Horoscope: ನಿಮ್ಮ ನಿರೀಕ್ಷೆ ಹುಸಿಯಾಗುವುದು, ಪ್ರಭಾವಿ ವ್ಯಕ್ತಿಗಳ ಸಂಪರ್ಕ ಮಾಡುವಿರಿ
ಇಂದಿನ ದಿನಭವಿಷ್ಯ: ನೀವು ಮೇಷ, ವೃಷಭ, ಮಿಥುನ, ಕಟಕ ರಾಶಿಯವರೇ? ಹಾಗಿದ್ದರೆ ಡಿಸೆಂಬರ್ 18, 2023ರ ನಿಮ್ಮ ರಾಶಿಭವಿಷ್ಯ ಹೇಗಿದೆ? ಇಂದಿನ ಭವಿಷ್ಯದಲ್ಲಿ ನಿವು ಲಾಭದ ನಿರೀಕ್ಷೆ ಮಾಡಬಹುದಾ? ಶುಭ-ಅಶುಭ ಇದೆಯಾ ಎಂಬಿತ್ಯಾದಿ ಮಾಹಿತಿಗಳು ಇಲ್ಲಿವೆ.
ನಿತ್ಯ ಎದ್ದ ಕೂಡಲೇ ನಿತ್ಯ ಪಂಚಾಂಗ ಮತ್ತು ರಾಶಿಭವಿಷ್ಯ ನೋಡುವ ಅಭ್ಯಾಸ ಕೆಲವರಲ್ಲಿ ಇರುತ್ತದೆ. ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಲಾಭ ಕಾದಿದೆಯಾ? ನಷ್ಟು ಉಂಟಾಗಬಹುದಾ? ಶುಭ, ಅಶುಭ? ಇದೆಯಾ ಎಂಬುದನ್ನು ತಿಳಿದುಕೊಳ್ಳುತ್ತಾರೆ. ಹಾಗಾದರೆ, ಇಂದಿನ (ಡಿಸೆಂಬರ್ 18) ನಿಮ್ಮ ರಾಶಿಭವಿಷ್ಯ (Horoscope) ಹೇಗಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ವೃಶ್ಚಿಕ ಮಾಸ, ಮಹಾನಕ್ಷತ್ರ: ಜ್ಯೇಷ್ಠಾ, ಮಾಸ: ಮಾರ್ಗಶೀರ್ಷ, ಪಕ್ಷ: ಶುಕ್ಲ, ವಾರ: ಸೋಮ, ತಿಥಿ: ಷಷ್ಠೀ, ನಿತ್ಯನಕ್ಷತ್ರ: ಶತಭಿಷಾ, ಯೋಗ: ಹರ್ಷಣ, ಕರಣ: ಕೌಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 52 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 06 ನಿಮಿಷಕ್ಕೆ, ರಾಹು ಕಾಲ ಬೆಳಿಗ್ಗೆ 08:16 ರಿಂದ 09:41ರವರೆಗೆ, ಯಮಘಂಡ ಕಾಲ ಬೆಳಿಗ್ಗೆ 11:05 ರಿಂದ ಮಧ್ಯಾಹ್ನ 12:29ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 01:53 ರಿಂದ 03:18ರ ವರೆಗೆ.
