ವಿದೇಶಕ್ಕೆ ಹೋಗುವುದು ಹೆಚ್ಚಿನರ ಕನಸು. ಕೆಲವರು ಸುತ್ತಾಡಲು ಆಗಿರಬಹುದು, ಇನ್ನೂ ಕೆಲವರು ಉದ್ಯೋಗಕ್ಕಾಗಿ ಆಗಬಹುದು ಅಥವಾ ಅಲ್ಲಿಯೇ ವಾಸಮಾಡಲೂ ಆಗಿರಬಹುದು, ಉದ್ಯೋಗವನ್ನು ಸೃಷ್ಟಿಸಿಕೊಳ್ಳಲೂ ಆಗಿರಬಹುದು. ಹೀಗೆ ನಾನಾ ಕಾರಣಗಳಿಂದ ವಿದೇಶ ಪ್ರಯಾಣಕ್ಕೆ ಅವಕಾಶವಿದೆ. ಇದು ಎಲ್ಲರಿಗೂ ಸಿಗುತ್ತದೆ ಎಂದಲ್ಲ. ಜನಿಸುವಾಗ ಇರುವ ಗ್ರಹಗತಿಗಳ ಸಾಮ್ಯತೆಯಿಂದ ಇದು ಸಿದ್ಧವಾಗಿತ್ತದೆ.
ಆದರೆ ಯಾವ ರಾಶಿಯವರ ವಿದೇಶ ಪ್ರಯಾಣ ಯೋಗ ಎನ್ನುವುದು ಗ್ರಹಗಳ ಬದಲಾವಣೆಯಿಂದ ಆಗಲಿದೆ. ಚತುರ್ಥ ಸ್ಥಾನವನ್ನು ವಿದೇಶ ಪ್ರವಾಸ ಸ್ಥಾನವನ್ನಾಗಿ ಪರಿಗಣಿಸಲಾಗಿದೆ.
ಮೇಷ ರಾಶಿ :ಯಾರೋ ಹೋಗಬೇಕಾಗಿದ್ದ ಪ್ರವಾಸಕ್ಕೆ ನೀವು ಹೋಗಬೇಕಾಗುವುದು. ಅನಿರೀಕ್ಷಿತ ಪ್ರಯಾಣವು ನಿಮ್ಮ ಪಾಲಿಗೆ ಇರಲಿದೆ. ಗೌರವಪೂರ್ವಕವಾಗಿ ಇದನ್ನು ನಿರ್ವಹಿಸುವ ಭಾರವೂ ಇರಲಿದೆ.
ಇದನ್ನೂ ಓದಿ: Love Horoscope: ಯಾವ ರಾಶಿಯವರಿಗೆ ಪ್ರೇಮಾಂಕುರವಾಗುತ್ತದೆ? ಜ್ಯೋತಿಷ್ಯ ಏನು ಹೇಳುತ್ತದೆ?
ಕರ್ಕಾಟಕ ರಾಶಿ :ಈ ರಾಶಿಯವರಿಗೆ ವಿದೇಶ ಪ್ರಯಾಣವನ್ನು ಉದ್ಯೋಗದ ಕಾರಣಕ್ಕೆ ಮಾಡುವರು. ಉತ್ತರ ದಿಕ್ಕಿನ ಪ್ರದೇಶಕ್ಕೆ ಹೋಗುವರು. ಸ್ವಂತ ಉದ್ಯಮವನ್ನು ಮಾಡಲು ಇಚ್ಛಿಸುವವರು ಅದನ್ನು ಮಾಡಬಹುದು. ಅಥವಾ ಉದ್ಯೋಗವನ್ನೂ ಮಾಡಲೂ ಹೋಗುವರು.
ಸಿಂಹ ರಾಶಿ :ಈ ರಾಶಿಯವರು ವೃತ್ತಿಯ ಕಾರಣದಿಂದ ವಿದೇಶಕ್ಕೆ ಹೋಗುವ ಅವಕಾಶವು ಸಿಗಲಿದೆ. ಪೌರಾತ್ಯ ರಾಷ್ಟ್ರಗಳ ಭೇಟಿಯನ್ನು ಮಾಡುವ ಸಂದರ್ಭವು ಸಿಗಲಿದೆ. ಉತ್ತಮವಾದ ಆದಾಯವನ್ನೂ ನೀವು ಪಡೆಯುವ ಉದ್ಯೋಗವನ್ನು ಸೇರಿಕೊಳ್ಳುವರು.
ವೃಶ್ಚಿಕ ರಾಶಿ :ಈ ರಾಶಿಯವರಿಗೆ ವಿದೇಶದಲ್ಲಿ ವಾಸಿಸುವ ಯೋಗವಿದೆ. ಆಗಾ ವಿದೇಶ ಪ್ರಯಾಣವನ್ನು ಮಾಡಬಹುದು. ತಮ್ಮ ಸಾಮರ್ಥ್ಯದಿಂದಲೂ ಪ್ರಯಾಣವನ್ನು ಬೆಳೆಸುವರು. ಉತ್ತರದ ದೇಶಗಳಿಗೆ ಭೇಟಿ ಕೊಡುವರು.
ಮೀನ ರಾಶಿ :ಈ ರಾಶಿಯವರು ಪ್ರವಾಸಕ್ಕಾಗಿ ವಿದೇಶ ಪ್ರಯಾಣವನ್ನು ಮಾಡುವರು. ಉತ್ತರದ ಕಡೆಯ ಪ್ರದೇಶಕ್ಕೆ ಹೋಗಲು ಇಷ್ಟಪಡುವರು. ಪ್ರಯಾಣದಲ್ಲಿ ಜಾಗರೂಕತೆ ಮುಖ್ಯ. ಸರಿಯಾದ ತಿಳಿವಳಿಕೆ ಇಲ್ಲದೇ ಪ್ರಯಾಣವನ್ನು ಮಾಡುವುದು ಬೇಡ.
ಇಷ್ಟು ರಾಶಿಯ ಜನರು ತಮ್ಮ ಕನಸನ್ನೂ ನಿರ್ಧಾರವನ್ನೂ ಪೂರ್ಣಮಾಡಿಕೊಳ್ಳಲು ಅವಕಾಶವಿರಲಿದೆ.
-ಲೋಹಿತ ಹೆಬ್ಬಾರ್ – 8762924271