Rashi Bhavishya: ಇಂದಿನ ರಾಶಿ ಭವಿಷ್ಯ, ಈ ರಾಶಿಯ ಅವಿವಾಹಿತರಿಗೆ ದೂರದ ಸಂಬಂಧದಿಂದ ವಿವಾಹ ಕೂಡಿಬರಬಹುದು

ನೀವು ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರೇ? ಹಾಗಿದ್ದರೆ ಇಂದಿನ (2023 ಮೇ 13) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.

Rashi Bhavishya: ಇಂದಿನ ರಾಶಿ ಭವಿಷ್ಯ, ಈ ರಾಶಿಯ ಅವಿವಾಹಿತರಿಗೆ ದೂರದ ಸಂಬಂಧದಿಂದ ವಿವಾಹ ಕೂಡಿಬರಬಹುದು
ಇಂದಿನ ರಾಶಿ ಭವಿಷ್ಯImage Credit source: freepik
Follow us
Rakesh Nayak Manchi
|

Updated on: May 13, 2023 | 6:00 AM

ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚೆನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದರೆ 2023 ಮೇ 13 ಶನಿವಾರದ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ವಸಂತ ಋತು, ಮೇಷ ಮಾಸ, ಮಹಾನಕ್ಷತ್ರ : ಕೃತ್ತಿಕಾ, ಮಾಸ : ವೈಶಾಖ, ಪಕ್ಷ : ಕೃಷ್ಣ, ವಾರ : ಶನಿಮ, ತಿಥಿ : ಅಷ್ಟಮೀ, ನಿತ್ಯನಕ್ಷತ್ರ : ಧನಿಷ್ಠಾ, ಯೋಗ : ಬ್ರಹ್ಮ, ಕರಣ : ಕೌಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 06 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 50 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 09:18 ರಿಂದ 10:53ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 02:04 ರಿಂದ 03:40ರ ವರೆಗೆ, ಗುಳಿಕ ಕಾಲ ಬೆಳಗ್ಗೆ 06:07 ರಿಂದ 07:42ರ ವರೆಗೆ.

ಸಿಂಹ: ನಿಮ್ಮ ಆದಾಯ ಚೆನ್ನಾಗಿದ್ದು, ಖರ್ಚುಗಳು ಆತಂಕಕ್ಕೆ ತಳ್ಳಬಹುದು. ಪರಿಚಿತರ ಪ್ರಭಾವದಿಂದ ವೃತ್ತಿಯಲ್ಲಿ ಮುನ್ನಡೆಯುವಿರಿ. ವೈಯಕ್ತಿಕ ಸ್ಥಾನಮಾನಗಳು ಹೆಚ್ಚಾಗಬಹುದು. ನೂತನ ಗೃಹ ನಿರ್ಮಾಣಕ್ಕೆ ಹಣದ ಹೊಂದಿಸುವಿಕೆಯಲ್ಲಿ ಮಗ್ನರಾಗುವಿರಿ. ವಾಹನ ಖರೀದಿಯನ್ನು ಸ್ವಲ್ಪ ದಿನ ಮುಂದಕ್ಕೆ ಹಾಕಿ. ಗಂಭೀರ ಸಮಸ್ಯೆಯೊಂದಕ್ಕೆ ಪರಿಹಾರವನ್ನು ಹುಡುಕುಲು ಅತಿಯಾದ ಪ್ರಯತ್ನವನ್ನು ಮಾಡುವಿರಿ. ಅವಿವಾಹಿತರಿಗೆ ದೂರದ ಸಂಬಂಧದಿಂದ ವಿವಾಹವು ಕೂಡಿಬರಬಹುದು.

ಕನ್ಯಾ: ಇಂದು ನಿಮ್ಮ ಶತ್ರುಗಳು ಜಯಗಳಿಸಿ ನಿಮ್ಮನ್ನು ಛೇಡಿಸಬಹುದು. ಸರ್ಕಾರಿ ಕಚೇರಿಯಲ್ಲಿ ಕಾರ್ಯಗಳು ಮಂದಗತಿಯಲ್ಲಿ ಸಾಗುವುದು. ಸಮಯಕ್ಕಾಗಿ ಕಾಯಬೇಕಾಗಬಹುದು. ಇಂದು ನೀವು ಹಣಕಾಸಿನ ವಿಚಾರದಲ್ಲಿ ನಿಷ್ಠುರದಿಂದ ವರ್ತಿಸಿದರೆ ಮಾತ್ರ ಲಾಭಗಳಿಸುವ ಸಾಧ್ಯತೆ ಇದೆ. ದೂರದ ಬಂಧುಗಳು ಇಂದಿನ ಭೇಟಿಯಿಂದ ಹತ್ತಿರವಾಗುವರು. ಅನಿರೀಕ್ಷಿತ ಪ್ರಯಾಣವೂ ಬರಬಹುದು. ವೈದ್ಯಕೀಯ ವಿದ್ಯಾರ್ಥಿಗಳಿಗೆ ಹೆಚ್ಚು ತೊಂದರೆಯಾಗಬಹುದು. ಪ್ರೇಮಿಯು ದೂರಾಗಬಹುದು. ದುಃಖವು ಅಧಿಕವಾಗಲಿದೆ. ಸ್ನೇಹಿತರಿಂದ ಸಾಂತ್ವನ ಮಾಡುವರು.

