Horoscope: ಈ ರಾಶಿಯವರಿಗೆ ಸಿಗಬೇಕಾದ ಲಾಭವು ಕೈ ತಪ್ಪಿ ಹೋಗುವ ಸಾಧ್ಯತೆಯಿದೆ
ಆಗಸ್ಟ್ 30, 2024ರ ನಿಮ್ಮ ರಾಶಿಭವಿಷ್ಯ: ಇಂದು ನಿಮ್ಮ ಮಕ್ಕಳ ವಿಚಾರದಲ್ಲಿ ನಿಮಗೆ ಬೇಸರವಾಗಲಿದೆ. ಪಾಲುದಾರಿಕೆಯಿಂದ ನೀವು ನಿಶ್ಚಿಂತರೆಂಬ ಭಾವ ಬರಬಹುದು. ಸ್ನೇಹಿತರಿಗೆ ಧನಸಹಾಯವನ್ನು ಮಾಡುವಿರಿ. ಪ್ರಸಿದ್ಧ ವ್ಯಕ್ತಿಗಳು ಅನಿರೀಕ್ಷಿತವಾಗಿ ಸಿಕ್ಕಿ ಅವರ ಜೊತೆ ಮಾತಮಾಡುವಿರಿ. ಹಾಗಾದರೆ ಆಗಸ್ಟ್ 30ರ ದಿನ ಭವಿಷ್ಯ ಮತ್ತು ಪಂಚಾಂಗ ಇಲ್ಲಿದೆ ನೋಡಿ.
ಇಂದಿನ ರಾಶಿ ಭವಿಷ್ಯ ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಹೀಗೆ ಎಲ್ಲವನ್ನು ತಿಳಿದುಕೊಳ್ಳುತ್ತಾರೆ. ಜೊತೆಗೆ ಪಂಚಾಂಗವನ್ನು ಸಹ ಓದುತ್ತಾರೆ. ಹಾಗಾದರೆ ಇಂದಿನ (2024 ಆಗಸ್ಟ್ 30) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಸಿಂಹ ಮಾಸ, ಮಹಾನಕ್ಷತ್ರ: ಮಘಾ, ಮಾಸ: ಶ್ರಾವಣ, ಪಕ್ಷ: ಕೃಷ್ಣ, ವಾರ: ಶುಕ್ರ, ತಿಥಿ: ದ್ವಾದಶೀ, ನಿತ್ಯನಕ್ಷತ್ರ: ಪುನರ್ವಸು, ಯೋಗ: ವ್ಯತಿಪಾತ್, ಕರಣ: ಕೌಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 21 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06:44 ಗಂಟೆ, ರಾಹು ಕಾಲ ಬೆಳಿಗ್ಗೆ 11:00 ರಿಂದ ಮಧ್ಯಾಹ್ನ 12:33, ಯಮಘಂಡ ಕಾಲ ಮಧ್ಯಾಹ್ನ 03:39 ರಿಂದ ಸಂಜೆ 05:12ರ ವರೆಗೆ, ಗುಳಿಕ ಕಾಲ ಬೆಳಗ್ಗೆ 07:54 ರಿಂದ 09:27ರ ವರೆಗೆ.
ಮೇಷ ರಾಶಿ: ಕೆಲವು ಸಂಗತಿಗಳ ವಿಚಾರದಲ್ಲಿ ನೀವು ಗೊತ್ತಿಲ್ಲದಂತೆ ಇರುವುದು ಒಳ್ಳೆಯದು. ಅಸೂಯೆಯು ನಿಮ್ಮ ಸೃಜನಾತ್ಮಕತೆಗೆ ತೊಂದರೆ ಕೊಡುವುದು. ಸಾಮರಸ್ಯದ ಕೊರತೆಯಿಂದ ಮನಸ್ಸು ಉದ್ವೇಗಕ್ಕೆ ಒಳಗಾಗಬಹುದು. ನಿಮಗೆ ಇನ್ನಷ್ಟು ವಿದ್ಯಾಭ್ಯಾಸದ ಅವಶ್ಯಕತೆ ಬೇಕು ಎನಿಸಲಿದೆ. ಉಚಿತವಾದುದನ್ನು ಪಡೆದುಕೊಳ್ಳಲು ಪ್ರಯತ್ನಿಸುವಿರಿ. ನಿಮಗೆ ಬೇಕಾದವರಲ್ಲಿ ಮಾತ್ರ ಸಹಾಯ ಕೇಳಬಹುದು. ಕಡೆಗಣಿಸಿದ ಕಾರಣಕ್ಕೆ ಸಿಟ್ಟಾಗುವ ಸಾಧ್ಯತೆ ಇದೆ. ಉದ್ಯೋಗದಲ್ಲಿ ಸ್ವಲ್ಪ ಆಲಸ್ಯವು ಇರಲಿದ್ದು ಕೆಲಸಗಳು ನಾಳೆಗೆ ಉಳಿದುಕೊಳ್ಳುವುದು. ಸಂಗಾತಿಯು ಸಂಕಟಪಡುತ್ತಿದ್ದು ನಿಮ್ಮಿಂದ ಸಾಂತ್ವನ ಸಿಗಬೇಕಿದೆ. ಸಿಗಬೇಕಾದ ಲಾಭವು ಕೈ ತಪ್ಪಿ ಹೋಗುವ ಸಾಧ್ಯತೆ ಇದೆ. ಯಾವುದನ್ನಾದರೂ ಪರಸ್ಪರ ಮಾತುಕತೆಯ ಮೂಲಕ ಪರಿಹಾರವನ್ನು ಕಂಡುಕೊಳ್ಳಬೇಕಾಗುವುದು. ಸಾಮರಸ್ಯದ ಅಭಾವವು ದ್ವೇಷಕ್ಕೆ ಕಾರಣವಾಗಬಹುದು.
