ಒಂದಷ್ಟು ಮಂದಿ ಬೆಳಗ್ಗೆ ಎದ್ದ ನಂತರ ನಿತ್ಯ ಪಂಚಾಂಗ ಮತ್ತು ರಾಶಿಭವಿಷ್ಯ ನೋಡುತ್ತಾರೆ. ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಲಾಭ ಕಾದಿದೆಯಾ? ನಷ್ಟು ಉಂಟಾಗಬಹುದಾ? ಶುಭ, ಅಶುಭ ಇದೆಯಾ? ಸಂದಿಗ್ಧ ಪರಿಸ್ಥಿತಿ ಎದುರಾಗಲಿದೆ, ಏನು ಮಾಡಿದರೆ ಉತ್ತಮ ಎಂಬುದನ್ನು ತಿಳಿದುಕೊಳ್ಳುತ್ತಾರೆ. ಹಾಗಾದರೆ, ಧನು, ಮಕರ, ಕುಂಭ, ಮೀನ ರಾಶಿಯವರ ಇಂದಿನ (ಜನವರಿ 16) ಭವಿಷ್ಯ (Horoscope) ಹೇಗಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ಹೇಮಂತ ಋತು,
ಮಕರ ಮಾಸ, ಮಹಾನಕ್ಷತ್ರ: ಪೂರ್ವಾಷಾಢ, ಮಾಸ: ಪೌಷ, ಪಕ್ಷ: ಶುಕ್ಲ, ವಾರ: ಮಂಗಳ, ತಿಥಿ: ಪಂಚಮೀ,
ನಿತ್ಯನಕ್ಷತ್ರ: ಉತ್ತರಾಭಾದ್ರಾ, ಯೋಗ: ಪರಿಘ, ಕರಣ: ಬಾಲವ, ಸೂರ್ಯೋದಯ ಬೆಳಗ್ಗೆ 07 ಗಂಟೆ 02 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 22 ನಿಮಿಷಕ್ಕೆ, ರಾಹು ಕಾಲ 03:32 ರಿಂದ 04:57ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 09:52 ರಿಂದ 11:17ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 12:42 ರಿಂದ 02:07ರ ವರೆಗೆ.
ಧನು ರಾಶಿ: ಇಂದು ಯಾವ ಸವಾಲನ್ನು ಸ್ವೀಕರಿಸಿದರೂ ಜಯವನ್ನು ಕಾಣಬಲ್ಲಿರಿ. ಆದರೆ ಒಂದು ಮಿತಿಯಲ್ಲಿ ಇರಲಿ. ಬಹಳ ದಿನಗಳ ಅನಂತರ ಸಹೋದರರ ಭೇಟಿಯಾಗಲಿದ್ದು, ಸಂತೋಷವು ಇಮ್ಮಡಿಸುವುದು. ಸಕಾರಾತ್ಮಕವಾಗಿ ಚಿಂತಿಸಿ ಕಾರ್ಯದಲ್ಲಿ ತೊಡಗಿಕೊಳ್ಳಿ. ಮಕ್ಕಳ ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಪ್ರಗತಿ ಇರಲಿದೆ. ಸ್ಥಿರಾಸ್ತಿಯನ್ನು ಖರೀದಿಸಲು ಉತ್ತಮ ಕಾಲವಿದು. ಗೃಹ ನಿರ್ಮಾಣದಂತಹ ಕಾರ್ಯಕ್ಕೆ ಕೈ ಹಾಕುವುದು ಬೇಡ. ತೀರ್ಥ ಕ್ಷೇತ್ರದಲ್ಲಿ ವಾಸಮಾಡುವ ಸಂದರ್ಭವು ಬರಬಹುದು. ಪುಣ್ಯವೆಂದು ಭಾವಿಸಿ. ವ್ಯವಹಾರದಲ್ಲಿ ನಿಮ್ಮ ಮಾತಿನ ಮೇಲೆ ಹಿಡಿತವಿರಲಿ. ಅನಗತ್ಯ ವಾದ ವಿವಾದಗಳಿಂದ ದೂರವಿರಿ. ಮಕ್ಕಳು ನಿಮ್ಮ ವರ್ತನೆಯನ್ನು ವಿರೋಧಿಸಬಹುದು. ಅಂತರಂಗವನ್ನು ಆದಷ್ಟು ಗೌಪ್ಯವಾಗಿ ಇಡುವುದು ಬೇಕಾದೀತು.
