Daily Horoscope: ಮೇಷ, ವೃಷಭ, ಮಿಥುನ, ಕಟಕ ರಾಶಿಗಳ ಇಂದಿನ ಭವಿಷ್ಯ ಹೀಗಿದೆ
ನೀವು ಮೇಷ, ವೃಷಭ, ಮಿಥುನ, ಕಟಕ ರಾಶಿಯವರೇ? ಹಾಗಿದ್ದರೆ ಇಂದಿನ (2023 ಜೂನ್ 18) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.
ಪ್ರತಿಯೊಬ್ಬರ ಜೀವನದಲ್ಲಿ ರಾಶಿ ಭವಿಷ್ಯ ವಿಭಿನ್ನವಾಗಿರುತ್ತದೆ. ಹಾಗಾಗಿ ಕೆಲವರು ಬೆಳಗ್ಗೆ ಎದ್ದ ಕೂಡಲೇ ಇಂದಿನ ತಮ್ಮ ಭವಿಷ್ಯ (Daily horoscope) ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು, ಏನು ಮಾಡಬಾರದು? ಹೀಗೆ ನಿತ್ಯಭವಿಷ್ಯ ನೋಡುತ್ತಾರೆ. ಇದರ ಜೊತೆಗೆ ನಿತ್ಯಪಂಚಾಂಗ ಕೂಡ ಓದುತ್ತಾರೆ. ಹಾಗಾದರೆ ಇಂದಿನ (2023 ಜೂನ್ 18) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ವಸಂತ ಋತು, ವೃಷಭ ಮಾಸ, ಮಹಾನಕ್ಷತ್ರ: ಮೃಗಶಿರಾ, ಮಾಸ: ಜ್ಯೇಷ್ಠ, ಪಕ್ಷ: ಕೃಷ್ಣ, ವಾರ: ಭಾನು, ತಿಥಿ: ಚತುರ್ದಶೀ, ನಿತ್ಯನಕ್ಷತ್ರ: ಮೃಗಶಿರಾ, ಯೋಗ: ಶೂಲ, ಕರಣ: ನಾಗವಾನ್, ಸೂರ್ಯೋದಯ ಬೆಳಗ್ಗೆ 06 ಗಂಟೆ 05 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 07 ಗಂಟೆ 01 ನಿಮಿಷಕ್ಕೆ, ರಾಹು ಕಾಲ ಸಂಜೆ 05:25 ರಿಂದ 07:02ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 12:33 ರಿಂದ 02: 10ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 03:48 ರಿಂದ 05:25ರ ವರೆಗೆ.
ಮೇಷ: ಕಲಾವಿದರಿಗೆ ಗೌರವ ಸಿಗುವುದು. ಸುಂದರವಾದ ಮನೆಯ ನಿರ್ಮಾಣದ ಕನಸನ್ನು ಸಂಗಾತಿಯ ಜೊತೆ ಹಂಚಿಕೊಳ್ಳುವಿರಿ. ಆಕಸ್ಮಿಕವಾಗಿ ನೀವು ಆಪ್ತರ ಅಗಲುವಿಕೆಯ ವಾರ್ತೆಯನ್ನು ಕೇಳುವಿರಿ. ವಿದೇಶಕ್ಕೆ ತೆರಳುವ ಆಲೋಚನೆಯನ್ನು ಮಾಡುವಿರಿ. ವಿಳಂಬ ವಿವಾಹಕ್ಕೆ ಯಾರನ್ನೋ ಬೊಟ್ಟುಮಾಡಿ ತೋರಿಸುವಿರಿ. ಸಹೋದರಿಯ ಜೊತೆ ಹೆಚ್ಚಿನ ವಿಚಾರವನ್ನು ಹಂಚಿಕೊಳ್ಳುವಿರಿ. ಸಂಗಾತಿಯ ಕಡೆಯಿಂದ ಲಾಭವಾಗಲಿದೆ. ನಿಮಗೆ ಇಷ್ಟವಾದುದನ್ನು ದಾನವಾಗಿ ಕೊಡಿ. ಸಮಯಕ್ಕೆ ಸರಿಯಾಗಿ ಯಾವುದೂ ಆಗುವುದಿಲ್ಲ ಎಂಬ ಬೇಸರ ಉಂಟಾಗಬಹುದು.
