Daily Horoscope: ನಿಮ್ಮ ಪರಿಶ್ರಮದ ಬಗ್ಗೆ ನಿಮಗೆ ಹೆಚ್ಚು ವಿಶ್ವಾಸ, ಸ್ವಾವಲಂಬಿಯಾಗಲು ಪ್ರಯತ್ನಿಸುವಿರಿ

| Updated By: ಗಂಗಾಧರ​ ಬ. ಸಾಬೋಜಿ

Updated on: Aug 30, 2024 | 12:15 AM

ನೀವು ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಆಗಸ್ಟ್​ 30: ನಿಮ್ಮ ಶುದ್ಧ ನಡತೆಯು ಎಲ್ಲವನ್ನೂ ಮಾಡಿಸೀತು. ಸಂಗಾತಿಯಿಂದ ಉಡುಗೊರೆಯನ್ನು ಪಡೆಯುವಿರಿ. ಸ್ವಲ್ಪ ಆದಾಯವೂ ನಿಮಗೆ ಸುಖವನ್ನು ಕೊಡುವುದು. ವಿವಾಹದ ವಿಚಾರವನ್ನು ತಂದೆಯೇ ನಿಮ್ಮ ಬಳಿ‌ ಮಾತನಾಡಬಹುದು. ಹಾಗಾದರೆ ಆಗಸ್ಟ್​ 30ರ ದಿನ ಭವಿಷ್ಯ ಮತ್ತು ಪಂಚಾಂಗ ಇಲ್ಲಿದೆ ನೋಡಿ.

Daily Horoscope: ನಿಮ್ಮ ಪರಿಶ್ರಮದ ಬಗ್ಗೆ ನಿಮಗೆ ಹೆಚ್ಚು ವಿಶ್ವಾಸ, ಸ್ವಾವಲಂಬಿಯಾಗಲು ಪ್ರಯತ್ನಿಸುವಿರಿ
ನಿಮ್ಮ ಪರಿಶ್ರಮದ ಬಗ್ಗೆ ನಿಮಗೆ ಹೆಚ್ಚು ವಿಶ್ವಾಸ, ಸ್ವಾವಲಂಬಿಯಾಗಲು ಪ್ರಯತ್ನಿಸುವಿರಿ
Follow us on

ಇಂದಿನ ರಾಶಿ ಭವಿಷ್ಯ ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಹೀಗೆ ಎಲ್ಲವನ್ನು ತಿಳಿದುಕೊಳ್ಳುತ್ತಾರೆ. ಜೊತೆಗೆ ಪಂಚಾಂಗವನ್ನು ಸಹ ಓದುತ್ತಾರೆ. ಹಾಗಾದರೆ ಇಂದಿನ (2024 ಆಗಸ್ಟ್​ 30) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಸಿಂಹ ಮಾಸ, ಮಹಾನಕ್ಷತ್ರ: ಮಘಾ, ಮಾಸ: ಶ್ರಾವಣ, ಪಕ್ಷ: ಕೃಷ್ಣ, ವಾರ: ಶುಕ್ರ, ತಿಥಿ: ದ್ವಾದಶೀ, ನಿತ್ಯನಕ್ಷತ್ರ: ಪುನರ್ವಸು, ಯೋಗ: ವ್ಯತಿಪಾತ್, ಕರಣ: ಕೌಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 21 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06:44 ಗಂಟೆ, ರಾಹು ಕಾಲ ಬೆಳಿಗ್ಗೆ 11:00 ರಿಂದ ಮಧ್ಯಾಹ್ನ 12:33, ಯಮಘಂಡ ಕಾಲ ಮಧ್ಯಾಹ್ನ 03:39 ರಿಂದ ಸಂಜೆ 05:12ರ ವರೆಗೆ, ಗುಳಿಕ ಕಾಲ ಬೆಳಗ್ಗೆ 07:54 ರಿಂದ 09:27ರ ವರೆಗೆ.

