Nitya Bhavishya: ರಾಶಿಭವಿಷ್ಯ; ಈ ರಾಶಿಯವರು ವಾಹನ ಖರೀದಿಗೆ ಆಲೋಚನೆ, ಸಾಲ ಮಾಡಬೇಕಾಗಬಹುದು ಎಚ್ಚರ!

|

Updated on: Jan 24, 2024 | 12:15 AM

ನೀವು ಇಂದು ಕೈಗೊಳ್ಳುವ ಯಾವುದೇ ಕೆಲಸಕಾರ್ಯಗಳು ಚೆನ್ನಾಗಿರಬೇಕು ಎಂದರೆ ನಿಮ್ಮ ರಾಶಿಫಲ ಚೆನ್ನಾಗಿರಬೇಕು. ಒಂದಷ್ಟು ಮಂದಿ ರಾಶಿಭವಿಷ್ಯ ತಿಳಿದುಕೊಂಡೇ ಮುಂದಿನ ಹೆಜ್ಜೆ ಇಡುತ್ತಾರೆ. ನೀವು ಧನು, ಮಕರ, ಕುಂಭ, ಮೀನ ರಾಶಿಯವರಾಗಿದ್ದರೆ ಜನವರಿ 24ರ ನಿಮ್ಮ ಭವಿಷ್ಯ ಹೀಗಿದೆ ನೋಡಿ.

Nitya Bhavishya: ರಾಶಿಭವಿಷ್ಯ; ಈ ರಾಶಿಯವರು ವಾಹನ ಖರೀದಿಗೆ ಆಲೋಚನೆ, ಸಾಲ ಮಾಡಬೇಕಾಗಬಹುದು ಎಚ್ಚರ!
ಪ್ರಾತಿನಿಧಿಕ ಚಿತ್ರ
Follow us on

ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಲಾಭ ಕಾದಿದೆಯಾ? ನಷ್ಟು ಉಂಟಾಗಬಹುದಾ? ಶುಭ, ಅಶುಭ ಇದೆಯಾ? ಸಂದಿಗ್ಧ ಪರಿಸ್ಥಿತಿ ಎದುರಾಗಲಿದೆ, ಏನು ಮಾಡಿದರೆ ಉತ್ತಮ ಎಂಬುದನ್ನು ತಿಳಿದುಕೊಳ್ಳುತ್ತಾರೆ. ಹಾಗಾದರೆ, ಧನು, ಮಕರ, ಕುಂಭ, ಮೀನ ರಾಶಿಯವರ ಇಂದಿನ (ಜನವರಿ 24) ಭವಿಷ್ಯ (Horoscope) ಹೇಗಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ಹೇಮಂತ ಋತು, ಮಕರ ಮಾಸ, ಮಹಾನಕ್ಷತ್ರ: ಉತ್ತರಾಷಾಢಾ, ಮಾಸ: ಪೌಷ, ಪಕ್ಷ: ಶುಕ್ಲ, ವಾರ: ಬುಧ, ತಿಥಿ: ಚತುರ್ದಶೀ, ನಿತ್ಯನಕ್ಷತ್ರ: ಪುನರ್ವಸು, ಯೋಗ: ವೈಧೃತಿ, ಕರಣ: ಗರಜ, ಸೂರ್ಯೋದಯ ಬೆಳಗ್ಗೆ 07 ಗಂಟೆ 03 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 26 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 12:45 ರಿಂದ 02:10ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 08:28 ರಿಂದ 09:54ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 11:19 ರಿಂದ 12:45ರ ವರೆಗೆ.

