Horoscope Today May 13, 2024: ದಿನಭವಿಷ್ಯ, ದಾಂಪತ್ಯ ಜೀವನವು ಸುಖಕರ, ಸ್ವಲ್ಪ ಎಚ್ಚರದಿಂದ ಇರಿ
2024 ಮೇ 13ರ ದಿನ ಭವಿಷ್ಯ: ಶನಿವಾರದಂದು 12 ರಾಶಿಗಳ ರಾಶಿಫಲ ಹೇಗಿದೆ ಎನ್ನುವುದು ತಿಳಿದುಕೊಳ್ಳಿ. ಈ ದಿನ ಯಾರಿಗೆ ಯೋಗ, ಶುಭ ಸಂಯೋಗ, ಗ್ರಹಗಳ ಸ್ಥಾನ ಬದಲಾವಣೆಗಳಿಂದ ಮೇಷದಿಂದ ಮೀನ ರಾಶಿವರೆಗಿನ ಶನಿವಾರದ ರಾಶಿ ಭವಿಷ್ಯ ಹೇಗಿರಲಿದೆ? ಶುಭಕಾಲ ಹೇಗಿದೆ? ಯಾವ ರಾಶಿಯವರಿಗೆ ಅದೃಷ್ಟ ಕಾದಿದೆ ಎಂಬಿತ್ಯಾದಿ ಮಾಹಿತಿಯನ್ನು ನಿತ್ಯ ಭವಿಷ್ಯದಿಂದ ತಿಳಿಯಿರಿ.
ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ, ಇಂದಿನ (ಮೇ 13) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ಉತ್ತರಾಯಣ, ವಸಂತ ಋತು, ಮೇಷ ಮಾಸ, ಮಹಾನಕ್ಷತ್ರ: ಕೃತ್ತಿಕಾ, ಮಾಸ: ವೈಶಾಖ, ಪಕ್ಷ: ಶುಕ್ಲ, ವಾರ: ಸೋಮ, ತಿಥಿ: ಷಷ್ಠೀ, ನಿತ್ಯನಕ್ಷತ್ರ: ಪುನರ್ವಸು, ಯೋಗ: ಧೃತಿ, ಕರಣ: ಬವ, ಸೂರ್ಯೋದಯ ಬೆಳಗ್ಗೆ 06 ಗಂಟೆ 06 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 51 ನಿಮಿಷಕ್ಕೆ, ರಾಹು ಕಾಲ ಬೆಳಿಗ್ಗೆ 07:42 ರಿಂದ 09:18ರ ವರೆಗೆ, ಯಮಘಂಡ ಕಾಲ ಬೆಳಿಗ್ಗೆ 10:54 ರಿಂದ 12:29ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 02:05 ರಿಂದ 03:40ರ ವರೆಗೆ.
ಮೇಷ ರಾಶಿ: ಮುಂಜಾಗರೂಕರಾಗಿ ಸಂಪತ್ತನ್ನು ಉಳಿತಾಯ ಮಾಡುವುವುದು ಉತ್ಯಮ. ಕೃಷಿಯಲ್ಲಿ ಆಸಕ್ತಿ ಇರುವವರು ಹೊಸ ಬೆಳೆಗಳ ಅನ್ವೇಷಣೆಯಲ್ಲಿ ನಿರತರಾಗುವಿರಿ. ಉದ್ಯೋಗದ ನಿಮಿತ್ತ ದೇಶಾಂತರ ಹೋಗಬೇಕಾಗಿ ಬರಬಹುದು. ಸ್ವಾವಲಂಬಿಯಾಗಿ ಜೀವಿಸುವ ಆಸೆ ನಿಮ್ಮದಾಗಿರುತ್ತದೆ. ಸುಖವನ್ನೂ ಕಷ್ಟವನ್ನೂ ಸಮಾನವಾಗಿ ಸ್ವೀಕರಿಸುವ ಸ್ವಭಾವವನ್ನು ಬೆಳೆಸಿಕೊಳ್ಳುವುದು ಉತ್ತಮ. ಧಾರ್ಮಿಕ ಕಾರ್ಯದಲ್ಲಿ ಹೆಚ್ಚು ತೊಡಗಿಕೊಳ್ಳುವಿರಿ. ನಿಮ್ಮ ನೆಮ್ಮದಿಗೆ ನೀವೇ ಬುನಾದಿ. ಪ್ರಮಾಣಿಕತೆಯನ್ನು ಹಣಕಾಸಿನ ವ್ಯವಹಾರವನ್ನು ಕೊಡಬಹುದು. ನಂಬಿಕೆಯನ್ನು ಗಳಿಸುವುದು ನಿಮಗೆ ಸವಾಲಾಗಬಹುದು. ಉದ್ಯಮಕ್ಕೆ ಸಂಬಂಧಿಸಿದಂತೆ ಹಣದ ಖರ್ಚು ಮಾಡಬೇಕಾದೀತು. ಕಾರ್ಯದಲ್ಲಿ ಉಂಟಾದ ತೊಂದರೆಯನ್ನು ನೀವು ಲೆಕ್ಕಿಸದೇ ಮುನ್ನಡೆಯುವಿರಿ. ಆಭರಣ ಪ್ರಿಯರಿಗೆ ಸಂತೋಷವಾಗುವುದು. ಸಹೋದರರು ನಿಮ್ಮ ಯೋಜನೆಗೆ ಸಹಕರಿಸಬಹುದು.