ವೃಷಭ ರಾಶಿ: ನಿಮಲ್ಲಿ ಎಲ್ಲವೂ ಇದ್ದರೂ ಕೊರತೆ ಎಂಬಂತೆ ಇರುವಿರಿ. ಸತ್ಯವನ್ನೇ ನಂಬಿ ಬದುಕುವವರು ಎಂದು ಇದುವರೆಗೆ ತಿಳಿದದ್ದು ಸುಳ್ಳು ಮಾಡುವಿರಿ. ಯಾರದೋ ಮೂಲಕ ನಿಮಗೆ ಅಪಾಯದ ಸೂಚನೆ ಬರಬಹುದು. ನಿಮ್ಮ ನಿಷ್ಪಕ್ಷಪಾತ ನಿಲುವು ಕೆಲವರಿಗೆ ಇಷ್ಟವಾಗದೇ ಹೋಗಬಹುದು. ನಿರ್ಮಾಣ ಹಂತದ ಕೆಲಸಗಳು ನಿಧಾನಗತಿಯಲ್ಲಿ ಸಾಗಬಹುದು. ನಿಮ್ಮ ಶೋಧನೆಗೆ ಸರಿಯಾದ ದಿಕ್ಕು ಸಿಗದೇ ಕಷ್ಟವಾದೀತು. ನಿಮ್ಮ ಪೂರ್ವನಿರ್ಧಾರಿತ ಪ್ರಯಾಣವನ್ನು ಮುಂದೂಡುವಿರಿ. ಖುಷಿಪಡುವ ಸಂಗತಿಗಳನ್ನು ಬಿಟ್ಟು ನಕಾರಾತ್ಮಕವಾಗಿ ಆಲೋಚಿಸುವಿರಿ. ಆರೋಗ್ಯವನ್ನು ಕಾಪಾಡಿಕೊಳ್ಳಲು ಶ್ರಮಿಸುವಿರಿ. ಕಷ್ಟವಾದರೂ ಕೆಲವನ್ನು ಇಷ್ಟಪಡಬೇಕಾದೀತು. ಬರಲಿರುವ ಜವಾಬ್ದಾರಿಯನ್ನು ಜಾಣತನದಿಂದ ತಪ್ಪಿಸಿಕೊಳ್ಳುವಿರಿ. ನಿಮ್ಮ ಹೊಣೆಗಾರಿಕೆ ಕಡಿಮೆ ಆದಂತೆ ಅನ್ನಿಸುವುದು. ಆಪ್ತರನ್ನು ನೀವು ಕಳೆದುಕೊಳ್ಳುವ ಸಾಧ್ಯತೆ ಇದೆ. ಅನ್ಯರ ಜೊತೆ ಸಮಾನಸ್ಥಾನವನ್ನು ಗಳಿಸುವುದು ಕಷ್ಟವಾಗುವುದು. ನಿಮಗೆ ಸಿಕ್ಕ ಸ್ಥಾನಕ್ಕೆ ಬೆಲೆ ಕೊಡಿ.
