AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Daily Horoscope: ಈ ರಾಶಿಯವರ ವೃತ್ತಿಜೀವನವು ಇಂದು ಹೊಸ ದಿಕ್ಕಿನತ್ತ ಹೊರಳಬಹುದು

ನೀವು ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಅಕ್ಟೋಬರ್​ 07: ನೀವು ಉದ್ಯೋಗವನ್ನು ಇನ್ನು ಮುಂದೆ ಗಂಭೀರವಾಗಿ ಸ್ವೀಕರಿಸುವಿರಿ‌. ಇಂದಿನ ವಿವಾದಗಳು ನಿಮ್ಮ ಮನಸ್ಸನ್ನು ಕೆಡಿಸಬಹುದು.‌ ಅತಿಯಾದ ನಂಬಿಕೆಯಿಂದ ಕೆಲವು ಅಮೂಲ್ಯವಾದ ವಸ್ತುಗಳನ್ನು ಕಳೆದುಕೊಳ್ಳುವಿರಿ. ಹಾಗಾದರೆ ಅಕ್ಟೋಬರ್​ 07ರ ದಿನ ಭವಿಷ್ಯ ಮತ್ತು ಪಂಚಾಂಗ ಇಲ್ಲಿದೆ ನೋಡಿ.

Daily Horoscope: ಈ ರಾಶಿಯವರ ವೃತ್ತಿಜೀವನವು ಇಂದು ಹೊಸ ದಿಕ್ಕಿನತ್ತ ಹೊರಳಬಹುದು
ರಾಶಿಭವಿಷ್ಯ
ಲೋಹಿತ ಹೆಬ್ಬಾರ್​, ಇಡುವಾಣಿ
| Edited By: |

Updated on: Oct 07, 2024 | 12:20 AM

Share

ಐದನೇ ದಿನದ ನವರಾತ್ರದ ದಿನ ಸ್ಕಂದಮಾತಾ ದೇವಿಯನ್ನು ಪೂಜಿಸಲಾಗುವುದು. ಸುಬ್ರಹ್ಮಣ್ಯನ ಜನನಕ್ಕೆ ಕಾರಣವಾದ ದೇವಿಯು ಈಕೆ. ಸಿಂಹಾಸನವನ್ನು ಏರಿ ಶಾಂತಸ್ಥಿತಿಯಲ್ಲಿ ಇದ್ದು, ಕೈಗಳಲ್ಲಿ ಕಮಲವನ್ನು ಧರಿಸಿದ್ದಾಳೆ. ಸ್ಕಂದನನ್ನು ತೊಡೆಯ ಮೇಲೆ ಕುಳ್ಳಿರಿಸಿಕೊಂಡಿದ್ದಾಳೆ. ಹಾಗೆಯೇ ಇಂದು ಕಾತ್ಯಾಯಿನಿಯನ್ನು ಆರಾಧಿಸುವ ದಿನ. ಖಡ್ಗ ಹಾಗೂ ಕಮಲವನ್ನು ಕೈಯಲ್ಲಿ ಧರಿಸಿದ ಮಾತೆ ಇವಳು. ಶತ್ರು ಸಂಹಾರವನ್ನು ಮಾಡಿ ಪ್ರಶಾಂತಚಿತ್ತಳಾಗಿ ಇದ್ದಾಳೆ. ಇವರ ಆರಾಧನೆಯಿಂದ ಸಂಪತ್ತುಗಳು ಸಿಗುತ್ತವೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ಶರದ್ ಋತು, ಕನ್ಯಾ ಮಾಸ, ಮಹಾನಕ್ಷತ್ರ: ಹಸ್ತಾ, ಮಾಸ: ಆಶ್ವಯುಜ, ಪಕ್ಷ: ಶುಕ್ಲ, ವಾರ: ಸೋಮ, ತಿಥಿ: ಪಂಚಮೀ / ಷಷ್ಠೀ, ನಿತ್ಯನಕ್ಷತ್ರ: ಅನೂರಾಧಾ, ಯೋಗ: ಆಯುಷ್ಮಾನ್, ಕರಣ: ಭದ್ರ, ಸೂರ್ಯೋದಯ ಬೆಳಗ್ಗೆ 06 ಗಂಟೆ 23 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 16 ನಿಮಿಷಕ್ಕೆ, ರಾಹು ಕಾಲ ಬೆಳಿಗ್ಗೆ 07:53 ರಿಂದ 09:22, ಯಮಘಂಡ ಕಾಲ ಬೆಳಿಗ್ಗೆ 10:51ರಿಂದ 12:20ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 01:49 ರಿಂದ 03:18 ರವರೆಗೆ.

