Rashi Bhavishya: ಇಂದಿನ ರಾಶಿ ಭವಿಷ್ಯ, ಸಂಗಾತಿಯನ್ನು ಬಿಟ್ಟಿರುವುದು ಈ ರಾಶಿಯವರಿಗೆ ಬೇಸರವೆನಿಸಲಿದೆ, ಪರಿಹಾರ ಹೀಗಿದೆ ನೋಡಿ
ನೀವು ಮೇಷ, ವೃಷಭ, ಮಿಥುನ, ಕಟಕ ರಾಶಿಯವರೇ? ಹಾಗಿದ್ದರೆ ಇಂದಿನ (2023 ಮೇ 23) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.
ಶುಭೋದಯ ಓದುಗರೇ. ಪ್ರತಿಯೊಬ್ಬರ ಜೀವನದಲ್ಲಿ ರಾಶಿ ಭವಿಷ್ಯ ವಿಭಿನ್ನವಾಗಿರುತ್ತದೆ. ಹಾಗಾಗಿ ಕೆಲವರು ಬೆಳಗ್ಗೆ ಎದ್ದ ಕೂಡಲೇ ಇಂದಿನ ತಮ್ಮ ಭವಿಷ್ಯ (Daily horoscope) ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು, ಏನು ಮಾಡಬಾರದು? ಹೀಗೆ ನಿತ್ಯಭವಿಷ್ಯ ಜೊತೆಗೆ ನಿತ್ಯಪಂಚಾಂಗ ನೋಡುತ್ತಾರೆ. ಹಾಗಾದರೆ ಇಂದಿನ (2023 ಮೇ 23) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ, ಅಶುಭಗಳ ಮಾಹಿತಿಯನ್ನು ತಿಳಿದುಕೊಳ್ಳಿ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ವಸಂತ ಋತು, ವೃಷಭ ಮಾಸ, ಮಹಾನಕ್ಷತ್ರ: ಕೃತ್ತಿಕಾ, ಮಾಸ: ಜ್ಯೇಷ್ಠ, ಪಕ್ಷ: ಶುಕ್ಲ, ವಾರ: ಮಂಗಳ, ತಿಥಿ: ಚತುರ್ಥೀ, ನಿತ್ಯನಕ್ಷತ್ರ: ಆರ್ದ್ರಾ, ಯೋಗ: ಧೃತಿ, ಕರಣ: ವಣಿಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 04 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 53 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 03:41 ರಿಂದ 05:18ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 09:17 ರಿಂದ 10:53ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 12:29 ರಿಂದ 02:05ರ ವರೆಗೆ.
ಮೇಷ: ಎಷ್ಟೇ ಪ್ರಯತ್ನಿಸಿದರೂ ಮನಸ್ಸು ನಕಾರಾತ್ಮಕ ಚಿಂತನೆಯನ್ನು ಬಿಡದು. ನಿಮ್ಮವರು ನಿಮ್ಮ ಬಗ್ಗೆ ಸಕಾರಾತ್ಮಕವಾಗಿ ಹೇಳಿದರೂ ಅಂತರಂಗದಲ್ಲಿ ಬೇರೆಯದನ್ನೇ ಆಲೋಚಿಸುವರು. ನಿಮ್ಮ ನುಡಿಗಳು ಸಂಗಾತಿಗೆ ಹಿತವೆನಿಸಬಹುದು. ಮಾನಸಿಕವಾದ ನೆಮ್ಮದಿ ಇದ್ದರೂ ಭಂಗವಾಗುವ ಘಟನೆಗಳು ನಡೆಯಬಹುದು. ಸಾರ್ವಜನಿಕ ಕ್ಷೇತ್ರದಲ್ಲಿ ಇದ್ದರೆ ನಿಮಗೆ ಬೆಂಬಲ ಸಿಗಲಿದೆ. ಹಣವನ್ನು ಮಿತವಾಗಿ ಬಳಸಿ. ಯಾವುದೇ ಹೊಸ ವಸ್ತುಗಳನ್ನು ಖರೀದಿಸುವುದು ಬೇಡ.