ಧನು ರಾಶಿ: ಇಂದಿನ ಸಮಯವನ್ನು ನೋಡಿ ಕೆಲಸವನ್ನು ಒಪ್ಪಿಕೊಳ್ಳಿ. ಎಲ್ಲವನ್ನೂ ವಹಿಸಿಕೊಂಡು ಅನಂತರ ಅತಂತ್ರವಾದೀತು. ಮಾನಸಿಕ ಅಸಮತೋಲನವನ್ನು ಕಾಯ್ದುಕೊಳ್ಳುವುದು ಸವಾಲಾಗಬಹುದು. ವಾಹನ ಖರೀದಿಗೆ ಆಲೋಚನೆ ಇರಲಿದ್ದು ಸಾಲ ಮಾಡಬೇಕಾಗಬಹುದು. ನಿಮ್ಮ ವೇಗದ ಮನಸ್ಸನ್ನು ನಿಯಂತ್ರಿಸಬೇಕಾಗುವುದು. ಇಷ್ಟವಿಲ್ಲದ ವ್ಯಕ್ತಿಗಳ ಜೊತೆ ಇರಲು ಕಸಿವಿಸಿ ಆದೀತು. ಮನೆಯವರ ಸಣ್ಣ ತಪ್ಪುಗಳನ್ನು ಸಹಿಸಲಾರಿರಿ. ಮತ್ತೆ ಮತ್ತೆ ಉಂಟಾದ ಅನಾರೋಗ್ಯದಿಂದ ನಿಮ್ಮ ದಿನಚರಿಯನ್ನೇ ಬದಲಾಯಿಸಿಕೊಳ್ಳಬೇಕಾಗುವುದು. ಬಂಧುಗಳು ನಿಮ್ಮ ಬಗ್ಗೆ ಏನಾದರೂ ಆಡಿಕೊಂಡಾರು. ಶ್ರಮವು ಯುಕ್ತಿಯಿಂದ ಕೂಡಿರಲಿ. ನಿಯಮಿತ ಆಹಾರವನ್ನು ರೂಢಿಸಿಕೊಳ್ಳುವುದು ಸೂಕ್ತ.‌ ಧನಾತ್ಮಕ ಚಿಂತನೆಯನ್ನು ಪ್ರಯತ್ನಪೂರ್ವಕವಾಗಿ ಮಾಡಿಬೇಕಾದೀತು.

ಮಕರ ರಾಶಿ: ಇಂದು ಹಣದ ವಿಚಾರದಲ್ಲಿ ಸಂಗಾತಿಯ ಮಾತನ್ನು ಮೀರುವಿರಿ. ಕಡಿಮೆ‌ ಖರ್ಚಿನ ಬಗ್ಗೆ ಅತಿಯಾದ ಒಲವು ಇರುವುದು. ಸುಮ್ಮನಿರುವ ಶತ್ರುವನ್ನು ಕೆಣಕಿ ಮೈಮೇಲೆ ಹಾಕಿಕೊಳ್ಳುವಿರಿ. ಪ್ರೀತಿಯ ವಿಚಾರಕ್ಕೆ ನಿಮಗೆ ಬಂದರೆ ಪೂರ್ಣ ಸಮಾಧಾನ‌ ಸಿಗದು.‌ ವಿದ್ಯಾರ್ಥಿಗಳು ಸಹವಾಸದೋಷದಿಂದ ಕೆಡುವ ಸಾಧ್ಯತೆ ಇದೆ. ಸಂಗಾತಿಯ ಮೇಲೆ ಅನುಮಾನವನ್ನು ನಿಮ್ಮ ರೀತಿಯಲ್ಲಿ ವ್ಯಕ್ತಪಡಿಸುವಿರಿ. ನಿಮ್ಮವರ ಪ್ರೀತಿಯು ನಿಮಗೆ ಕಡಿಮೆ ಆದಂತೆ ಅನ್ನಿಸುವುದು. ಕೃಷಿಯಲ್ಲಿ ಉಪಯುಕ್ತ ಯೋಜನೆಯನ್ನು ಹಾಕಿಕೊಳ್ಳುವಿರಿ. ಮಕ್ಕಳ ಬಗ್ಗೆ ಇರುವ ನಿಮ್ಮ ಚಿಂತೆ ನಿವಾರಣೆ ಆಗುವುದು. ಹಣವನ್ನು ಗಳಿಸುವ ಹಂಬಲವು ಇದ್ದು ಅದಕ್ಕಾಗಿ ಮಾರ್ಗವನ್ನೂ ಪರ್ಯಾಲೋಚಿಸಿ. ನಿಮ್ಮ ಒತ್ತಡವನ್ನು ಮನೆಯವರ ಮೇಲೆ ಹೇರುವುದು ಬೇಡ.