ಸಿಂಹ ರಾಶಿ : ಅಪರಿಚಿತರ ಜೊತೆ ವಿವಾದವನ್ನು ಮಾಡುವಿರಿ. ಅವಿವಾಹಿತರಿಗೆ ವಿವಾಹದ ಚಿಂತೆ ಹೆಚ್ಚಾಗುವುದು. ಇಂದು ನೀವು ಪಿತ್ರಾರ್ಜಿತ ಆಸ್ತಿಯ ಬಗ್ಗೆ ಆಸಕ್ತಿ ಹೊಂದುವಿರಿ.‌ ದ್ವೇಷವನ್ನು ದೀರ್ಘಕಾಲದವರೆಗೆ ಮುಂದೂಡುವ ಅವಶ್ಯಕತೆ ಇರದು. ಇಂದು ಬಹು ದಿನಗಳ ಚಿಂತಿತ ಕಾರ್ಯವು ಸಫಲವಾಗುವುದು. ಮನೆಗೆ ಬೇಕಾದ ವಸ್ತುಗಳನ್ನು ಖರೀದಿಸಿದರೂ ವಿರೋಧ ಬರುವ ಸಾಧ್ಯತೆ ಇದೆ. ನೂತನ ವಸ್ತುಗಳ ಖರೀದಿಯನ್ನು ಬಹಳ ಸಂತೋಷದಿಂದ ಮಾಡುವಿರಿ. ನಿಮ್ಮ ಕೆಲಸವನ್ನು ವಿವಾದ ಮಾಡಿಕೊಳ್ಳದೇ ಮಾಡಿಕೊಳ್ಳಿ. ಎಲ್ಲ ಸಮಯದಲ್ಲಿಯೂ ವಾತಾವರಣವು ನಿಮ್ಮ ಪರವಾಗಿಯೇ ಇರುತ್ತದೆ ಎಂಬುದನ್ನು ಮರೆತುಬಿಡಿ. ಅಧಿಕಾರವನ್ನು ದುರುಪಯೋಗ ಮಾಡಿಕೊಳ್ಳುವುದು ಹೊಸತಾಗದು.‌ ಇದಕ್ಕಾಗಿ ನೌಕರರು ತಿರುಗಿ ಬೀಳಬಹುದು.‌ ನೀವು ಅಂದುಕೊಂಡಿದ್ದನ್ನು ಸರಿಯಾಗಿ ಪ್ರಸ್ತುತಪಡಿಸುವಿರಿ. ಹಣಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಗೊಂದಲ ಸೃಷ್ಟಿಯಾಗಬಹುದು. ನೀವು ಇಂದು ಕಾನೂನಿಗೆ ಸಂಬಂಧಿಸಿದ ವಿಷಯಗಳಲ್ಲಿ ಸಿಕ್ಕಿಹಾಕಿಕೊಳ್ಳಬಹುದು.

ಕನ್ಯಾ ರಾಶಿ : ವಿದ್ಯಾರ್ಥಿಗಳು ಕಲಿತದ್ದನ್ನೇ ಕಲಿಯಬೇಕಾದ ಅನಿವಾರ್ಯತೆ ಬಂದೀತು. ಇಂದು ನೀವು ಅನ್ಯಸ್ಥಳದಲ್ಲಿ ಆಕಸ್ಮಿಕವಾಗಿ ವಾಸಮಾಡಬೇಕಾಗುವುದು. ಭೂಮಿಯ ವ್ಯವಹಾರವನ್ನು ಸರಿಯಾದ ಕ್ರಮದಲ್ಲಿ ಮಾಡಿ.‌ ನಕಾರಾತ್ಮಕ ಚಿಂತನೆಯನ್ನು ಹೆಚ್ಚಿಸಲು ಅಂತಹ ವಾತಾವರಣವು ಇರಲಿದೆ. ಉಳಿತಾಯವನ್ನು ನೀವು ಅಲ್ಪವಾದರೂ ಮಾಡಿ. ಮಕ್ಕಳಿಗೆ ಮಾಡಿದ ಖರ್ಚು ನಿಮಗೆ ಸಾರ್ಥಕ ಎನಿಸಬಹುದು. ನಿಮ್ಮ ಅರ್ಹತೆಯನ್ನು ಉದ್ದೇಶಪೂರ್ವಕವಾಗಿ ತೋರಿಸಬೇಕಾಗುವುದು. ಸಂಗಾತಿಗೆ ನಿಮ್ಮ ಉಡುಗೊರೆಯು ಇಷ್ಟವಾಗದೇ ಹೋಗಬಹುದು. ಕೃಷಿಯ ಮೇಲೆ ನಿಮ್ಮ ಪ್ರಯೋಗವು ನಡೆಯುವುದು. ಮಹಿಳೆಯರು ಬಂಧುಗಳ ಮನೆಗೆ ಹೋಗುವ ಸಾಧ್ಯತೆ ಇದೆ. ನಿಮ್ಮ ನಂಬಿಕೆಯನ್ನು ನೀವು ಎಲ್ಲರೆದುರು ಸಮರ್ಥಿಸಿಕೊಳ್ಳುವಿರಿ. ಅಪರಿಚಿತರು ನಿಮ್ಮ ಎಲ್ಲ ವಿವರಗಳನ್ನು ಪಡೆಯಲು ಇಚ್ಛಿಸಬಹುದು. ಕಠಿಣ ಪರಿಶ್ರಮಕ್ಕೆ ಸರಿಯಾಗಿ ಯಶಸ್ಸು ಸಿಗುತ್ತದೆ.

ತುಲಾ ರಾಶಿ : ನೀವು ಯಾವ ಮಾತನ್ನು ಒಮ್ಮೆಲೆ ನಂಬುವುದಿಲ್ಲ. ರಾಜಕೀಯವಾಗಿ ಇರುವವರು ಹಿನ್ನಡೆಯನ್ನು ಅನುಭವಿಸಬೇಕಾದೀತು. ಹೊಸ ತಂತ್ರವನ್ನು ನೀವು ರೂಪಿಸಿಕೊಳ್ಳುವಿರಿ. ನಿಮ್ಮೆದುರೇ ಮಾತು ಬದಲಿಸುವವರನ್ನು ನೀವು ಇಷ್ಟಪಡಲಾರಿರಿ. ಹಳೆಯ ನೋವುಗಳು ನಿಮ್ಮನ್ನು ಕಾಡಬಹುದು. ಶುಭ ಸುದ್ದ ನಿರೀಕ್ಷೆಯು ಇಂದು ಕೇವಲ ನಿರೀಕ್ಷೆಯಾಗಿಯೇ ಇರಲಿದೆ. ಉದ್ಯಮಿಗಳು ಲಾಭಕ್ಕಾಗಿ ಬಹಳ ಶ್ರಮಪಡಬೇಕಾಗುವುದು. ಪ್ರೀತಿಯಲ್ಲಿ ನಿಮಗೆ ಖುಷಿ ಸಿಗದು. ಮನಃಸ್ಥಿತಿಯು ಸರಿ ಇಲ್ಲದ ಕಾರಣ ಯಾವ ಕೆಲಸವನ್ನೂ ಖುಷಿಯಿಂದ ಮಾಡಲಾಗದು. ದಾಂಪತ್ಯದಲ್ಲಿ ಸಣ್ಣ ವಿರಸವು ಇರಲಿದೆ. ನೇರ ಮಾತಿನಿಂದ ಇತರರಿಗೆ ಬೇಸರವಾಗುವುದು. ಮಕ್ಕಳ ವಿಚಾರದಲ್ಲಿ ನಿಮ್ಮ ವರ್ತನೆಯು ಸರಿಯಾದುದು ಆಗಿರದು. ಅಧಿಕಾರಿಗಳನ್ನು ಮೆಚ್ಚಿಸಲು ನೀವು ಸಮಯವನ್ನು ಹಾಳುಮಾಡುವಿರಿ. ಪ್ರಣಯ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳು ಕಂಡುಬರುತ್ತವೆ.

