Nitya Bhavishya: ರಾಶಿಭವಿಷ್ಯ; ಈ ರಾಶಿಯವರು ವಾಹನವನ್ನು ಎಚ್ಚರಿಕೆಯಿಂದ ಚಾಲನೆ ಮಾಡಿ

ನೀವು ಇಂದು ಕೈಗೊಳ್ಳುವ ಯಾವುದೇ ಕೆಲಸಕಾರ್ಯಗಳು ಚೆನ್ನಾಗಿರಬೇಕು ಎಂದರೆ ನಿಮ್ಮ ರಾಶಿಫಲ ಚೆನ್ನಾಗಿರಬೇಕು. ಒಂದಷ್ಟು ಮಂದಿ ರಾಶಿಭವಿಷ್ಯ ತಿಳಿದುಕೊಂಡೇ ಮುಂದಿನ ಹೆಜ್ಜೆ ಇಡುತ್ತಾರೆ. ನೀವು ಧನು, ಮಕರ, ಕುಂಭ, ಮೀನ ರಾಶಿಯವರಾಗಿದ್ದರೆ ಜನವರಿ 27ರ ನಿಮ್ಮ ಭವಿಷ್ಯ ಹೀಗಿದೆ ನೋಡಿ.

Nitya Bhavishya: ರಾಶಿಭವಿಷ್ಯ; ಈ ರಾಶಿಯವರು ವಾಹನವನ್ನು ಎಚ್ಚರಿಕೆಯಿಂದ ಚಾಲನೆ ಮಾಡಿ
ರಾಶಿ ಭವಿಷ್ಯ
Follow us
ಕಿರಣ್ ಹನುಮಂತ್​ ಮಾದಾರ್
|

Updated on: Jan 27, 2024 | 12:44 AM

ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಲಾಭ ಕಾದಿದೆಯಾ? ನಷ್ಟು ಉಂಟಾಗಬಹುದಾ? ಶುಭ, ಅಶುಭ ಇದೆಯಾ? ಸಂದಿಗ್ಧ ಪರಿಸ್ಥಿತಿ ಎದುರಾಗಲಿದೆ, ಏನು ಮಾಡಿದರೆ ಉತ್ತಮ ಎಂಬುದನ್ನು ತಿಳಿದುಕೊಳ್ಳುತ್ತಾರೆ. ಹಾಗಾದರೆ, ಧನು, ಮಕರ, ಕುಂಭ, ಮೀನ ರಾಶಿಯವರ ಇಂದಿನ (ಜನವರಿ 27) ಭವಿಷ್ಯ (Horoscope) ಹೇಗಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ಹೇಮಂತ ಋತು, ಮಕರ ಮಾಸ, ಮಹಾನಕ್ಷತ್ರ: ಉತ್ತರಾಷಾಢಾ, ಮಾಸ: ಪೌಷ, ಪಕ್ಷ: ಕೃಷ್ಣ, ವಾರ: ಶನಿ, ತಿಥಿ: ದ್ವಿತೀಯಾ, ನಿತ್ಯನಕ್ಷತ್ರ: ಮಘಾ, ಯೋಗ: ಆಯುಷ್ಮಾನ್, ಕರಣ: ತೈತಿಲ, ಸೂರ್ಯೋದಯ ಬೆಳಗ್ಗೆ 07 ಗಂಟೆ 02 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 27 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 09:54 ರಿಂದ 11:20ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 02:11 ರಿಂದ 03:37ರ ವರೆಗೆ, ಗುಳಿಕ ಕಾಲ ಬೆಳಗ್ಗೆ 07:03 ರಿಂದ 08:29ರ ವರೆಗೆ.