ಕುಂಭ ರಾಶಿ: ನಿಮ್ಮ ಸ್ಥಿರಸ್ತಿಯನ್ನು ಉಳಿಸಿಕೊಳ್ಳುವ ಬಗ್ಗೆ ಅತಿಯಾದ ಚಿಂತೆ ಆರಂಭವಾಗಬಹುದು. ಪ್ರಭಾವಿಗಳ ಬೆಂಬಲವನ್ನು ಅಪೇಕ್ಷಿಸುವಿರಿ. ಉದ್ಯೋಗಕ್ಕಾಗಿ ಅಲೆದಾಡಿ ಸ್ಥಿತಿ ಬರಲಿದ್ದು, ಆಯಾಸವೂ ಬೇಸರವೂ ನಿಮಗೆ ಆಗಬಹುದು. ನಿಮ್ಮ ಪಿತ್ರಾರ್ಜಿತ ಆಸ್ತಿಯು ನಷ್ಟವಾಗಬಹುದ ಎಂಬ ಆತಂಕವು ಇರಲಿದೆ. ಹಣಕಾಸಿನ ಒತ್ತಡವು ಕಡಿಮೆ ಆಗಲಿದೆ. ಯಾರ ಬಗ್ಗೆಯೂ ಹಗುರಾದ ಮಾತುಗಳನ್ನು ಆಡಬೇಡಿ. ಅನಂತರ ನೀವೂ ಹಗುರಾಗಬಹುದು. ಅನಾರೋಗ್ಯದ ಕಾರಣದಿಂದ ನೀವು ಇಂದಿನ ಪ್ರಯಾಣವನ್ನು ನಿಲ್ಲಿಸುವಿರಿ. ಕಳ್ಳತನದ ಭೀತಿಯು ನಿಮಗೆ ಇರವುದು‌. ಸಜ್ಜನರಿಗೆ ಕೆಲವು ಅಪವಾದದ ಮಾತುಗಳು ಬರಬಹುದು. ಅಧಿಕಾರಿಗಳ ಪ್ರಶಂಸೆಗೆ ಕಾಯುತ್ತಿರುವಿರಿ. ನಿಮ್ಮ ತಾಳ್ಮೆಯ ವರ್ತನೆಯಿಂದ ಸಂಕಟವು ದೂರಾಗುವುದು. ಕಲಿಕೆಯಲ್ಲಿ ಹೊಸತನವನ್ನು ಇರುವುದು.

ಮೀನ ರಾಶಿ: ಇಂದು ನಿಮ್ಮ ಬಹುಕಾಲದ ಅನಾರೋಗ್ಯವು ಕಡಿಮೆಯಾಗಲಿದ್ದು ಮನಸ್ಸಿಗೆ ಹಿತವೆನಿಸುವುದು. ಸಂಬಂಧಗಳನ್ನು ಆಪ್ತವಾಗಿಸಿಕೊಳ್ಳುವ ಪ್ರಯತ್ನದಲ್ಲಿ ಇರುವಿರಿ. ಸ್ತ್ರೀಯರಿಂದ ಇಂದಿನ ನಿಮ್ಮ ಕೆಲಸವನ್ನು ಮಾಡಿಕೊಳ್ಳುವಿರಿ. ಅಗೌರವವನ್ನು ಕೊಟ್ಟಂತೆ ನಿಮಗೆ ಅನ್ನಿಸಬಹುದು. ಅದನ್ನು ನಿರ್ಲಕ್ಷಿಸಿ ಬೇಕಾದ ಕಡೆಯಲ್ಲಿ ತೊಡಗಿಸಿ. ಸ್ನೇಹಿತರ ಜೊತೆ ಮನಸ್ತಾಪವು ಬರಬಹುದು. ವ್ಯಾಪಾರದ ಏರಿಳಿತಗಳು ನಿಮ್ಮ ಗಮನಕ್ಕೆ ಬಾರದೇ ಹೋಗಬಹುದು. ಆಪ್ತರು ನಿಮ್ಮಿಂದ ಕಾರಣಾಂತರಗಳಿಂದ ದೂರಾಗಬಹುದು. ಇನ್ನೊಬ್ಬರನ್ನು ರಿಪೇರಿ ಮಾಡಲು ಹೋಗಿ ಸಮಯ ಹಾಳಾದೀತು. ಮಕ್ಕಳು ಅಡ್ಡದಾರಿಗೆ ಹೋಗುವ ಸನ್ನಿವೇಶವು ಬರಬಹುದು. ಮಾರ್ಗದರ್ಶನದ ಅವಶ್ಯಕತೆ ಇರಲಿದೆ. ಸ್ವಾವಲಂಬಿಯಾಗಲು ನೀವು ಇಚ್ಛಿಸಿದರೂ ಸಮರ್ಪಕವಾಗಿ ನಿರ್ವಹಿಸಲು ಆಗದು.