
ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ, ಇಂದಿನ (ಮೇ 21) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ಉತ್ತರಾಯಣ, ವಸಂತ ಋತು, ವೃಷಭ ಮಾಸ, ಮಹಾನಕ್ಷತ್ರ: ಕೃತ್ತಿಕಾ, ಮಾಸ: ವೈಶಾಖ, ಪಕ್ಷ: ಶುಕ್ಲ, ವಾರ: ಮಂಗಳ, ತಿಥಿ: ತ್ರಯೋದಶೀ, ನಿತ್ಯನಕ್ಷತ್ರ: ವಿಶಾಖಾ, ಯೋಗ: ಸಿದ್ಧಿ, ಕರಣ: ಕೌಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 04 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 53 ನಿಮಿಷಕ್ಕೆ, ರಾಹು ಕಾಲ 15:42 ರಿಂದ 17:18ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 09:17ರಿಂದ ಬೆಳಗ್ಗೆ10:53ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 12:29 ರಿಂದ 14:06ರ ವರೆಗೆ.
ಧನು ರಾಶಿ: ಇಂದು ನಿಮ್ಗೆ ಸಹೋದ್ಯೋಗಿಗಳ ಸಹಕಾರವೂ ಸಿಕ್ಕಿ ಕಛೇರಿಯ ಇಂದಿನ ಕೆಲಸವನ್ನು ಇಂದೇ ಮಾಡುವಿರಿ. ನಿದ್ರಾಹೀನತೆಯಿಂದ ಸ್ವಲ್ಪ ಆಲಸ್ಯವೂ ಇರಲಿದೆ. ಸಂಗಾತಿಯ ಜೊತೆ ದೂರಪ್ರಯಾಣ ಮಾಡಬಹುದು. ಕಛೇರಿಯಲ್ಲಿ ನಿಮ್ಮ ಕೆಲಸಗಳನ್ನು ಆಡಿಕೊಳ್ಳುತ್ತಾರೆ. ಹೊಸ ಉದ್ಯೋಗವನ್ನು ಹುಡುಕುತ್ತಿದ್ದರೆ ಇಂದು ಸಿಗಲಿದೆ. ನೀವು ದೀರ್ಘಕಾಲ ಆಶಿಸುತ್ತಿದ್ದ ಬಡ್ತಿಯು ನಿಮ್ಮ ಹಾದಿಗೆ ಬರಬಹುದು. ಯಾರಿಗೂ ಕೆಟ್ಟದ್ದನ್ನು ಮನಸ್ಸಿನಲ್ಲಿಯೂ ಅಂದುಕೊಳ್ಳುವುದು ಬೇಡ. ನಿಮ್ಮ ಕಾರ್ಯದಲ್ಲಿ ತೊಡಗಿ. ಹೇಗಾದರೂ, ಇಂದು ಯಾವುದೇ ಪ್ರಮುಖ ವ್ಯವಹಾರ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಸಂಗಾತಿಯ ಕಡೆಯನ್ನೂ ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ. ಯಾರದೋ ಕಾರಣಕ್ಕೆ ನೀವು ಓಡಾಟ ಮಾಡಬೇಕಾಗುವುದು. ಅಂದುಕೊಂಡ ಕೆಲಸವನ್ನು ಪೂರೈಸಲು ನಿಮಗೆ ಸಮಸ್ಯೆಯು ಬರಬಹುದು. ಸ್ವಲ್ಪ ನಿಮ್ಮ ಧೈರ್ಯವು ಕುಂದಬಹುದು.
ಮಕರ ರಾಶಿ: ಇಂದು ನಿಮಗೆ ಕಛೇರಿಯಲ್ಲಿ ಕೆಲವು ಸವಾಲಗಳು ಇರಲಿವೆ. ಒತ್ತಡಕ್ಕೆ ಸಿಲುಕದೇ ಆಪ್ತರ ಜೊತೆ ಸಮಾಲೋಚನೆ ಮಾಡಿ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿ. ಸಾಲಕೊಟ್ಟ ಹಣವು ನಿಮಗೆ ಸಿಗಲಿದೆ. ನಿಮ್ಮವರು ನಿಮಗೆ ಸಹಾಯ ಮಾಡಿದಂತೆ ಕಂಡರೂ ಅದು ಸುಳ್ಳಾಗಲಿದೆ. ನೀವಿಟ್ಟ ನಂಬಕೆ ಹುಸಿಯಾಗಬಹುದು. ಇದು ನಿಮಗೆ ಬಹಳ ನೋವಾಗಲಿದೆ. ಆದರೆ ಬೇಗ ತಿಳಿಯಿತು ಎಂಬ ಸಮಾಧನ ಮಾಡಿಕೊಳ್ಳಿ. ಏಕಾಗ್ರತೆಯ ಕೊರತೆ ಕಾಣಲಿದೆ. ಮನೆಯಲ್ಲಿ ಹಬ್ಬದ ವಾತಾವರಣವು ಇರಲಿದೆ. ಇಂದು ನಿಮಗೆ ಕೇಳುವ ಪ್ರಶ್ನೆಗಳಿಗೆ ಉತ್ತರವನ್ನು ಕೊಡಲಾರಿರಿ. ಧನವು ನಷ್ಟವಾದ ವಿಚಾರಗಳನ್ನು ಯಾರ ಬಳಿಯೂ ಹೇಳಲಾರಿರಿ. ತಂದೆಯ ಜೊತೆ ವಾಗ್ವಾದ ಮಾಡಿಕೊಳ್ಳುವಿರಿ. ವ್ಯವಹಾರದಲ್ಲಿ ಪಾರದರ್ಶಕತೆಯನ್ನು ತೋರಿಸಬೇಕಾಗುವುದು.
