Daily horoscope July 11, 2024: ವೃಶ್ಚಿಕ ರಾಶಿಯವರಿಗೆ ದುಃಸ್ವಪ್ನ, ಧನು ರಾಶಿಯವರಿಗೆ ಅವಮಾನ, ನಿಮ್ಮ ರಾಶಿ ಭವಿಷ್ಯ ತಿಳಿದುಕೊಳ್ಳಿ

ಜ್ಯೋತಿಷ್ಯವು ಪ್ರಪಂಚದಾದ್ಯಂತದ ಸಂಸ್ಕೃತಿಗಳಲ್ಲಿ ಶತಮಾನಗಳಿಂದಲೂ ಕಾಣಬಹುದು. ಕೆಲವರು ಜ್ಯೋತಿಷ್ಯವನ್ನು ಆತ್ಮಾವಲೋಕನ ಮತ್ತು ತಿಳುವಳಿಕೆಗೆ ಉಪಯುಕ್ತ ಸಾಧನವೆಂದು ಪರಿಗಣಿಸಿದರೆ, ಮತ್ತೆ ಕೆಲವರು ಎಲ್ಲರಂತೆ ತಮ್ಮ ರಾಶಿ ಭವಿಷ್ಯವನ್ನು ನೋಡುತ್ತಾರೆ. ಗುರುವಾರದ (ಜುಲೈ 11) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ ಎಂದು ಇಲ್ಲಿ ತಿಳಿಯಿರಿ.

Daily horoscope July 11, 2024: ವೃಶ್ಚಿಕ ರಾಶಿಯವರಿಗೆ ದುಃಸ್ವಪ್ನ, ಧನು ರಾಶಿಯವರಿಗೆ ಅವಮಾನ, ನಿಮ್ಮ ರಾಶಿ ಭವಿಷ್ಯ ತಿಳಿದುಕೊಳ್ಳಿ
ನಿತ್ಯ ಭವಿಷ್ಯ
Follow us
ಲೋಹಿತ ಹೆಬ್ಬಾರ್​, ಇಡುವಾಣಿ
| Updated By: ರಮೇಶ್ ಬಿ. ಜವಳಗೇರಾ

Updated on: Jul 10, 2024 | 9:54 PM

ಜ್ಯೋತಿಷ್ಯವನ್ನು ಅಥವಾ ನಿತ್ಯ ಭವಿಷ್ಯವನ್ನು (Horoscope) ಕೆಲ ಜನರು ನಂಬುತ್ತಾರೆ. ಮತ್ತೆ ಕೆಲ ಜನರು ನಂಬುವುದಿಲ್ಲ. ಆದಾಗ್ಯೂ ಮತ್ತೆ ಕೆಲ ಜನರು ಹವ್ಯಾಸಕ್ಕಾಗಿ ಅಥವಾ ಇಂದು ಅವರ ಜೀವನದಲ್ಲಿ ಏನು ಘಟಿಸಲಿದೆ ಎಂಬುವುದನ್ನು ತಿಳಿಯಲು ನಿತ್ಯ ತಮ್ಮ ರಾಶಿ ಭವಿಷ್ಯವನ್ನು ನೋಡುತ್ತಾರೆ. ವ್ಯಕ್ತಿಯ ಜನನದ ಸಮಯವನ್ನು ಅವರ ವ್ಯಕ್ತಿತ್ವವನ್ನು, ಸಂಬಂಧಗಳು ಅವರ ಭವಿಷ್ಯದ ಮೇಲೆ ಪ್ರಭಾವ ಬೀರಬಹುದು ಎಂಬ ಪರಿಕಲ್ಪನೆ ಇದೆ. ಹಾಗಾದ್ರೆ ಜುಲೈ  11ರ ದಿನ ಭವಿಷ್ಯ ಮತ್ತು ಪಂಚಾಂಗ ಇಲ್ಲಿದೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಮಿಥುನ ಮಾಸ, ಮಹಾನಕ್ಷತ್ರ: ಪುನರ್ವಸು, ಮಾಸ: ಆಷಾಢ, ಪಕ್ಷ: ಶುಕ್ಲ, ವಾರ: ಗುರು, ತಿಥಿ: ಷಷ್ಠೀ, ನಿತ್ಯನಕ್ಷತ್ರ: ಪೂರ್ವಾಫಲ್ಗುಣೀ, ಯೋಗ: ಸಿದ್ಧಿ, ಕರಣ: ಕೌಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 11 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 07 ಗಂಟೆ 04 ನಿಮಿಷಕ್ಕೆ, ರಾಹು ಕಾಲ 14:15 05:28 ರಿಂದ 15:52ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 06:12 ರಿಂದ 07:48ರ ವರೆಗೆ, ಗುಳಿಕ ಕಾಲ ಬೆಳಗ್ಗೆ 09:25 ರಿಂದ 11:02ರ ವರೆಗೆ.

ಮೇಷ ರಾಶಿ :ಇಂದು ಕಾರ್ಯದಲ್ಲಿ ವೇಗಕ್ಕಿಂತ ಉದ್ವೇಗವೇ ಹೆಚ್ಚು ಕಾಣಿಸುವುದು. ಹೊಸ ವಿಚಾರಗಳ ಅನ್ವೇಷಣೆಯು ನಿಮಗೆ ಖುಷಿಕೊಡುವುದು. ಇಂದು ಧನ ವ್ಯವಹಾರದಲ್ಲಿ ಸರಿಯಾದ ತಿಳಿವಳಿಕೆ ಇಟ್ಟಕೊಳ್ಳಿ. ಪ್ರಭಾವಿಗಳ ಮಾತಿನಿಂದ ನಿಮಗೆ ಸಿಗಬೇಕಾದುದು ಸಿಗಲಿದೆ. ನಿಮ್ಮ ಅಭಿಪ್ರಾಯವು ದೃಢವಾಗಿರಲಿ. ಮಾನಸಿಕ ನೆಮ್ಮದಿಗೆ ತೊಂದರೆಯಾಗಬಹುದು. ಹೆಚ್ಚು ಅನುಕೂಲತೆಗಳ ಇರುವ ಕಡೆ ನೀವು ಸೇರಿಕೊಳ್ಳಿ. ಹೆಚ್ಚಿನ ಆದಾಯದ ಜೊತೆ ಖರ್ಚೂ ಅಧಿಕವಾಗಿದೆ. ಪ್ರೀತಿ ಪಾತ್ರರನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ಒಪ್ಪಿಕೊಂಡ ಕಾರ್ಯವನ್ನು ಮುಗಿಸುವ ಹಂತದಲ್ಲಿ ಇರುವಿರಿ. ಸಾಮಾನ್ಯ ಜ್ಞಾನದ ಕೊರತೆ ಕಾಣಬಹುದು. ಮಕ್ಕಳಿಂದ ಅಪಹಾಸ್ಯಕ್ಕೆ ಒಳಗಾಗುವಿರಿ. ನಿರೀಕ್ಷಿತ ಕಾರ್ಯವನ್ನು ಸಾಧಿಸುವ ತನಕ ನಿಮಗೆ ನೆಮ್ಮದಿ ಸಿಗದು. ಅಧಿಕಾರಿಗಳ ಜೊತೆ ಯೋಜನೆಯ ವಿವರಗಳನ್ನು ಹಂಚಿಕೊಳ್ಳುವಿರಿ. ಸ್ತ್ರೀಯರ ಮಾತಿಗೆ ಮನಸೋಲುವಿರಿ.

ವೃಷಭ ರಾಶಿ :ನೀವು ಕುಟುಂಬ ಮತ್ತು ನಿಮ್ಮ ಆಪ್ತರ ಜೊತೆ ಸಮಯ ಕಳೆಯುವುದರಿಂದ ಬಾಂಧವ್ಯ ಬೆಳೆಯುವುದು. ಹಣಕಾಸಿನ ವಿಷಯಗಳಲ್ಲಿ ಯಾರಾದರೂ ನಿಮಗೆ ಸಹಾಯ ಮಾಡುತ್ತಾರೆ. ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಸೋಲುವ ಸಂಭವವಿದೆ. ಪ್ರಯಾಣವು ಕಷ್ಟವಾದರೂ ಹೋಗಲಿದ್ದೀರಿ. ಇದರಿಂದ ನಿಮಗೆ ಸಂತೋಷವಾಗಲಿದೆ. ನಿಮ್ಮ ಸುತ್ತಲಿನ ವಾತಾವರಣವನ್ನು ಚೆನ್ನಾಗಿರಿಸಿಕೊಳ್ಳುವಿರಿ. ನಿಮ್ಮ ಸಾಮರ್ಥ್ಯವನ್ನು ಯಾರೂ ತಿಳಿಯರು. ಸ್ವತಂತ್ರವಾದ ನಿರ್ಧಾರಗಳನ್ನು ನೀವು ತೆಗೆದುಕೊಳ್ಳಲು ಹೋಗಬೇಡಿ. ವಿವಾಹದ ಹೊಸತನಕ್ಕೆ ಹೊಂದಿಕೊಳ್ಳಲು ಕಷ್ಟವಾಗುವುದು. ನಂಬಿಕೆಯನ್ನು ಕಳೆದುಕೊಳ್ಳುವ ಸಂದರ್ಭವು ಬರಬಹುದು. ಜಾಗರೂಕತೆಯಿಂದ ಅದನ್ನು ನಿಭಾಯಿಸಬೇಕಾಗಬಹುದು. ಬಂಧುಗಳ ನಕಾರಾತ್ಮಕ ಮಾತುಗಳಿಂದ ನಿಮಗೆ ಬೇಸರವಾದೀತು. ಹೊಸ ಮನೆಯನ್ನು ಖರೀದಿಸುವ ಬಗ್ಗೆ ಸಂಗಾತಿಯ ಜೊತೆ ಚರ್ಚಿಸುವಿರಿ. ಸುಮ್ಮನೇ ಆಡಿದ ಮಾತೂ ನಿಮ್ಮನ್ನು ಸಿಕ್ಕಿಸಬಹುದು.

ಮಿಥುನ ರಾಶಿ :ಸಣ್ಣ ವಿಚಾರಕ್ಕೂ ಮನಸ್ತಾಪ‌ ಕಾಣಿಸಿಕೊಳ್ಳುವುದು. ಅಧ್ಯಯನದಲ್ಲಿ ನೀವು ಮಾಡುವ ಪ್ರಯತ್ನಗಳು ಲಾಭದಾಯಕವೆಂದು ಸಾಬೀತುಪಡಿಸುತ್ತದೆ. ಹಳೆಯ ವಸ್ತುಗಳನ್ನು ನೀವು ಮಾರಾಟ ಮಾಡಿ ಲಾಭ ಗಳಿಸುವಿರಿ. ನಿಮ್ಮ ಆದ್ಯತೆಗಳನ್ನು ಬದಲಾಗಬಹುದು. ಹಣ ಹೂಡಿಕೆಯ ವಿಚಾರದಲ್ಲಿ ಗೊಂದಲವಿರಬಹುದು. ಜೀವನ ಸಂಗಾತಿಯಾಗುವವರ ಹೆಚ್ಚು ಸಮಯವನ್ನು ಕಳೆಯುವಿರಿ. ಸಾಮಾಜಿಕ ಕ್ಷೇತ್ರದಲ್ಲಿ ನೀವು ಹೆಸರನ್ನು ಬಯಸುವಿರಿ. ಮನಸ್ಸು ನಿಮ್ಮ ಹಿಡಿತದಲ್ಲಿ ಇರದಿದ್ದರೆ ಸ್ವಲ್ಪ ಕಾಲ ಧ್ಯಾನವನ್ನು ಮಾಡಿ. ಕರಕುಶಲದಲ್ಲಿ ಆಸಕ್ತಿಯನ್ನು ಹೆಚ್ಚಾಗುವುದು. ನಿಮ್ಮ ದುಃಖವು ಕ್ಷಣಿಕವಾಗಿರಲಿದೆ. ಯಾರಾದರೂ ನಿಮ್ಮ ಮಾತನ್ನು ನಂಬುವರು. ದೂರದ ಊರಿಗೆ‌ ಒಬ್ಬರೇ ವಾಹನ ಚಾಲಾಯಿಸುವಿರಿ. ವ್ಯಾಪರದಲ್ಲಿ‌ ಮಧ್ಯವರ್ತಿಗಳಿಂದ ನಿಮ್ಮ ವ್ಯಾಪಾರವು ಕುಂಠಿತವಾಗುವುದು. ಮೋಸದ ಜಾಲಕ್ಕೆ ಸಿಕ್ಕಬಹುದು. ಕರೆಗಳನ್ನು ನಿರ್ಲಕ್ಷಿಸಿ.

ಕಟಕ ರಾಶಿ :ಪಡೆದ ಸಾಲವನ್ನು ತೀರಿಸುವಿರಿ. ಬಾಂಧವ್ಯವನ್ನು ಉಳಿಸಿಕೊಳ್ಳುವುದು ನಿಮಗೆ ಹಿಡಿಸದು. ದಿನವನ್ನು ಇರಿಸಿಕೊಳ್ಳಲು ಪ್ರಯತ್ನಿಸಿ ಆರೋಗ್ಯದ ಬಗ್ಗೆ ತೃಪ್ತಿಕರವಾಗಿರುತ್ತದೆ. ಅಪರಿಚಿತರ ವಾಹನದಲ್ಲಿ ಪ್ರಯಾಣ ಮಾಡುವಿರಿ.‌ ಭಯದ ಮನಸ್ಸು ನಿಮ್ಮನ್ನು ಕೆಲಸದಲ್ಲಿ ಹಿಂದೇಟು ಹಾಕುವಂತೆ ಮಾಡಬಹುದು. ದುಸ್ಸಾಹಸಕ್ಕೆ ಕೈ ಹಾಕುವುದು ಬೇಡ. ಸಜ್ಜನರ ಅಥವಾ ಸಾಧುಗಳ ದರ್ಶನವಾಗಬಹುದು. ಅವರ ಮಾತುಗಳು ನಿಮಗೆ ಹಿತವೆನಿಸಬಹುದು. ಅತಿಥಿ ಸತ್ಕಾರಕ್ಕೆ ಅವಕಾಶ ಸಿಗುವುದು. ಮಧುರವಾದ ಆಹಾರವನ್ನು ಇಂದು ಹೆಚ್ಚು ಸೇವಿಸುವಿರಿ. ಮನೆಯವರ ಅತಿಯಾದ ಪ್ರೀತಿಯಿಂದ ಬಂಧಿತರಾಗಬಹುದು. ಆರ್ಥಿಕಸ್ಥಿತಿಯು ನಿಮಗೆ ಖುಷಿಯನ್ನು ಕೊಟ್ಟರೂ ನೆಮ್ಮದಿ‌ ಮಾತ್ರ ಇರದು. ಚಂಚಲ ಸ್ವಭಾವವು ತಾನಾಗಿಯೇ ಕಡಿಮೆಯಾಗಿದ್ದು ಅಚ್ಚರಿ ಆಗಬಹುದು. ಹಿತಶತ್ರುಗಳು ನಿಮ್ಮ ಸಂಪತ್ತನ್ನು ಬಳಸಿಕೊಳ್ಲಕುವರು. ಶತ್ರುಗಳಿಂದ ಉದ್ಯೋಗದಲ್ಲಿ ತಡೆಯಾಗಬಹುದು.

ಸಿಂಹ ರಾಶಿ :ನಿಮಗೆ ಹಿರಿಯರೆದುರು ಮಾತನಾಡಲು ಭಯವುಂಟಾಗಬಹುದು. ನೀವು ತುಂಬಾ ಆರೋಗ್ಯ ಪ್ರಜ್ಞೆ ಹೊಂದಿರುತ್ತೀರಿ ನಿಮ್ಮ ಕೆಲಸದಲ್ಲಿ ಸಾವಧಾನತೆ ಅಧಿಕವಾಗಿರುವುದು. ಉದ್ಯಮವನ್ನು ಬಿಡುವಂತಹ ಪರಿಸ್ಥಿತಿ ಬರಬಹುದು. ನಿಮ್ಮ ಒತ್ತಡವನ್ನು ಕಡಿಮೆ ಮಾಡಿಕೊಳ್ಳುವ ಮಾರ್ಗವನ್ನು ಕಂಡುಕೊಳ್ಳಿ. ಇಂದು ಮಾಡಬೇಕಾದ ಕೆಲಸದ ಬಗ್ಗೆ ಗಮನವಿರಲಿ. ನಿಮ್ಮ ಆದ್ಯತೆಗಳು ಬದಲಾಗಬಹುದು. ಒಂಟಿತನವನ್ನು ಇಷ್ಟಪಡುವ ನಿಮಗೆ ನಿಮ್ಮವರು ಹಾಗೆ ಇರಲು ಬಿಡಲಾರರು. ಬಂಧುಗಳು ಆಸ್ತಿಯ ವಿಚಾರವನ್ನು ಕೆದಕಿ ಕೇಳುವರು. ಯಾರದೋ ಒತ್ತಡಕ್ಕೆ ಮಣಿದು ಕೆಲಸವನ್ನು ಮಾಡುವಿರಿ. ಸರಿಯಾದ ಉತ್ತರವನ್ನು ಹೇಳದೇ ಅವರನ್ನು ನಂಬಿಸುವಿರಿ. ಸರ್ಕಾರದ ಸೌಲಭ್ಯವು ನಿಮಗೆ ಸಿಗದೇ ಹೋಗಬಹುದು. ನಿಮ್ಮ ಕೆಲಸವು ಸಂದೇಹಕ್ಕೆ ಆಸ್ಪದ ಮಾಡಿ ಕೊಡಬಹುದು. ಯಶಸ್ಸನ್ನು ಪಡೆಯುವ ಹಂಬಲವಿರಲಿದೆ. ನೀವು ನೋಡಿದ್ದೇ ಸತ್ಯ ಎಂದು ತಿಳಿದುಕೊಳ್ಳುವುದು ಬೇಡ. ಹೆಚ್ಚು ಮಾತನಾಡುವಿರಿ.

ಕನ್ಯಾ ರಾಶಿ :ಇಂದು ಮೇಲಧಿಕಾರಿಗಳಿಂದ ವೃತ್ತಿಯಲ್ಲಿ ಹಾಗೆಯೇ ಉಳಿದ ಕಾರ್ಯಗಳ ಗಮನ ಕೊಡುವ ಬಗ್ಗೆ ಸೂಚನೆ ಬರಲಿದೆ. ಕೆಲವು ಸಂದರ್ಭಗಳಿಂದಾಗಿ ನಿಮ್ಮ ಕೆಲಸದ ಪ್ರಯತ್ನಗಳು ವಿಳಂಬವಾಗುವ ಸಾಧ್ಯತೆಯಿದೆ. ಇಡಿಯ ದಿನವನ್ನು ಸಂತೋಷದಿಂದ ಕಳೆಯುವ ಯೋಜನೆಯನ್ನು ರೂಪಿಸಿಕೊಂಡಿರುವಿರಿ. ಬಹಳ ದಿನಗಳಿಂದ ನಡೆಯುತ್ತಿದ್ದ ಕೆಲಸವನ್ನೂ ಇಂದು ಮುಗಿಸಬೇಕೆಂಬ ಹಠವಿರಲಿದೆ. ಗೃಹನಿರ್ಮಾಣದ ಕಾರ್ಯವನ್ನು ಪುನಃ ಆರಂಭಿಸಲು ನಿಮ್ಮ ಮಾನಸಿಕತೆಗೆ ಹೊಂದಿಕೆಯಾಗುವ ಸಂಗಾತಿಯು ನಿಮಗೆ ಸಿಗಬಹುದು. ತಂದೆಯ ಆರೋಗ್ಯವು ದೃಢವಾಗಿರಲಿದೆ. ಬಂಧುಗಳ ಮೇಲೆ ನಿಮಗೆ ವಿಶ್ವಾಸ ಮಿಉಡುವುದು. ಮನೆಯಿಂದ ದೂರವಿರುವ ನಿಮಗೆ ಮನೆಗೆ ಹೋಗಬೇಕೆನಿಸೀತು. ದೈವವನ್ನು ನಂಬಿ, ನಿಮ್ಮ ಪ್ರಯತ್ನವನ್ನು ಮಾಡಿ. ನಿಮ್ಮನ್ನು ಬೇರೆ ಕಾರ್ಯಗಳಿಗೆ ಕರೆದುಕೊಂಡು ಹೋಗಿ, ನಿಮ್ಮ ಯೋಜನೆಯನ್ನು ಹಾಳುಮಾಡುವರು. ಹೊಸ ಸಂಬಂಧದ ಕಡೆ ನಿಮ್ಮ ಚಿತ್ತವು ಇರಲಿದೆ. ಮಾಡುತ್ತಿರುವ ಉದ್ಯೋಗವು ಬೇಸರ ತರಿಸಬಹುದು.

