುರುವಿಗೆ ಶುಕ್ರ ಶತ್ರು, ಶುಕ್ರನಿಗೆ ಗುರುವು ಸಮಾನ. ಇನ್ನು ಶುಕ್ರನಿಗೆ ಶನಿಯು ಮಿತ್ರ, ಶನಿಗೆ ಶುಕ್ರನು ಮಿತ್ರ. ಈ ಶತ್ರುತ್ವ ಮಿತ್ರತ್ವಗಳು ಮನುಷ್ಯನ ಮೇಲೆ ಪರಿಣಾಮ ಉಟುಮಾಡುತ್ತವೆ.

ತುಲಾ ರಾಶಿ :

ಶುಕ್ರನ ಅವಕೃಪೆ ಇರುವ ರಾಶಿ ಇದು. ಈ ರಾಶಿಗೆ ಶುಕ್ರನೇ ಅಧಿಪತಿಯಾದರೂ, ವರ್ತಮಾನದ ಶುಕ್ರನಿಂದ ನಾಲ್ಕನೇ ರಾಶಿಯು ತುಲಾರಾಶಿ. ವಿಶಾಖಾ ನಕ್ಷತ್ರವು ಇದೇ ರಾಶಿಯಲ್ಲಿ ಇರುವುದು. ಹಾಗಾಇ ವಿಶಾಖಾ ನಕ್ಷತ್ರದ ತುಲಾರಾಶಿಯವರಿಗೆ ವೈಮನಸ್ಯ, ಏನೋ ಚಿಂತೆಯಲ್ಲಿ ಇರುವರು. ಎಲ್ಲವನ್ನೂ ಆಪಾರ್ಥ ಮಾಡಿಕೊಳ್ಳುವುದು ಹೆಚ್ಚು. ಸಂತೋಷದಿಂದ ಇರುವ ಸಂದರ್ಭದಲ್ಲಿಯೂ ಸಂಕಟಪಡುವಿರಿ. ನಿಮಗೆ ಏನೋ ಆದಂತೆ ಕಾಣಿಸುವುದು.

ವೃಶ್ಚಿಕ ರಾಶಿ :

ವಿಶಾಖಾ ನಕ್ಷತ್ರಕ್ಕೆ ಈ ರಾಶಿಯೂ ಬರು ಕಾರಣ ವೃಶ್ಚಿಕ ರಾಶಿಯವರೂ ಮಕ್ಕಳಿಂದ ತೊಂದರೆ, ಸಂತೋಷಪಡಲಾಗದು. ವಿದ್ಯಾಭ್ಯಾಸದಲ್ಲಿ ಏಕಾಗ್ರವಾಗಿ ಇರುವುದು ಕಷ್ಟ.‌ ಮನಸ್ಸು ಕ್ಷಣ ಕ್ಷಣಕ್ಕೂ ಚಂಚಲವಾಗುವುದು.

ಕುಂಭ ರಾಶಿ :

ಪೂರ್ವಾಷಾಢಾ ನಕ್ಷತ್ರದ ರಾಶಿಯು ಇದೆ ಆಗಿದೆ. ಇದರ ಗ್ರಹವೂ ಗುರು. ಆರೋಗ್ಯದಲ್ಲಿ ವ್ಯತ್ಯಾಸ ಕಾಣಿಸುವುದು. ಕಫಕ್ಕೆ ಸಂಬಂಧಿಸಿದ ರೋಗದಿಂದ ಬಳಲುವಿರಿ. ಐಷಾರಾಮಿ ವಸ್ತುಗಳನ್ನು ಅಪೇಕ್ಷಿಸದೇ ಇರುವಿರಿ. ಆಲಂಕಾರಿಕ ವಸ್ತುಗಳ ಬಗ್ಗೆ ಮನಸ್ಸು ಇರದು.

ಇದನ್ನೂ ಓದಿ: ಎಂಟು ತಿಂಗಳ ನಂತರ ರಾಹುವಿನ ಸ್ಥಾನ ಬದಲು..! ಯಾರಿಗೆ ರಾಹುವಿನಿಂದ ಶುಭ ಫಲ..?

ಮೀನ ರಾಶಿ :

ಸ್ತ್ರೀಯರಿಂದ ಅಗೌರವ ಸಾಧ್ಯತೆ ಇದೆ. ಯಾರ ಬಗ್ಗೆಯೂ ಸುಮ್ಮನೇ ಮಾತನಾಡುವಿರಿ. ಧನಾತ್ಮಕ ಚಿಂತೆನೆಯಲ್ಲೂ ಋಣಾತ್ಮಕತೆ ನಿಮಗೆ ಹೆಚ್ಚು ಕಾಣಿಸುವುದು. ಐಷಾರಾಮಿ ವಸ್ತುಗಳಿದ್ದರೂ ಅದನ್ನು ಬಳಸಲು ಮನಸ್ಸು ಇರದು ಅಥವಾ ಬಳಸಲಾಗದು.

ಹೀಗೆ ಶುಕ್ರನು ಈ ನಾಲ್ಕು ರಾಶಿಯವರಿಗೆ ಅಶುಭವನ್ನು ಮಾಡುವನು. ದೇವಿಯ ಅನುಗ್ರಹದಿಂದ ನಿಮ್ಮ ವ್ಯಾಕುಲತೆಯನ್ನು ನೀಗಿಸಿಕೊಂಡು ಕಾರ್ಯದಲ್ಲಿ ಯಶಸ್ಸು ಪಡೆಯಬಹುದು. ದೇವಿಗೆ ಕುಂಕುಮಾರ್ಚನೆಯ ಸೇವೆ ನೀಡಿ.

ಹಿಮಕುಂದಮೃಣಾಲಾಭಂ

ದೈತ್ಯಾನಾಂ ಪರಮಂ ಗುರುಮ್ |

ಸರ್ವಶಾಸ್ತ್ರಪ್ರವಕ್ತಾರಂ

ಭಾರ್ಗವಂ ಪ್ರಣಮಾಮ್ಯಹಮ್ ||

ಈ ಸ್ತೋತ್ರವನ್ನು ಪಠಿಸಿ.

-ಲೋಹಿತ ಹೆಬ್ಬಾರ್8762924271

ಮತ್ತಷ್ಟು ಆಧ್ಯಾತ್ಮ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 10:28 am, Tue, 9 July 24

ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ
ಆಸ್ಟ್ರೇಲಿಯನ್ನರ ಮುಂದೆ ಪುಷ್ಪ ಸ್ಟೈಲ್​ನಲ್ಲಿ ಸಂಭ್ರಮಿಸಿದ ನಿತೀಶ್ ಕುಮಾರ್
ಆಸ್ಟ್ರೇಲಿಯನ್ನರ ಮುಂದೆ ಪುಷ್ಪ ಸ್ಟೈಲ್​ನಲ್ಲಿ ಸಂಭ್ರಮಿಸಿದ ನಿತೀಶ್ ಕುಮಾರ್