AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Daily Horoscope: ಸ್ನೇಹಿತರಿಂದ ಆರ್ಥಿಕ ಸಹಾಯ ಪಡೆದುಕೊಳ್ಳುವಿರಿ, ಇತರರೊಂದಿಗೆ ಬೆರೆಯುವಾಗ ಎಚ್ಚರ

ನೀವು ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಸೆಪ್ಟೆಂಬರ್​ 29: ನಿಮ್ಮ ಸಂಗಾತಿಯ ಜೊತೆ ನಿಮ್ಮ ಆಂತರಿಕ ಆಲೋಚನೆಗಳನ್ನು ಹಂಚುವಿರಿ. ಭಾವೀ ಸಂಗಾತಿಯ ಜೊತೆ ಸುತ್ತಾಡಿ ಅರ್ಥಮಾಡಿಕೊಳ್ಳುವಿರಿ. ಭೂಮಿಯ ವಿಚಾರದಲ್ಲಿ ನಿಮಗೆ ನಷ್ಟವಾಗಬಹುದು. ಹಾಗಾದರೆ ಸೆಪ್ಟೆಂಬರ್​ 29ರ ದಿನ ಭವಿಷ್ಯ ಮತ್ತು ಪಂಚಾಂಗ ಇಲ್ಲಿದೆ ನೋಡಿ.

Daily Horoscope: ಸ್ನೇಹಿತರಿಂದ ಆರ್ಥಿಕ ಸಹಾಯ ಪಡೆದುಕೊಳ್ಳುವಿರಿ, ಇತರರೊಂದಿಗೆ ಬೆರೆಯುವಾಗ ಎಚ್ಚರ
ಸ್ನೇಹಿತರಿಂದ ಆರ್ಥಿಕ ಸಹಾಯ ಪಡೆದುಕೊಳ್ಳುವಿರಿ, ಇತರರೊಂದಿಗೆ ಬೆರೆಯುವಾಗ ಎಚ್ಚರ
TV9 Web
| Edited By: |

Updated on: Sep 29, 2024 | 12:10 AM

Share

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಕನ್ಯಾ ಮಾಸ, ಮಹಾನಕ್ಷತ್ರ: ಹಸ್ತಾ, ಮಾಸ: ಭಾದ್ರಪದ, ಪಕ್ಷ: ಕೃಷ್ಣ, ವಾರ: ಭಾನು, ತಿಥಿ: ದ್ವಾದಶೀ, ನಿತ್ಯನಕ್ಷತ್ರ: ಮಘಾ, ಯೋಗ: ಸಾಧ್ಯ, ಕರಣ: ತೈತಿಲ, ಸೂರ್ಯೋದಯ ಬೆಳಗ್ಗೆ 06 ಗಂಟೆ 23 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 22 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 04:52 ರಿಂದ 06:22, ಯಮಘಂಡ ಕಾಲ ಮಧ್ಯಾಹ್ನ 12:23ರಿಂದ 01:53ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 03:23 ರಿಂದ 04:52 ರ ವರೆಗೆ.