ವೃಷಭ ರಾಶಿ: ಇಂದು ಸಂಗಾತಿಯ ಮಾತಿನಿಂದ ನಿಮ್ಮ ವರ್ತನೆಯು ಬಬಲಾಗುವುದು. ಕಛೇರಿಯಲ್ಲಿ ಒತ್ತಡವು ಇರುವುದರಿಂದ ಉದ್ಯೋಗವನ್ನು ಬದಲಾಯಿಸುವ ಮನಸ್ಸು ಮಾಡುವಿರಿ. ನಿಮ್ಮ ಬೆಳವಣಿಗೆಯನ್ನು ಕಂಡು ಅಸೂಯೆ ಪಡಬಹುದು. ನಿಮಗೆ ಕಳಂಕವನ್ನು ತರಬಹುದು. ಉದ್ವೇಗಕ್ಕೆ ಒಳಗಾಗದೇ ಕಾರ್ಯಗಳನ್ನು ನಿರ್ವಹಿಸಿ. ಆರೋಗ್ಯವನ್ನು ಹಾಳು ಮಾಡಿಕೊಳ್ಳುವ ಕೆಲಸವನ್ನು ಮಾಡಬೇಡಿ. ಪರಿಚಿತರಂತೆ ಬಂದು ಮೋಸಮಾಡಬಹುದು. ಅಸಭ್ಯ ಮಾತುಗಳನ್ನು ಕಡಿಮೆ ಮಾಡಿ. ನಿಮ್ಮನ್ನು ನೋಡುವ ದೃಷ್ಟಿಕೋನವು ಬದಲಾದೀತು. ನಿಮ್ಮ ಕಾರ್ಯದಲ್ಲಿ ಗುಣಮಟ್ಟ ಕಡಿಮೆ ಆಗಬಹುದು. ಯಾರ ಬೆಂಬಲವನ್ನು ಬಯಸದೇ ಸ್ವತಂತ್ರವಾಗಿ ಕೆಲಸವನ್ನು ಮಾಡುವಿರಿ. ನಿಮ್ಮ ಕಾರ್ಯಕ್ಕೆ ಬೇರೆಯವರನ್ನು ದೂರುವುದು ಬೇಡ. ಮನೆಯಲ್ಲಿ ನಿಮಗೆ ಪೂರಕವಾದ ವಾತಾವರಣವಿದ್ದರೂ ಸಂತೋಷವು ಇರದು.
