ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ಶರದ್ ಋತು, ಕನ್ಯಾ ಮಾಸ, ಮಹಾನಕ್ಷತ್ರ: ಹಸ್ತಾ, ಮಾಸ: ಆಶ್ವಯುಜ, ಪಕ್ಷ: ಶುಕ್ಲ, ವಾರ: ಮಂಗಳ, ತಿಥಿ: ಸಪ್ತಮೀ, ನಿತ್ಯನಕ್ಷತ್ರ: ಜ್ಯೇಷ್ಠಾ, ಯೋಗ: ಸೌಭಾಗ್ಯ, ಕರಣ: ಬಾಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 24 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 15 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 03:18 ರಿಂದ 04:47, ಯಮಘಂಡ ಕಾಲ ಬೆಳಗ್ಗೆ 09:22ರಿಂದ 10:51ರವರೆಗೆ, ಗುಳಿಕ ಕಾಲ ಮಧ್ಯಾಹ್ನ 12:20 ರಿಂದ 01:49 ರವರೆಗೆ.
ಸಿಂಹ ರಾಶಿ: ದೈನಂದಿನ ಬಳಕೆಗೆ ಬೇಕಾದ ವಸ್ತುಗಳನ್ನು ಮಾರಾಟ ಮಾಡುವವರ ಆದಾಯದಲ್ಲಿ ಅಧಿಕಲಾಭವು ಆಗುವುದು. ಸಂಬಂಧಗಳನ್ನು ನಿರ್ವಹಿಸುವುದು ಕಷ್ಟವಾದೀತು. ನಿಮಗೆ ಸ್ನೇಹಿತರಿಂದ ಧನಸಹಾಯವು ಸಿಗಲಿದೆ. ಶತ್ರುಗಳು ನಿಮ್ಮ ಏಳ್ಗೆಯನ್ನು ಸಹಿಸಲು ಕಷ್ಟವಾದೀತು. ಅದಕ್ಕೆ ಏನಾದರೂ ತೊಂದರೆಯಾದೀತು. ಪ್ರಯಾಣಕ್ಕೆ ಇಂದು ಅನುಕೂಲವಿಲ್ಲ. ಕೆಲಸಗಳನ್ನು ಮಾಡಿಕೊಳ್ಳಲು ನಿಮಗೆ ಹಣವನ್ನು ನೀಡಬೇಕಾದೀತು. ಸ್ತ್ರೀಯರ ಸಹಾಯವನ್ನು ಪಡೆದು ನೀವು ಕಛೇರಿಯ ಕೆಲಸವನ್ನು ಮುಗಿಸುವಿರಿ. ನಿದ್ರೆಯ ವ್ಯತ್ಯಾಸದಿಂದ ನಿಮಗೆ ಕಿರಿಕಿರಿ ಆಗಬಹುದು. ಹೊಸ ಜವಾಬ್ದಾರಿಗಳನ್ನು ಪಡೆಯಲು ನೀವು ಬಹಳ ಉತ್ಸುಕರಾಗಿ ಇರುವಿರಿ. ಹಳೆಯ ಜವಾಬ್ದಾರಿಯನ್ನು ಪುನಃ ವಹಿಸಿಕೊಳ್ಳಬೇಕಾಗುವುದು. ಪುಣ್ಯಕ್ಷೇತ್ರಕ್ಕೆ ನೀವು ಬಂಧುಗಳ ಜೊತೆಗೆ ಹೋಗುವಿರಿ. ವ್ಯವಹಾರದಲ್ಲಿ ನೀವು ತೆಗೆದುಕೊಳ್ಳುವ ತ್ವರಿತ ನಿರ್ಧಾರಗಳು ಸಕಾರಾತ್ಮಕವಾಗಿರುತ್ತವೆ. ಕಳೆದ ಸಮಯವನ್ನು ಚಿಂತಿಸುವಿರಿ. ಗೃಹನಿರ್ಮಾಣ ಚರ್ಚೆಯನ್ನು ಮಾಡಬಹುದು.