ಸಿಂಹ ರಾಶಿ: ಇಂದು ನಿಮ್ಮ ಮನೆಗೆ ಅನಿರೀಕ್ಷಿತವಾಗಿ ಅತಿಥಿಗಳ ಆಗಮನವಾಗಲಿದೆ. ತಪ್ಪಿಗೆ ನೀವು ಸಮಜಾಯಿಷಿ ಕೊಟ್ಟು ತಪ್ಪಿಸಿಕೊಳ್ಳುವಿರಿ. ಆಲಸ್ಯದಿಂದ ಇಂದು ಕಛೇರಿಗೆ ವಿಳಂಬವಾಗಿ ಹೋಗುವಿರಿ. ಇದು ವೃತ್ತಿಜೀವನ ಮೊದಲ ಕಪ್ಪುಚುಕ್ಕೆಯಾಗಲಿದೆ. ಒತ್ತಾಯ ಪೂರ್ವಕವಾಗಿ ಯಾರನ್ನೂ ಇಟ್ಟಕೊಳ್ಳುವ ಕೆಲಸಕ್ಕೆ ಹೋಗಬೇಡಿ. ವಿವಾಹವಾಗಬೇಕೆಂಬ ಆತುರ ಬೇಡ. ಉತ್ತಮ ಕುಲದವರು ಬಾಳಸಂಗಾತಿಯು ಆಗಬಹದು. ತಾಳ್ಮೆಯಿಂದ ಕಾಯುವುದು ಅವಶ್ಯಕ. ಆತುರದ ಕೈಗೆ ಬುದ್ಧಿಯನ್ನು ಕೊಡುವುದು ಬೇಡ. ಪರಪುರುಷರ ಜೊತೆ ಮಾತನಾಡುವುದನ್ನು ಸ್ವಲ್ಪ ಕಡಿಮೆ‌ ಮಾಡಿ. ಇನ್ನೊಬ್ಬರ ವಿಚಾರದಲ್ಲಿ ಆಸಕ್ತಿಯು ಹೆಚ್ಚಿರುವುದು. ಯೋಗ್ಯವಾದ ಮಾತುಗಳಿಂದ ಕಾರ್ಯಗಳಲ್ಲಿ ಯಶಸ್ಸು ಲಭಿಸಲಿದೆ. ವ್ಯಾಪರಕ್ಕೆ ಸಂಬಂಧಿಸಿದಂತೆ ನಿಮಗೆ ಆದಾಯ ಕಡಿಮೆ ಆಗಬಹುದು.ಕೆಲಸಗಳು ನಿಧಾನಗತಿಯಲ್ಲಿ ಸಾಗಲಿವೆ. ಮಿತ್ರರಿಂದ ಆಪತ್ಕಾಲದಲ್ಲಿ ಸಹಕಾರ ಸಿಗಲಿದೆ.

ಕನ್ಯಾ ರಾಶಿ: ನಿಮ್ಮ ಮೇಲೆ ಕಳ್ಳತನದ ಮಾತುಗಳು ಕೇಳಿಬರಬಹುದು. ಪರಿಚಿತರೇ ನಿಮ್ಮನ್ನು ಅಪರಿಚಿತರಂತೆ ಮಾತನಾಡಬಹುದು. ನಿಮ್ಮ ಶುದ್ಧ ನಡತೆಯು ಎಲ್ಲವನ್ನೂ ಮಾಡಿಸೀತು. ಸಂಗಾತಿಯಿಂದ ಉಡುಗೊರೆಯನ್ನು ಪಡೆಯುವಿರಿ. ಸ್ವಲ್ಪ ಆದಾಯವೂ ನಿಮಗೆ ಸುಖವನ್ನು ಕೊಡುವುದು. ವಿವಾಹದ ವಿಚಾರವನ್ನು ತಂದೆಯೇ ನಿಮ್ಮ ಬಳಿ‌ ಮಾತನಾಡಬಹುದು. ಭೂಮಿಗೆ ಸಂಬಂಧಿಸಿದ ದಾಖಲೆಗಳನ್ನು ತಯಾರಿಸಿಕೊಳ್ಳುವುದು ಕಷ್ಟವಾದೀತು. ಬೋಧಕ ವರ್ಗದವರು ಜೊತೆಗಾರರ ಬಳಿ ಹೊಂದಾಣಿಕೆ ಮಾಡಬೇಕಾಗುವುದು. ಅಧಿಕಾರಿಗಳ ಜೊತೆ ನಿಮ್ಮ ವರ್ತನೆಯ ನಿಮ್ಮ ಬೆಳವಣಿಗೆಗೆ ಪೂರಕವಾಗಿರಲಿದೆ. ಬದಲಾದ ವಾತಾವರಣದಿಂದ ದೇಹಕ್ಕೆ ತೊಂದರೆಯಾಗಬಹುದು. ನಿಮ್ಮ ಸ್ಥಾನವನ್ನು ಕಳೆದುಕೊಳ್ಳುವುದು ಬೇಡ. ನೌಕರರಿಂದ ನಿಮಗೆ ಕಷ್ಟವಾಗಲಿದೆ. ಹಿತಶತ್ರುಗಳ ಪಿತೂರಿಯು ನಿಮ್ಮ ಶ್ರೇಯಸ್ಸಿಗೆ ತೊಂದರೆಯನ್ನು ಮಾಡೀತು.