ಮಕರ ರಾಶಿ: ಮನೆಯಲ್ಲಿಯೇ ಕುಳಿತು ಉದ್ಯೋಗವನ್ನು ಮಾಡುವ ಅವಕಾಶವು ಸಿಗಲಿದೆ. ಅಧಿಕ ಖರ್ಚನ್ನು ನಿಯಂತ್ರಿಸುವ ಜವಾಬ್ದಾರಿ ನಿಮ್ಮ ಮೇಲಿದೆ. ನಿಮ್ಮ ಸಮಸ್ಯೆಗಳಿಗೆ ಹಲವರು ಹಲವು ರೀತಿಯ ಸಲಹೆಗಳನ್ನು ನೀಡಬಹುದು. ಸಲಹೆಯನ್ನು ಏಕಚಿತ್ತದಿಂದ ಸ್ವೀಕರಿಸಿ, ನಿಮ್ಮ ವಿವೇಕದಿಂದ ಬಳಸಿಕೊಳ್ಳಿ. ಅನ್ಯರಿಂದ ಹಣಕಾಸಿನ ವಿಷಯದಲ್ಲಿ ಮೋಸ ಹೋಗುವ ಸನ್ನಿವೇಶವು ಬರಬಹುದು. ಸಾಹಿತ್ಯಾಸಕ್ತಿರಿಗೆ ಮೇಲುಗೈ ಸಾಧಿಸುವ ಸನ್ನಿವೇಶವು ಸೃಷ್ಟಿಯಾಗುವುದು. ಎಲ್ಲವೂ ನಿಮ್ಮಿಂದ ಆದರೂ ಹೇಳಿಕೊಳ್ಳುವಾಗ ಗೌಣವಾಗಿರಲಿ. ದಾಂಪತ್ಯದಲ್ಲಿ ಸಲುಗೆಯು ಅತಿಯಾಗಲಿದೆ. ತಂದೆಯಿಂದ ಧನಾಗಮನವನ್ನು ನಿರೀಕ್ಷಿಸುವಿರಿ. ಬೇಸರವನ್ನು ಕಳೆಯಲು ಒಂಟಿಯಾಗಿ ದೂರ ಹೋಗಿ. ಧಾರ್ಮಿಕ ಕಾರ್ಯಗಳು ಶ್ರದ್ಧೆಯಿಂದ ಪೂರ್ಣವಾಗಲಿದೆ.
