
ಮದುವೆಗಾಗಿ ಪ್ರಯತ್ನ ಮಾಡುತ್ತಾ ಇರುವವರು, ಅಥವಾ ಪ್ರಯತ್ನ ಮಾಡುವಾಗ ನಾನಾ ಕಾರಣಗಳಿಗೆ ಅಡೆತಡೆಗಳನ್ನು ಎದುರಿಸುತ್ತಾ ಇರುವವರು ಸ್ವಯಂವರ ಪಾರ್ವತಿ ಮಂತ್ರವನ್ನು ಹನ್ನೊಂದು ಬಾರಿ ಪಠಣ ಮಾಡಿ ಅಥವಾ ಶ್ರವಣ ಮಾಡಿ. ದಂಪತಿ ಅಥವಾ ಪ್ರೇಮಿಗಳ ಮಧ್ಯೆ ವಿರಸ ಏರ್ಪಟ್ಟಿದ್ದಲ್ಲಿ ಈ ದಿನ ಶಿರಡಿ ಸಾಯಿಬಾಬ ಮಂದಿರಕ್ಕೆ ತೆರಳಿ ದರ್ಶನ ಪಡೆಯಿರಿ.
ಈ ದಿನ ನೀವು ನಿರೀಕ್ಷೆಯೇ ಮಾಡದ ರೀತಿಯಲ್ಲಿ ವೃತ್ತಿಜೀವನದಲ್ಲಿ ತಿರುವು ಬರುವ ಸಾಧ್ಯತೆ ಇದೆ. ಮನೆಗೆ ಸಂಬಂಧಿಸಿದಂತೆ ಬಾಕಿ ಕೆಲಸಗಳನ್ನು ಪೂರ್ಣ ಮಾಡುವುದಕ್ಕೆ ಇದು ಉತ್ತಮ ದಿನ ಆಗಿರುತ್ತದೆ. ಸಮಾರಂಭ- ಗೆಟ್ ಟು ಗೆದರ್ ಗಳಿಗೆ ಸಂಬಂಧಿಕರಿಂದ ಆಹ್ವಾನ ಬರಬಹುದು. ಹಣಕಾಸಿನ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಜಾಗ್ರತೆ ಅವಶ್ಯ.
ಹೊಸ ಸಾಲ ತೆಗೆದುಕೊಳ್ಳುವ ನಿರ್ಧಾರ ಸಾಧ್ಯವಾದಷ್ಟೂ ಮಟ್ಟಿಗೆ ಬೇಡ. ಅನಿರೀಕ್ಷಿತವಾಗಿ ವಾಹನದ ರಿಪೇರಿ ಅಥವಾ ಗೃಹೋಪಯೋಗಿ ವಸ್ತುಗಳ ಖರೀದಿಗಾಗಿ ಖರ್ಚು ಬರಬಹುದು. ಪ್ರೀತಿಯಲ್ಲಿ ಇರುವವರಿಗೆ ಜತೆಯಾಗಿ ಸಮಯ ಕಳೆಯುವಂಥ ಯೋಗ ಇದ್ದು, ಭವಿಷ್ಯದಲ್ಲಿನ ಯೋಜನೆಗಳ ಬಗ್ಗೆ ತುಂಬ ಗಹನವಾದ ಚರ್ಚೆಯನ್ನು ಮಾಡಲಿದ್ದೀರಿ. ಅದು ಆತ್ಮೀಯವಾದ ಸಂಭಾಷಣೆ ಆಗಲಿದೆ.
ನಿಮಗೆ ಬಹಳ ದಿನಗಳಿಂದ ಬಾಕಿ ಉಳಿದುಹೋಗಿದ್ದ ಮಾಹಿತಿ ಅಥವಾ ಹಣ ನಿಮ್ಮ ಕಡೆ ಬರುತ್ತದೆ. ಉದ್ಯೋಗ ಸ್ಥಳದಲ್ಲಿ ನಿಮ್ಮ ಆಲೋಚನೆಗೆ ಮಹತ್ವ ಸಿಗುತ್ತದೆ. ಮನೆ ಬದಲಾವಣೆ ಮಾಡಬೇಕು ಎಂದಿರುವವರು ಅಥವಾ ಮನೆಯ ಜಾಗಕ್ಕೆ ಸಂಬಂಧಿಸಿದ ವಿಚಾರಗಳ ಬಗ್ಗೆ ಆಲೋಚನೆ ಮಾಡುತ್ತಾ ಇರುವವರಿಗೆ ಮನಸ್ಸಿಗೆ ಸಮಾಧಾನ ಆಗುವಂಥ ಬೆಳವಣಿಗೆ ಆಗಲಿದೆ.
ಲೇಖನ- ಸ್ವಾತಿ ಎನ್.ಕೆ.