ಮಿಥುನ ರಾಶಿ: ನೀವು ಅನುಭವಿಸುತ್ತಿರುವ ಕಷ್ಟಗಳು ಇಂದಿಗೆ ಮುಕ್ತಯವಾಗಿ ನಿರಾಳವೆನಿಸಬಹುದು. ಅನಿರೀಕ್ಷಿತವಾಗಿ ಅಮೂಲ್ಯವಾದ ವಸ್ತುವೊಂದು ಸಿಗಲಿದೆ. ನಿಮ್ಮ ಸಹಾಯಕ್ಕೆ ಮಿತ್ರರು ಬರಲಿದ್ದಾರೆ. ಮನೆಗೆ ಸಂಬಂಧಿಸಿದ ಅಲಂಕಾರಿಕ ವಸ್ತುಗಳ ಖರೀದಿಯನ್ನು ಮಾಡಲಿದ್ದೀರಿ. ಜಾಡ್ಯವು ನಿಮ್ಮ ಕೆಲಸಗಳನ್ನು ನಿಧಾನ ಮಾಡಬಹುದು. ಪ್ರಯಾಣ ಮಾಡುವ ಸಂದರ್ಭವಿದ್ದರೆ ಜಾಗರೂಕರಾಗಿ. ವಸ್ತುಗಳು ಕಳ್ಳತನವಾಗುವಬಹುದು. ನಿಶ್ಚಿತ ಕಾರ್ಯವು ನಿಮ್ಮಿಂದ ಆಗದೇ ಹೋಗಬಹುದು. ಆದಾಯದಿಂದ ಸಂತೋಷವಿದ್ದರೂ ಅದನ್ನು ರಕ್ಷಿಸುವ ಹೊಣೆಗಾರಿಕೆಯೂ ಇರುವುದು. ಕೆಲವರಿಂದ ಭೀತಿಯಾಗುವುದು. ಗೊಂದಲವನ್ನು ನೀವು ಮೀರುವುದು ಕಷ್ಟವಾದೀತು. ಶತ್ರುಗಳನ್ನು ಹಿಮ್ಮೆಟ್ಟಿಸುವ ಕಾರ್ಯವು ನಿಮ್ಮ ಕಡೆಯಿಂದ ಆಗುವುದು. ಯಾವುದಾದರೂ ರೀತಿಯಲ್ಲಿ ನೀವು ಆರ್ಥಿಕ ಉಳಿತಾಯವನ್ನು ಮಾಡಬೇಕಾಗುವುದು.
ಕರ್ಕ ರಾಶಿ: ಇಂದು ಆರ್ಥಿಕ ವಿಚಾರಕ್ಕೆ ಸಂಗಾತಿಯ ಜೊತೆ ಕಲಹವಾಗಬಹುದು. ನಿಮ್ಮ ಮೇಲೆ ಉಂಟಾದ ಅಪನಂಬಿಕೆಯನ್ನ ದೂರಮಾಡಿಕೊಳ್ಳಲು ಪ್ರಯತ್ನಿಸುವಿರಿ. ಮಕ್ಕಳಿಂದ ಸಂತೋಷವಾಗಲಿದೆ. ಸರ್ಕಾರಿ ಉದ್ಯೋಗಿಗಳು ಶುಭವಾರ್ತೆ ನಿರೀಕ್ಷೆಯಲ್ಲಿ ಇರಬಹುದು. ಮಾಧ್ಯಮದಲ್ಲಿ ಇರುವವರು ತಮ್ಮ ಕಾರ್ಯದಿಂದ ಪ್ರಶಂಸೆಯನ್ನು ಪಡೆಯುವರು. ಸ್ತ್ರೀಯರಿಗೆ ಸಂಬಂಧಿಸಿದ ಅಪವಾದಗಳು ಬರಬಹುದು. ನೀವು ಹೇಳಿದ ಕೆಲಸವು ಆಗದೇ ಇರುವುದಕ್ಕೆ ಬೇಸರವಾಗುವುದು. ಅಪರಿಚಿತರ ಜೊತೆ ಸಣ್ಣ ಕಾರಣಕ್ಕೆ ಕಲಹವಾಗಲಿದೆ. ಯಾರನ್ನೋ ಆಡಿಕೊಳ್ಳುವುದು ಪ್ರಿಯವಾಗಬಹುದು. ವೇಗದ ನಡಿಗೆಯಿಂದ ಬೀಳುವಿರಿ. ಆರ್ಥಿಕ ನೆರವನ್ನು ನೀಡಿದವರಿಗೆ ಕೃತಜ್ಞತೆಯನ್ನು ಸಲ್ಲಿಸಿ. ಯಾವಿದೇ ವ್ಯವಸ್ಥೆಯಲ್ಲಿ ಮುಂದುವರಿಯಲು ಇಷ್ಟವಾಗದು. ವ್ಯಂಗ್ಯ ಮಾತುಗಳನ್ನು ಆಡಿ ಯಾರಿಂದಲೂ ಏನನ್ನೂ ನಿರೀಕ್ಷಿಸಲಾಗದು. ಸ್ತ್ರೀಯರಿಂದ ನಿಮಗೆ ಬೈಗುಳವು ಸಿಗಬಹುದು.