ಸಿಂಹ ರಾಶಿ: ನಿಮಗೆ ಅತ್ಮ ಸ್ಥೈರ್ಯದ ಕೊರತೆ ಬಹುವಾಗಿ ಕಾಡುವುದು. ಕೆಲಸದಲ್ಲಿ ಒತ್ತಡ ಹೆಚ್ಚಾಗಬಹುದು. ಒಪ್ಪಿಕೊಂಡ ಕೆಲಸದಿಂದ‌ ನಿಮಗೆ ಕಿರಿಕಿರಿಯಾದೀತು. ನಿಮಗೆ ಖಾಸಗಿ ಸಂಸ್ಥೆಯೊಂದನ್ನು ಮುನ್ನಡೆಸುವ ಜವಾಬ್ದಾರಿಯು ಸಿಗಬಹುದು. ಇನ್ನೊಬ್ಬರ ನೋವಿಗೆ ಸ್ಪಂದಿಸುವುದು ನಿಮಗೆ ಆಗದು. ನೀವು ತೆಗೆದುಕೊಂಡ ತೀರ್ಮಾನವನ್ನು ಇತರರು ಬದಲಿಸಿದ್ದು ನಿಮ್ಮ ಕೋಪಕ್ಕೆ ಕಾರಣವಾಗಲಿದೆ. ನಿಮ್ಮ ಕೆಲಸಕ್ಕೆ ಕುಟುಂಬ ಬೆಂಬಲವಿರುವುದು. ಆರ್ಥಿಕ ಸಹಾಯವನ್ನು ನೀವು ಸ್ನೇಹಿತರಿಂದ ಪಡೆದುಕೊಳ್ಳುವಿರಿ. ವ್ಯಾಪಾರದಲ್ಲಿ ಸ್ವಲ್ಪ ಲಾಭವು ಇರಲಿದೆ. ಜನರ ಜೊತೆ ಬೆರೆಯುವಾಗ ಎಚ್ಚರಿಕೆ ಇರಲಿ. ಖಾಸಗಿಯ ಸಮಯವನ್ನು ಯಾರಿಗೂ ಕೊಡುವುದು ಬೇಡ. ನಿಮ್ಮ ಬಗ್ಗೆ ಅಧಿಕರ ದುರುಪಯೋಗದ ಆರೋಪವು ಬರಬಹುದು. ಅಧಿಕಾರಕ್ಕೆ ನೀವು ಮಾಡಿದ ಪ್ರಯತ್ನವು ಸಫಲವಾಗಬಹುದು. ಧಾರ್ಮಿಕ ಕಾರ್ಯಗಳಿಗೆ ದೂರಪ್ರಯಾಣವನ್ನು ಮಾಡುವಿರಿ. ಕೆಲವು ಸಾಲಬಾಧೆಯಿಂದ ಮುಕ್ತಿಪಡೆಯುವಿರಿ. ಕೇಳಿದಷ್ಟೇ ವಿಚಾರಕ್ಕೆ ಉತ್ತರಿಸಿದರೆ ಸಾಕು.

ಕನ್ಯಾ ರಾಶಿ: ನೀವು ಕಛೇರಿಯ ಕೆಲಸದಲ್ಲಿ ಅವಸರದ ನಿರ್ಧಾರವನ್ನು ತೆಗದುಕೊಳ್ಳುವುದು ಬೇಡ. ನೀವು ಸಂತೋಷವಾಗಿರುತ್ತೀರಿ ಮತ್ತು ನಿಮ್ಮ ಪ್ರೀತಿಪಾತ್ರರೊಂದಿಗೆ ಪ್ರಣಯದಲ್ಲಿ ಸಮಯ ಕಳೆಯುತ್ತೀರಿ. ನಿಮ್ಮ ಸಂಗಾತಿಯ ಜೊತೆ ನಿಮ್ಮ ಆಂತರಿಕ ಆಲೋಚನೆಗಳನ್ನು ಹಂಚುವಿರಿ. ಭಾವೀ ಸಂಗಾತಿಯ ಜೊತೆ ಸುತ್ತಾಡಿ ಅರ್ಥಮಾಡಿಕೊಳ್ಳುವಿರಿ. ಭೂಮಿಯ ವಿಚಾರದಲ್ಲಿ ನಿಮಗೆ ನಷ್ಟವಾಗಬಹುದು. ಮನಸ್ಸಿನ ನಿಯಂತ್ರಣವನ್ನು ಸಾಧಿಸುವ ಅವಶ್ಯಕತೆ ಇದೆ. ಹಣದ ದುರ್ಬಳಕೆಯನ್ನು ಮಾಡುವ ಸಾಧ್ಯತೆ ಇದೆ. ಕುಟುಂಬದ ತೊಡಕುಗಳನ್ನು ಅತ್ಯಂತ ಸೂಕ್ಷ್ಮವಾಗಿ ನಿಭಾಯಿಸುವಿರಿ. ಇನ್ನೊಬ್ಬರಿಗೆ ಸಹಾಯವನ್ನು ಮಾಡುವ ಇಚ್ಛೆಯು ಇರಲಿದೆ. ಅಮೂಲ್ಯವಾದ ವಸ್ತುವು ಕಣ್ಮರೆಯಾಗಿ ಆತಂಕವನ್ನು ಸೃಷ್ಟಿಸಬಹುದು. ಆಪ್ತರು ನಿಮಗೆ ದುಷ್ಕೃತ್ಯಕ್ಕೆ ಪ್ರೇರಣೆ ಕೊಡಬಹುದು. ಇಂದು ನಿಮ್ಮ ಜೀವನಕ್ಕೆ ಸಂಬಂಧಿಸಿದ ಕೆಲವು ನಿರ್ಧಾರವನ್ನು ತೆಗೆದುಕೊಳ್ಳಬೇಕಾದೀತು. ಹೇಳಿಕೊಳ್ಳುವಷ್ಟು ಸುಲಭವಾಗಿ ಯಾವುದನ್ನೂ ಬದಲಿಸಲಾಗದು.