ಮಿಥುನ ರಾಶಿ; ಇಂದು ನಿಮ್ಮ ಮಕ್ಕಳ ವಿಚಾರದಲ್ಲಿ ನಿಮಗೆ ಬೇಸರವಾಗಲಿದೆ. ಪಾಲುದಾರಿಕೆಯಿಂದ ನೀವು ನಿಶ್ಚಿಂತರೆಂಬ ಭಾವ ಬರಬಹುದು. ಸ್ನೇಹಿತರಿಗೆ ಧನಸಹಾಯವನ್ನು ಮಾಡುವಿರಿ. ಪ್ರಸಿದ್ಧ ವ್ಯಕ್ತಿಗಳು ಅನಿರೀಕ್ಷಿತವಾಗಿ ಸಿಕ್ಕಿ ಅವರ ಜೊತೆ ಮಾತಮಾಡುವಿರಿ. ಪೂರ್ವಪುಣ್ಯದಿಂದ ದೊಡ್ಡ ಅಪಾಯವೊಂದು ತಪ್ಪಿಹೋಗುವ ಸಂಭವವಿದೆ. ತಿಳಿವಳಿಕೆಯು ಕಡಿಮೆ ಎನ್ನುವುದು ನಿಮಗೇ ಗೊತ್ತಾಗಿ ಆ ಕುರಿತು ಪ್ರಯತ್ನ ಮಾಡುವಿರಿ. ಕೃಷಿಯು ನಿಮ್ಮ ಆಸಕ್ತಿಯ ಕ್ಷೇತ್ರವಾಗುವುದು. ಸಂಗಾತಿಯ ಜೊತೆ ಹರಟೆ ಹೊಡೆಯುತ್ತ ಕಾಲಕಳೆಯುವಿರಿ. ತಂದೆಯಿಂದ ಅಸಮಾಧಾನದ ಮಾತುಗಳನ್ನು ಕೇಳುವಿರಿ. ಸ್ಪರ್ಧಾಮನೋಭಾವವು ನಿಮ್ಮನ್ನು ಎಚ್ಚರಿಸುವುದು. ನೀವು ಪ್ರೇಮಿಗಳಿಗೆ ದೂರವಾಗುವ ಸಾಧ್ಯತೆ ಇದೆ. ಅಹಂಕಾರದ ಮಾತುಗಳು ಇತರರಿಗೆ ಹಿಂಸೆಯಾದೀತು. ಏಕಾಗ್ರತೆಯನ್ನು ಬೆಳೆಸಿಕೊಳ್ಳಲು ಅಭ್ಯಾಸ ಮಾಡುವಿರಿ. ಏಕಕಾಲಕ್ಕೆ ಎಲ್ಲವೂ ನಿಮ್ಮದಾಗದು.
ಕರ್ಕಾಟಕ ರಾಶಿ: ನಿಮಗೆ ಅವಶ್ಯಕ ವಸ್ತುಗಳ ಬಗ್ಗೆ ಅತಿಯಾದ ಇಚ್ಛೆ ಇರಲಿದೆ. ಅನಾರೋಗ್ಯದಿಂದ ನಿಮ್ಮ ಕಾರ್ಯದಲ್ಲಿ ಲವಲವಿಕೆ ಇಲ್ಲವಾದೀತು. ಪಾಲುದಾರಿಕೆಯು ಕಲಹದಲ್ಲಿ ಕೊನೆಯಾಗುವುದು. ವೃತ್ತಿಪರರು ಕಛೇರಿಯಲ್ಲಿ ಸಮಸ್ಯೆಯಲ್ಲಿ ಸಿಕ್ಕಿಕೊಳ್ಳುವರು. ನಿಮ್ಮ ಅಭ್ಯಾಸವು ಮುಂದುವರಿಯುವುದು ಉತ್ತಮ. ನಿಮಗೆ ಸಿಗುವ ಸಂಗಾತಿಯು ಬಹಳ ಬುದ್ಧಿವಂತನಾಗಿರುವನು. ಧಾರ್ಮಿಕಕ್ಷೇತ್ರಗಳಿಗೆ ಹೋಗಿ ನಿಮ್ಮ ಹರಕೆಯನ್ನು ಒಪ್ಪಿಸಿ ಬರುವಿರಿ. ಸದ್ದಿಲ್ಲದೇ ನಿಮ್ಮ ಪ್ರಚಾರಗಳನ್ನು ಶತ್ರುಗಳು ಮಾಡುವರು. ದಾಖಲೆಗಳನ್ನು ಸರಿಯಾಗಿ ನಿರ್ವಹಿಸಲಾಗದು. ನಿಮ್ಮ ಸ್ವಭಾವದಲ್ಲಿ ಆದ ಬದಲಾವಣೆಯುಂದ ಅಚ್ಚರಿಯಾದೀತು. ಎಲ್ಲ ಸಮಯಕ್ಕೂ ನಿಮಗೆ ಸಹಕಾರ ಸಿಗುತ್ತದೆ ಎಂಬ ಯೋಚನೆ ಬೇಡ. ನಿಮ್ಮದಲ್ಲದ್ದನ್ನು ನಿಮ್ಮದೆಂದು ವಾದಿಸಲು ಹೋಗಬೇಡಿ. ಇಂದಿನ ಕಛೇರಿಯ ಕೆಲಸಕ್ಕೆ ಸಮಯ ಮಿತಿ ಇರುವುದು.