ಸಿಂಹ ರಾಶಿ: ಇಂದು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿದ್ಯಾರ್ಥಿಗಳು ಯೋಜನೆಯನ್ನು ರೂಪಗೊಳಿಸಲಾಗದು. ಸಾಹಸ ಪ್ರವೃತ್ತಿಯುಳ್ಳವರಿಗೆ ಕಾಡುಗಳನ್ನು ಸುತ್ತುವ ಆಸೆಯಾಗಬಹುದು. ಆಪ್ತರಿಂದ ವಂಚನೆಗೆ ಆಗುವ ಸಂಭವವಿದೆ. ನಿದ್ರಾಹೀನತೆಯಿಂದ ಆಲಸ್ಯ ಉಂಟಾಗಬಹುದು. ದಿನದ ಆರಂಭದಲ್ಲಿರುವ ಅನಾರೋಗ್ಯವು ದಿನಾಂತ್ಯದಲ್ಲಿ ಕಡಿಮೆಯಾಗಲಿದೆ. ತಂದೆಯಿಂದ ವಿದ್ಯಾಭ್ಯಾಸಕ್ಕೆ ಸಂಬಂಧಿಸಿದೆ ಲಾಭವಾಗಲಿದೆ. ನಿಮ್ಮ ಉತ್ಪಾದನೆಯು ಆದಾಯಕ್ಕಿಂತ ನೆಮ್ಮದಿಯನ್ನು ಹೆಚ್ಚು ಕೊಡುವುದು. ಸ್ವಂತ ವಿಚಾರಗಳನ್ನು ಚಿಂತಿಸುವುದು ನಿಮಗೆ ಕಷ್ಟವಾಗುವುದು. ಪ್ರಭಾವಿ ಜನರ ಸಂಸರ್ಗದಿಂದ ಹೊಸ ಆಯಾಮವು ತೆರೆದುಕೊಳ್ಳುವುದು. ಎಲ್ಲರಿಂದ ಪ್ರತ್ಯೇಕವಾಗಿ ಗುರುತಿಸಿಕೊಳ್ಳಲು ಇಷ್ಟಪಡುವಿರಿ. ಯಾರ ಮೇಲೇ ರೇಗದೇ ಇರುವುದು ನಿಮಗೆ ಇಷ್ಟವಾದೀತು. ನಿಮ್ಮದು ಉದ್ದೇಶಪೂರ್ವಕ ಆಡಿದ ಮಾತಾಗಿದ್ದು ಸಮಸ್ಯೆಗಳನ್ನು ಎದುರಿಸಬೇಕಾದೀತು.
ಕನ್ಯಾ ರಾಶಿ: ನಿಮ್ಮ ಅಂತರಂಗವನ್ನು ನೀವೇ ನೋಡಿಕೊಳ್ಳುವುದು ಉತ್ತಮ. ಅನ್ಯರು ಹೇಳಿದರೆ ಸಿಟ್ಟಾಗಬಹುದು. ವಿದ್ಯಾರ್ಥಿಗಳಿಗೆ ಗೊಂದಲವಿರಲಿದೆ. ಹೊಸ ಉದ್ಯೋಗಕ್ಕೆ ಸೇರುವವರಿಗೆ ಅವಕಾಶಗಳು ಸಿಗಲಿವೆ. ಬಂಧುಗಳು ನಿಮ್ಮನ್ನು ಬೇಸರಿಸುವರು. ಧಾರ್ಮಿಕ ಕಾರ್ಯಗಳನ್ನು ಮಾಡುವಿರಿ. ನಿಮ್ಮ ಯೋಜನೆಯಿಂದ ಪ್ರಶಂಸಯು ಬರಲಿದೆ. ಭೂಮಿಯ ವ್ಯವಹಾರದಿಂದ ನಿಮಗೆ ನಷ್ಟವಾಗಲಿದೆ. ಪ್ರಭಾವಿ ವ್ಯಕ್ತಿಗಳ ಸಹಾಯಕರಾಗಿ ಹೋಗುವ ಅವಕಾಶಗಳು ಸಿಗಬಹುದು. ಕೃಷಿಗೆ ಸಂಬಂಧಿಸಿದ ನೂತನ ಅನ್ವೇಷಣೆಯನ್ನು ಮಾಡುವ ಹೊಸ ಆಲೋಚನೆಯನ್ನು ಮಾಡುವಿರಿ. ಮಕ್ಕಳ ಅನಾರೋಗ್ಯದಿಂದ ನೀವು ಆತಂಕಕ್ಕೆ ಒಳಗಾಗುವಿರಿ. ವಿದೇಶೀ ವ್ಯಾಪಾರದಲ್ಲಿ ಅನಿಶ್ಚಿತತೆ ನಿಮ್ಮನ್ನು ಕಾಡಬಹುದು. ಸಾಮಾಜಿಕ ಕಾರ್ಯದಿಂದ ಪ್ರೇರಣೆ ಪಡೆದು ಸಂಸ್ಥೆಯನ್ನು ಆರಂಭಿಸುವಿರಿ. ಗೊತ್ತಿದ್ದರೂ ಗೊತ್ತಿಲ್ಲದಂತೆ ಇರುವಿರಿ. ನಿಮ್ಮ ದುರಾಲೋಚನೆಗೆ ಸ್ನೇಹಿತರು ಅಡ್ಡಿ ಮಾಡುವರು.
