Horoscope: ಇಂದಿನ ರಾಶಿಭವಿಷ್ಯ, ಈ ರಾಶಿಯವರ ಕಣ್ಣು ಪಿತ್ರಾರ್ಜಿತ ಆಸ್ತಿ ಮೇಲೆ ಬೀಳಲಿದೆ
ನೀವು ತುಲಾ, ವೃಶ್ಚಿಕ, ಧನು, ಮಕರ, ಕುಂಭ, ಮೀನ ರಾಶಿಯವರೇ? ಹಾಗಿದ್ದರೆ ಇಂದಿನ (2023 ಜುಲೈ 4) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.
ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚೆನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದರೆ 2023 ಜುಲೈ 4 ರ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಮಿಥುನ ಮಾಸ, ಮಹಾನಕ್ಷತ್ರ: ಆರ್ದ್ರಾ, ಮಾಸ: ಆಷಾಢ, ಪಕ್ಷ: ಕೃಷ್ಣ, ವಾರ: ಮಂಗಳ, ತಿಥಿ: ಪ್ರತಿಪತ್, ನಿತ್ಯನಕ್ಷತ್ರ: ಉತ್ತರಾಷಾಢ, ಯೋಗ: ಐಂದ್ರ, ಕರಣ: ಬಾಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 09 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 07 ಗಂಟೆ 04 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 03:50 ರಿಂದ 05:27ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 09:23 ರಿಂದ 10:59ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 12:37 ರಿಂದ 02:14ರ ವರೆಗೆ.
ತುಲಾ: ಹಿರಿಯರ ಉಪದೇಶವು ನಿಮಗೆ ಕಿರಿಕಿರಿ ಎನಿಸಬಹುದು. ಆರ್ಥಿಕ ಪರಿಸ್ಥಿತಿಯು ಸುಧಾರಿಸಬಹುದು. ಕುಟುಂಬವು ನಿಮ್ಮ ಮಾರ್ಗದರ್ಶನದಲ್ಲಿ ನೆಮ್ಮದಿಯನ್ನು ಕಾಣಬಹುದು. ನಿಮ್ಮ ಆದಾಯದ ಮೂಲವಾದ ವ್ಯಾಪಾರವು ಲಾಭವನ್ನು ಕೊಡಬಹುದು. ಹಳೆಯ ರೋಗಕ್ಕೆ ಔಷಧದಿಂದ ಪರಿಹಾರ ಸಿಗಲಿದೆ. ನಿಮ್ಮ ಪ್ರೀತಿಪಾತ್ರರನ್ನು ನೀವು ಭೇಟಿಯಾಗಲು ಬಯಸುವಿರಿ. ಸ್ವಂತ ಉದ್ಯಮವನ್ನು ನಡೆಸುತ್ತಿದ್ದರೆ ಸರ್ಕಾರದ ಅಧಿಕಾರಿಹಳಿಂದ ಒತ್ತಡವು ಬರಬಹುದು. ಆಪ್ತರ ಜೊತೆ ಪ್ರಯಾಣ ಮಾಡುವಿರಿ. ಸಮಾರಂಭಗಳಿಗೆ ಹೋಗುವವರಿದ್ದೀರಿ. ನೀರನ ಪ್ರದೇಶದಲ್ಲಿ ಜಾಗರೂಕತೆ ಅವಶ್ಯಕ.