ವೃಶ್ಚಿಕ ರಾಶಿ : ನೀವು ಉದ್ಯೋಗವನ್ನು ಇನ್ನು ಮುಂದೆ ಗಂಭೀರವಾಗಿ ಸ್ವೀಕರಿಸುವಿರಿ‌. ಇಂದಿನ ವಿವಾದಗಳು ನಿಮ್ಮ ಮನಸ್ಸನ್ನು ಕೆಡಿಸಬಹುದು.‌ ಅತಿಯಾದ ನಂಬಿಕೆಯಿಂದ ಕೆಲವು ಅಮೂಲ್ಯವಾದ ವಸ್ತುಗಳನ್ನು ಕಳೆದುಕೊಳ್ಳುವಿರಿ. ಮನೆಯಲ್ಲಿ ಅಶಾಂತಿಯ ವಾತಾವರಣವು ಇರಲುದೆ. ನಿಮ್ಮ ವ್ಯವಹಾರಕ್ಕೆ ಯಾರಾದರೂ ಹಸ್ತಕ್ಷೇಪ‌ ಮಾಡಲು ಬರಬಹುದು. ಸಿಟ್ಟು ಮಾಡಿಕೊಂಡರೂ ಕ್ಷಣ ಕಾಲದಲ್ಲಿ ಅದು ಸರಿಯಾಗುವುದು. ಯಾರ ಅಸಹಾಯಕತೆಯೂ ನಿಮ್ಮನ್ನು ಏನೂ ಮಾಡಲಾಗದು. ವೃತ್ತಿಯಲ್ಲಿ ಕೆಲವು ಮಾರ್ಪಾಡುಗಳನ್ನು ಮಾಡಿಕೊಳ್ಳಬೇಕಾದೀತು. ಬಾಲ್ಯದ ಸ್ನೇಹಿತರು ನಿಮ್ಮನ್ನು ಕಂಡು ಖುಷಿಪಡುವರು. ವೃತ್ತಿಜೀವನವು ಹೊಸ ದಿಕ್ಕಿನತ್ತ ಹೊರಳಬಹುದು. ಇಟ್ಟುಕೊಳ್ಳಲು ಕೊಟ್ಟ ಹಣವು ಪುನಃ ಬಾರದೇ ಇದ್ದೀತು. ಹಿರಿಯರ ಎದುರು ಮಾತನಾಡಲು ನೀವು ಹೆದರುವಿರಿ. ಆತ್ಮವಿಶ್ವಾಸವು ಇದ್ದರೂ ಅದನ್ನು ಸರಿಯಾಗಿ ಬಳಸಿಕೊಳ್ಳಲು ಆಗದು. ಕಳೆದು ಸಂದರ್ಭವನ್ನು ಪುನಃ ಸೃಷ್ಟಿಸಿಕೊಳ್ಳಲು ಪ್ರಯತ್ನಿಸುವಿರಿ.