ತುಲಾ ರಾಶಿ: ಇಂದು ಕೋಪವನ್ನು ಎಷ್ಟೇ ಕಡಿಮೆ ಮಾಡಬೇಕು ಎಂದರೂ ಒಂದಲ್ಲ ಒಂದು ರೀತಿಯಲ್ಲಿ ಅದು ಬರುತ್ತದೆ. ಪಾಲುದಾರಿಕೆಯಲ್ಲಿ ಉಂಟಾಗುವ ಕಲಹವನ್ನು ಆರಂಭದಲ್ಲಿಯೇ ನಿಲ್ಲಿಸಿ. ಯಾರನ್ನೋ ಮೆಚ್ಚಿಸಲು ಹೋಗಿ ಸಿಕ್ಕಿಹಾಕಿಕೊಳ್ಳಬಹುದು. ತಂದೆಯಿಂದ ನಿಮಗೆ ಧನಸಹಾಯವಾಗಲಿದೆ. ಸಾಮಾಜಿಕ ಕಾರ್ಯಗಳಿಂದ ಸಮ್ಮಾನಗಳು ಸಿಗಲಿವೆ. ಮಾತುಗಳನ್ನು ಅಳೆದು ತೂಗಿ ಆಡುವುದು ಒಳ್ಳೆಯದು. ಸಜ್ಜನರ ಸಹವಾಸ ಇಂದು ನಿಮಗೆ ಸಿಗಲಿದೆ. ಆಪತ್ಕಾಲಕ್ಕೆ ಬೇಕಾದ ಹಣವನ್ನು ತೆಗೆದಿರಿಸುವಿರಿ. ಸ್ತ್ರೀಯರು ಆಭರಣಗಳನ್ನು ಜತನದಿಂದ ಕಾಪಾಡಿಕೊಳ್ಳಿ. ಚರಾಸ್ತಿಯು ಬೇಜವಾಬ್ದಾರಿಯಿಂದ ಅನ್ಯರ ಪಾಲಾಗಬಹುದು. ಅವಶ್ಯಕ ವಸ್ತುಗಳನ್ನು ನೀವು ಕಳೆದುಕೊಳ್ಳುವಿರಿ. ಇನ್ನೊಬ್ಬರನ್ನು ನೋಡಿ ಕಲಿಯುವ ವಿಚಾರವು ಸಾಕಷ್ಟಿರಬಹುದು. ಸಾಲ ಪಡೆದರವರ ಹುಡುಕಾಟವನ್ನು ಮಾಡುವಿರಿ. ಶ್ರಮವಹಿಸಿದಷ್ಟು ಫಲವು ಸಿಗಲಿಲ್ಲ ಎಂಬ ಬೇಸರವಿದ್ದರೂ ತಕ್ಕಮಟ್ಟಿನ ಖುಷಿಯು ಇರಲಿದೆ.
