Horoscope Today: ಇಂದಿನ ರಾಶಿ ಭವಿಷ್ಯ, ಈ ರಾಶಿಯವರಿಗೆ ವಿರೋಧಿಗಳು ತೊಂದರೆ ಕೊಡಬಹುದು

ನೀವು ಧನು, ಮಕರ, ಕುಂಭ, ಮೀನ ರಾಶಿಯವರೇ? ಹಾಗಿದ್ದರೆ ಇಂದಿನ (2023 ಮೇ 23) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.

Horoscope Today: ಇಂದಿನ ರಾಶಿ ಭವಿಷ್ಯ, ಈ ರಾಶಿಯವರಿಗೆ ವಿರೋಧಿಗಳು ತೊಂದರೆ ಕೊಡಬಹುದು
ಪ್ರಾತಿನಿಧಿಕ ಚಿತ್ರImage Credit source: freepik
Follow us
Rakesh Nayak Manchi
|

Updated on: May 23, 2023 | 6:31 AM

ಶುಭೋದಯ ಓದುಗರೇ. ಪ್ರತಿಯೊಬ್ಬರ ಜೀವನದಲ್ಲಿ ರಾಶಿ ಭವಿಷ್ಯ ವಿಭಿನ್ನವಾಗಿರುತ್ತದೆ. ಹಾಗಾಗಿ ಕೆಲವರು ಬೆಳಗ್ಗೆ ಎದ್ದ ಕೂಡಲೇ ಇಂದಿನ ತಮ್ಮ ಭವಿಷ್ಯ (Daily horoscope) ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು, ಏನು ಮಾಡಬಾರದು? ಹೀಗೆ ನಿತ್ಯಭವಿಷ್ಯ ಜೊತೆಗೆ ನಿತ್ಯಪಂಚಾಂಗ ನೋಡುತ್ತಾರೆ. ಹಾಗಾದರೆ ಇಂದಿನ (2023 ಮೇ​ 23) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ, ಅಶುಭಗಳ ಮಾಹಿತಿಯನ್ನು ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ವಸಂತ ಋತು, ವೃಷಭ ಮಾಸ, ಮಹಾನಕ್ಷತ್ರ: ಕೃತ್ತಿಕಾ, ಮಾಸ: ಜ್ಯೇಷ್ಠ, ಪಕ್ಷ: ಶುಕ್ಲ, ವಾರ: ಮಂಗಳ, ತಿಥಿ: ಚತುರ್ಥೀ, ನಿತ್ಯನಕ್ಷತ್ರ: ಆರ್ದ್ರಾ, ಯೋಗ: ಧೃತಿ, ಕರಣ: ವಣಿಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 04 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 53 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 03:41 ರಿಂದ 05:18ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 09:17 ರಿಂದ 10:53ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 12:29 ರಿಂದ 02:05ರ ವರೆಗೆ.

ಧನು: ಕಾರ್ಯಸಾಧನೆಗೆ ಮೊದಲು ವಿಶ್ವಾಸವನ್ನು ಕಳಿಸಿಕೊಳ್ಳುವಿರಿ. ಬಡ್ಡಿ ಇಲ್ಲದೇ ನಿಮಗೆ ಸಾಲ ಸಿಗಲಿದೆ. ಶತ್ರುಗಳ ಬಗ್ಗೆ ನಿಮ್ಮದೇ ಆದ ಕಲ್ಪನೆಗಳು ಇರಲಿದ್ದು, ಅದರಿಂದ ಹೊರಬನ್ನಿ. ಸಮಾಧಾನ ಚಿತ್ತದಿಂದ‌ ಕುಳಿತು ಯೋಚಿಸಿ. ಉದ್ಯೋಗದ ಕಾರಣ ದೂರಪ್ರಯಾಣವನ್ನು ಮಾಡಬೇಕಾಗಬಹುದು. ಮನೆಯಲ್ಲಿ ಆತಂಕವೂ ಇರಲಿದೆ. ಆರೋಗ್ಯದಲ್ಲಿ ಸ್ವಲ್ಪ‌ ಚೇತರಿಕೆ ಕಂಡುಬಂದರೂ ನೋವುಗಳು ಬಾಧಿಸುತ್ತಲೇ ಇರುತ್ತವೆ. ಆಪ್ತ ಸ್ನೇಹಿತರು ಪ್ರೀತಿಯ ಹಂಚಿಕೆಯಲ್ಲಿ ಬಹಳ ಉತ್ಸಾಹವನ್ನು ತೋರಿಸಬಹುದು. ಇಂದು ನಿಮಗೆ ಉಚಿತ ಎನಿಸಿದ್ದನ್ನು ಮಾಡಿ.