ವೃಷಭ: ಬೌದ್ಧಿಕ ಕಸರತ್ತನ್ನು ಮಾಡಲು ಹೋಗಿ ತಲೆಕೆಡಿಸಿಕೊಳ್ಳುವಿರಿ. ಬೆಳಗಿನಿಂದಲೇ ನೀವು ಮೋಜಿನ ಮಾನಸಿಕತೆಯನ್ನು ಬೆಳೆಸಿಕೊಂಡಿರುವಿರಿ. ನಿಮ್ಮ ಅಧ್ಯಯನ ಬಗ್ಗೆ ನಿಮಗೇ ಅನುಮಾನ ಬರಬಹುದು. ನಿಮಗಾಗಿ ಕಾಯುವ ಆತ್ಮೀಯರನ್ನು ಭೇಟಿ ಮಾಡಿ. ಕೌಟುಂಬಿಕ ವಿಚಾರವನ್ನು ಅತಿಯಾಗಿ ವೈಭವಿಸಬೇಕಾಗಿಲ್ಲ. ಸದ್ಯ ಅದು ಶಾಂತವಾಗಿರಲಿ. ನಿಮ್ಮನ್ನು ಇಷ್ಟಪಡುವವರಿಗೆ ನಿಮ್ಮ ಬಗ್ಗೆ ಹೇಳಿ. ಹಳೆಯ ನೆನಪುಗಳನ್ನು ಇಂದು ಆಸ್ವಾದಿಸುವಿರಿ. ಓದಿನತ್ತ ಹೆಚ್ಚಿನ ಗಮನವಿರಲಿದೆ. ನಿಮ್ಮವರ ಅಭಿಪ್ರಾಯವನ್ನು ಮನ್ನಿಸಿ. ಅವರ ಮಾತನ್ನು ಧಿಕ್ಕರಿಸಬೇಡಿ.
ಮಿಥುನ: ನಿಮ್ಮವರಿಗೆ ನೀವು ಸಮಯವನ್ನು ಕೊಡಲಾಗುತ್ತಿಲ್ಲ ಎಂಬ ಕೊರಗು ಹೆಚ್ಚಾಗಬಹುದು. ತಂದೆ – ತಾಯಿಯರ ಭೇಟಿಯನ್ನು ಮಾಡಲು ಇಚ್ಛಿಸುವಿರಿ. ಹೆಚ್ಚಿ ವಿದ್ಯಾಭ್ಯಾಸಕ್ಕೆ ಬೇರೆಡೆಗೆ ತೆರಳಬಹುದು. ತಾಯಿಗೆ ಚಿಕಿತ್ಸೆಯನ್ನು ಕೊಡಿಸುವಿರಿ. ಕೆಟ್ಟ ಮಾರ್ಗದಿಂದ ಬರುವ ಹಣವನ್ನು ನೀವು ನಿರಾಕರಿಸುವಿರಿ. ಸಾಲವನ್ನು ಹಂತಹಂತವಾಗಿ ತೀರಿಸಲು ನೀವು ಯೋಜನೆ ರೂಪಿಸಿಕೊಳ್ಳುವಿರಿ. ಇಂದು ನೀವು ವಿಶ್ರಾಂತಿಯನ್ನು ಪಡೆಯಬೇಕು ಎಂಬ ಆಲೋಚನೆಯಲ್ಲಿ ಇದ್ದರೆ ಅದು ಅಸಾಧ್ಯವಾದೀತು. ಸ್ನೇಹಿತರ ಜೊತೆ ದೂರ ಪ್ರಯಾಣ ಮಾಡಿ ಬರುವಿರಿ. ಸರಿಯಾದ ಆಹಾರವು ಸಿಗದೇ ಹಸಿವಿನಿಂದ ಸಂಕಟಪಡುವಿರಿ.
ಕರ್ಕ: ಪ್ರೀತಿ ಪಾತ್ರರ ಭೇಟಯಿಂದ ನಿಮ್ಮಲ್ಲಿ ಉತ್ಸಾಹ ಹೆಚ್ಚಾಗುವುದು. ನಿಮ್ಮ ಹೊಸ ಉದ್ಯಮದ ವಿಚಾರವು ನಿಮಗೆ ಕುಟುಂಬದಲ್ಲಿ ಸಂತೋಷವನ್ನು ಹೆಚ್ಚಿಸೀತು. ನಿಮಗೆ ಉಂಟಾದ ನೋವಿಗೆ ಸರ್ಕಾರ ಪರಿಹಾರವನ್ನೂ ಕೊಡಬಹುದು. ಸಂಗಾತಿಯು ನಿಮ್ಮ ಎಲ್ಲ ವಿಷಯಕ್ಕೂ ತಗಾದೆ ತೆಗೆಯಬಹುದು. ನಿಮ್ಮ ಬಗ್ಗೆ ತಿಳಿಯದೇ ಮನೆಯಲ್ಲಿ ಆತಂಕ ಸೃಷ್ಟಿಯಾಗಬಹುದು. ಮನೆಯಿಂದ ಸಹಾಯ ಪಡೆಯಬಾರದು ಎಂಬ ಸ್ವಾಭಿಮಾನ ಎದ್ದು ತೊರುವುದು. ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗೆ ಹೆಚ್ಚಿನ ತರಬೇತಿಯನ್ನು ಪಡೆಯಬೇಕಾಗಬಹುದು.