ವೃಷಭ: ಹಳೆಯ ಖಾಯಿಲೆಗಳು ಪುನಃ ಬಂದೀತು. ವೈದ್ಯರ ಚಿಕಿತ್ಸೆಯನ್ನು ಒಡೆಯಿರಿ. ಅನಿರೀಕ್ಷಿತ ಹಣ ಬಂದರೂ ಕೂಡಲೇ ಖರ್ಚಾಗುವುದು. ನಿಮ್ಮದಲ್ಲದ ವಸ್ತುಗಳನ್ನು ನೀವು ಇಟ್ಟುಕೊಳ್ಳಲು ಬಯಸುವುದಿಲ್ಲ. ಆಪತ್ತಿಗಾಗಿ ನೀವು ಹಣವನ್ನು ಸಂಗ್ರಹಿಸುವಿರಿ. ಕೆಟ್ಟ ಆಲೋಚನೆಗಳು ನಿಮ್ಮಮನಸ್ಸನ್ನು ಕುಗ್ಗಿಸೀತು. ದಾಂಪತ್ಯದಲ್ಲಿ ಅನಿರೀಕ್ಷಿತವಾಗಿ ಬರುವ ಸುಖ, ದುಃಖಗಳಿಗೆ ಸ್ಪಂದಿಸಲು ಕಷ್ಟವಾದೀತು. ಮಕ್ಕಳನ್ನು ಖುಷಿಯಾಗಿ ಇಡುವಿರಿ. ಹೊಸ ವಾಹನದ ಖರೀದಿಯನ್ನು ಮಾಡುವಿರಿ. ಸಿಗಬೇಕಾದ ವಸ್ತುವು ಸಿಗದೇ ಹುಡುಕುವಿರಿ.
ಮಿಥುನ: ಕಾನೂನಿಗೆ ಸಮ್ಮತವಾಗಿರುವ ದಾಖಲೆಗಳು ಇರುವಾಗ ಭಯಪಡಬೇಕಾದ ಅವಶ್ಯಕತೆ ಇಲ್ಲ. ನಿಮಗಿಂದು ವಿಶ್ರಾಂತಿ ಬೇಕೆನಿಸಬಹುದು. ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ನಿಮ್ಮದೇ ಕ್ರಮಗಳನ್ನು ಅನುಸರಿಸುವಿರಿ. ಸಂಗಾತಿಯನ್ನು ಬಿಟ್ಟಿರುವುದು ನಿಮಗೆ ಬೇಸರವೆನಿಸಲಿದೆ. ನಿಮ್ಮ ಸ್ಥಿತಿಯನ್ನು ಸ್ನೇಹಿತರ ಜೊತೆ ಹಂಚಿಕೊಳ್ಳಿ. ನೆಮ್ಮದಿ ಸಿಕ್ಕೀತು. ಅಕಾಲದಲ್ಲಿ ಆಗುವ ಮಳೆಯಿಂದ ನಿಮಗೆ ಕಷ್ಟವೆನಿಸೀತು. ಕೃಷಿಕರು ಅಲ್ಪ ಲಾಭವನ್ನು ಪಡೆಯುವರು. ಹಿರಿಯರನ್ನು ನೀವು ಆಡಿಕೊಳ್ಳುವಿರಿ. ಒಳ್ಳೆಯ ಹಾದಿ ಅದಲ್ಲ.
ಕಟಕ: ಯಾರನ್ನೋ ಮೆಚ್ವಿಸಲು ಹೋಗಿ ಸಮಯವನ್ನು ಶ್ರಮವನ್ನೂ ವ್ಯಯಮಾಡಿಕೊಳ್ಳಬಹುದು. ನಿಮ್ಮವರ ಮಾತು ಕೇವಲ ಭರವಸೆಯಾಗಿ ಇರುವುದೆಂದು ಅನ್ನಿಸಬಹುದು. ಆಸ್ತಿಯ ವಿಚಾರವನ್ನು ತಂದೆಯ ಎದುರು ಮಾತನಾಡಿಕೊಳ್ಳುವುದು ಬೇಡ. ಅವರು ಸಿಟ್ಟುಗೊಳ್ಳುವ ಸಾಧ್ಯತೆ ಇದೆ. ಹೊಸ ಆಲೋಚನೆಗಳು ನಿಮ್ಮನ್ನು ಉತ್ತಮ ಸ್ಥಿತಿಗೆ ಒಯ್ಯಬಹುದು. ಅವಕಾಶಗಳನ್ನು ಬಿಟ್ಟುಕೊಡುವ ಮನಸ್ಸು ಮಾಡುವಿರಿ. ನಿಮಗೆ ಸಿಗಬೇಕಾದುದು ಸಿಕ್ಕಿಯೇ ಸಿಗುತ್ತದೆ. ಅದನ್ನು ಅತಿಯಾದ ಪ್ರಯತ್ನದಿಂದ ಪಡೆಯುವ ಅವಶ್ಯಕತೆ ಇಲ್ಲ.
-ಲೋಹಿತಶರ್ಮಾ ಇಡವಾಣಿ