ಧನು ರಾಶಿ : ನೀವು ಇಂದು ಸ್ನೇಹಿತರು ಹಾಗೂ ಬಂಧುಗಳ ಜೊತೆ ಸಂತೋಷದಿಂದ ಕಳೆಯಲು ಇಷ್ಟಪಡುವಿರಿ. ಕಾರ್ಯವನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಮಾಡುವ ಪ್ರಯಾಣವು ನಿಷ್ಪ್ರಯೋಜಕವಾದೀತು. ಹೊರಗಿನ ಆಹಾರದಿಂದ ಸಂತೋಷವಾಗಬಹುದು. ಉದ್ವೇಗಕ್ಕೆ ಒಳಗಾಗುವುದು ಬೇಡ, ಉತ್ತಮ ಸಮಯದ ನಿರೀಕ್ಷೆಯಲ್ಲಿ ನೀವು ಇರುವಿರಿ. ದೂರದ ಬಂಧುಗಳ ಸಮಾಗಮವಾಗಬಹುದು. ಜನರ ಜೊತೆ ಬೆರೆಯುವುದು ನಿಮಗೆ ಇಷ್ಟವಾಗದು. ಅಧಿಕಾರವು ಅಹಂಕಾರವಾಗಿ ಬದಲಾಗುವುದು ಬೇಡ. ನಿಮ್ಮ ವರ್ತನೆಯು ಸಂದರ್ಭಕ್ಕೆ ಸರಿಯಾಗಿ ಇರಲಿ. ಸರಿಯಾಗಿ ಪ್ರತಿಕ್ರಯಿಸಲು ನಿಮಗೆ ಬಾರದೇ ಇರುವುದು. ಉದ್ಯೋಗದಲ್ಲಿ ಸ್ವಲ್ಪ ಬದಲಾವಣೆಯನ್ನು ಮಾಡಿಕೊಳ್ಳಬೇಕಾದೀತು. ದಿನಗೂಲಿ ಕಾರ್ಮಿಕರಿಗೆ ಕೆಲಸವು ಸಿಗದೇ ಕಷ್ಟವಾದೀತು.

ಮಕರ ರಾಶಿ : ಇಂದು ವಹಿಸಿಕೊಂಡ ಕೆಲಸಕ್ಕೆ ಹೆಚ್ಚು ಸಮಯವನ್ನು ತೆಗೆದುಕೊಳ್ಳುವಿರಿ. ನಿಮಗೆ ಹಿಡಿಸದ ವಿಚಾರದಲ್ಲಿ ಪ್ರಯತ್ನವನ್ನು ಮುಂದುವರಿಸುವುದು ಯೋಗ್ಯವಾಗದು. ಹಣಕಾಸಿನ ಯೋಜನೆಯಲ್ಲಿ ಆರಂಭದಲ್ಲಿ ಕೆಲವು ತೊಂದರೆಗಳಿದ್ದರೂ ಅನಂತರ ದಾರಿಯು ಸ್ಪಷ್ಟವಾಗುತ್ತದೆ. ಉದ್ಯೋಗದ ಸ್ಥಳದಲ್ಲಿ ನೀವು ಸಹೋದ್ಯೋಗಿಗಳ ಜೊತೆ ಸ್ನೇಹಪರ ವಾತಾವರಣದಲ್ಲಿ ಕೆಲಸ ಮಾಡಲು ಇಂದು ಸಾಧ್ಯವಾಗುತ್ತದೆ. ಹಿತೈಷಿಗಳ ಸಹವಾಸದಿಂದ ಮನಸಿಗೆ ಸಂತಸ ಉಂಟಾಗುವುದು. ಹೊಸ ವ್ಯವಹಾರಕ್ಕೆ ಹಿಂದೇಟು ಹಾಕುವಿರಿ. ಸಂಗಾತಿಯ ಮಾತು ಸಂಕಟವನ್ನು ತರಬಹುದು. ತುರ್ತು ಪ್ರಯಾಣವನ್ನು ನೀವು ಮಾಡಬೇಕಾಗಬಹುದು. ರಾಜಕೀಯ ವ್ಯಕ್ತಿಗಳಿಂದ ಆಗಬೇಕಾದ ಕೆಲಸವನ್ನು ಮಾಡಿಸಿಕೊಳ್ಳುವಿರಿ. ಸ್ನೇಹಿತನ ಸಹವಾಸದಿಂದ ದುರಭ್ಯಾಸಕ್ಕೆ ಬೀಳುವಿರಿ.