ಕನ್ಯಾ ರಾಶಿ: ಮಕ್ಕಳನ್ನು ಒಳ್ಳೆಯ ಅಭ್ಯಾಸಕ್ಕೆ ತೊಡಗಿಸುವ ಯೋಚನೆ ಬರುವುದು. ಒಳಗೊಂದು ಹೊರಗೊಂದು ಸ್ವಭಾವವನ್ನು ತೋರಿಸುವುದು ಬೇಡ. ಮಕ್ಕಳ ಪ್ರಗತಿಯನ್ನು ನೀವು ನಿರೀಕ್ಷಿಸಿದ್ದು ಇಂದು ಸಾಫಲ್ಯದಂತೆ ಇರುವುದು. ಅತಿಯಾದ ವಿಶ್ವಾಸದಿಂದ ನಿಮಗೆ ವಂಚನೆಯಾಗಲಿದೆ. ನಿಮಗೂ ಸರ್ಕಾರದ ನಡುವೆಯೂ ವಿವಾದಗಳು ನಡೆಯಬಹುದು. ಯಾರಾದರೂ ನಿಮ್ಮ ಮೇಲೆ ಹಕ್ಕು ಚಲಾಯಿಸಬಹುದು. ಅದೃಷ್ಟವನ್ನು ನಂಬಿ ನಿಮ್ಮ ಪ್ರಯತ್ನವು ಇಲ್ಲದೆಯೂ ಇರಬಹುದು. ಉದ್ಯೋಗದ ಕಾರಣದಿಂದ ನೀವು ದೂರ ಪ್ರಯಾಣವನ್ನು ಮಾಡಬೇಕಾಗಬಹುದು. ದಾಂಪತ್ಯದಲ್ಲಿ ನಡೆಯುತ್ತಿರುವ ಶೀತಲಸಮರವು ಸ್ಫೋಟವಾಗಬಹುದು. ಮಕ್ಕಳಿಗೆ ಬೇಕಾದ ತಿಳಿವಳಿಕೆಯನ್ನು ಕೊಡಲಿದ್ದೀರಿ. ದೇಹದಂಡನೆಯಿಂದ ಆರೋಗ್ಯವನ್ನು ಹಾಳುಮಾಡಿಕೊಳ್ಳುವಿರಿ. ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣಗಳು ಹೆಚ್ಚು ಸಮಯ ಕಳೆಯಬಹುದು. ಅಧ್ಯಯನವನ್ನು ನಿರ್ಲಕ್ಷಿಸಬಹುದು. ಮನಶ್ಚಾಂಚಲ್ಯವನ್ನು ಮೀರಲಸಗದು.
ತುಲಾ ರಾಶಿ: ನಿಮ್ಮ ಮನಸ್ಸು ಹಲವು ದ್ವಂದ್ವಗಳಿಂದ ಏಕಾಂತದಲ್ಲಿ ಇರುವ ಮನಸ್ಸಾಗುವುದು. ಅನುಭವಿಗಳ ಮುಂದೆ ಮೌನವಾಗಿರುವುದು ಲೇಸು. ಆರ್ಥಿಕವಾದ ಸಮಾನರಲ್ಲಿ ನಿಮ್ಮ ಸಖ್ಯವು ಇರಲಿದೆ. ನಿರಂತರ ಕಾರ್ಯದಿಂದ ನಿಮಗೆ ಫಲವು ಲಭ್ಯವಾಗುವುದು. ಮಕ್ಕಳ ನಡುವಿನ ಕಲಹವನ್ನು ಪರಿಹರಿಸಲು ನೀವು ಮಧ್ಯಪ್ರವೇಶ ಮಾಡುವಿರಿ. ದಾಂಪತ್ಯದಲ್ಲಿ ಬಿರಕು ಬಂದು ಮನೆಯಿಂದ ದೂರ ಇರುವಿರಿ. ಇಂದು ಸುಮ್ಮನೇ ಸುತ್ತಾಡುವ ಮನಸ್ಸಾಗುವುದು. ದೈವದ ಬಗ್ಗೆ ಭಕ್ತಿಯ ಕೊರತೆ ಇರಲಿದೆ. ಸಂಬಂಧವನ್ನು ಉಳಿಸಿಕೊಳ್ಳಲು ಸಮಯವನ್ನೂ ಕೊಡಬೇಕಾದೀತು. ಸ್ವ ಉದ್ಯೋಗವನ್ನು ನಡೆಸುತ್ತಿದ್ದರೆ, ಕೆಲಸದಿಂದ ಬಿಡುವಿರಿ. ನಿಮಗೆ ಕಾರ್ಯದಿಂದ ಪಾಪಪ್ರಜ್ಞೆಯು ಕಾಡಬಹುದು. ಮನಸ್ಸನ್ನು ನಿರ್ಲಿಪ್ತಗೊಳಿಸಲು ಪ್ರಯತ್ನಿಸುವಿರಿ. ಯಾವ ಸಂದರ್ಭದಲ್ಲಿಯೂ ನೀವು ನಿಮ್ಮ ಮಾರ್ಗವನ್ನು ಬಿಟ್ಟುಹೋಗಲಾರಿರಿ. ಬಂಧುಗಳ ವಿಚಾರದಲ್ಲಿ ಅಸಮಾಧಾನವು ಇರುವುದು. ನಿಮಗೆ ಎದುರಾಗುವ ಸಂಕಟಗಳ ಬಗ್ಗೆ ಗಮನವಿರಲಿ. ಸೌಹಾರ್ದತೆಯ ಚರ್ಚೆಯಿಂದ ಒಳ್ಳೆಯದಾಗುವುದು. ವೈಯಕ್ತಿಕ ಸಮಸ್ಯೆಗಳನ್ನು ವ್ಯವಹಾರಕ್ಕೆ ತಂದುಕೊಳ್ಳುವುದು ಬೇಡ.
