Daily Horoscope: ಧನು, ಮಕರ, ಕುಂಭ, ಮೀನ ರಾಶಿಯವರ ಇಂದಿನ ಭವಿಷ್ಯ
ನೀವು ಧನು, ಮಕರ, ಕುಂಭ, ಮೀನ ರಾಶಿಯವರೇ? ಹಾಗಿದ್ದರೆ ಇಂದಿನ (2023 ಜೂನ್ 2) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.
ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚೆನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದರೆ 2023 ಜೂನ್ 1 ಶುಕ್ರವಾರದ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.
ಧನು: ಧನಾಗಮನದ ವಿಚಾರದಲ್ಲಿ ನೀವು ನಿರುಪಾಯರು. ಎಲ್ಲರನ್ನೂ ನಿಷ್ಕಾರಣವಾಗಿ ತೆಗಳುವುದು ಸರಿಯಲ್ಲ. ಮಾತುಗಳನ್ನು ವಿವೇಚನೆ ಇಲ್ಲದೇ ಮಾತನಾಡುವುದು ಬೇಡ. ನೀವಿಂದು ಪ್ರೀತಿಯ ಪಾಶದಲ್ಲಿ ಬೀಳಬಹುದು. ಮಾನಸಿಕವಾದ ನೋವನ್ನು ಹೊರಹಾಕಲು ಪ್ರಯತ್ನಿಸುವಿರಿ. ಬರಬೇಕಾದ ಸಂಪತ್ತಿನ ನಿರೀಕ್ಷೆಯಲ್ಲಿ ಇರುವಿರಿ. ಒಂದನ್ನು ಪಡೆಯಲು ಹೋಗಿ ಮತ್ತೊಂದನ್ನು ಬಿಡಬೇಕಾದೀತು. ಶಾಂತಯುವಾಗಿ ವ್ಯವಹರಿಸುವುದು ಉಚಿತ. ನಿಮ್ಮ ಮೇಲಿನ ನಂಬಿಕೆಯನ್ನು ಘಾಸಿ ಮಾಡಿಕೊಳ್ಳಬೇಡಿ. ದೈವದ ಸ್ಮರಣೆಯನ್ನು ನೀವು ಅದಷ್ಟು ಮಾಡುವುದು ಒಳ್ಳೆಯದು.
ಮಕರ: ಪರರ ನೋವಿಗೆ ಸಂದಿಸುವುದು ನಿನಗೆ ಸ್ವಭಾವತಃ ಇದ್ದರೂ ಇಂದು ಅದನ್ನು ಮಾಡಲು ಹಿಂದೇಟು ಹಾಕುವಿರಿ. ನಿಮ್ಮ ಮನಸ್ಸನ್ನು ದುರ್ಬಲವಾಗಲು ಬಿಡಬೇಡಿ. ಏನಾದರೊಂದು ಕೆಲಸದಲ್ಲಿ ಇರುವಂತೆ ನೋಡಿಕೊಳ್ಳಿ. ಇಂದು ನಿಮ್ಮ ಸಂದರ್ಭೋಜಿತ ಉತ್ತರಗಳು ನಿಮ್ಮ ಗೌರವವನ್ನು ಹೆಚ್ಚಿಸುವುದು. ಹಿರಿಯರು ನಿಮ್ಮನ್ನು ಪ್ರಶಂಸಿಸಬಹುದು. ದೂರವಾಗಿದ್ದ ಸಂಬಂಧಗಳು ಹತ್ತಿರವಾಗಬಹುದು. ಶೀಘ್ರವಾಗಿ ಕೋಪಗೊಳ್ಳುವ ಸಾಧ್ಯತೆ ಇದ್ದರೂ ಮನಸ್ಸನ್ನು ನಿಯಂತ್ರಣವನ್ನು ಸಾಧಿಸಲು ನೀವು ಯಶಸ್ವಿಯಾಗಿದ್ದೀರಿ.
ಕುಂಭ: ಸಣ್ಣ ವಿಚಾರವನ್ನು ದೊಡ್ಡ ಮಾಡಿಕೊಂಡು ಕೆಲಸದ ಸಮಯವನ್ನು ವ್ಯರ್ಥಮಾಡಿಕೊಳ್ಳಬಹುದು. ನಿಮ್ಮ ಸಹಾಯದ ನಿರೀಕ್ಷೆಯಲ್ಲಿ ಇರುವವರಿಗೆ ಕಿಂಚಿತ್ ಸಹಾಯವನ್ನು ಮಾಡುವಿರಿ. ಕೆಲಸವಾಗಲು ಉನ್ನತ ಅಧಿಕಾರಿಗಳನ್ನು ಹೊಗಳಬೇಕಾದೀತು. ಮಕ್ಕಳು ನಿಮ್ಮನ್ನು ಹೆಚ್ಚು ಇಷ್ಟಪಡುವರು. ಅವರಿಗೆ ಬೇಕಾದಹಾಗೆ ನಡೆದುಕೊಳ್ಳಿ. ಒಳ್ಳೆಯ ವಿಚಾರಗಳು ನಿಮಗೆ ಅಸಹ್ಯವಾಗಬಹುದು. ಅನುಕೂಲವನ್ನು ಸೃಷ್ಟಿಸಿಕೊಳ್ಳಲು ನೀವು ಸಮಸರ್ಥರು. ಹಿರಿಯರಿಂದ ಅಪಮಾನವಾಗುವ ಸಂಭವವಿದೆ. ಸರಿಯಾಗಿ ಮಾತನಾಡುವುದನ್ನು ರೂಢಿಸಿಕೊಳ್ಳಿ.
ಮೀನ: ಸ್ವಂತ ಉದ್ಯೋಗವನ್ನು ಮಾಡುತ್ತಿದ್ದರೆ ಕುಟುಂಬ ಸಮಸ್ಯೆಯಿಂದಾಗಿ ಉದ್ಯೋಗದ ಕಡೆಗೆ ಗಮನ ಕೊಡಲಾಗದು. ನಿಮ್ಮ ಸಮಸ್ಯೆಯನ್ನು ಶಾಂತಚಿತ್ತರಾಗಿ ಬಗೆಹರುಸಿಕೊಳ್ಳುವುದು ಉತ್ತಮ. ವಿರೋಧದ ನಡುವೆಯೂ ನಿಮ್ಮ ಹಠವನ್ನೇ ಸಾಧಿಸುವಿರಿ. ಮೌಖಕವಾಗಿ ಹೇಳಿದ್ದರಿಂದ ನಿಮ್ಮ ಯಾವ ಕೆಲಸವೂ ಆಗದು. ಲಿಖಿತರೂಪದಲ್ಲಿ ಬರಲಿ. ನಿಮ್ಮಲ್ಲಿರುವ ಭಯವನ್ನು ಮತ್ತೊಬ್ಬರಿಗೆ ಹೇಳಿ ಧೈರ್ಯವನ್ನು ತಂದುಕೊಳ್ಳುವಿರಿ. ಸಮರಕ್ಕೆ ಸಮಾನವಾಗಿ ಕೆಲಸವನ್ನು ಇಂದು ಮಾಡುವ ಉತ್ಸಾಹ ನಿಮ್ಮಲ್ಲಿರಲಿದೆ.
ಲೋಹಿತಶರ್ಮಾ – 8762924271 (what’s app only)