ವೃಶ್ಚಿಕ: ಪ್ರಯತ್ನಪೂರ್ವಕವಾಗಿ ನಿಮ್ಮ ಕೆಲಸವನ್ನು ಪೂರೈಸುವಿರಿ. ಆಲಸ್ಯವು ಇಂದಿನ ಕಾರ್ಯವನ್ನು ನಿಧಾನ ಮಾಡಬಹುದು. ನೀವು ಇಟ್ಟ ನಂಬಿಕೆ ಹುಸಿಯಾಗುವ ಸಾಧ್ಯತೆ ಇದೆ. ಮಗನ ವಿವಾಹಕ್ಕೆ ಬಹಳ ಪ್ರಯತ್ನ ಮಾಡುವಿರಿ. ವಸ್ತ್ರಗಳನ್ನು ಮಾರಾಟ ಮಾಡುವವರು ತಮ್ಮ ಯೋಜನೆಯನ್ನು ಬದಲಿಸಿ ಹೆಚ್ಚು ಲಾಭವನ್ನು ಪಡೆದುಕೊಳ್ಳಬಹುದು. ಉದ್ಯೋಗದಲ್ಲಿ ಕಲಹವಾಗುವ ಸಾಧ್ಯತೆ ಇದೆ. ವಾಹನವನ್ನು ಬಹಳ ಜಾಗರೂಕತೆಯಿಂದ ಚಲಾಯಿಸಿ. ವಿದ್ಯಾರ್ಥಿಗಳಿಗೆ ಸಮಯದ ಅಭಾವವು ಆಗಬಹುದು. ಕೆಲವು ದಿನಗಳ ವಿರಾಮವನ್ನು ಪಡೆದು ಪ್ರವಾಸ ಹೋಗುವಿರಿ. ನಿಮ್ಮ ವಸ್ತುವನ್ನು ಸರಿಯಾಗಿ ಇಟ್ಟುಕೊಳ್ಳಿ.
ಧನು: ಧನನಷ್ಟವಾದರೂ ಮನೆಗೆ ಬೇಕಾದ ವಸ್ತುಗಳನ್ನು ಖರೀದಿಸುವಿರಿ. ಉದ್ಯೋಗದಲ್ಲಿ ಬದಲಾವಣೆ ಮಾಡಲು ಇಚ್ಛಿಸುವಿರಿ. ನಿಮ್ಮ ಕೆಲಸಗಳಿಗೆ ಆಪ್ತರ ವಿರೋಧವಿರಲಿದೆ. ಆತುರದ ನಿರ್ಧಾರದಿಂದ ಸಮಸ್ಯೆಗಳು ಹುಟ್ಟಿಕೊಳ್ಳಬಹುದು. ಒಳಿತಿಗಾಗಿ ಸಮಯವನ್ನು ನೀವು ನಿರೀಕ್ಷಿಸಬೇಕಾಗುತ್ತದೆ. ನೀವು ಮಾನಸಿಕವಾಗಿ ಗಟ್ಟಿಯಾಗಬೇಕಾಗಿದೆ. ದುರ್ಬಲ ಮನಸ್ಸಿಗೆ ನಕಾರಾತ್ಮಕ ಅಂಶಗಳು ಬರಬಹುದು. ನೆಮ್ಮದಿಯನ್ನು ಪಡೆಯಲು ಸಮೀಪದ ದೇವಾಲಯಕ್ಕೆ ಹೋಗುವಿರಿ. ನಿಶ್ಚಯವಾದ ವಿವಾಹವು ಕಾರಣಾಂತರಗಳಿಂದ ಮುಂದು ಹೋಗಬಹುದು. ಪಿತ್ರಾರ್ಜಿತ ಆಸ್ತಿಯ ಬಗ್ಗೆ ನಿಮಗೆ ಆಸೆಯಾಗಲಿದೆ.
ಮಕರ: ಮಕ್ಕಳ ಭಾವನೆಗೆ ಸ್ಪಂದಿಸಿ ಅವರನ್ನು ಖುಷಿಪಡಿಸುವಿರಿ. ಸಂಗಾತಿಯ ಆರೋಗ್ಯದಲ್ಲಿ ವ್ಯತ್ಯಾಸವಾಗಲಿದ್ದು ನಿಮಗೆ ಭಯವಾಗಬಹುದು. ಇನ್ನೊಬ್ಬರಿಗೆ ಸಹಾಯ ಮಾಡಿದ ಧನ್ಯತೆ ನಿಮಗೆ ಆಗಲಿದೆ. ಇದು ನಿಮ್ಮನ್ನು ಖುಷಿಯಿಂದ ಇಡುವುದು. ಕಲಹವು ಸಣ್ಣದೇ ಆಗಿದ್ದರೂ ಅದ ಫಲವು ಬಹಳ ದೊಡ್ಡಾದಾಗಿರುವುದು. ಮಾತಿನ ಮೇಲೆ ನಿಮ್ಮ ನಿಯಂತ್ರಣವಯ ಅಗತ್ಯ. ಕಳೆದುಕೊಂಡ ವಸ್ತುವನ್ನು ಅವರಿಗೆ ತಲುಪಿಸುವ ಮನಸ್ಸು ಮಾಡುವಿರಿ. ಮಹಿಳೆಯರು ಸ್ವ ಉದ್ಯೋಗವನ್ನು ಮಾಡಲು ಬಯಸಬಹುದು. ಅನಿವಾರ್ಯ ಕಾರಣದಿಂದ ಮನೆಗೆ ಹೋಗಲು ಆಗದೇ ಇರಬಹುದು. ದೇಹದಲ್ಲಿ ನೋವು ಕಾಣಿಸಿಕೊಳ್ಳಬಹುದು.