ತುಲಾ ರಾಶಿ :ನೀವು ಅತ್ಯಾಪ್ತರ ಮೇಲೇ ಅನುಮಾನ ಪಡಬೇಕಾದೀತು. ಆದ್ದರಿಂದ ಅವರ ಅಭಿಪ್ರಾಯವನ್ನು ಗೌರವಿಸಿ ಮತ್ತು ಅವರಿಗೆ ಸ್ವಲ್ಪ ಜಾಗವನ್ನು ನೀಡಿ. ಇಂದು ಮಾಡುವ ಕೆಲಸಗಳು ಸುಲಲಿತವಾಗಿ ಆರಂಭವಾದರೂ ಅಂತ್ಯವು ಬಹಳ ಗೊಂದಲದಿಂದ ಇರಬುಹುದು. ಅತಿಯಾದ ಧನಾತ್ಮಕ ಚಿಂತನೆಗಳು ನಿಮ್ಮನ್ನು ವಂಚನೆಗೆ ಸಿಕ್ಕಿಸಬಹುದು. ಎದುರಿನಿಂದ ಬೆಂಬಲಿಸಿ ಹಿಂದಿನಿಂದ ನಿಮ್ಮವರೇ ಕಾಲು ಎಳೆಯುವರು. ಸರ್ಕಾರಿ ಕೆಲಸಗಳು ಮಂದಗತಿಯಲ್ಲಿ ಸಾಗುವುದು. ಬೇಸರ ಬಂದರೂ ಬಿಡದೇ ಮುಂದುವರಿಸುವುದು ಅನಿವಾರ್ಯವಾದೀತು. ವೈದ್ಯಕೀಯ ವೃತ್ತಿಯಲ್ಲಿ ಒತ್ತಡ ಅಧಿಕವಾಗಿ ಇರುವುದು. ನಿಮ್ಮ ವೇತನದ ಬಗ್ಗೆ ಹೇಳಬೇಕಾಗಿಬರಬಹುದು. ಬಂದ ಹಣವನ್ನು ಜೋಪಾನವಾಗಿ ಇಟ್ಟುಕೊಳ್ಳುವ ವ್ಯವಸ್ಥೆಯನ್ನು ಮಾಡಿಕೊಳ್ಳುವುದು ಉತ್ತಮ. ಯಾವ ಸಂದರ್ಬದಲ್ಲಿಯೂ ಇಂದು ನಿಮ್ಮವರನ್ನು ಬಿಟ್ಟುಕೊಡಲಾರಿರಿ. ತಾಳ್ಮೆಯಿಂದ ವರ್ತಿಸಲು ನಿಮ್ಮವರಿಂದ ಸಲಹೆ ಸಿಗುವುದು.

