ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚೆನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದರೆ 2023 ಜೂನ್ 18 ಭಾನುವಾರ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ವಸಂತ ಋತು, ವೃಷಭ ಮಾಸ, ಮಹಾನಕ್ಷತ್ರ: ಮೃಗಶಿರಾ, ಮಾಸ: ಜ್ಯೇಷ್ಠ, ಪಕ್ಷ: ಕೃಷ್ಣ, ವಾರ: ಭಾನು, ತಿಥಿ: ಚತುರ್ದಶೀ, ನಿತ್ಯನಕ್ಷತ್ರ: ಮೃಗಶಿರಾ, ಯೋಗ: ಶೂಲ, ಕರಣ: ನಾಗವಾನ್, ಸೂರ್ಯೋದಯ ಬೆಳಗ್ಗೆ 06 ಗಂಟೆ 05 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 07 ಗಂಟೆ 01 ನಿಮಿಷಕ್ಕೆ, ರಾಹು ಕಾಲ ಸಂಜೆ 05:25 ರಿಂದ 07:02ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 12:33 ರಿಂದ 02: 10ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 03:48 ರಿಂದ 05:25ರ ವರೆಗೆ.
ಧನುಸ್ಸು: ಅವಶ್ಯಕ ಕಾರ್ಯಗಳ ನಿಮಿತ್ತ ದೂರ ಪ್ರಯಾಣ ಮಾಡಬೇಕಾಗುವುದು. ನಿಮ್ಮ ಮಾತಿನಲ್ಲಿ ಸತ್ಯತೆ ಇದ್ದರೂ ನಿಮ್ಮನ್ನು ನಂಬಲು ಅನುಮಾನಿಸುವರು. ಉನ್ನತಾಧಿಕಾರಿಗಳ ಜೊತೆ ಕುಳಿತು ನಿಮಗೆ ಆಗಬೇಕಾದ ಕೆಲಸವನ್ನು ಮಾತನಾಡಿ ಮಾಡಿಸಿಕೊಳ್ಳಿ. ಆರೋಗ್ಯದ ಸಮಸ್ಯೆ ದೂರವಾಗುತ್ತಿದೆ ಎನ್ನುವಾಗ ಮತ್ತೇನಾದರೂ ನಿಧಾನವಾಗಿ ಆರಂಭವಾಗಬಹುದು. ನಿಮ್ಮ ಕೋಪವನ್ನು ಆದಷ್ಟು ಕಡಿಮೆಮಾಡಿಕೊಳ್ಳುವುದು ಉತ್ತಮ. ಅದನ್ನು ಸರಳವಾಗಿಸುವ ವಿಧಾನವನ್ನು ಕಂಡುಕೊಳ್ಳಿ. ಪಿರ್ತಾರ್ಜಿತ ಆಸ್ತಿಗೆ ಸಂಬಂಧಿಸಿದಂತೆ ವ್ಯವಹಾರವು ಮುಕ್ತಾಯವಾಗಬಹುದು. ಅನಿರೀಕ್ಷಿತವಾಗಿ ನೀವು ನಡೆದುಕೊಳ್ಳುವ ರೀತಿಯು ಕೆಲವರಿಗೆ ಆದರ್ಶವಾಗಬಹುದು. ಸ್ವಲ್ಪ ಅಂತರದಲ್ಲಿ ನಿಮಗೆ ದೊಡ್ಡ ಅಪಾಯವು ತಪ್ಪಿಹೋಗಬಹುದು.
ಮಕರ: ನಿರುದ್ಯೋಗಿಗಳು ಸ್ನೇಹಿತರ ಜೊತೆ ಚರ್ಚಿಸಿ ಹೊಸ ಉದ್ಯೋಗಕ್ಕೆ ಸೇರಿಕೊಳ್ಳುವರು. ಸಾಮಾಜಿಕವಾಗಿ ಪ್ರಸಿದ್ಧರಾಗಲು ನೀವು ಬಯಸುವಿರಿ. ರಾಜಕೀಯ ವ್ಯಕ್ತಿಗಳ ಒಡನಾಟ ಸಿಗಲಿದೆ. ನಕಾರಾತ್ಮಕ ಆಲೋಚನೆಗಳನ್ನು ಬಲವಂತವಾಗಿ ಕಡಿಮೆ ಮಾಡಿಕೊಳ್ಳಬೇಕಾಗುವುದು. ಸಂಗಾತಿಯ ಜೊತೆ ಭವಿಷ್ಯವನ್ನು ಚಿಂತಿಸುವಿರಿ. ಹಳೆಯ ಸ್ನೇಹಿತರ ನೆನಪಾಗುವ ಸಾಧ್ಯತೆ ಇದೆ. ಇಷ್ಟಪಟ್ಟವರನ್ನು ನೀವು ಭೇಟಿಯಾಗಿ ಆತ್ಮೀಯವಾಗಿ ಮಾತನಾಡುವಿರಿ. ನಿಮ್ಮ ಮಾತುಗಳು ಅಸ್ಪಷ್ಟವಾಗಿ ಇರಲಿದೆ. ಮಕ್ಕಳಿಗೆ ನೀವು ನಿರ್ಬಂಧವನ್ನು ಹಾಕಿ ಪ್ರಯೋಜನವಾಗದು.