ಕುಂಭ: ನಿಮಗೆ ಅನೇಕ ಅವಕಾಶಗಳು ಸಿಗಲಿದ್ದು ಅದನ್ನು ಬಿಡುವಿರಿ. ಕೃಷಿ ಚಟುವಟಿಕೆಗಳನ್ನು ತೊಡಗಿಕೊಳ್ಳುವ ಸಾಧ್ಯತೆ ಇದೆ. ಕುಟುಂಬದ ಸೌಖ್ಯವನ್ನು ಇಚ್ಛಿಸುವಿರಿ. ಬಂಧುಗಳ ಪ್ರೀತಿ ಸಿಗಲಿದೆ. ಶ್ರಮವಹಿಸಿದರೂ ನಿರೀಕ್ಷಿತ ಆದಾಯವನ್ನು ಗಳಿಸುವುದು ಕಷ್ಟವಾದೀತು. ಇದು ನಿಮ್ಮನ್ನು ಚಿಂತೆಗೆ ಚಿಂತೆಗೆ ಒಳಗಾಗುವಿರಿ. ಅಧಿಕಾರಿವರ್ಗವು ನಿಮ್ಮ ಮೇಲೆ ಒತ್ತಡವನ್ನು ತರಬಹುದು. ನಿಮ್ಮನ್ನು ಕಡೆಗಣಿಸಿದ ಜನರ ಮುಂದೇ ನೀವು ಎದ್ದು ನಿಲ್ಲುವಿರಿ. ಇಂದಿನ ಕಾರ್ಯಗಳು ಮುಕ್ತಾಯವಾಗದೇ ಆತಂಕ ಪಡುವಿರಿ. ಸಂಗಾತಿಯನ್ನು ಹೆಚ್ಚು ಇಷ್ಟಪಡುವಿರಿ. ಸಾಮರಸ್ಯದ ಕೊರೆತೆಯು ನೀಗಲಿದೆ.
ಮೀನ: ಸುತ್ತಲಿನವರು ನಿಮ್ಮನ್ನು ಅರ್ಥಮಾಡಿಕೊಳ್ಳುವರು. ಆದರೆ ಅವರಿಂದ ಗೌರವ ಸಿಗುತ್ತಿಲ್ಲ ಎಂಬ ಕೊರಗು ಕಾಡಬಹುದು. ನಿಮ್ಮ ಬಳಿ ಕೆಲಸ ಮಾಡಿಸಿಕೊಳ್ಳಲು ಜನರು ತಂತ್ರಗಳನ್ನು ಬಳಸಬಹುದು. ಆರ್ಥಿಕವಾಗಿ ಸಬಲರಾಗುವಿರಿ. ಮನೋರಂಜನೆಯ ಕಾರ್ಯಕ್ರಮದಲ್ಲಿ ನೀವು ಭಾಗವಹಿಸುವಿರಿ. ಕೆಲಸದಿಂದ ಹೊರಬಂದ ಸ್ನೇಹಿತರಿಗೆ ಸಹಾಯ ಮಾಡುವಿರಿ. ಹೊಸತನ್ನು ಕಲಿಯಬೇಕು ಎನ್ನುವ ಬಯಕೆ ಹೆಚ್ಚು ಇರಲಿದೆ. ಉದ್ಯೋಗದ ಕಾರಣಕ್ಕೆ ನೀವು ಮನೆಯಿಂದ ದೂರ ಉಳಿದುಕೊಳ್ಳಬೇಕಾಗಬಹುದು. ಪತ್ನಿಗೆ ಸಹಕಾರವನ್ನು ಇಂದು ನೀಡಲಿದ್ದೀರಿ.
-ಲೋಹಿತಶರ್ಮಾ