ಮೇಷ ರಾಶಿ: ಕುಟುಂಬದಿಂದ ದೂರವಿರುವ ನಿಮಗೆ ನೋಡಬೇಕೆನ್ನುವ ಮನಸ್ಸಾದೀತು. ಸ್ನೇಹಿತರ ಮೇಲಿನ ಮೋಹದಿಂದ ತಪ್ಪನ್ನು ಸಮರ್ಥಿಸಿಕೊಳ್ಳುವಿರಿ. ಮೋಹದ ಕಾರಣದಿಂದ ನಿಮ್ಮವರ ತಪ್ಪನ್ನು ಹೇಳಲು ನೀವು ತಯಾರಿರುವುದಿಲ್ಲ. ಬರಬೇಕಾದ ಹಣದ ಚಿಂತೆ ಬಹಳ ಕಾಡಬಹುದು. ದೊಡ್ಡ ವಿಚಾರವನ್ನು ಸಣ್ಣದಾಗಿ ಮಾಡಿ, ಯಾರಿಗೂ ಗೊತ್ತಾಗದಂತೆ ಮಾಡುವಿರಿ. ಗೌಪ್ಯತೆಯ ವಿಚಾರದಲ್ಲಿ ವರ್ತನೆಯು ಎಲ್ಲರೂ ಮೆಚ್ಚುವಂಥದ್ದಾಗಿರಲಿದೆ. ಸ್ತ್ರೀಯರಿಂದ ಸಹಕಾರ ದೊರೆತರೂ ಕೆಲಸ ಪೂರ್ಣವಾಗದು. ನಿಮ್ಮ ಮನೋಬಲವನ್ನು ಕುಗ್ಗಿಸುಲು ಸಹೋದ್ಯೋಗಿಗಳ ಪ್ರಯತ್ನ ಇರಲಿದೆ. ನಿಮ್ಮ ಬಗ್ಗೆ ನಿಮಗೇ ಬೇಕೆಂದು ಏನಾದರೂ ಹೇಳಿಯಾರು. ಕೃತಜ್ಞತೆಯನ್ನು ನೀವು ರೂಢಿಸಿಕೊಳ್ಳಬೇಕಾಗುವುದು. ಸಾಮಾಜಿಕ ಕಾರ್ಯದಲ್ಲಿ ತೊಡಗಿಕೊಳ್ಳುವಿರಿ.
ವೃಷಭ ರಾಶಿ: ಮನೋರಂಜನೆಯ ಕಾರ್ಯದಲ್ಲಿ ನೀವು ಹೆಚ್ಚು ತೊಡಗಿಕೊಳ್ಳುವಿರಿ. ಇನ್ನೊಬ್ಬರ ಜೊತೆ ಕಾಲಹರಣ ಮಾಡುವುದನ್ನು ಬಿಡಿ. ಸದುಪಯೋಗವಾಗುವಂತಹ ಕೆಲಸದ ಕಡೆ ಗಮನವಿರಲಿ. ಸುಲಭದ ಕಾರ್ಯವನ್ನು ಸಂಕೀರ್ಣ ಮಾಡಿಕೊಂಡು ಚಿಂತಿಸುವಿರಿ. ಖರೀದಿಯ ವಸ್ತುಗಳು ಕಳೆದುಹೋಗುವ ಸಂಭವವಿದೆ. ಕಾರಣಾಂತರಗಳಿಂದ ಬೇರೆ ಕಡೆ ವಾಸ ಮಾಡುವ ಸಂದರ್ಭವು ಬರಬಹುದು. ಒತ್ತಡವನ್ನು ನೀವಾಗಿಯೇ ತಂದುಕೊಳ್ಳುವ ಸಾಧ್ಯತೆ ಇದೆ. ದುಂದುವೆಚ್ಚವು ನಿಮಗೆ ಆಗಿಬರದು. ಎಲ್ಲರ ಜೊತೆ ಬೆರೆಯುವ ಅವಕಾಶಗಳು ಇಂದು ಕಡಿಮೆ ಇರಲಿದೆ. ಸ್ವತಂತ್ರವಾಗಿ ಬದುಕಬೇಕು ಎಂಬ ಇಚ್ಛೆಯು ಜಾಗರೂಕವಾಗಲಿದೆ. ಬೆನ್ನು ನೋವಿನಿಂದ ನಿಮಗೆ ಕಷ್ಟವಾದೀತು. ಧಾರ್ಮಿಕ ಕಾರ್ಯದಲ್ಲಿ ಪೂರ್ಣ ಶ್ರದ್ಧೆ ಇರದು.
ಮಿಥುನ ರಾಶಿ: ನ್ಯಾಯಾಲಯದಲ್ಲಿ ನಿಮ್ಮ ವಿರುದ್ಧ ದೂರುಗಳು ದಾಖಲಾಗಬಹುದು. ಹಠವನ್ನು ಬಿಟ್ಟು ನಡೆದುಕೊಂಡರೆ ಎಲ್ಲವೂ ಸರಿಯಾಗುವುದು. ಸಂಗಾತಿಯ ಜೊತೆಗಿನ ವೈಮನಸ್ಯವು ದೂರಾಗಿ ಸಂತೋಷವು ಇಂದು ನೆಲೆಸುವುದು. ಮನೆಯಲ್ಲಿ ನಿಮಗೆ ಪೂರಕವಾದ ವಾತಾವರಣ ಇರಲಿದೆ. ಅಪ್ರಾಮಾಣಿಕತೆಯು ನಿಮಗೆ ಇಷ್ಟವಾಗದು. ಸಮಾರಂಭಗಳಿಗೆ ಆಹ್ವಾನ ಬರಬಹುದು. ಕಣ್ಣಿನ ತೊಂದರೆಯು ಪುನಃ ಕಾಣಿಸಿಕೊಳ್ಳಬಹುದು. ಅಸಾಧ್ಯವಾದ ಕಾರ್ಯವನ್ನು ಮಾಡಿ ಸಮಯವನ್ನು ವ್ಯರ್ಥ ಮಾಡುವುದು ಬೇಡ. ಶರೀರಪೀಡೆಯನ್ನು ನೀವು ಅನುಭವಿಸುವುದು ಕಷ್ಡವಾಗಬಹುದು. ಸಂಗಾತಿಯ ಸ್ವಭಾವವು ಇಂದು ಸ್ಪಷ್ಟವಾಗಿ ತಿಳಿಯಿತು ಎಂದು ಅಂದುಕೊಂಡಿರುವಿರಿ. ನಿಮ್ಮ ಗುರಿಯನ್ನು ಬದಲಿಸುವುದು ಬೇಡ. ನಿರ್ಧಾರಕ್ಕೆ ಸಮಯವನ್ನು ಹೆಚ್ಚು ತೆಗೆದುಕೊಂಡು ಮುಂದುವರಿಯುವಿರಿ.
ಕರ್ಕ ರಾಶಿ: ಒತ್ತಡದ ಕಾರಣದಿಂದ ನಿಮ್ಮ ಕೆಲಸಗಳು ಅಸ್ತವ್ಯಸ್ತವಾಗಬಹುದು. ನಿರೀಕ್ಷೆಯು ಹುಸಿಯಾಗಿ ಬೇಸರವಾಗಬಹುದು. ಸಂಗಾತಿಗೆ ಉದ್ಯೋಗವನ್ನು ಕೊಡಿಸಲು ಓಡಾಟ ಮಾಡುವಿರಿ. ನಿಮ್ಮ ಬಳಿಯೇ ಎಲ್ಲವೂ ಇದ್ದರೂ ಇನ್ನೊಬ್ಬರ ಸ್ವತ್ತಿಗೆ ಕಣ್ಣು ಹಾಕುವಿರಿ. ಪ್ರಭಾವೀ ವ್ಯಕ್ತಿಗಳ ಸಂಪರ್ಕವನ್ನೂ ಮಾಡುವಿರಿ. ನಿಮ್ಮ ವ್ಯವಹಾರದಲ್ಲಿ ಲೆಕ್ಕವು ತಪ್ಪಾಗಿ ನೀವು ಹಣವನ್ನು ಕಳೆದುಕೊಳ್ಳಬಹುದು. ಸ್ನೇಹಿತರ ಜೊತೆ ಎಲ್ಲಿಗಾದರೂ ಹೋಗಬೇಕು ಎನಿಸುವುದು. ವಿದ್ಯಾರ್ಥಿಗಳಿಗೆ ಮುಖ್ಯಘಟ್ಟದಲ್ಲಿ ಸೋಲಾಗಬಹುದು. ಉದ್ಯೋಗದಲ್ಲಿ ನೀವು ಜಾಣತನವನ್ನು ತೋರಿಸುವ ಅವಶ್ಯಕತೆ ಇಲ್ಲ. ಪ್ರಯಾಣದಲ್ಲಿ ಜಾಗರೂಕತೆ ಮುಖ್ಯವಾಗಿರಲಿ. ಮನೆಯಲ್ಲಿ ಬದಲಾಯಿಸುವ ಸಂದರ್ಭವು ಬರಬಹುದು. ದೈಹಿಕ ಶ್ರಮವನ್ನು ನೀವು ಹೆಚ್ಚು ಮಾಡಬೇಕಾದೀತು. ಆಸಕ್ತಿ ಇಲ್ಲದಿದ್ದರೂ ಕೆಲಸವನ್ನು ಅನಿವಾರ್ಯವಾಗಿ ಮಾಡಬೇಕಾಗುವುದು.