AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Nitya Bhavishya: ಇಂದಿನ ರಾಶಿ ಭವಿಷ್ಯ, ಈ ರಾಶಿಯವರಿಗೆ ಹಳೆಯ ಗೆಳತಿಯ ಭೇಟಿಯಾದೀತು

ನೀವು ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರೇ? ಹಾಗಿದ್ದರೆ ಇಂದಿನ (2023 ಮೇ 23) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.

Nitya Bhavishya: ಇಂದಿನ ರಾಶಿ ಭವಿಷ್ಯ, ಈ ರಾಶಿಯವರಿಗೆ ಹಳೆಯ ಗೆಳತಿಯ ಭೇಟಿಯಾದೀತು
ಮೇ 23 ಇಂದಿನ ರಾಶಿ ಭವಿಷ್ಯImage Credit source: Platon Anton / Shutterstock.com
Rakesh Nayak Manchi
|

Updated on: May 23, 2023 | 6:00 AM

Share

ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚೆನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದರೆ 2023 ಮೇ 23 ಮಂಗಳವಾರದ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ವಸಂತ ಋತು, ವೃಷಭ ಮಾಸ, ಮಹಾನಕ್ಷತ್ರ: ಕೃತ್ತಿಕಾ, ಮಾಸ: ಜ್ಯೇಷ್ಠ, ಪಕ್ಷ: ಶುಕ್ಲ, ವಾರ: ಮಂಗಳ, ತಿಥಿ: ಚತುರ್ಥೀ, ನಿತ್ಯನಕ್ಷತ್ರ: ಆರ್ದ್ರಾ, ಯೋಗ: ಧೃತಿ, ಕರಣ: ವಣಿಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 04 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 53 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 03:41 ರಿಂದ 05:18ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 09:17 ರಿಂದ 10:53ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 12:29 ರಿಂದ 02:05ರ ವರೆಗೆ.

ಸಿಂಹ: ದೇಹಕ್ಕೆ ಸಂಬಂಧಪಟ್ಟಂತೆ ಅದರ ಆರೈಕೆಯನ್ನು ಹೆಚ್ಚು ಮಾಡುವಿರಿ. ಸೌಂದರ್ಯದ ಬಗ್ಗೆ ಹೆಚ್ಚು ಆಸಕ್ತಿ ಉಂಟಾಗುವುದು. ಅಧಿಕ‌ ಹಣವನ್ನು ಸಂಪಾದಿಸಲು ನೀವು ಹೊಸ ಯೋಚನೆಯನ್ನು ಮಾಡುವಿರಿ. ನಾಚಿಕೆಯ ಸ್ವಭಾವವು ಪಡೆದುಕೊಳ್ಳುವ ವಿಚಾರದಲ್ಲಿ ಹಿಂದೆ ಇರುವಂತೆ ಮಾಡೀತು. ನಿಮ್ಮ ವ್ಯವಹಾರದಲ್ಲಿ ಶಿಸ್ತನ್ನು ಕಂಡು ಮೆಚ್ಚುಗೆ ಬರಲಿದೆ. ಪ್ರೀತಿಯ ವಿಚಾರದಲ್ಲಿ ನೀವು ಊಹಿಸಲಾಗಷ್ಟು ಇರುತ್ತದೆ. ನಿಮ್ಮ ಸಂಗಾತಿಯು ನಿಮ್ಮ‌ ಸ್ಫೂರ್ತಿಯೂ ಅಗುವವರಿದ್ದಾರೆ. ಬೇರೆಯವರಿಂದ ಹೆಚ್ಚಿನ ಸಹಾಯವನ್ನು ನಿರೀಕ್ಷಿಸುವುದು ಬೇಡ.

