Nitya Bhavishya: ರಾಶಿಭವಿಷ್ಯ; ಅತಿಯಾದ ಮೋಹವು ನಿಮ್ಮ ವಿವೇಚನಾ ಶಕ್ತಿಯನ್ನು ಕುಗ್ಗಿಸಬಹುದು
ಇಂದಿನ ದಿನಭವಿಷ್ಯ: ನೀವು ಮೇಷ, ವೃಷಭ, ಮಿಥುನ, ಕಟಕ ರಾಶಿಯವರೇ? ಹಾಗಿದ್ದರೆ ಜನವರಿ 24, 2024ರ ನಿಮ್ಮ ರಾಶಿಭವಿಷ್ಯ ಹೇಗಿದೆ? ಇಂದಿನ ಭವಿಷ್ಯದಲ್ಲಿ ನಿವು ಲಾಭದ ನಿರೀಕ್ಷೆ ಮಾಡಬಹುದಾ? ಶುಭ-ಅಶುಭ ಇದೆಯಾ ಎಂಬಿತ್ಯಾದಿ ಮಾಹಿತಿಗಳು ಇಲ್ಲಿವೆ.
ಒಂದಷ್ಟು ಮಂದಿ ಬೆಳಗ್ಗೆ ಎದ್ದ ನಂತರ ನಿತ್ಯ ಪಂಚಾಂಗ ಮತ್ತು ರಾಶಿಭವಿಷ್ಯ ನೋಡುತ್ತಾರೆ. ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಲಾಭ ಕಾದಿದೆಯಾ? ನಷ್ಟು ಉಂಟಾಗಬಹುದಾ? ಶುಭ, ಅಶುಭ ಇದೆಯಾ? ಸಂದಿಗ್ಧ ಪರಿಸ್ಥಿತಿ ಎದುರಾಗಲಿದೆ, ಏನು ಮಾಡಿದರೆ ಉತ್ತಮ ಎಂಬುದನ್ನು ತಿಳಿದುಕೊಳ್ಳುತ್ತಾರೆ. ಹಾಗಾದರೆ, ಮೇಷ, ವೃಷಭ, ಮಿಥುನ, ಕಟಕ ರಾಶಿಯವರ ಇಂದಿನ (ಜನವರಿ 24) ಭವಿಷ್ಯ (Horoscope) ಹೇಗಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ಹೇಮಂತ ಋತು, ಮಕರ ಮಾಸ, ಮಹಾನಕ್ಷತ್ರ: ಉತ್ತರಾಷಾಢಾ, ಮಾಸ: ಪೌಷ, ಪಕ್ಷ: ಶುಕ್ಲ, ವಾರ: ಬುಧ, ತಿಥಿ: ಚತುರ್ದಶೀ, ನಿತ್ಯನಕ್ಷತ್ರ: ಪುನರ್ವಸು, ಯೋಗ: ವೈಧೃತಿ, ಕರಣ: ಗರಜ, ಸೂರ್ಯೋದಯ ಬೆಳಗ್ಗೆ 07 ಗಂಟೆ 03 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 26 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 12:45 ರಿಂದ 02:10ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 08:28 ರಿಂದ 09:54ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 11:19 ರಿಂದ 12:45ರ ವರೆಗೆ.