ಕುಂಭ ರಾಶಿ : ಇಂದು ನೀವು ದೇಹ ಮತ್ತು ಮನಸ್ಸಿನಲ್ಲಿ ಯಾವುದೇ ಬಂಧನವಿಲ್ಲದೇ ಮುಕ್ತರಾಗಿರುವಿರಿ. ಇದರಿಂದ ಮಾಡುವ ಕೆಲಸದಲ್ಲಿ ಉತ್ಸಾಹ ಹೆಚ್ಚಲಿದೆ. ನಿಮ್ಮ ಮನಸ್ಸು ಸೂಕ್ಷ್ಮವಾದ ಸಂಗತಿಗಳನ್ನೂ ಇಂದು ಸ್ವೀಕರಿಸಬಹುದು. ನೀವು ಕಾಲ್ಪನಿಕ ಪ್ರಪಂಚಕ್ಕೆ ಪ್ರಯಾಣಿಸುವಿರಿ. ಕುಟುಂಬದ ವಿಷಯಗಳಲ್ಲಿ ಆಸಕ್ತಿ ವಹಿಸುತ್ತೀರಿ. ಎಲ್ಲಿಗಾದರೂ ದೂರದ ಊರಿಗೆ ಪ್ರಯಾಣದ ಯೋಜನೆಗಳನ್ನು ಮಾಡಿಕೊಳ್ಳುವಿರಿ. ನೀವು ಹಣಕಾಸಿನ ವ್ಯವಹಾರಗಳಿಗೆ ಹೆಚ್ಚು ಗಮನ ಹರಿಸಬಹುದು. ನೀವು ರುಚಿಕರವಾದ ಆಹಾರದಿಂದ ಸಂತೋಷಿಸುವಿರಿ. ಸಾಮಾಜಿಕ ಕಾರ್ಯಗಳಿಗೆ ಒತ್ತಡಗಳು ಇರಲಿದೆ. ಪ್ರೀತಿಪಾತ್ರರ ಮೇಲೆ ಸುಖಾಸುಮ್ಮನೆ ಅನುಮಾನ ಬೇಡ. ಸ್ಥಿರಾಸ್ತಿಯ ವಿಚಾರಕ್ಕೆ ಬಿಸಿ ಮಾತುಗಳು ಕುಟುಂಬದಲ್ಲಿ ಬರಬಹುದು. ಕಾನೂನಾತ್ಮಕ ವಿಷಯವನ್ನು ಚರ್ಚಿಸಿ ಕಾರ್ಯರೂಪಕ್ಕೆ ತೆಗೆದುಕೊಂಡು ಬನ್ನಿ.

ಮೀನ ರಾಶಿ : ಇಂದು ಬಿಡುವಿಲ್ಲದ ದಿನವಾಗಿರುವುದು. ಯಾವುದಾದರೂ ವಿಚಾರಕ್ಕೆ ತುಂಬಾ ಭಾವುಕರಾಗಬೇಡಿ. ವ್ಯಾವಹಾರಿಕ ಮಾತುಗಳನ್ನು ಬಿಟ್ಟು ಬೇರೆ ಮಾತನಾಡಲು ಸಂಯಮವಿಲ್ಲದೆ ಇರಬಹುದು. ತಾಯಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಆದಷ್ಟು ಸ್ಥಿರಾಸ್ತಿಯ ಬಗ್ಗೆ ಚರ್ಚೆ ಮಾಡುವುದನ್ನು ತಪ್ಪಿಸಿ. ಅಪಘಾತಗಳು ಸಂಭವಿಸುವ ಸಾಧ್ಯತೆಯಿರುವುದರಿಂದ, ವಾಹನವನ್ನು ಎಚ್ಚರಿಕೆಯಿಂದ ಚಾಲನೆ ಮಾಡಿ. ಜಲಮೂಲಗಳಿಂದ ಆದಾಯ ಸಿಗಬಹುದು. ಆಪ್ತರ ಸಹಕಾರವನ್ನು ನೀವು ಅಲ್ಲಗಳೆಯುವಿರಿ. ನಿಮ್ಮ‌ ಕಷ್ಟವನ್ನು ಸ್ನೇಹಿತರ ಜೊತೆ ಹಂಚಿಕೊಳ್ಳುವುದೂ ಕಷ್ಟವಾದೀತು. ನಿಮಗೆ ಕೊಟ್ಟ ಜವಾಬ್ದಾರಿಯನ್ನು ಅತ್ಯಂತ ಕಾಳಜಿಯಿಂದ ನೋಡಿಕೊಳ್ಳುವಿರಿ. ನಿಮ್ಮ ಯಶಸ್ಸೇ ನಿಮಗೆ ಮುಳುವಾಗಬಹುದು. ಹಿರಿಯರ ಮಾರ್ಗದರ್ಶನವನ್ನು ಅಲ್ಲಗಳೆಯುವಿರಿ.

-ಲೋಹಿತ ಹೆಬ್ಬಾರ್-8762924271 (what’s app only)

ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್