ಕನ್ಯಾ: ನಿಮಗೆ ಆಕರ್ಷಿತರಾಗಿ ನಿಮ್ಮ ಮಿತ್ರತ್ವವನ್ನು ಬಯಸಬಹುದು. ಹಣವನ್ನು ಅತಿಮುಖ್ಯವಾದ ಸಾಧನ ಎನ್ನಿಸದೇ ಇರಬಹುದು. ಅಸ್ಪಷ್ಟ ಆಲೋಚನೆಗಳಿಂದ ಒಂದು ನಿರ್ಧಾರವು ಅಸಾಧ್ಯವಾದೀತು. ವಿದ್ಯಾರ್ಥಿಗಳಿಗೆ ಸರಿಯಾದ‌‌ ಮಾರ್ಗದರ್ಶನವನ್ನು ನೀವು ಮಾಡಬೇಕಾಗಬಹುದು.‌ ಮಾತಿನಿಂದ ನೀವು ಸಂಪತ್ತನ್ನು ಗಳಿಸುವಿರಿ. ಸಮಸ್ಯೆಗಳು ಬರುವಂತಹ ಮಾತುಗಳನ್ನು ಆಡಬೇಡಿ. ಆಧುನಿಕ ಪ್ರಪಂಚದ ವಿಚಾರದಲ್ಲಿ ನಿಮಗೆ ತಿಳಿವಳಿಕೆ ಕಡಿಮೆ‌ ಇರುವುದು ಮಕ್ಕಳಿಗೆ ಗೊತ್ತಾದೀತು. ಆರಂಭದಲ್ಲಿ ನಿಮಗೆ ವೃತ್ತಿಯ ಬಗ್ಗೆ ತಿಳಿವಳಿಕೆ ಇಲ್ಲದೇ ಒದ್ದಾಡುವಿರಿ.

ತುಲಾ: ವಿಶ್ವಾಸಘಾತಕರು ನಿಮ್ಮ ಬಳಿ ಸಾಲವನ್ನು ಕೇಳಲು ಬರಬಹುದು. ಕೊಡುವುದಕ್ಕೆ ಹೋಗಬೇಡಿ. ಮರಳಿ ಬಾರದು ಅದು. ಮನೆಯಲ್ಲಿ ನಿಮ್ಮಿಂದ‌ ಹಣವನ್ನು ಕೇಳಬಹುದು. ಸಾಧ್ಯವಿರುವಷ್ಟನ್ನು ಕೊಡಿ. ಹೊಸ ಜನರ ಭೇಟಿಯು ನಿಮ್ಮ ಉದ್ಯೋಗಕ್ಕೆ ಪೂರಕವಾದೀತು. ನಿಮ್ಮ ಕೆಲಸಗಳನ್ನು ಸ್ವತಂತ್ರವಾಗಿ ಮಾಡಲು ಬಯಸುವಿರಿ. ಸಂಗಾತಿಯ ಮಾತುಗಳು ನಿಮ್ಮ ಪ್ರೀತಿಯನ್ನು ಹೆಚ್ಚಿಸೀತು. ಹಳೆಯ ಗೆಳತಿಯ ಭೇಟಿಯಾದೀತು. ಹಳೆಯ ದಿನಗಳನ್ನು ನೆನಪಿಸಿಕೊಳ್ಳುವಿರಿ. ನಿಮ್ಮ ಅಸಮಾಧಾನವನ್ನು ಹೊರಹಾಕುವಾಗ ಯೋಚಿಸಿ.

ವೃಶ್ಚಿಕ: ಪ್ರತ್ಯೇಕವಾಗಿ ಕಂಡಿದ್ದರ ಆಧಾರದ ಮೇಲೆ ಏನನ್ನಾದರೂ ಊಹಿಸಬೇಡಿ. ಎಲ್ಲವೂ ಸತ್ಯವಾಗದು. ಇನ್ನೊಬ್ಬರ ಬಗ್ಗೆ ಮಾತಡುವ ಮೊದಲು ಯೊಚಿಸುವುದು ಒಳ್ಳೆಯದು. ಸರ್ಕಾರಿ ಉದ್ಯೋಗಸ್ಥರಿಗೆ ಹೆಚ್ಚಿನ ಸ್ಥಾನಮಾನಗಳು ಸಿಗಲಿದೆ. ನೂತನ ವಧೂ, ವರರು ಆನಂದದಿಂದ ಇರುವರು. ನಿಮ್ಮ ಮನಸ್ಸಿನಲ್ಲಿ ಹತ್ತಾರು ಕೆಲಸಗಳ ಬಗ್ಗೆ ಆಲೋಚನ ಬರಲಿದೆ. ಸಿಕ್ಕ ಸಮಯವನ್ನು ಮುಂದಿನ ದಿನವನ್ನು ರೂಪಿಸಿಕೊಳ್ಳಲು ಪ್ರಯತ್ನಿಸಿ. ಏಕಾಂಗಿಯಾಗಿ ಇರಲು ನಿಮ್ಮವರು ಬಿಡುವುದಿಲ್ಲ. ನಿರಂತರ ಕುಳಿತು ಕೆಲಸ ಮಾಡಿದ್ದರಿಂದ ಬೆನ್ನು ನೋವು ಉಂಟಾದೀತು.

-ಲೋಹಿತಶರ್ಮಾ ಇಡವಾಣಿ