Love Horoscope: ಯಾವ ರಾಶಿಯವರಿಗೆ ಪ್ರೇಮಾಂಕುರವಾಗುತ್ತದೆ? ಜ್ಯೋತಿಷ್ಯ ಏನು ಹೇಳುತ್ತದೆ?
ಜ್ಯೋತಿಷ್ಯ ಶಾಸ್ತ್ರವು ಇಂತಹ ಕಾಲವನ್ನು ವ್ಯಕ್ತಿಯನ್ನು ಸೂಚಿಸುವ ಮಹಾವಿದ್ಯೆ. ಗ್ರಹಗಳ ಕಾರಣದಿಂದ ಋಣಾನುಬಂಧದ ವಿಚಾರವನ್ನು ಗಮನಿಸಿಲು ಸಾಧ್ಯ. ಕೆಲವು ಗ್ರಹಗಳ ಸಂಯೋಜನೆಯು ಕೆಲವರಿಗೆ ಕೆಲವು ಸಂದರ್ಭದಲ್ಲಿ ಘಟಿಸುತ್ತದೆ. ಅದಾದನಂತರ ಘಟಿಸಬೇಕು ಎನ್ನುವುದಿಲ್ಲ, ಘಟಿಸಿದರೂ ಘಟಿಸಬಹುದು. ಸದ್ಯ ಯಾವ ರಾಶಿಯವರಿಗೆ ಪ್ರೇಮವು ಉಂಟಾಗಬಹುದು ಮತ್ತು ಅದು ಫಲಿಸಬಹುದು ಎನ್ನುವುದನ್ನು ನೋಡೋಣ.
ಪುರಾತನವಾದ ಮಾತು ಇದೆ ಋಣಾನುಬಂಧರೂಪೇಣ ಪಶು ಪತ್ನಿ ಸುತಾಲಯಃ ಎಂದು. ಪತ್ನಿ ಸಿಗಬೇಕಾದರೂ ಋಣವಿರಬೇಕು ಎನ್ನುವುದೂ ಈ ವಾಕ್ಯದ ಅರ್ಥ. ಯಾರಿಗೆ ಋಣವಿದೆ? ಯಾರಿಗೆ ಋಣವಿಲ್ಲ ಎಂದು ತಿಳಿದುಕೊಳ್ಳುವ ಬಗೆ ಹೇಗೆ? ಯಾರಿಗೆ ಯಾವ ಋಣ ಯಾವಾಗಾ ಲಭ್ಯವಾಗುತ್ತದೆ ಎನ್ನುವುದೂ ಮುಖ್ಯ. ಎಲ್ಲರಿಗೂ ಎಲ್ಲ ಋಣಗಳೂ ಎಲ್ಲ ಕಾಲದಲ್ಲಿಯೂ ಸಿಗದು. ಅದಕ್ಕೂ ಸಮಯ, ಸಂದರ್ಭವು ಬರಬೇಕಾಗುತ್ತದೆ.
ಜ್ಯೋತಿಷ್ಯ ಶಾಸ್ತ್ರವು ಇಂತಹ ಕಾಲವನ್ನು ವ್ಯಕ್ತಿಯನ್ನು ಸೂಚಿಸುವ ಮಹಾವಿದ್ಯೆ. ಗ್ರಹಗಳ ಕಾರಣದಿಂದ ಋಣಾನುಬಂಧದ ವಿಚಾರವನ್ನು ಗಮನಿಸಿಲು ಸಾಧ್ಯ. ಕೆಲವು ಗ್ರಹಗಳ ಸಂಯೋಜನೆಯು ಕೆಲವರಿಗೆ ಕೆಲವು ಸಂದರ್ಭದಲ್ಲಿ ಘಟಿಸುತ್ತದೆ. ಅದಾದನಂತರ ಘಟಿಸಬೇಕು ಎನ್ನುವುದಿಲ್ಲ, ಘಟಿಸಿದರೂ ಘಟಿಸಬಹುದು. ಸದ್ಯ ಯಾವ ರಾಶಿಯವರಿಗೆ ಪ್ರೇಮವು ಉಂಟಾಗಬಹುದು ಮತ್ತು ಅದು ಫಲಿಸಬಹುದು ಎನ್ನುವುದನ್ನು ನೋಡಣ.
ವೃಷಭ ರಾಶಿ :ಪ್ರಸ್ತುತ ಗ್ರಹಗಳ ಚಲನೆಯನ್ನು ಆಧರಿಸಿ ಹೇಳುವುದಾದರೆ ಈ ರಾಶಿಯವರಿಗೆ ಪ್ರೇಮವು ಫಲಿಸುವುದು. ಕುಜನು ಶುಕ್ರನ ರಾಶಿಯಲ್ಲಿಯೂ ಗುರುವಿನ ಜೊತೆಗೂ ಇರುವುದರಿಂದ ಮನೆಯರ ಸಮಯದಲ್ಲಿ ಇವರ ಪ್ರೇಮವು ವಿವಾಹವಾಗಿಯೂ ಮುಂದುವರಿಯುವುದು.
ತುಲಾ ರಾಶಿ :ಈ ರಾಶಿಯವರು ಪ್ರೇಮದಲ್ಲಿ ಬೀಳುವರು. ಇವರಿಗೆ ಉದ್ಯೋಗದ ಸ್ಥಳದಲ್ಲಿ ಪ್ರೇಮವಾಗುವುದು. ಇವರು ಹಿರಿಯರ ಒಪ್ಪಿಗೆ ಪಡೆಯಲು ಸಮಯವನ್ನು ತೆಗೆದುಕೊಳ್ಳುವರು. ಆತುರ ಮಾಡಿಕೊಂಡರೆ ಮಧ್ಯದಲ್ಲಿ ನಿಂತುಹೋಗುವುದು.
ವೃಶ್ಚಿಕ ರಾಶಿ :ಈ ರಾಶಿಗೂ ಉತ್ತಮ ಕುಲದವರ ಜೊತೆ ಸ್ನೇಹವು ಆಗಿ, ಅನಂತರ ಪ್ರೇಮವಾಗಲಿದೆ. ರೂಪವುಳ್ಳ ಸಾತ್ವಿಕ ಸ್ವಭಾವದ ಸಂಗಾತಿಯು ಸಿಗುವರು.
ಈ ಮೂರು ರಾಶಿಯವರಿಗೆ ಸದ್ಯದ ಗ್ರಹಗತಿಗಳಿಂದ ಪ್ರೇಮವು ಉಂಟಾಗುವ ಲಕ್ಷಣವಿದೆ.
ಯಾವುದನ್ನೂ ಆತುರದಿಂದ ನಡೆಸದೇ ಸಮಯ ಸಂದರ್ಭವನ್ನು ಅರಿತು ಸಮಾಧಾನ ಚಿತ್ತದಿಂದ ಮುಂದುರಿದರೆ ಎಲ್ಲವೂ ಸುಖಕರವಾಗಿ ನಡೆಯುವುದು. ಉದ್ವೇಗ, ಒತ್ತಡಗಳಿಗೆ ಸಿಕ್ಕಿ ಋಣವನ್ನು ಕಳೆದುಕೊಳ್ಳುವುದು ಅವರವರ ಕೈಯಲ್ಲಿರುವುದು.
ಲೋಹಿತ ಹೆಬ್ಬಾರ್ – 8762924271