ವೃಶ್ಚಿಕ ರಾಶಿ: ಇಂದು ಮನಸ್ಸಿನಲ್ಲಿಯೇ ಸಂಕಟವನ್ನು ಅನುಭವಿಸುತ್ತ ಕಳೆಯುವಿರಿ. ನೂತನ ವಸ್ತುಗಳನ್ನು ಖರೀದಿ ಮಾಡಲಿದ್ದೀರಿ. ಯಂತ್ರಗಳಿಂದ ನಿಮಗೆ ನೋವಾಗುವ ಸಾಧ್ಯತೆ ಇದೆ. ದೂರದ ಪ್ರದೇಶಗಳಿಗೆ ಹೋಗಿ ನಿರಾಸೆ ಆಗಬಹುದು. ಮಿತ್ರರ ಜೊತೆ ಕಲಹವನ್ನು ಮಾಡಿಕೊಳ್ಳುವಿರಿ. ಸಣ್ಣ ವಿಚಾರಗಳನ್ನು ದೊಡ್ಡ ಮಾಡಿಕೊಳ್ಳುವಿರಿ. ಉದ್ಯೋಗದಲ್ಲಿ ಹೆಚ್ಚಿನ ಸ್ಥಾನವನ್ನು ಪಡೆಯಲು ಅವಕಾಶವಿದೆ. ನಿಮ್ಮ ಸಂಗಾತಿಯ ಮೇಲೆ ಕಛೇರಿಯಲ್ಲಿ ಆದ ವೈಮನಸ್ಯದಿಂದ ಮುನಿಸಿಕೊಳ್ಳಬಹುದು. ಹೂಡಿಕೆಯ ವಿಚಾರದಲ್ಲಿ ನಿಮಗೆ ಬೇಕಾದ ಮಾಹಿತಿಯನ್ನು ಪಡೆದುಕೊಳ್ಳಿ. ಪ್ರತಿಫಲದ ನಿರೀಕ್ಷೆ ಇಲ್ಲದೇ ನೀವು ಸ್ನೇಹಿತನಿಗೆ ಸಹಾಯವನ್ನು ಮಾಡುವಿರಿ. ನಿರ್ದಿಷ್ಟ ಕ್ರಮವನ್ನು ಅಳವಡಿಸಿಕೊಂಡು ಉದ್ಯಮವನ್ನು ಕ್ರಮಬದ್ಧವಾಗಿಸಿ. ಆರೋಗ್ಯದ ಸಮಸ್ಯೆಯಿರುವ ಕಾರಣ ಸಹೋದ್ಯೋಗಿಗಳ ಸಹಕಾರವು ನಿಮಗೆ ಸಿಗಲಿದೆ. ಮಾತಿನಿಂದ ಇನ್ನೊಬ್ಬರು ನಿಮ್ಮನ್ನು ದ್ವೇಷಿಸುವರು.
ಧನು ರಾಶಿ: ಇಂದು ಗೌರವಕ್ಕೆ ಧಕ್ಕೆ ಬರುವುದು. ಅದನ್ನು ಮರೆಯುವುದು ಮುಂದುವರಿಸುವುದು ನಿಮಗೆ ಬಿಟ್ಟಿದ್ದು. ಹಿಂದುಳಿದ ಕಾರ್ಯಗಳು ಪ್ರಗತಿಯನ್ನು ಕಾಣುವುವು. ಲಾಭವನ್ನು ಪಡೆಯಲು ನೂತನ ಯೋಜನೆಯನ್ನು ಮಾಡುವಿರಿ. ಮಕ್ಕಳ ಕಾರ್ಯಕ್ಕೆ ನೀವು ಓಡಾಡಬೇಕಾಗಿ ಬರಬಹುದು. ನಿಮ್ಮ ಕಾರ್ಯವೇ ನಿಮಗೆ ಮುಳುವಾಗುವುದು. ಉದ್ಯೋಗದಲ್ಲಿ ಉಂಟಾದ ಗೊಂದಲದಿಂದ ನಿಮಗೆ ಆತಂಕವಸದೀತು. ನಿಮ್ಮ ಭಾವನೆಗಳಿಗೆ ಧಕ್ಕೆ ಉಂಟಾಗುವ ಸನ್ನಿವೇಶಗಳು ನಡೆಯಲಿವೆ. ಅಲ್ಪ ಧನವನ್ನು ಕಳೆದುಕೊಳ್ಳುವಿರಿ. ಮಕ್ಕಳ ಶ್ರಮದಿಂದ ಪಾಲಕರಿಗೆ ನೆಮ್ಮದಿ ಇರಲಿದೆ. ವಿದ್ಯಾರ್ಥಿಗಳಿಗೆ ಬೆಂಬಲದ ಕೊರತೆ ಇರುವುದು. ಹಿರಿಯರ ಆರೋಗ್ಯದಲ್ಲಿ ವ್ಯತ್ಯಸಾವಾಗಿದ್ದು ತುರ್ತು ಚಿಕಿತ್ಸೆಯ ಅವಶ್ಯಕತೆ ಬೇಕಾಗಬಹುದು. ಹಲವು ದಿನಗಳ ನಿಮ್ಮ ಋಣವು ಮುಕ್ತಾಯವಾಗಿದ್ದು ಸಂತಸವಿರುವುದು.