ತುಲಾ: ಇಂದು ವ್ಯಾಪಾರದಲ್ಲಿ ವಿಶ್ವಾಸದ ದುರುಪಯೋಗವಾಗಬಹುದು, ಎಚ್ಚರದಿಂದ ಇರುವುದು ಒಳ್ಳೆಯದು. ದಾಂಪತ್ಯದಲ್ಲಿ ಮಾತಿಗೆ ಮಾತು ಬೆಳೆಸದೇ ಮೌನದಿಂದ ಮಾಡಬೇಕಾದುದನ್ನು ಮಾಡುವು ಯೋಗ್ಯ. ಪ್ರೇಮಿಯಿಂದ ನಿಮಗೆ ಧನಸಹಾಯ ಸಿಗಲಿದೆ. ಇದು ನಿಮಗೆ ಮುಜುಗರವನ್ನೂ ಉಂಟುಮಾಡೀತು. ಖಾಸಗಿ ವಿಚಾರಗಳಿಗೆ ಮನೆಯವರು ಮೂಗು ತೂರಿಸುವರು ಎಂದು ಸಿಟ್ಟುಗೊಳ್ಳುವಿರಿ. ಆದರೆ ಕೌಟುಂಬಿಕ ಅಗತ್ಯಗಳಿಗೆ ತಕ್ಷಣ ಗಮನ ನೀಡಬೇಕಾದೀತು. ಆಕಸ್ಮಿಕ ಪ್ರಯಾಣದಿಂದ ಕ್ಷೇತ್ರ ದರ್ಶನವಾಗಬಹುದು. ಇದು ನಿಮಗೆ ಬಹಳ ಸಂತೋಷವನ್ನು ಉಂಟುಮಾಡುವುದು.

ವೃಶ್ಚಿಕ: ಇಂದು ನೀವು ಮಂಗಲ ಕಾರ್ಯಗಳಿಂದ ಉತ್ಸಾಹವನ್ನು ಪಡೆದುಕೊಳ್ಳುವಿರಿ. ಅವಿವಾಹಿತರಿಗೆ ಯೋಗ್ಯ ಸಂಬಂಧವು ಆಕಸ್ಮಿಕವಾಗಿ ಬಂದು ಶೀಘ್ರವಾಗಿ ವಿವಾಹವು ಆಗುವುದು. ಹಿರಿಯರ ಮಾರ್ಗದರ್ಶನವನ್ನು ಬಿಟ್ಟು ಮುನ್ನಡೆಯುವುದು ಸಮಂಜಸವಾಗದು. ಉದ್ಯೋಗಸ್ಥರಿಗೆ ಉನ್ನತ ಅವಕಾಶ ಸಿಗಲಿದೆ. ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆಗೆ ಬೇಕಾದ ಉತ್ತಮ ಅವಕಾಶಗಳು ಸಿಗಲಿದೆ. ಹಣದ ಹರಿವಿನಿಂದ ತೃಪ್ತಿ ಉಂಟಾಗಬಹುದು. ಉದ್ಯೋಗದ ವಿಚಾರದಲ್ಲಿ ಸಂತಸವಿರುವುದು. ರಾಜಕಾರಿಣಿಗಳಿಗೆ ರಾಜಕೀಯದಲ್ಲಿ ಸೂಕ್ತ ಸ್ಥಾನಮಾನಗಳು ಸಿಗಲಿದೆ. ಗೆಲುವನ್ನು ಇವರು ನಿರೀಕ್ಷಿಸಬಹುದು. ಸಂತಾನದ ವಿಚಾರದಲ್ಲಿ ಶುಭ ಸೂಚನೆ ಇಂದು ನಿಮಗೆ ಸಿಗಲಿದೆ.

-ಲೋಹಿತಶರ್ಮಾ ಇಡುವಾಣಿ

ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು