AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಡಿಸೆಂಬರ್ 1ರ ದಿನಭವಿಷ್ಯ

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಡಿಸೆಂಬರ್ 1ರ ಸೋಮವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ. ಈ ದಿನ ನಿಮಗೆ ಶುಭವಾಗಲಿದೆಯೇ ಅಥವಾ ಸವಾಲುಗಳಿವೆಯೇ ಎಂದು ಇಲ್ಲಿ ತಿಳಿದುಕೊಳ್ಳಿ.

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಡಿಸೆಂಬರ್ 1ರ ದಿನಭವಿಷ್ಯ
ದಿನ ಭವಿಷ್ಯ
ಸ್ವಾತಿ ಎನ್​ಕೆ
| Updated By: ಅಕ್ಷತಾ ವರ್ಕಾಡಿ|

Updated on: Dec 01, 2025 | 12:41 AM

Share

ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1):

ಸ್ವತಂತ್ರ ಆಲೋಚನೆಗಳು ನಿಮ್ಮ ಸಹೋದ್ಯೋಗಿಗಳಿಗಿಂತ ಪ್ರತ್ಯೇಕವಾಗಿ ನಿಲ್ಲುವಂತೆ ಮಾಡುತ್ತವೆ. ಪ್ರಾಡಕ್ಟ್ ಅಥವಾ ಪ್ರಾಜೆಕ್ಟ್ ಗಳನ್ನು ನೀವು ನೋಡುವ ರೀತಿ, ಪ್ಲಾನಿಂಗ್ ನಲ್ಲಿ ಅದನ್ನು ಕಟ್ಟುತ್ತಾ ಹೋಗುವ ಪರಿಗೆ ಮೇಲಧಿಕಾರಿಗಳು ಮೆಚ್ಚುಗೆ ಮಾತುಗಳನ್ನು ಆಡಲಿದ್ದಾರೆ. ಕೆಲಸ- ಕಾರ್ಯಗಳನ್ನು ತೊಡಗುವ ಮುನ್ನವೇ ನಿಮ್ಮ ಆದ್ಯತೆಗಳ ಪಟ್ಟಿಯೊಂದನ್ನು ಮಾಡಿಕೊಳ್ಳಿ. ಅದರಂತೆ ಒಂದೊಂದೇ ಕಾರ್ಯಗಳನ್ನು ಪೂರ್ಣಗೊಳಿಸಿ. ನಿಮ್ಮ ವೈಯಕ್ತಿಕ ಬದುಕಿನಲ್ಲಿ ಆಗುವ ಬೆಳವಣಿಗೆಗಳು ಗಮನ ಒಂದೆಡೆ ಕೇಂದ್ರೀಕರಿಸಲು ಅವಕಾಶ ಕೊಡುವುದಿಲ್ಲ. ಅದರಲ್ಲಿ ಮುಖ್ಯವಾಗಿ ನೀವು ಪ್ರೀತಿಸುವ ವ್ಯಕ್ತಿ ಅಥವಾ ಸಂಗಾತಿ ತಮ್ಮ ಸಿಟ್ಟನ್ನು ನಿಮ್ಮ ಮೇಲೆ ಹಾಕುತ್ತಿದ್ದಾರೆ ಎಂದೆನಿಸಲಿದೆ. ಈ ಯೋಚನೆಯಿಂದಾಗಿ ಪರಿಸ್ಥಿತಿ ಸಂಭಾಳಿಸುವುದಕ್ಕೆ ಶ್ರಮ ಪಡುವಂತೆ ಆಗಲಿದೆ. ನಿಮ್ಮ ಮಾನಸಿಕ ಸ್ಥೈರ್ಯವು ಎಲ್ಲವನ್ನೂ ಮೀರಿ ನಿಂತು, ಕೀರ್ತಿ- ಅವಕಾಶಗಳನ್ನು ತಂದುಕೊಡಲಿದೆ.

ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2):

ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗ್ರಹಿಸಲಿದ್ದೀರಿ. ಇತರರ ನಿರೀಕ್ಷೆಗಳಿಗೆ ಸ್ಪಂದಿಸುವ ನಿಮ್ಮ ಗುಣ ಎಲ್ಲರಿಗೂ ಇಷ್ಟವಾಗಲಿದೆ. ಉದ್ಯೋಗ ಸ್ಥಳದಲ್ಲಿ ಒತ್ತಡ ಇದ್ದರೂ ಅದನ್ನು ನಿಮ್ಮ ಮೇಲೆ ಹಾಕಿಕೊಳ್ಳಲಿದ್ದೀರಿ. ಇಂದು ತೆಗೆದುಕೊಳ್ಳುವ ನಿರ್ಧಾರಗಳಲ್ಲಿ ಸಮತೋಲನ ಅಗತ್ಯ. ಕುಟುಂಬದವರೊಂದಿಗೆ ಮಾತನಾಡುವಾಗ ಸಂಯಮ ಕಾಪಾಡಿದರೆ ಅನಗತ್ಯ ವಾದವಿವಾದ ತಪ್ಪಿಸಬಹುದು. ಹಣಕಾಸಿನ ವ್ಯವಹಾರಗಳಲ್ಲಿ ಜಾಗ್ರತೆ ಅನಿವಾರ್ಯ. ಸ್ನೇಹಿತರ ಸಹಕಾರದಿಂದ ಕೆಲವು ಕೆಲಸಗಳು ಸುಗಮವಾಗುತ್ತವೆ. ಆರೋಗ್ಯದಲ್ಲಿ ಸಣ್ಣ ತೊಂದರೆ ಕಂಡರೂ ದಿನಾಂತ್ಯಕ್ಕೆ ಸುಧಾರಣೆ ಕಾಣುತ್ತದೆ. ಹೊಸ ಅವಕಾಶಗಳು ನಿಮ್ಮ ಮುಂದೆ ತೆರೆದುಕೊಳ್ಳುವ ಸೂಚನೆ ಇದೆ, ಆದರೂ ಶೀಘ್ರವಾಗಿ ತೀರ್ಮಾನಿಸಲು ಯತ್ನಿಸಬೇಡಿ. ನಿಮ್ಮ ಸಾಮರ್ಥ್ಯವನ್ನು ಗುರುತಿಸುವವರು ಇಂದು ಎದುರಾಗುವರು, ಇದು ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ದಿನದ ಅಂತ್ಯದ ವೇಳೆಗೆ ಮಾನಸಿಕ ಶಾಂತಿ ದೊರೆತು, ಹೊಸ ಯೋಜನೆಗಳನ್ನು ರೂಪಿಸಲು ಪ್ರೇರಣೆ ಸಿಗುತ್ತದೆ.

ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3):

ಬ್ರ್ಯಾಂಡೆಡ್ ವಸ್ತುಗಳತ್ತ ಇಂದು ನಿಮ್ಮ ಮನಸ್ಸು ಹೆಚ್ಚು ಸೆಳೆಯುತ್ತದೆ. ಡಿಸ್ಕೌಂಟ್ ಅಥವಾ ಆಫರ್ ಕಂಡ ತಕ್ಷಣ ಯೋಚಿಸದೆ ಖರೀದಿ ಮಾಡುವ ಪ್ರವೃತ್ತಿ ಹೆಚ್ಚಾಗಬಹುದು. ಕ್ರೆಡಿಟ್ ಕಾರ್ಡ್ ಬಳಕೆ ಮಾಡುವವರಾದರೆ ಅಂದುಕೊಂಡಿದಕ್ಕಿಂತ ಹೆಚ್ಚು ಖರ್ಚಾಗಿ, ಬಜೆಟ್ ಮೀರಿ ಹೋಗುವ ಸಾಧ್ಯತೆ ಇದೆ. ಆದ್ದರಿಂದ ಖರ್ಚಿನಲ್ಲಿ ಎಚ್ಚರಿಕೆ ಅಗತ್ಯ. ಉದ್ಯೋಗ ಸ್ಥಳದಲ್ಲಿ ಹೊಸ ಜವಾಬ್ದಾರಿಗಳು ನೀಡಲಿದ್ದಾರೆ ಮತ್ತು ನಿಮ್ಮ ಪರಿಶ್ರಮಕ್ಕೆ ಮೇಲಧಿಕಾರಿಗಳ ಮೆಚ್ಚುಗೆ ಸಿಗುತ್ತದೆ. ಸಹೋದ್ಯೋಗಿಗಳ ಸಹಕಾರದಿಂದ ಕೆಲಸ ಸುಗಮವಾಗುತ್ತದೆ. ಸಂಬಂಧಗಳಲ್ಲಿ ಮಾತಿನಲ್ಲಿ ಮೃದುತ್ವ ಮುಖ್ಯ; ಸಂಗಾತಿಯ ಭಾವನೆಗಳನ್ನು ಗೌರವಿಸಿದರೆ ಸಣ್ಣ ಅಸಮಾಧಾನಗಳು ನಿವಾರಣೆಯಾಗುತ್ತವೆ. ಇಂದು ಪಡೆದ ಅನುಭವಗಳು ಮುಂದಿನ ನಿರ್ಧಾರಗಳಲ್ಲಿ ಹೆಚ್ಚಿನ ಸ್ಪಷ್ಟತೆ ನೀಡುತ್ತವೆ. ಸಮತೋಲನದಿಂದ ಮುಂದುವರಿಯುವ ಕಡೆಗೆ ಗಮನ ನೀಡಿ.

ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4):

ಓದು- ಬರಹ, ಸಂಶೋಧನೆ ಇಂಥವುಗಳಲ್ಲಿ ಮುಳುಗಿ ಹೋಗುತ್ತೀರಿ. ಸಮಯಕ್ಕೆ ಸರಿಯಾಗಿ ಊಟ- ತಿಂಡಿ ಮಾಡುವುದನ್ನು ಮರೆಯವಷ್ಟು ಕೆಲಸಗಳನ್ನು ಮೈ ಮೇಲೆ ಹಾಕಿಕೊಳ್ಳಬೇಡಿ. ಉದ್ಯೋಗ ಸ್ಥಳದಲ್ಲಿ ಹೊಸ ಕಲಿಕೆಗಳ ಅಗತ್ಯವು ಸ್ಪಷ್ಟವಾಗಿ ಕಾಣಿಸಲಿದೆ ಮತ್ತು ಹಿರಿಯರ ಮಾರ್ಗದರ್ಶನ ವಿಶ್ವಾಸ ಹೆಚ್ಚಿಸುತ್ತದೆ. ಹಣಕಾಸಿನ ವಿಷಯದಲ್ಲಿ ಅನವಶ್ಯಕ ಖರ್ಚು ತಪ್ಪಿಸುವುದು ಉತ್ತಮ. ಕುಟುಂಬದಲ್ಲಿ ಸಣ್ಣ ಅಸಮಾಧಾನ ಕಂಡರೂ ಮಾತನಾಡುವ ಮೂಲಕ ಪರಿಹಾರ ಸುಲಭವಾಗುತ್ತದೆ. ಸಂಗಾತಿಯೊಂದಿಗೆ ಕಳೆದ ಸಮಯ ಭಾವನಾತ್ಮಕವಾಗಿ ಬಲವನ್ನು ನೀಡುತ್ತದೆ. ವಿಶ್ರಾಂತಿ ಮತ್ತು ನೀರಿನ ಸೇವನೆ ಮುಖ್ಯ. ದಿನಾಂತ್ಯದಲ್ಲಿ ಮಾಡಿದ ಕಾರ್ಯಗಳಿಗೆ ತೃಪ್ತಿ ದೊರೆಯುತ್ತದೆ. ಇಂದು ಕೈಗೆ ಬಂದ ಅವಕಾಶಗಳನ್ನು ಸರಿಯಾಗಿ ಬಳಕೆ ಮಾಡಿ, ಯಾವುದು ನಿಮಗೆ ದೀರ್ಘಕಾಲದ ಬೆಳವಣಿಗೆ ನೀಡುತ್ತದೆ ಎಂಬುದನ್ನು ಆಲೋಚಿಸುವುದು ಒಳಿತು. ಇದು ನಿಮ್ಮ ಮುಂದಿನ ಯೋಜನೆಗಳಿಗೆ ಸ್ಪಷ್ಟ ದಿಕ್ಕನ್ನು ಸೂಚಿಸಲಿದೆ.

ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5):

ಒಂದು ಸಮಯಕ್ಕೆ ಒಂದೇ ವಿಷಯದ ಮೇಲೆ ಗಮನ ಕೇಂದ್ರೀಕರಿಸಿ. ಉದ್ಯೋಗ ಸ್ಥಳದಲ್ಲಿ ಹೊಸ ಜವಾಬ್ದಾರಿಗಳು ನಿಮಗೆ ದೊರೆಯುತ್ತವೆ, ಪರಿಶ್ರಮಕ್ಕೆ ಮೇಲಧಿಕಾರಿಗಳ ಮೆಚ್ಚುಗೆ ಸಹ ಸಿಗಲಿದೆ. ಕುಟುಂಬದ ಅಗತ್ಯಗಳನ್ನು ಪ್ರತ್ಯೇಕವಾಗಿ ನೋಡಿದರೆ ಉತ್ತಮ. ನಿಮ್ಮ ಪ್ರಯತ್ನಕ್ಕೆ ಉತ್ತಮ ಫಲವೂ ಪಡೆಯಬಹುದು. ಹಣಕಾಸಿನ ವಿಷಯದಲ್ಲಿ ಜಾಗ್ರತೆ ವಹಿಸಿ; ಬ್ಯಾಂಕ್ ಬ್ಯಾಲೆನ್ಸ್ ಆತ್ಮವಿಶ್ವಾಸ ಹೆಚ್ಚಿಸುತ್ತದೆ. ಸಂಬಂಧಗಳಲ್ಲಿ ಮೃದುವಾದ ಮಾತುಗಳು ದಿನವನ್ನು ಸುಗಮವಾಗಿಸುತ್ತದೆ. ಸಾಮಾಜಿಕ ಸಂಪರ್ಕಗಳಲ್ಲಿ ಹೊಸ ಪರಿಚಯಗಳು ಉತ್ಸಾಹ ನೀಡುತ್ತವೆ. ಆರೋಗ್ಯದಲ್ಲಿ ಸಣ್ಣ ಸಮಸ್ಯೆಗಳು ಕಂಡರೂ ದಿನಾಂತ್ಯಕ್ಕೆ ಸುಧಾರಣೆ ಕಾಣುತ್ತದೆ. ವೃತ್ತಿ, ವ್ಯವಹಾರ ಅಥವಾ ವ್ಯಾಪಾರದಲ್ಲಿ ಹೊಸ ಅವಕಾಶಗಳು ದೊರೆಯುತ್ತವೆ, ಈ ಬಗ್ಗೆ ನೀವು ತೆಗೆದುಕೊಳ್ಳುವ ತೀರ್ಮಾನ ತೀರಾ ಹಿತಕರವಾಗಿರುತ್ತದೆ. ದಿನದ ಅಂತ್ಯದಲ್ಲಿ ಮಾನಸಿಕ ಶಾಂತಿ ದೊರೆತು, ಉಲ್ಲಾಸ ಇರುತ್ತದೆ.

ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6):

ಮಿಶ್ರವಾದ ಭಾವನೆಗಳು ಈ ದಿನ ನಿಮ್ಮನ್ನು ಮುಂದಕ್ಕೆ ನಡೆಸುತ್ತವೆ. ಕೆಲಸಕ್ಕೆ ರಜಾ ಹಾಕಬೇಕು ಅಂದುಕೊಂಡವರಿಗೆ ಅದು ಸಾಧ್ಯವಾಗದೆ ಹೋಗಬಹುದು. ಹೊಸಬರ ಜೊತೆಗಿನ ಮಾತುಕತೆ ಹಾಗೂ ಮನವೊಲಿಸುವ ಪ್ರಯತ್ನ ಕಿರಿಕಿರಿ ಎನಿಸುತ್ತದೆ. ಪ್ರೀತಿಯಲ್ಲಿ ಇರುವವರು ಕೊಟ್ಟ ಮಾತಿನಂತೆ ಸಮಯ ನೀಡುವುದಕ್ಕೆ ಆಗುವುದಿಲ್ಲ. ಈ ಕಾರಣಕ್ಕೆ ಬೇಸರ ಆಗಿ ಹಳೆಯ ವಿಚಾರಗಳನ್ನೆಲ್ಲ ಎಳೆದು ತಂದು, ನಿಮಗೆ ನೋವು ಮಾಡುವ ರೀತಿಯಲ್ಲಿ ಮಾತನಾಡಲಿದ್ದಾರೆ. ಪಾರದರ್ಶಕವಾಗಿ ನಡೆದುಕೊಳ್ಳುವುದು ಈ ದಿನದ ನಿಮ್ಮ ಹಲವು ಸಮಸ್ಯೆಗಳಿಗೆ ಪರಿಹಾರದಂತೆ ಆಗಲಿದೆ. ಏಕ ಕಾಲಕ್ಕೆ ಎಲ್ಲರನ್ನೂ ಸಮಾಧಾನ ಪಡಿಸುವುದು ಅಸಾಧ್ಯ. ಅಂಥ ಸಾಹಸಕ್ಕೆ ಮುಂದಾಗುವುದೇ ಅನರ್ಥಕ್ಕೆ ದಾರಿ ಮಾಡುತ್ತದೆ. ಹತ್ತು ನಿಮಿಷ ಧ್ಯಾನ ಮಾಡುವುದರಿಂದ ಸಮತೋಲನದ ಬದುಕಿಗೆ ಬೇಕಾದ ಸ್ಪಷ್ಟ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಹಾಯ ಆಗುತ್ತದೆ.

ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7):

ಈ ಹಿಂದಿನ ಅನುಭವಗಳು ಕಲಿಸಿದ ಪಾಠಗಳನ್ನು ನಿರ್ಲಕ್ಷ್ಯ ಮಾಡಬೇಡಿ. ನಿಮ್ಮ ಇನ್ ಟ್ಯೂಷನ್ ಕಳಿಸುವಂಥ ಸಂದೇಶ- ಸೂಚನೆಗಳನ್ನು ಗಂಭೀರವಾಗಿ ಪರಿಗಣಿಸಿ. ಜ್ಯೋತಿಷ್ಯ, ಪೌರೋಹಿತ್ಯ, ಅಧ್ಯಾತ್ಮ ಕ್ಷೇತ್ರಗಳಲ್ಲಿ ಇರುವವರಿಗೆ ಕೀರ್ತೀ, ಪ್ರತಿಷ್ಠೆಗಳು ಹೆಚ್ಚಾಗಲಿವೆ. ನೀವು ಪಟ್ಟು ಬಿಡದೆ ಮಾಡಿ ಮುಗಿಸಿದಂಥ ಕಾರ್ಯಗಳಿಂದ ಹೆಚ್ಚು ಜನರಿಗೆ ಅನುಕೂಲ ಆಗಲಿದೆ. ಧನ್ಯವಾದ ಹೇಳುವ ರೀತಿಯಲ್ಲಿ ಸಂಘ- ಸಂಸ್ಥೆಗಳಿಂದ ನಿಮಗೆ ಸನ್ಮಾನ ಆಗಲಿದೆ. ಭಾವುಕ ಕ್ಷಣಗಳು ಸಂತೋಷವನ್ನು ಉಂಟು ಮಾಡುತ್ತವೆ. ನೀವು ಬಹಳ ಸಮಯದಿಂದ ಭೇಟಿ ಆಗಬೇಕು ಎಂದುಕೊಳ್ಳುತ್ತಿದ್ದ ವ್ಯಕ್ತಿಗಳ ಜೊತೆಗೆ ದೀರ್ಘವಾದ ಸಮಯವನ್ನು ಒಟ್ಟಿಗೆ ಕಳೆಯಲಿದ್ದೀರಿ. ಮಕ್ಕಳ ಮದುವೆಗೆ ಸೂಕ್ತ ಸಂಬಂಧದ ಹುಡುಕಾಟದಲ್ಲಿ ಇರುವವರಿಗೆ ಶುಭ ಸುದ್ದಿ ಕೇಳಿಬರಲಿದೆ. ಕಾರ್ಯಕ್ರಮದ ಆಯೋಜನೆಗೆ ಬೇಕಾದ ಹಣಕಾಸಿನ ಹೊಂದಾಣಿಕೆ ಬಗ್ಗೆ ಕುಟುಂಬ ಸದಸ್ಯರ ಜೊತೆಗೆ ಚರ್ಚಿಸಲಿದ್ದೀರಿ.

ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8):

ನಿಮ್ಮ ಪಾಲಿನ ಅತಿ ದೊಡ್ಡ ಶತ್ರು ಆಲಸ್ಯ. ಆಮೇಲೆ ಮಾಡಿದರಾಯಿತು ಎಂದುಕೊಂಡು ಯಾವುದೇ ಮುಖ್ಯ ಕೆಲಸಗಳನ್ನು ಮುಂದಕ್ಕೆ ಹಾಕಬೇಡಿ. ಇತರರು ನಿಮ್ಮ ಜೊತೆಗೆ ಬರಲಿ ಎಂದು ಕಾಯುತ್ತಾ ಕೂರಬೇಡಿ. ಯಾವುದೇ ಸನ್ನಿವೇಶಕ್ಕೆ ನೀವು ಅನಿವಾರ್ಯ ಎಂದುಕೊಳ್ಳುವುದು ಆ ನಂತರದಲ್ಲಿ ನಿಮಗೆ ದುಃಖ ತರಲಿದೆ. ನಿಮ್ಮ ಬದಲಿಗೆ ಬೇರೆಯವರಿಗೆ ಪ್ರಾಶಸ್ತ್ಯ ಸಿಕ್ಕಿತು ಎಂಬುದು ಸಿಟ್ಟಿಗೆ ಸಹ ಕಾರಣ ಆಗಲಿದೆ. ಮುಖ್ಯವಾದ ವ್ಯಕ್ತಿಗಳ ಭೇಟಿಗೆ ತೆರಳುವವರು ಹೇಳಿದ ಸಮಯಕ್ಕಿಂತ ಹತ್ತು ನಿಮಿಷ ಮುಂಚಿತವಾಗಿ ಅಲ್ಲಿರುವಂತೆ ಪ್ಲಾನ್ ಮಾಡಿಕೊಳ್ಳಿ. ಉದ್ದೇಶಿತ ಕಾರ್ಯಗಳು ಶೇಕಡ ಎಂಬತ್ತರಷ್ಟು ಪೂರ್ಣವಾಗಿ, ಬಾಕಿ ಮುಗಿಸಿಕೊಳ್ಳಲು ಮತ್ತೆ ಒಂದು ದಿನ ಕಾಯುವಂತೆ ಆಗಲಿದೆ. ಕಚೇರಿ ಸ್ಥಳಾಂತರ ಮಾಡಬೇಕು ಎಂದುಕೊಂಡಿರುವ ವೃತ್ತಿಪರರಿಗೆ ಮನಸ್ಸಿಗೆ ಒಪ್ಪುವಂತೆ ಇರುವ ಸ್ಥಳ ದೊರೆಯಲಿದೆ.

ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9):

ಪ್ರಯತ್ನ ಹಾಗೂ ಶ್ರಮ ಇವೆರಡರ ಜೊತೆಗೆ ಅದೃಷ್ಟ ಕೂಡಿಕೊಂಡು ಒಳ್ಳೆ ಫಲ ದೊರೆಯಲಿದೆ. ಮಾಧ್ಯಮಗಳಲ್ಲಿ ಕಾರ್ಯ ನಿರ್ವಹಿಸುವವರಿಗೆ ಹೊಸ ಉದ್ಯೋಗಾವಕಾಶ ಹುಡುಕಿ ಬರಲಿವೆ. ಮಕ್ಕಳು ಹಾಗೂ ನಿಮ್ಮ ತಂದೆ- ತಾಯಿ ಆರೋಗ್ಯವನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ನಿಮಗೆ ಬಂದಂಥ ಆಫರ್ ಒಪ್ಪಿಕೊಳ್ಳಬೇಕೋ ಬೇಡವೋ ಎಂಬುದನ್ನು ನಿರ್ಧಾರ ಮಾಡಲಿದ್ದೀರಿ. ಉಳಿತಾಯ ಮಾಡಿದ್ದ ಹಣವನ್ನು ಹಿಂತೆಗೆದು, ಮನೆಯಲ್ಲಿ ಕೆಲವು ಸೌಕರ್ಯಗಳ ವ್ಯವಸ್ಥೆ ಮಾಡಲಿದ್ದೀರಿ. ಕೆಲವು ಆಧುನಿಕ ಪರಿಕರಗಳನ್ನು ಖರೀದಿಸಿ ತರಲಿದ್ದು, ಮಕ್ಕಳಿಗೆ ಪೌಷಕಾಂಶದಿಂದ ಕೂಡಿದ ಆಹಾರವನ್ನು ನಿತ್ಯವೂ ಒದಗಿಸುವ ಕಡೆಗೆ ಹೆಚ್ಚಿನ ಲಕ್ಷ್ಯವನ್ನು ನೀಡಲಿದ್ದೀರಿ. ಪರಿಚಯಸ್ಥರು ಒಬ್ಬರು ಸಹಾಯ ಕೇಳಿಕೊಂಡು ಬರಲಿದ್ದು, ಅದಕ್ಕಾಗಿಯೇ ಹೆಚ್ಚು ಸಮಯ ನೀಡುವಂಥ ಸನ್ನಿವೇಶ ಎದುರಾಗಲಿದೆ. ದಿನದ ಕೊನೆಗೆ ಶುಭ ಸುದ್ದಿಯೊಂದು ನಿಮಗೆ ಬರಲಿದೆ.

ಲೇಖನ- ಎನ್‌.ಕೆ.ಸ್ವಾತಿ

ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ
ವಿಮಾನ ನಿಲ್ದಾಣದಲ್ಲಿ ಶಾಸ್ತ್ರೀಯ ನೃತ್ಯಕ್ಕೆ ಮನಸೋತ ರಷ್ಯಾ ಅಧ್ಯಕ್ಷ ಪುಟಿನ್
ವಿಮಾನ ನಿಲ್ದಾಣದಲ್ಲಿ ಶಾಸ್ತ್ರೀಯ ನೃತ್ಯಕ್ಕೆ ಮನಸೋತ ರಷ್ಯಾ ಅಧ್ಯಕ್ಷ ಪುಟಿನ್
ಭಾರತಕ್ಕೆ ಬಂದ ಗೆಳೆಯ ಪುಟಿನ್​ಗೆ ಪ್ರಧಾನಿ ಮೋದಿಯ ಅಪ್ಪುಗೆಯ ಸ್ವಾಗತ
ಭಾರತಕ್ಕೆ ಬಂದ ಗೆಳೆಯ ಪುಟಿನ್​ಗೆ ಪ್ರಧಾನಿ ಮೋದಿಯ ಅಪ್ಪುಗೆಯ ಸ್ವಾಗತ