ವೃಶ್ಚಿಕ ರಾಶಿ :ಇಂದು ನೀವು ಯಾವ ಕಾರ್ಯವನ್ನು ಒಪ್ಪಿಕೊಳ್ಳುವಾಗಲೂ ಒಪ್ಪಿಕೊಳ್ಳುವ ಮೊದಲು ನಿಮ್ಮ ಒತ್ತಡವನ್ನು ಗಮನಿಸಿಕೊಳ್ಳಿ. ಸಂಗಾತಿಯ ಕಡೆಯಿಂದ ಕಾಳಜಿ ಇಲ್ಲದಂತೆ ಅನ್ನಿಸುವುದು. ಗಣ್ಯರ ಸಂಪರ್ಕವು ಹಲವು ತಿರುವುಗಳನ್ನು ಪಡೆದುಕೊಂಡೀತು. ನಿಮ್ಮ‌ ತಾಳ್ಮೆಯನ್ನು ಪರೀಕ್ಷಿಸುವ ಸಮಯವೂ ಬರಬಹುದು.‌ ನೂತನ ದಾಂಪತ್ಯದಲ್ಲಿ ಅನ್ಯೋನ್ಯತೆ ಇದ್ದರೂ ಅದನ್ನು ಉಳಿಸಿಕೊಳ್ಳುವ ಹೊಣೆಗಾರಿಕೆಯು ಇಬ್ಬರ ಮೇಲೂ ಇರಲಿದೆ. ಒಬ್ಬರೇ ಎಲ್ಲಿಗಾದರೂ ಹೋಗಿ ಸುತ್ತಾಡಿ ಬರುವಿರಿ. ಅನಿವಾರ್ಯತೆಯನ್ನು ಗಮನದಲ್ಲಿ ಇಟ್ಟುಕೊಂಡು ಮುಂದೆ ಸಾಗಿರಿ. ದುಃಸ್ವಪ್ನಗಳು ನಿಮ್ಮನ್ನು ಕಾಡಬಹುದು. ಅತಿಯಾದ ಆತ್ಮವಿಶ್ವಾಸವನ್ನು ಇಟ್ಟುಕೊಳ್ಳುವುದರ ಜೊತೆ ಆಲೋಚನಾ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದೂ ಉತ್ತಮ. ಹಣಕಾಸಿನ ಉದ್ಯೋಗದಲ್ಲಿ ಇರುವವರಿಗೆ ಉತ್ತಮ ಅವಕಾಶವು ಸಿಗುವುದು. ಉದ್ಯಮದಲ್ಲಿ ಹಿನ್ನಡೆಯಾಗುವುದು ನಿಮಗೆ ಮೊದಲೇ ಗೊತ್ತಿದ್ದೂ ಪ್ರಯತ್ನಿಸುವಿರಿ.

ಧನು ರಾಶಿ :ಇಂದು ನೀವು ಇನ್ನೊಬ್ಬರ ಭವಿಷ್ಯದ ಬಗ್ಗೆ ಮಾರ್ಗದರ್ಶನ ಮಾಡುವಿರಿ. ನೀವು ಎಂದಿಗಿಂತಲೂ ನಿಮ್ಮ ಸಂಗಾತಿಗೆ ಹತ್ತಿರವಾಗುವ ಹಾಗೆ ನಡೆದುಕೊಳ್ಳುವಿರಿ. ಶಿಸ್ತುಬದ್ಧ ಜೀವನದಿಂದ ಹೊರಬರುವುದು ನಿಮಗೆ ಕಷ್ಟವಾದೀತು. ಹೊಸ ಬದುಕಿಗೆ ಒಗ್ಗಿಕೊಳ್ಳಲು ಸಮಯವನ್ನು ತೆಗೆದುಕೊಳ್ಳುವಿರಿ. ನಿಮ್ಮವರ ಜೊತೆ ಸಂತೋಷದ ಕ್ಷಣವನ್ನು ಕಳೆಯುವಿರಿ. ಪ್ರೀತಿಯ ವಿಚಾರದಲ್ಲಿ ಗೊಂದಲವಿರುವುದು. ಇಂದೇ ಮುಗಿಸುವ ಕೆಲಸಗಳನ್ನು ನಾಳೆಗೆ ಇಟ್ಟುಕೊಳ್ಳುವಿರಿ. ಕಛೇರಿಯಲ್ಲಿ ನಿಮ್ಮ ವ್ಯಕ್ತಿತ್ವವನ್ನು ಇಷ್ಟಪಡದವರು ನಿಮ್ಮನ್ನು ಅಪಹಾಸ್ಯ ಮಾಡಿಯಾರು. ಮನಸ್ತಾಪಗಳನ್ನು ನೀವು ಹೆಚ್ಚು ಕಾಲ ಇಟ್ಟುಕೊಳ್ಳುವುದು ಬೇಡ. ಅನಾರೋಗ್ಯವು ಚಿಕಿತ್ಸೆಯಾಗಿ ಪರಿಣಮಿಸಬಹುದು. ಉತ್ತಮ ಭೂಮಿಯ ಲಾಭವನ್ನು ಪಡೆಯುವಿರಿ. ಅಪಾಯಯಕ್ಕೆ ಸಿಕ್ಕಿಕೊಳ್ಳುವ ಸಂಭವವಿತ್ತು. ಸ್ವಂತ ಕೆಲಸಕ್ಕೆ ಸಮಯವು ಸಿಗದೇ ಎಲ್ಲವನ್ನೂ ಉಳಿಸಿಕೊಳ್ಳುವಿರಿ.