ಕುಂಭ ರಾಶಿ: ಇಂದು ಉದ್ಯಮವು ಆಹಾರಕ್ಕೆ ಸಂಬಂಧಿಸಿದ್ದಾರೆ ಹೆಚ್ಚಿನ ಅನುಕೂಲತೆಗಳು ಒದಗಿ ಬರಬಹುದು. ಕಲಿಕೆಯಲ್ಲಿ ಚುರುಕುತನವನ್ನು ರೂಢಿಸಿಕೊಳ್ಳುವುದು ಭವಿಷ್ಯದ ದೃಷ್ಟಿಯಿಂದ ಉತ್ತಮ. ಇಂದು ನಿಮ್ಮಲ್ಲಿ ಆತ್ಮಸ್ಥೈರ್ಯವು ಇರಲಿದೆ. ಮಾನಸಿಕವಾಗಿ ಸದೃಢರಾಗುವಿರಿ. ನೀವು ಅಂದಿಕೊಂಡಂತೆ ಸಹೋದರಿಯರಿಂದ ಸಹಕಾರ ದೊರೆಯುವುದಿಲ್ಲ. ನಿಮ್ಮ ಆರೋಗ್ಯದಲ್ಲಿ ವ್ಯತ್ಯಾಸವಾಗುವ ಸಾಧ್ಯತೆ ಇದೆ. ತಾಯಿಯ ಕಡೆಯಿಂದ ನಿಮಗೆ ಆರ್ಥಿಕ ಸಹಾಯವು ಸಿಗಬಹುದು. ಹೊಸ ವಿಚಾರಗಳ ಕಡೆ ಹೊರಳುವ ಆಲೋಚನೆ ಮನಸ್ಸಿಗೆ ಬರಲಿದೆ. ಕುಟುಂಬದಲ್ಲಿ ನಿಮ್ಮ ಬಗ್ಗೆ ಭಯವು ಇರಲಿದೆ. ಮಾತು ಎಷ್ಟೇ ಸಹೃದಯತೆಯಿಂದ ಇದ್ದರೂ ಕೇಳಿಸಿಕೊಳ್ಳುವ ಸಹೃದಯರು ಸಿಗುವುದಿಲ್ಲ. ಉದ್ವಿಗ್ನತೆಯು ಉಂಟಾದಾಗ ಏನನ್ನಾದರೂ ಮಾಡಿಕೊಳ್ಳುವಿರಿ.
ಮೀನ ರಾಶಿ: ನಿಮ್ಮ ಇಂದಿನ ಕಾರ್ಯಗಳು ಸಫಲವಾಗುವುದೇ ಎಂಬ ಅನುಮಾನವು ನಿಮ್ಮನ್ನು ಅತಿಯಾಗಿ ಕಾಡಬಹುದು. ಕಲಿತ ವಿದ್ಯೆಯ ಪ್ರದರ್ಶನಕ್ಕೆ ಅವಕಾಶವು ಸಿಗಲಿದೆ. ಆಧ್ಯಾತ್ಮಿಕ ಚಿಂತನೆಗಳಿಂದ ಮನಸ್ಸಿಗೆ ಶಾಂತತೆಯನ್ನು ಪಡೆಯುವಿರಿ. ಮನೆ ಹಿರಿಯರ ಆರೋಗ್ಯದ ಕಡೆ ಗಮನ ನೀಡಿ. ನಿಮ್ಮ ಪರಿಶ್ರಮಕ್ಕೆ ತಕ್ಕಷ್ಟು ಹಣ ಬರದೆ ತೊಂದರೆ ಅನುಭವಿಸುವಿರಿ. ಮಂದಗತಿಯಲ್ಲಿ ಸಾಗುವ ಕೆಲಸಗಳಿಗೆ ವೇಗವನ್ನು ಕೊಡುವಿರಿ. ನಿಮಗೆ ಆತ್ಮತೃಪ್ತಿಯು ಇರುವುದು. ವಾಹನ ಚಲಾಯಿಸುವಾಗ ಎಚ್ಚರ ಇರಲಿ. ಉದ್ಯಮಿಗಳಿಗೆ ಅಧಿಕಾರಿ ವರ್ಗದ ಭಯವು ಕಾಡುವ ಸಾಧ್ಯತೆ ಹೆಚ್ಚಿದೆ. ಏಕತಾನತೆಯ ಜೀವನವು ನಿಮಗೆ ಬೇಸರವನ್ನು ಕೊಟ್ಟಿದ್ದು, ಹೊಸತನ್ನು ನೀವು ಬಯಸುವಿರಿ. ಇಂದು ನೀವು ಹೊಸ ಹೂಡಿಕೆಗೆ ಮನಸ್ಸು ಮಾಡುವಿರಿ.
-ಲೋಹಿತ ಹೆಬ್ಬಾರ್ – 8762924271 (what’s app only)