ಮೇಷ ರಾಶಿ: ನಿಮ್ಮ ವೇಗಕ್ಕೆ ವಹಿಸಿಕೊಂಡ ಕೆಲಸವು ಆಗದೇ ಇರುವುದು ನಿಮಗೆ ಬೇಸರ ತರಿಸಬಹುದು. ನೌಕರರ ಮೇಲೆ ಸಿಟ್ಟಾಗಬೇಕಾಗುವುದು. ಕುಟುಂಬದ ಮರ್ಯಾದೆಗೆ ತಕ್ಕಂತೆ ವರ್ತನೆ ಇರಲಿ. ಕಛೇರಿಯ ಕಾರ್ಯವು ಇಂದು ಅಧಿಕವಾಗಿ ಇರಲಿದೆ. ಸ್ಥಿರವಾದ ಬುದ್ಧಿಯನ್ನು ಬೆಳೆಸಿಕೊಳ್ಳುವ ಅನಿವಾರ್ಯತೆ ಬರಬಹುದು. ಉಪಾಯದಿಂದ ನಿಮ್ಮ ಸ್ಥಾನವನ್ನು ಸ್ಥಿರವಾಗಿಸಿಕೊಳ್ಳಿ. ಕೃಷಿಯ ಬಗ್ಗೆ ಒಲವು ಬರಬಹುದು. ನಿಮ್ಮ ವಿಚಾರವನ್ನು ಇತರರ ಜೊತೆ ಹಂಚಿಕೊಳ್ಳುವಿರಿ. ಸಂತೋಷದ ದಿನಗಳ ನಿರೀಕ್ಷೆಯು ಹೆಚ್ಚಿರುವುದು. ಇಂದು ನಿಮ್ಮ ಪರಿಚಯವು ಇತರರಿಗೆ ಆಗುವುದು. ವ್ಯಕ್ತಿತ್ವವನ್ನು ನೀವು ಸರಿಯಾಗಿ ಮಾಡಿಕೊಳ್ಳಲು ಗಮನವಿರುವುದು. ಅನಿರೀಕ್ಷಿತವಾಗಿ ಅಲ್ಪ ಧನಾಗಮನವಾಗಬಹುದು.
ವೃಷಭ ರಾಶಿ: ಯಾವುದಕ್ಕಾದರೂ ಮುನ್ನುಗ್ಗುವ ಅಭ್ಯಾಸವನ್ನು ಬೆಳೆಸಿಕೊಳ್ಳುವಿರಿ. ಅತಿಯಾದ ಮೋಹವು ನಿಮ್ಮ ವಿವೇಚನಾ ಶಕ್ತಿಯನ್ನು ಕುಗ್ಗಿಸಬಹುದು. ಒಂದೇ ವಿಚಾರಕ್ಕೆ ಹತ್ತು ಬಾರಿ ಹೇಳಿಸಿಕೊಳ್ಳುವಿರಿ. ವಿದ್ಯುತ್ ಉಪಕರಣವು ಹಾಳಾಗಲಿದ್ದು, ವೆಚ್ಚವು ಅಧಿಕವಾಗಲಿದೆ. ಕರ್ತವ್ಯದಲ್ಲಿ ನಿರಾಸಕ್ತಿ ಇರುವುದು. ನಿಮ್ಮ ಜವಾಬ್ದಾರಿಗಳನ್ನು ನೀವು ಕಳೆದುಕೊಂಡು ನಿಶ್ಚಿಂತೆಯಿಂದ ಇರುವಿರಿ. ಭವಿಷ್ಯವು ಅನಿಶ್ಚಿತ ಎನಿಸಬಹುದು. ನಿಮ್ಮದೇ ವಸ್ತುವನ್ನು ಗುರುತಿಸಲಾರದಷ್ಟು ಮರೆವು ನಿಮ್ಮದಾಗಿದೆ. ಪ್ರವಾಸವನ್ನು ಹೆಚ್ಚು ಮಾಡುವ ವಿಚಾರದಲ್ಲಿ ಆಸಕ್ತಿಯು ಇರುವುದು. ನಿಮ್ಮ ವರ್ತನೆಯು ಅಹಂಕಾರವಾಗಿ ಬದಲಾಗುವುದು. ಸೇವಾ ಮನೋಭಾವವು ದೂರಾಗಬಹುದು.
ಮಿಥುನ ರಾಶಿ: ಇಂದು ನೀವು ವಿವಾಹದ ಸಂಭ್ರಮದಲ್ಲಿ ಇರುವಿರಿ. ಅನಾರೋಗ್ಯಕ್ಕೆ ಸೇವಿಸುವ ಔಷಧಿಯು ವಿರುದ್ಧವಾಗಬಹುದು. ಇಂದು ನೀವು ವಿಸ್ಮರಣೆಯಿಂದ ಮಾಡಬೇಕಾದ ಕಾರ್ಯವನ್ನು ಮಾಡಲಾಗದು. ಧಾರ್ಮಿಕ ಆಚರಣೆಗಳಲ್ಲಿ ನಿಷ್ಠೆ ಇರಲಿದೆ. ಕಲೆಯಲ್ಲಿ ಉಂಟಾದ ಆಸಕ್ತಿಯು ನಿಮ್ಮ ಮನಸ್ಸನ್ನು ಚೆನ್ನಾಗಿಡಬಹುದು. ಗಳಿಸಿದ ಹಣವನ್ನು ಸದ್ವಿನಿಯೋಗಕ್ಕೆ ಕೊಡುವಿರಿ. ಆರ್ಥಿಕತೆಯು ದಾಂಪತ್ಯದಲ್ಲಿ ಕಲಹವಾಗುವಂತೆ ಮಾಡುವುದು. ಕುಟುಂದ ಜೊತೆ ಸಮಯ ಕಳೆಯುವುದು ಇಂದು ಸಾಧ್ಯವಾಗದು. ನಿಮ್ಮ ತಪ್ಪಿಗೆ ಯಾರನ್ನೋ ಬಯ್ಯುವಿರಿ. ನಿಮ್ಮ ಸಿಟ್ಟನ್ನು ಇಂದು ತೋರಿಸುವುದು ಬೇಡ. ಇರುವುದರಲ್ಲಿ ಸುಖಪಡುವುದನ್ನು ಕಲಿತುಕೊಳ್ಳಬೇಕಾದೀತು. ನಿಮ್ಮವರ ಪ್ರೀತಿಯನ್ನು ಇಂದು ಗಳಿಸುವಿರಿ. ವಿನಮ್ರಭಾವವು ನಿಮ್ಮ ಸ್ಥಾನಕ್ಕೆ ಗೌರವವನ್ನು ಕೊಡುವುದು.
ಕಟಕ ರಾಶಿ: ಬೆಂಬಲವಿದೆ ಎಂದು ಏನನ್ನಾದರೂ ಮಾಡಲು ಹೋಗಿ ಮುಗ್ಗರಿಸುವಿರಿ. ನೀರಿಗೆ ಸಂಬಂಧಿಸಿದ ಉದ್ಯಮಿಗಳು ಅಧಿಕ ಲಾಭದ ನಿರೀಕ್ಷೆಯಲ್ಲಿ ಇರಬಹುದು. ನಿಮ್ಮ ಯೋಜನೆಗಳು ವಾಸ್ತವಕ್ಕೆ ಹತ್ತಿರವಿರಬಹುದು. ಸಮಾರಂಭಗಳಿಗೆ ಸ್ನೇಹಿತರ ಜೊತೆ ಹೋಗುವಿರಿ. ಅಪರಿಚಿತರು ನಿಮ್ಮ ಬಳಿ ಹಣಕ್ಕಾಗಿ ಪೀಡಿಸಬಹುದು. ವಂಚನೆಗೆ ಗೊತ್ತಾಗದಂತೆ ಸಿಕ್ಕಿಕೊಳ್ಳಬೇಕಾದೀತು. ನಿಮ್ಮ ಸ್ಥಾನಕ್ಕೆ ಯೋಗ್ಯವಾದ ಮಾತು ಇರಲಿ. ಮನೋಬಲವನ್ನು ಹೆಚ್ಚಿಸಿಕೊಳ್ಳಬೇಕಾಗವುದು. ಸುಮ್ಮನೇ ಮಾತಿಗಾಗಿ ಮಾತು ಬೆಳೆಸುವುದು ಬೇಡ. ನಿಮ್ಮ ತಪ್ಪನ್ನು ಯಾರದೋ ಮೇಲೆ ಹಾಕಿ ಖುಷಿ ಪಡುವಿರಿ. ಸಂಗಾತಿಯಿಂದ ಮಾನಸಿಕ ಕಿರಿಕಿರಿ ಇರುವುದು. ನಿಮ್ಮ ಜಿಪುಣತನವನ್ನು ಇತರರು ಆಡಿಕೊಂಡಾರು. ದುರ್ಗಾಮಾತೆಯು ನಿಮ್ಮ ದುರ್ಗತಿಯನ್ನು ನಾಶ ಮಾಡುವಳು.