ಕುಂಭ: ಉದ್ಯೋಗಸ್ಥರಿಗೆ ಉನ್ನತ ಅವಕಾಶ ಸಿಗಬಹುದು. ಅನುಭವಿಗಳ ಮಾರ್ಗದರ್ಶನ ಪಡೆಯುವುದರಿಂದ ನೆಮ್ಮದಿಯು ಲಭಿಸಲಿದೆ. ಅವಿವಾಹಿತರು ಯೋಗ್ಯ ಸಂಬಂಧವನ್ನು ನಿರೀಕ್ಷಿಸಬಹುದು. ಮಂಗಳ ಕಾರ್ಯದಿಂದ ಮನಸ್ಸು ಅರಳುವುದು. ಬಿದ್ದು ಗಾಯ ಮಾಡಿಕೊಳ್ಳಬಹುದು. ನ್ಯಾಯಾಲಯಕ್ಕೆ ಬೇಕಾದ ದಾಖಲೆಗಳನ್ನು ನೀವು ತಯಾರಿಸಿಕೊಳ್ಳುವಿರಿ. ನಿಮ್ಮ ಪ್ರಾಮಾಣಿಕತನಕ್ಕೆ ಮೆಚ್ಚುಗೆ ಬರಬಹುದು. ವಿದ್ಯಾರ್ಥಿಗಳು ಪರೀಕ್ಷೆಯ ಭಯವನ್ನು ದೂರ ಮಾಡಿಕೊಳ್ಳುವ ಅವಶ್ಯಕತೆ ಇದೆ. ಅಪರಿಚಿತ ವ್ಯಕ್ತಿಗಳ ಕರೆಯು ನಿಮ್ಮನ್ನು ವಂಚನೆಯ ಜಾಲಕ್ಕೆ ಸಿಲುಕಿಸಬಹುದು.
ಮೀನ: ಇಂದು ನಿಮ್ಮಿಂದ ಹೊಸ ಚಿಂತನೆಗಳು ಬರಬಹುದು. ನಿಮ್ಮ ದೃಷ್ಟಿಕೋನವನ್ನು ನೀವು ಬದಲಿಸಿಕೊಳ್ಳುವಿರಿ. ಸಾಮಾಜಿಕ ಕ್ಷೇತ್ರದಲ್ಲಿ ವಿಶ್ವಾಸದ ದುರುಪಯೋಗವಾಗಬಹುದು. ಬಂಧುಗಳ ಜೊತೆ ವ್ಯವಹಾರ ಮಾಡುವಾಗ ಪಾರದರ್ಶಕತೆ ಬೇಕಾದೀತು. ಎಲ್ಲರಿಂದಲೂ ಒಂದೇ ವಿಚಾರವನ್ನು ಕೇಳಿ ಮನಸ್ಸಿಗೆ ಭಾರವಾಗುವುದು. ಇಷ್ಟು ವರ್ಷ ನಡೆಸಿದ ಉದ್ಯಮವು ನಿಮಗೆ ಸಾಕೆನಿಸಬಹುದು. ಅಥವಾ ಬೇರೆ ಉದ್ಯಮದತ್ತ ಮುಖ ಮಾಡಲೂ ಬಹುದು. ಭೋಗವನ್ನು ನೀವು ಇಷ್ಟಪಡುವಿರಿ. ಇನ್ನೊಬ್ಬರಿಗೆ ಬೇಸರವಾಗುವಷ್ಟು ನೀವು ಮಾತನಾಡುವುದು ಬೇಡ. ಗುಪ್ತ ಸಂಪತ್ತಿನ ವಿಚಾರವು ಬೇರೆಯವರಿಗೂ ತಿಳಿದೀತು.