ಕುಂಭ ರಾಶಿ: ನೀವು ಅನಾರೋಗ್ಯದಿಂದ ಆರೋಗ್ಯದ ಕಡೆಗೆ ಹಂತ ಹಂತವಾಗಿ ಕ್ರಮಿಸುವಿರಿ. ಇಂದು ನೀವಿರುವ ವಾತಾವರಣವು ನಿಮಗೆ ಹಾಯೆನಿಸಬಹುದು. ನೀವು ಸದ್ಯ ಆರೋಗ್ಯಕರ ಆಹಾರ ಮತ್ತು ವ್ಯಾಯಾಮದತ್ತ ಗಮನ ಹರಿಸುವುದು ಉತ್ತಮ. ಆದಷ್ಟು ಹೊರಗಿನ ತಿಂಡಿಯನ್ನು ಕಡಿಮೆ ಮಾಡಿ. ಸೋಮಾರಿತನ ಮತ್ತು ಅಸಡ್ಡೆಯಿಂದ ಅವಕಾಶಗಳನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ಅದನ್ನು ಗಮನಿಸಿಕೊಳ್ಳಿ. ಹೊಸ ವಸ್ತುಗಳು ನಿಮಗೆ ಸಂತೋಷ ಕೊಡಲಿದ್ದು ಅದನ್ನೇ ಹೆಚ್ಚು ಬಳಸುವಿರಿ. ಪತಿಯ ಪ್ರೀತಿ ಇಂದು ಸಿಗಲಿದೆ. ಇಂದಿನ ದುಡಿಮೆಯು ಕಷ್ಟವೆನಿಸಬಹುದು. ನೋವಿಗೆ ಸ್ಪಂದಿಸುವ ಸ್ವಭಾವವು ನಿಮಗೆ ಇಷ್ಟವಾಗುವುದು. ಬಂಧುಗಳ ಮಾತು ನಿಮಗೆ ಕಿರಿಕಿರಿ ತರಿಸಬಹುದು. ನಿಮ್ಮ ಸೌಂದರ್ಯಕ್ಕೆ ಹೆಚ್ಚು ಮಹತ್ವವನ್ನು ಕೊಡುವಿರಿ. ಕುಟುಂಬದ ಜವಾಬ್ದಾರಿಯು ನಿಮಗೆ ಸಿಗಬಹುದು. ಮನಸ್ಸಿನ ಚಂಚಲತೆಯನ್ನು ಕಡಿಮೆ ಮಾಡಿಕೊಳ್ಳುವುದು ಅಗತ್ಯ.
ಮೀನ ರಾಶಿ: ಇಂದು ನಿಮಗೆ ಕೆಲವು ವಿಚಾರದಲ್ಲಿ ತಿಳಿವಳಿಕೆ ಬಂದು ಅದನ್ನು ವಿವೇಕದಿಂದ ನೋಡುವಿರಿ. ಇಂದು ನಡೆಯುವ ನಕಾರಾತ್ಮಕ ವಾರ್ತೆಯನ್ನು ಲೆಕ್ಕಿಸದೇ ನಿಮ್ಮ ಕೆಲಸದಲ್ಲಿ ತೊಡಗಿಕೊಳ್ಳುವಿರಿ. ನಿಮ್ಮ ವ್ಯವಹಾರವು ನಿಮಗೆ ನಿಜವಾಗಿಯೂ ಸಂತೋಷವನ್ನು ನೀಡಲಿದೆ. ನಿಮ್ಮನ್ನು ಸುಧಾರಿಸಲು ಉದ್ದೇಶದಿಂದ ಕೆಲವು ಶಿಸ್ತಿನ ಕ್ರಮವನ್ನು ನೀವೇ ರೂಢಿಸಿಕೊಳ್ಳುವಿರಿ. ನಿಮ್ಮ ಅಧ್ಯಯನ ಶೀಲತೆಯಲ್ಲಿ ಹಿನ್ನಡೆ ಆಗಿರುವುದು ನಿಮ್ಮ ಅರಿವಿಗೆ ಬರಲಿದೆ. ವ್ಯಾಪಾರಿಯಾಗಿದ್ದರೆ ಇಂದು ನೀವು ದೊಡ್ಡ ವ್ಯವಹಾರ ವಹಿವಾಟು ಸಿಗಲಿದೆ. ಪ್ರೀತಿಪಾತ್ರರ ಜೊತೆ ಸಂಬಂಧ ಉತ್ತಮವಾಗಿರುತ್ತದೆ. ಇಂದು ಕುಟುಂಬ ಸದಸ್ಯರ ಜೊತೆ ಹೆಚ್ಚು ಸಮಯ ಕಳೆಯಬಹುದು. ಆಕಸ್ಮಿಕ ಧನಪ್ರಾಪ್ತಿಯಿಂದ ಸಂತೋಷವು ಇರುವುದು. ಯಾವುದಾದರೂ ಉಪಕರಣದಿಂದ ನಿಮಗೆ ಲಾಭವಾಗಬಹುದು. ಉದ್ಯೋಗದ ಸ್ಥಳದಲ್ಲಿ ಒತ್ತಡ ಅನಿರೀಕ್ಷಿತವಾಗಿ ಹೆಚ್ಚುವುದು. ಗೊಂದಲದಲ್ಲಿ ಯಾವ ತೀರ್ಮಾನವೂ ಬೇಡ.