ತುಲಾ ರಾಶಿ: ಇಂದು ನೀವು ಎಲ್ಲ ಒತ್ತಡಗಳನ್ನು ಬದಿಸರಿಸಿ ನಿರಾಳವಾಗಿ ಕಾಲ ಕಳೆಯುತ್ತೀರಿ. ವ್ಯವಸ್ಥೆಯ ಮುಖ್ಯಸ್ಥರಾದವರಿಗೆ ಜವಾಬ್ದಾರಿಯನ್ನು ಮುನ್ನಡೆಸುವುದು ಕಷ್ಟವಾಗುವುದು. ನಿಮ್ಮ ವಿರೋಧಿಗಳು ಹೆಚ್ಚಾಗುವ ಸಾಧ್ಯತೆ ಇದೆ. ಇಂದು ನಿಮಗೆ ಒತ್ತಡವನ್ನು ನಿಭಾಯಿಸುವುದು ಕಷ್ಟವಸಲಾದೀತು. ಕಷ್ಟದಲ್ಲಿ ಇರುವವರಿಗೆ ಕರುಣೆ ತೋರಿಸುವಿರಿ. ನಿಮಗೆ ಇಷ್ಟವಾಗದ ವ್ಯವಹಾರವು ನಿಮ್ಮ ಬಳಿಗೆ ಬರುತ್ತಲೇ ಇರುವುದು. ಅಸಭ್ಯ ವರ್ತನೆಯಿನಿಂದ ಬೈಗುಳವು ಸಿಗಬಹುದು. ಒಂದೇ ವಿಚಾರಕ್ಕೆ ದಂಪತಿಗಳ ನಡುವೆ ಕಲಹವಾಗುತ್ತಲೇ ಇರುವುದು. ಆಪ್ತರು ನಿಮಗೆ ಪ್ರೀತಿಯಿಂದ ಆತಿಥ್ಯವನ್ನು ಕೊಡಿಸುವರು. ಅನಾರೋಗ್ಯವು ತುರ್ತು ಚಿಕಿತ್ಸೆ ಮಾಡುವತನಕ ಕರೆದುಕೊಂಡು ಹೋಗುವುದು. ಭೂಮಿಯ ವಿಚಾರದಲ್ಲಿ ನಷ್ಟವಾಗಿ ತೊಂದರೆ ಪಡುವಿರಿ.