ವೃಶ್ಚಿಕ ರಾಶಿ: ಭೂಮಿಯ ಖರೀದಯಲ್ಲಿ ವಂಚನೆ ಆಗಬಹುದು. ಇಂದು ನಿಮ್ಮ ಬಗ್ಗೆ ಕಪೋಲಕಲ್ಪಿತ ಸುದ್ದಿಗಳು ಹರಡಬಹುದು. ನಿಮ್ಮನ್ನು ಸ್ಥಾನದಿಂದ ಕೆಳಗೆ ದೂಡಲು ನೋಡಬಹುದು. ಸಿಟ್ಟಿಗೆ ಕಾರಣವಿಲ್ಲದಿದ್ದರೂ ಸಿಟ್ಟಾಗುವಿರಿ. ಮೇಲಧಿಕಾರಿಗಳ ಬೆಂಬಲವು ನಿಮಗೆ ಸಿಕ್ಕರೂ ಸಹೋದ್ಯೋಗಿಗಳಿಂದ ಕಿರಿಕಿರಿ ಆಗಬಹುದು. ಯಂತ್ರೋಪಕರಣದ ಬಳಕೆಯನ್ನು ಹೆಚ್ಚು ಮಾಡುಬಿರಿ. ನಿಮಗೆ ಸೌಲಭ್ಯಗಳು ಸಿಗಲಿದೆ. ಚೋರಭೀತಿಯು ನಿಮಗೆ ಕಾಡಬಹುದು. ನೀವು ಕೆಲವು ಸಮಸ್ಯೆಯನ್ನು ಅನಿರೀಕ್ಷಿತವಾಗಿ ಎದುರಿಸಬೇಕಾಗುವುದು. ನಿಮ್ಮ ದಾಖಲೆಗಳನ್ನು ಸರಿಯಾಗಿ ಇಟ್ಟಕೊಳ್ಳಬೇಕಾಗುವುದು. ಸಣ್ಣ ವಿಚಾರವೂ ನಿಮಗೆ ದೊಡ್ಡದಾಗಲಿದೆ. ನಿಮ್ಮ ಬಗ್ಗೆ ಕುಟುಂಬದಿಂದ ಸಮಾಧಾನವು ಇರಲಿದೆ. ಇಷ್ಟದವರ ಭೇಟಿಯಾಗುವುದು ನಿಮಗೆ ಸಂತೋಷವನ್ನು ಕೊಡಲಿದೆ. ಯಾರ ಬೆಂಬಲವೂ ಇಲ್ಲದ ಕಾರ್ಯವನ್ನು ಮಾಡುವುದು ಬೇಡ. ಪ್ರೇಮ ಸಂಬಂಧದ ಕೋಪದಿಂದ ನೀವು ಭಾವನಾತ್ಮಕ ದೂರವಾಗುವಿರಿ. ಸ್ವಂತ ವಾಹನದಲ್ಲಿ ಪ್ರಯಾಣವನ್ನು ಸಂತೋಷದಿಂದ ಮಾಡುವಿರಿ.