ಮಕರ: ದೇಹಕ್ಕೆ ವಿರುದ್ಧವಾದ ಆಹಾರವನ್ನು ಸೇವಿಸುವಿರಿ. ನಂಬಿಕೆಯ ಆಧಾರದ ಮೇಲೆ ಹೂಡಿಕೆಗಳನ್ನು ಮಾಡಬೇಡಿ. ನಿಮಗೆ ಲೆಕ್ಕಾಚಾರ ತಿಳಿದಿರಲಿ. ಖುಷಿಯ ಸಂಗತಿಗಳನ್ನು ನೀವು ಬದಿಗಿಟ್ಟು ನಕಾರಾತ್ಮಕ ವಿಷಯದ ಕಡೆ ಗಮನ ಹರಿಸುವಿರಿ. ಆರ್ಥಿಕವಾಗಿ ಆದ ನಷ್ಟವು ನಿಮ್ಮ ಮನಸ್ಸನ್ನು ಕುಗ್ಗಿಸೀತು. ಸಂಗಾತಿಯ ಜೊತೆಗಿನ ಕಲಹವು ದ್ವೇಷವಾಗಲೂಬಹುದು. ಗೊತ್ತಾಗದಂತೆ ಒತ್ತಡಕ್ಕೆ ಸಿಲುಕಿಕೊಳ್ಳುವಿರಿ. ಇಂದು ಸಮಯವನ್ನು ಕಳೆಯುವ ಬಗ್ಗೆ ಚಿಂತೆಯಾದೀತು. ನಿಮ್ಮನ್ನು ಸಮಾಧಾನಪಡಿಸುವ ಜವಾಬ್ದಾರಿ ನಿಮ್ಮ ಮೇಲಿದೆ.

ಕುಂಭ: ವ್ಯಕ್ತಿಗತವಾದ ದ್ವೇಷವನ್ನು ಸಂಸ್ಥೆಯ ಮೇಲೆ ತೋರಿಸುವಿರಿ. ನಿಮ್ಮ ಎಲ್ಲ ನಿರ್ಧಾರವೂ ಸರಿಯಾಗಿ ಇರುವುದು ಎಂಬ ಭ್ರಮಯಲ್ಲಿ ಇರುವುದು ಬೇಡ. ಸಂಗಾತಿಯನ್ನು ನೀವು ಗೌರವಿಸುವಿರಿ. ನಿಮ್ಮದೇ ಆದ ಮಾನಸಿಕ‌ದ್ವೀಪದಲ್ಲಿ ನೀವಿರುವಿರಿ. ಅದರಿಂದ ಹೊರಬಂದಾಗ ನೆಮ್ಮದಿಯನ್ನು ಪಡೆಯಬಹುದು. ನ್ಯಾಯಾಲಯಕ್ಕೆ ಸಂಬಂಧಿಸಿದ ಕೆಲಸದಲ್ಲಿ ಅಪಜಯವಾಗಬಹುದು. ಕಳ್ಳರ ಭೀತಿಯಿಂದ ಮುಕ್ತರಾಗಿ. ಧೈರ್ಯದ ಅವಶ್ಯಕತೆ ನಿಮಗೆಲಿದೆ. ಅಲ್ಪ ಜ್ಞಾನದಿಂದ ಮಾತನಾಡಲು ಹೋಗಬೇಡಿ. ನಿಮ್ಮ ಜೊತೆ ಕೆಲಸ ಮಾಡುವವರ ಬಗ್ಗೆ ಗಮನವಿರಿಲಿ.

ಮೀನ: ಇಂದು ನಿಮ್ಮ ವಿರೋಧಿಗಳು ಏನಾದರೂ ತೊಂದರೆಯನ್ನು ಕೊಡಬಹುದು. ಸಣ್ಣ ಮನಸ್ತಾಪಗಳು ನಿಮಗೆ ಬೇಸರ ತರಿಸೀತು. ವಾಹನ ಖರೀದಿಯ ಬಗ್ಗೆ ಆಲೋಚಿಸುವಿರಿ. ಸಹೋದರರ ಜೊತೆಗಿನ ಸಂಬಂಧಗಳು ಕೆಡಬಹುದು. ಬಂಧುಗಳ ಜೊತೆ ಹೆಚ್ಚು ಸಲುಗೆ ಇರಲಿದೆ. ಮಾತಿನ ವೇಗದಲ್ಲಿ ಗೌಪ್ಯತೆಯನ್ನು ಬಿಟ್ಟುಕೊಡುವಿರಿ. ಅನಾಯಾಸವಾಗಿ ದೊರೆತ ವಸ್ತುಗಳ‌ ಮೇಲೆ ಅನಾದರ ಉಂಟಾಗಬಹುದು. ಉದ್ಯೋಗವು ನಿಮಗೆ ಸಾಕೆನಿಸೀತು. ಉತ್ತಮವಾದುದನ್ನು ಆಯ್ಕೆ ಮಾಡಿಕೊಳ್ಳುವಿರಿ. ಸಂಗಾತಿಯು ನಿಮ್ಮ ನಿರ್ಧಾರಗಳನ್ನು ಬದಲಿಸುವರು.

-ಲೋಹಿತಶರ್ಮಾ ಇಡವಾಣಿ

ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