ಮಕರ ರಾಶಿ :ಪ್ರೀತಿಯಿಂದ ನಿಮಗೆ ಖುಷಿ ಸಿಗಲಿದೆ. ನಿಮ್ಮ ಸಂಗಾತಿಗೆ ಅನ್ಯ ಸ್ಥಳವನ್ನು ನೋಡುವ ಬಯಕೆ ಉಂಟಾಗುವುದು. ಹಿರಿಯರ ಅಭಿಪ್ರಾಯವನ್ನು ಕಡೆಗಾಣಿಸುವುದು ಬೇಡ. ಹೊಸ ಪ್ರದೇಶಗಳ ಭೇಟಿಯಿಂದ ನಿಮ್ಮ ಉತ್ಸಾಹವು ಹೆಚ್ಚಾಗಲಿದೆ. ನಿಮ್ಮ ಕೆಲಸವು ಬೇರೆಯವರಿಗೆ ಪ್ರೇರಣೆಯಾದೀತು. ಕುಟುಂಬದಲ್ಲಿ ಕೆಲಸಗಳು ಹೆಚ್ಚಿರಬಹುದು. ವಿಶ್ರಾಂತಿಯನ್ನು ಪಡೆಯಬೇಕಾಗಬಹುದು. ವಿದೇಶ ಪ್ರಯಾಣಕ್ಕೆ ತಯಾರಾಗಿ ನಿಂತಿರುವಿರಿ. ಹೊಸ ಆದಾಯಗಳು ನಿಮಗೆ ವಿದೇಶದಿಂದ ಬರಲಿದೆ. ವಿದ್ಯಾಭ್ಯಾಸದ ಬಗ್ಗೆ ಗಂಭೀರ ಚಿಂತನೆ ಅಗತ್ಯ. ತಂತ್ರಜ್ಞಾನಕ್ಷೇತ್ರದವರಿಗೆ ಸ್ವಲ್ಪ‌ ಹಿನ್ನಡೆಯಾದೀತು. ನಿಮ್ಮ ಸರ್ಜನ ಶೀಲತೆಯನ್ನು ತೋರಿಸಬೇಕಾದೀತು. ಸ್ನೇಹಿತರ ಸಹಕಾರದಿಂದ ಸ್ಥಿರಾಸ್ತಿಯನ್ನು ಖರೀದಿಸುವಿರಿ. ಹಂಚಿಕೊಳ್ಳುವ ಬಗ್ಗೆ ಸಮಾಧಾನ ಇರದು. ಯೋಗ್ಯ ಸಂಬಂಧವನ್ನು ವಿವಾಹಕ್ಕೆ ಹುಡುಕಿಕೊಳ್ಳುವಿರಿ. ಎಲ್ಲವೂ ಇದ್ದರೂ ಅದನ್ನು ಬಳಸುವ ಕಲೆಯೂ ಗೊತ್ತಿರಬೇಕು. ಸ್ನೇಹಿತನ ವಿವಾಹ ಸಮಾರಂಭದಲ್ಲಿ ಪಾಲ್ಗೊಳ್ಳುವಿರಿ.

ಕುಂಭ ರಾಶಿ :ಇಂದು ನೀವು ಕೆಲಸದಿಂದ ವಿರಾಮವನ್ನು ತೆಗೆದುಕೊಳ್ಳುವಿರಿ. ಮನೆಯಲ್ಲಿಯೇ ಇದ್ದು ಮಕ್ಕಳ ಜೊತೆ ಕಾಲವನ್ನು ಕಳೆಯುವಿರಿ. ಮಕ್ಕಳಲ್ಲಿ ಯಾವ ಪ್ರಗತಿಯನ್ನು ಕಾಣದೇ ಖರ್ಚು ಮಾಡುವುದಾಗಿ ಅನ್ನಿಸುವುದು. ಕುಟುಂಬದಲ್ಲಿ ಶಾಂತತೆ ಇದ್ದರೂ ಒಳಗೆ ಜ್ವಾಲಾಮುಖಿಯು ಸ್ಫೋಟಿಸಲು ಕಾಯುತ್ತಿರಬಹುದು. ಎಂದೋ‌ ಮಾಡಿದ ಸಹಾಯಕ್ಕೆ ಇಂದು ಪ್ರತಿಫಲ ಸಿಗುವ ಸಾಧ್ಯತೆ ಇದೆ. ಎಂದೂ ಊಹಿಸದ ಘಟನೆಯೊಂದು ಇಂದು ನಡೆಯಬಹುದು. ನಿರ್ಭಯದಿಂದ ನಿಮ್ಮ ವ್ಯಕ್ತಿತ್ವದ ಬಗ್ಗೆ ಸದ್ಭಾವ ಉಂಟಾಗುವುದು. ಸಂದರ್ಭಗಳನ್ನು ನಿಭಾಯಿಸಲು ಕಲಿಯುವ ಅನಿವಾರ್ಯತೆ ಬರಬಹುದು. ಅನಗತ್ಯ ಅಲೆದಾಟವು ನಿಮಗೆ ಕಷ್ಟವಾದೀತು. ಯಾರನ್ನೋ ನಿಂದಿಸುವುದು ಅಭ್ಯಾಸ ಮಾಡಿಕೊಳ್ಳುವುದು ಬೇಡ.‌ ನಿಮ್ಮ ನಿರುದ್ಯೋಗದ ಸ್ಥಿತಿಯು ದಾಯಾದಿಗಳಿಗೆ ಸಂತಸವಾಗುವುದು. ಸಕಾರಾತ್ಮಕ ಆಲೋಚನೆಗಳನ್ನು ನೀವು ಆಪ್ತರ ಜೊತೆ ಹಂಚಿಕೊಳ್ಳುವಿರಿ.