ತುಲಾ ರಾಶಿ: ನೀವು ಪಾಲುದಾರಿಕೆಯನ್ನು ಬಿಡುವ ಬಗ್ಗೆ ಯೋಚಿಸುವಿರಿ. ಕಾರ್ಯಗಳನ್ನು ಮುಂದೂಡಿ ನಿಮಗೆ ಬೇಸರವಾಗಬಹುದು. ನಿಮ್ಮೊಳಗೆ ಹತ್ತಾರು ದ್ವಂದ್ವಗಳು ಇರಲಿವೆ. ನಕಾರಾತ್ಮಕ ಆಲೋಚನೆಗಳು ನಿಮ್ಮನ್ನು ಕುಗ್ಗಿಸಬಹುದು. ಕೆಲವರ ಮಾತಗಳನ್ನು ಯಾವ ರೀತಿಯಲ್ಲಿ ತೆಗೆದುಕೊಳ್ಳಬಹುದು ಎಂಬ ಗೊಂದಲ ಕಾಡಬಹುದು. ಆದಷ್ಟು ಸಕಾರಾತ್ಮಕವಾಗಿ ಯೋಚಿಸಲು ಪ್ರಯತ್ನಿಸಿ. ಮನಸ್ಸನ್ನು ಖಾಲಿ ಇಡದೇ ಸದ್ವಿಚಾರಗಳಲ್ಲಿ ತೊಡಗಿಸಿ. ಕೂಡಿಟ್ಟ ಸ್ವಲ್ಪ‌ ಹಣವು ನಿಮಗೆ ಸಿಗಬಹುದು. ಸಣ್ಣ ಆರೋಗ್ಯವನ್ನೂ ನೀವು ದೊಡ್ಡದಾಗಿ ಮಾಡಿಕೊಳ್ಳುವಿರಿ. ನಿಮ್ಮನ್ನು ನೀವು ಸಮರ್ಥಿಸಿಕೊಳ್ಳುವುದಾದರೂ ಯಾರ ಬಳಿ ಎನ್ನುವುದೂ ಮುಖ್ಯವಾಗಿರುವುದು. ಸಮಾಜದ‌ ಕೆಲಸಗಳನ್ನು ಸಣ್ಣ ಪ್ರಮಾಣದಲ್ಲಿ ಮಾಡುವಿರಿ. ನಿಮ್ಮ ಸ್ವಭಾವವು ಇತರರಿಗೂ ಗೊತ್ತಾದೀತು. ನಿಮ್ಮ ಗೌರವಕ್ಕೆ ತೊಂದರೆಯಾಗುವುದು. ವಾತಾವರಣದ ವ್ಯತ್ಯಾಸದ ಕಾರಣ ನೀವು ಉದ್ವೇಗದಲ್ಲಿ ಇರುವಂತೆ ಕಾಣಿಸುವುದು.

ವೃಶ್ಚಿಕ ರಾಶಿ: ಇಂದು ನಿಮ್ಮ ಪರಿಶ್ರಮದ ಬಗ್ಗೆ ಹೆಚ್ಚು ವಿಶ್ವಾಸವಿರಲಿದೆ. ಸ್ವಾವಲಂಬಿಯಾಗಲು ಎಲ್ಲ ರೀತಿಯಿಂದ ಪ್ರಯತ್ನಿಸುವಿರಿ. ಎಲ್ಲದಕ್ಕೂ ನೀವು ಇಂದು ಆಕರ್ಷಿತರಾಗುವಿರಿ. ಎಲ್ಲ ವಿಚಾರವನ್ನೂ ಆಮೂಲಾಗ್ರವಾಗಿ ತಿಳಿಯಬೇಕು ಎಂಬ ಹಂಬಲವಿರುವುದು. ವಿದ್ಯಾರ್ಥಿಗಳು ತಮ್ಮ ಅಧ್ಯಯನವನ್ನು ಮುಗಿಸಿ ಕಾರ್ಯದಲ್ಲಿ ತೊಡಗುವರು. ಹಿರಿಯರ ಆಚರಣೆಗಳನ್ನು ಅಲ್ಲಗಳೆಯುತ್ತ ಆಚರಿಸುವಿರಿ. ನಿಮ್ಮ ಪ್ರಾಮಾಣಿಕ ಪ್ರಯತ್ನವು ಕಾಡುವುದು. ಇಂದು ನಿಮ್ಮ‌ ಕನಸು ನನಸಾಗಿಲ್ಲ ಎಂಬ ದುಃಖವು ಇರಲಿದೆ. ವಿಜ್ಞಾನಕ್ಷೇತ್ರದಲ್ಲಿ ಶೋಧಿಸುವವರಿಗೆ ಹೆಚ್ಚಿನ‌ ಅನುಕೂಲತೆಗಳು ಇರಲಿವೆ. ಯಾರ ಮಾತನ್ನೂ ಕೇಳದೇ ಸ್ವೇಚ್ಛೆಯಾಗಿ ಇರುವುದು ನಿಮಗೆ ಇಷ್ಟದ ಸಂಗತಿಯಾಗಲಿದೆ. ಚಿತ್ತವನ್ನು ಸಮಾಧಾನದಲ್ಲಿ ಇಟ್ಟುಕೊಳ್ಳುವುದು ಉತ್ತಮ. ನಿರ್ಮಾಣದ ಕಾರ್ಯದಲ್ಲಿ ನಿಮಗೆ ಯಶಸ್ಸು ಸಿಗುವುದು. ಉದ್ಯೋಗದ ಸ್ಥಳದಲ್ಲಿ ನಿಮ್ಮ ಶಿಸ್ತಿನ ಹಾಗೂ ವೇಗದ ಕೆಲಸವನ್ನು ಕಂಡು ಪ್ರಶಂಸಿಸುವರು. ಅಗ್ಗದ ಬೆಲೆಗೆ ವಸ್ತುವನ್ನು ಕೊಂಡು ಹಾಳು ಮಾಡಿಕೊಳ್ಳುವಿರಿ.