ಮಕರ ರಾಶಿ: ಇಂದು ನಿಮ್ಮ ದಾಂಪತ್ಯಜೀವನವು ಇಂದು ಸುಖದಿಂದ ಇರಲಿದೆ. ದಾಂಪತ್ಯದಲ್ಲಿ ಪ್ರೇಮಸಲ್ಲಪವು ಎಂದಿಗಿಂತ ಜೋರಾಗಿ ಇರಲಿದೆ. ನಿಮ್ಮ ನಡುವೆ ಪರಸ್ಪರ ಕಾಳಜಿಯು ಗೊತ್ತಾಗುವ ಸಾಧ್ಯತೆ ಇದೆ. ದೈವವನ್ನು ನಂಬುವ ನೀವು ಹೆಚ್ಚು ಕಾಲದ ದೈವಸ್ಮರಣೆಯಲ್ಲಿ ಇರುವುದು ಒಳ್ಳೆಯದು. ಅಧಿಕ ಧನಹಾನಿಯಾಗುವ ಸ್ಥಿತಿ ಎದುರಾಗಬಹುದು. ಸ್ವಲ್ಪ ಎಚ್ಚದಿಂದ ಇರಿ. ಮಿತ್ರರು ನಿಮ್ಮ ಗುಟ್ಟನ್ನು ಬಿಚ್ಚಿಟ್ಟಾರು. ಸಾಲವನ್ನು ನೀಡಿದವರು ನಿಮಗೆ ಪೀಡಿಸುವರು. ಎಲ್ಲವನ್ನೂ ತುಲನೆ ಮಾಡಿ ನೋಡುವ ಅವಶ್ಯಕತೆ ಇಲ್ಲ. ಶಿಕ್ಷಕವೃತ್ತಿಯವರು ಉನ್ನತ ಸ್ಥಾನದ ನಿರೀಕ್ಷೆಯಲ್ಲಿ ಇರುವರು. ಖಾಸಗಿ ಸಂಸ್ಥೆಯ ಹುದ್ದೆಯನ್ನು ನೀವು ಪಡೆಯಲಿದ್ದೀರಿ. ಇಂದು ನಿಮ್ಮ ನೇತೃತ್ವದಲ್ಲಿ ಕೆಲವು ಕಾರ್ಯಗಳು ನಡೆಯುವುದು. ವಿದ್ಯಾರ್ಥಿಗಳು ಪ್ರತಿಕ್ಷಣವನ್ನು ಸದುಪಯೋಗ ಮಾಡಿಕೊಳ್ಳುವ ಬಗ್ಗೆ ಯೋಚಿಸುವುದು ಉತ್ತಮ. ಒಗ್ಗಟ್ಟಿನಿಂದ ಕಾರ್ಯವನ್ನು ಸಾಧಿಸುವುದು ಅಗತ್ಯವೂ ಹೌದು.
ಕುಂಭ ರಾಶಿ: ಇಂದು ಬಹಳ ದಿನದಿಂದ ಕಾಡುತ್ತಿದ್ದ ಚಿಂತೆಯು ದೂರಾಗುವುದು. ಪ್ರಯತ್ನವಿಲ್ಲದೇ ಯಾವುದೂ ಸಾಧ್ಯವಾಗದು ಎನ್ನುವ ಮಾತನ್ನು ಮನನ ಮಾಡಿಕೊಳ್ಳಿ. ಕಛೇರಿಯ ಒತ್ತಡಗಳಿಗೆ ಸಿಲುಕದೆ ಜಾಗರೂಕತೆಯಿಂದ ಕೆಲಸ ಮಾಡಿ. ಪಾಲುದಾರರ ಬಗ್ಗೆ ಗಮನವಿರಲಿ. ಕೂಲಂಕಷವಾದ ವಿಚಾರದ ಜೊತೆ ಮುಂದುವರಿಯಿರಿ. ಅವಕಾಶಗನ್ನು ಯಾರಿಗೂ ಬಿಟ್ಟುಕೊಡದೇ ನೀವೇ ಅನುಭವಿಸಿ. ಕುಟುಂಬದವರ ಜೊತೆ ಇಂದು ಕಾಲವನ್ನು ಕಳೆಯಿರಿ. ಸಂಗಾತಿಯಿಂದ ಅನಿರೀಕ್ಷಿತ ಸಮಾಚಾರ ಬರಲಿದೆ. ನಿಮ್ಮ ವ್ಯಾಪಾರಕ್ಕೆ ವಿದೇಶದ ಸಂಪರ್ಕವು ಬರಬಹುದು. ಮನೆಯಲ್ಲಿ ನಡೆದು ಶುಭಕಾರ್ಯದ ತಯಾರಿಯಲ್ಲಿ ನೀವು ಇರುವಿರಿ. ಆಸ್ತಿಯ ವಿಚಾರದಲ್ಲಿ ನಿಮ್ಮ ನಿಲುವಿಗೆ ಅಪಜಯವಾಗಬಹುದು. ಭೂಮಿಯನ್ನು ಕಳೆದುಕೊಳ್ಳುವ ಸಂದರ್ಭ ಬರುವುದು. ಇಂದು ನೀವು ಸಂಗಾತಿಯ ಮಾತನ್ನೇ ಹೆಚ್ಚು ಕೇಳಬೇಕಾದೀತು. ಬಂಧುಗಳ ಒಡನಾಟವು ಹಿತವೆನಿಸುವುದು. ಸಮಯವು ಎಷ್ಟೇ ಇದ್ದರೂ ಕೆಲಸವನ್ನು ಮಾಡುವ ಮನಸ್ಸು ಇರದು.
ಮೀನ ರಾಶಿ: ಇಂದು ಅನ್ಯ ಮಾರ್ಗದಿಂದ ಹಣ ಸಂಪಾದನೆಯನ್ನು ಮಾಡಲು ತೊಡಗುವಿರಿ. ಅಂದುಕೊಂಡ ಕೆಲಸಗಳು ಸುಗಮವಾಗಿ ಸಾಗಲಿದೆ. ದೂರದ ಊರಿಗೆ ಕಾರ್ಯದ ಕಾರಣ ಪ್ರಯಾಣ ಮಾಡುವ ಸಂಭವವಿದೆ. ಉದ್ಯೋಗವನ್ನು ಕರಗತ ಮಾಡಿಕೊಂಡು ಲೀಲಾಜಾಲವಾಗಿ ಮಾಡಿ ಮುಗಿಸುವಿರಿ. ನಿಮ್ಮ ಕೆಲಸಕ್ಕೆ ಪ್ರಶಂಸೆಯೂ ಸಿಗಲಿದೆ. ಮಕ್ಕಳು ನಿಮಗೆ ಶುಭವಾರ್ತೆಯನ್ನು ಕೇಳಿಸುವರು. ದಾಂಪತ್ಯದ ಸುಖಜೀವನವು ಅನುಭವಕ್ಕೆ ಬರಲಿದೆ. ಆಭರಣ ಮಾರಾಟಗಾರು ಲಾಭವನ್ನು ಗಳಿಸಬಹುದು. ಇಂದಿನ ಬಹುಪಾಲು ಸಮಯವನ್ನು ಬೇರೆ ಯಾವುದೋ ಚಿಂತನೆಯಲ್ಲಿ ಕಳೆಯುವಿರಿ. ಕಲಾವಿದರಿಗೆ ಅವಕಾಶದ ದೊಡ್ಡ ಬಾಗಿಲು ತೆರೆದುಕೊಳ್ಳಬಹುದು. ಎದುರಿಸಬಹುದಾದ ಸಮಸ್ಯೆಗೆ ಧೈರ್ಯದಿಂದ ಮುನ್ನುಗ್ಗಿ ಸರಿ ಮಾಡಿಕೊಳ್ಳಿ. ಇಂದು ನಿಮಗೆ ಕೆಲಸವು ಆಗಬೇಕಾಗಿದ್ದು ಪ್ರಯಾಣವು ಅನಿವಾರ್ಯವಾಗುವುದು.
ಲೋಹಿತ ಹೆಬ್ಬಾರ್ – 8762924271 (what’s app only)
Published On - 8:02 pm, Sun, 12 May 24