ವೃಶ್ಚಿಕ ರಾಶಿ: ಯಾರಿಗೋ ಕೊಡಬೇಕಾದ ಹಣವು ಅನಿರೀಕ್ಷಿತವಾಗಿ ನಿಮ್ಮ ಕೈ ಸೇರುವುದು. ನೀವು ಹೂಡಿಕೆದಾರರಾಗಿದ್ದರೆ, ನಿಮ್ಮ ಹೂಡಿಕೆಯಿಂದ ಗಮನಾರ್ಹ ಲಾಭವಿದೆ. ದೀರ್ಘಕಾಲದಿಂದ ಉಳಿದಿರುವ ಸಾಲಗಳು ಕೂಡಾ ಮುಕ್ತಾಯವಾಗುವುದು. ರಾಜಕಾರಣಿಗಳಿಗೆ ಹೆಚ್ಚಿನ ಬೆಂಬಲವು ಸಿಗಲಿದ್ದು ಜನರ ಕಾರ್ಯವನ್ನು ಮಾಡಲು ಇಚ್ಛೆಪಡುವಿರಿ. ಮಾನಸಿಕ ಒತ್ತಡದಿಂದ ದೂರವಾಗಲು ಏಕಾಂತವನ್ನು ಬಯಸುವಿರಿ. ಹಣಕಾಸಿನ ವ್ಯವಹಾರವು ಸರಿಯಾಗಿ ಇಟ್ಟುಕೊಳ್ಳಿ. ಪೋಷಕರ ಜೊತೆ ನಿಮ್ಮ ಸಮಯವು ಆನಂದದಿಂದ ಇರಲಿದೆ. ನಿಮ್ಮ ಮನಸ್ಸು ಯಾವುದೋ ಆಲೋಚನೆಯಲ್ಲಿ ಮಗ್ನವಾಗುವುದು. ಸ್ನೇಹಿತರ ಸಲಹೆಗಳು ನಿಮ್ಮ ಉದ್ಯಮಕ್ಕೆ ಸಹಕಾರಿಯಲಿದೆ. ಸಮಾಲೋಚನೆಯಿಂದ ಬಗೆಹರಿಯುವುದನ್ನು ಸರಿಮಾಡಿಕೊಳ್ಳಿ. ವಿದ್ಯಾಭ್ಯಾಸವನ್ನು ಹೆಚ್ಚು ಮಾಡಬೇಕಾಗಿ ಬರಬಹುದು. ಮಕ್ಕಳ ಸುಖವನ್ನು ಅನುಭವಿಸುವಿರಿ. ಅಧಿಕಾರವನ್ನು ಸದುಪಯೋಗ ಮಾಡಿಕೊಳ್ಳುವಿರಿ. ವಿದ್ಯಾಭ್ಯಾಸದ ಕಾರಣಕ್ಕೆ ಮನೆಯನ್ನು ಬಿಡುವುದು ನಿಮಗೆ ಕಷ್ಟವಾದೀತು.

ಬಿಗ್ ಬಾಸ್ ಮನೆಯೊಳಗೆ ಗಿಲ್ಲಿಗೆ ಬಂತ ಕೊರೊನಾ? ಮೂಡಿದೆ ಅನುಮಾನ
ಬಿಗ್ ಬಾಸ್ ಮನೆಯೊಳಗೆ ಗಿಲ್ಲಿಗೆ ಬಂತ ಕೊರೊನಾ? ಮೂಡಿದೆ ಅನುಮಾನ
ಚಾಮರಾಜನಗರದಲ್ಲಿ ಶುರುವಾಯ್ತು ಆಪರೇಶನ್ ಬೀಸ್ಟ್!
ಚಾಮರಾಜನಗರದಲ್ಲಿ ಶುರುವಾಯ್ತು ಆಪರೇಶನ್ ಬೀಸ್ಟ್!
ರಣರೋಚಕ ಘಟ್ಟದಲ್ಲಿ ಆಸ್ಟ್ರೇಲಿಯಾ vs ಇಂಗ್ಲೆಂಡ್ ಟೆಸ್ಟ್ ಪಂದ್ಯ
ರಣರೋಚಕ ಘಟ್ಟದಲ್ಲಿ ಆಸ್ಟ್ರೇಲಿಯಾ vs ಇಂಗ್ಲೆಂಡ್ ಟೆಸ್ಟ್ ಪಂದ್ಯ
ಯಾವುದೇ ಕಾರ್ಯಗಳಲ್ಲಿ ಶಂಕುಸ್ಥಾಪನೆ ಮಾಡುವುದು ಯಾಕೆ?
ಯಾವುದೇ ಕಾರ್ಯಗಳಲ್ಲಿ ಶಂಕುಸ್ಥಾಪನೆ ಮಾಡುವುದು ಯಾಕೆ?
ಡಿಕೆ ಶಿವಕುಮಾರ್​ ಹಾಗೂ ಕೆಎನ್​​ ರಾಜಣ್ಣ ಭೇಟಿ: ಕುತೂಹಲ ಮೂಡಿಸಿದ ನಾಯಕರ ನಡ
ಡಿಕೆ ಶಿವಕುಮಾರ್​ ಹಾಗೂ ಕೆಎನ್​​ ರಾಜಣ್ಣ ಭೇಟಿ: ಕುತೂಹಲ ಮೂಡಿಸಿದ ನಾಯಕರ ನಡ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