ಮೀನ ರಾಶಿ :ಇಂದು ಕುಟುಂಬದಲ್ಲಿ ನಿಮ್ಮ ಯಶಸ್ಸಿಗೆ ಎಲ್ಲರೂ ಖುಷಿಪಡುವರು. ವೃತ್ತಿಜೀವನಕ್ಕೆ ಬೇಕಾದ ಸಿದ್ಧತೆಯಲ್ಲಿ ಇರುವಿರಿ. ಕೆಲಸದಲ್ಲಿ ಪೂರ್ವಭಾವಿಯಾಗಿ ತಿಳಿದುಕೊಳ್ಳಲು ಹೋದರೆ, ಕೆಲಸಗಳನ್ನು ಅನಾಯಸವಾಗಿ ನಡೆಸಬಹುದು. ನೂತನ ಸ್ನೇಹಿತರನ್ನು ಮಾಡಿಕೊಳ್ಳುವಾಗ ಎಚ್ಚರಿಕೆ ಇರಲಿ. ಶುಭ ಸಮಾಚಾರವು ನಿಮಗೆ ಗೊತ್ತಾಗಬಹುದು.‌ ಮನೆಯಿಂದ ಸಮೀಪದ ದೇವರ ದರ್ಶನಕ್ಕೆ ನೀವು ಹೋಗಲಿದ್ದೀರಿ. ಕೋಪವನ್ನು ಕಡಿಮೆ ಮಾಡಿಕೊಳ್ಳುವುದರಿಂದ ನಿಮಗೇ ಶ್ರೇಯಸ್ಸು. ಆರ್ಥಿಕವಾಗಿ ಲಾಭ – ನಷ್ಟವು ಅಷ್ಟಾಗಿ ಇರದು. ಉದರಕ್ಕೆ ಸಂಬಂಧಿಸಿದ ರೋಗವು ಕಾಣಿಸಿಕೊಂಡೀತು. ನೀವು ಊಹಿಸದಂತೆ ಆಯಿತೆಂಬ ಸಂತೋಷವು ಆಗಬಹುದು. ಇಂದು ಆಗುವ ಬದಲಾವಣೆಯನ್ನು ಸಂತೋಷದಿಂದ ಸ್ವಾಗತಿಸಿ. ಯಾರದೋ ಬೇಸರವನ್ನು ಮತ್ಯಾರದೋ ಮೇಲೆ ತೀರಿಸಿಕೊಳ್ಳುವಿರಿ. ಸುಮ್ಮನೇ ಆಪ್ತರ ಮೇಲೆ‌ ಸಂಶಯವನ್ನು ಇಟ್ಟುಕೊಳ್ಳುವುದು ಬೇಡ. ಅಪ್ರಯೋಜಕ ಸಂಗತಿಗಳು ಮುಖ್ಯವಾದೀತು.

-ಲೋಹಿತ ಹೆಬ್ಬಾರ್ – 8762924271 (what’s app only)

‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಉಗ್ರಂ ಮಂಜು ತಲೆ ಮೇಲೆ ಬಾಟಲಿ ಹೊಡೆದ ಮೋಕ್ಷಿತಾ
ಉಗ್ರಂ ಮಂಜು ತಲೆ ಮೇಲೆ ಬಾಟಲಿ ಹೊಡೆದ ಮೋಕ್ಷಿತಾ
ವಾಟ್ ಎ ಬಾಲ್... ಡೇಂಜರಸ್ ಟ್ರಾವಿಸ್ ಹೆಡ್ ಕ್ಲೀನ್ ಬೌಲ್ಡ್
ವಾಟ್ ಎ ಬಾಲ್... ಡೇಂಜರಸ್ ಟ್ರಾವಿಸ್ ಹೆಡ್ ಕ್ಲೀನ್ ಬೌಲ್ಡ್
ವೀರಸೌಧದಲ್ಲಿ ಗಾಂಧಿ ಪ್ರತಿಮೆ ಅನಾವರಣಗೊಳಿಸಿದ ಸಿದ್ದರಾಮಯ್ಯ, ಡಿಕೆಶಿ
ವೀರಸೌಧದಲ್ಲಿ ಗಾಂಧಿ ಪ್ರತಿಮೆ ಅನಾವರಣಗೊಳಿಸಿದ ಸಿದ್ದರಾಮಯ್ಯ, ಡಿಕೆಶಿ
ಹುತಾತ್ಮ ಯೋಧರ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ: ಸಿಎಂ
ಹುತಾತ್ಮ ಯೋಧರ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ: ಸಿಎಂ